Gattimela: ಸುಹಾಸಿನಿಗೆ ಭಯ ಹುಟ್ಟಿಸಿದ ಅಮೂಲ್ಯ ಮಾತು..! ಲೆಟರ್ ಬರೆದವರು ಯಾರು ಎಂಬ ಕೊರೆತ ಶುರು..!
ಸೂರ್ಯನಾರಾಯಣರು ತಮ್ಮ ಕುಟುಂಬದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಇದೇ ವೇಳೆ ರೌಡಿಯೊಬ್ಬ ತನ್ನ ಗರ್ಲ್ ಫ್ರೆಂಡ್ ಜೊತೆ ಮಾತನಾಡುತ್ತಿದ್ದ ವೇಳೆ ಈ ರೀತಿಎಲ್ಲ ಆದರೆ ನಿನ್ನ ಗರ್ಲ್ ಫ್ರೆಂಡ್ ಅನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅವರಿಗೆ ತಮ್ಮ ಮನೆಯವರು ನೆನಪಾಗುತ್ತಿದ್ದು ಒಂದು ಪೆನ್ನು ಪೇಪರ್ ಮೂಲಕವಾದರೂ ಏನಾದರೂ ಒಂದು ಬರೆದು ಆ ವಿಷಯವನ್ನ ಹೇಗಾದರೂ ಮಾಡಿ ವೇದಾಂತ್ ಗಮನಕ್ಕೆ ತರಬೇಕು. ಅಗ್ನಿ ಕೈಯಿಂದ ಬಿಡುಗಡೆ ಪಡೆಯಬೇಕು ಎಂದುಕೊಂಡಿದ್ದಾರೆ ಇದಕ್ಕಾಗಿ ಏನೇನೋ ಮಾಡುತ್ತಾ ಇದ್ದಾರೆ.
ಇತ್ತ, ಸೂರ್ಯನಾರಾಯಣ್ ವಿಷಯ ಅಮೂಲ್ಯ ಗಮನಕ್ಕೆ ವೈದೇಹಿ ತಂದಿದ್ದು ಈಗ ಅದು ಸುಹಾಸನಿಗೆ ತಲೆ ನೋವನ್ನು ತರುವ ಕೆಲಸ ಮಾಡಿದೆ. ಇನ್ನು ಸುಹಾಸಿನಿ ವೈದೇಹಿ ಮೇಲೆ ಅನುಮಾನವನ್ನ ಪಟ್ಟಿದ್ದಾಳೆ. ನೀನೇ ಈ ಕೆಲಸವನ್ನು ಮಾಡಿರುವುದು ಬೇರೆ ಯಾರು ಸಹ ಮಾಡಲು ಸಾಧ್ಯವಿಲ್ಲ. ಈ ವಿಚಾರವನ್ನು ವೇದಾಂತ್‌ಗೆ ತಿಳಿಸಿ ನನ್ನನ್ನ ಎಲ್ಲರ ಮುಂದೆ ವಿಲನ್ ಮಾಡಬೇಕು ಎಂಬುದೇ ನಿನ್ನ ಉದ್ದೇಶವಾಗಿದೆ. ಇದಕ್ಕೆ ಈ ರೀತಿ ಮಾಡಿದ್ದೀಯಾ ಎಂದು ಕೋಪಗೊಂಡಿದ್ದಾಳೆ. ಇದಕ್ಕೆ ವೈದೇಹಿ ನಾನು ಏನನ್ನು ಮಾಡಿಲ್ಲ ಎಂದು ಹೇಳಿದ್ದಾಳೆ. ಆದರೂ ಸಹ ಸುಹಾಸಿನಿ ಕೇಳುತ್ತಾ ಇಲ್ಲ. ನೀನು ಈ ಮೇಲೆ ಬರೆದಿರುವಂತೆ ಈ ಪೇಪರ್ ಮೇಲೆ ಬರೆ ಎಂದು ಹೇಳಿದ್ದಾಳೆ.

ವೈದೇಹಿ ಮೇಲೆ ಬರೆದಿರುವಂತೆ ಪೇಪರ್ ಮೇಲೆ ಮತ್ತೊಮ್ಮೆ ಬರೆದಿದ್ದಾಳೆ ಈ ವೇಳೆ ಅಲ್ಲಿರುವ ಹ್ಯಾಂಡ್ ರೈಟಿಂಗ್ ಚೇಂಜ್ ಆಗಿದೆ. ಇನ್ನೂ ಸುಹಾಸಿನಿ ಕೋಪ ಮಾಡಿಕೊಂಡು ಅಡುಗೆಮನೆಯಿಂದ ತೆರಳಿದ್ದಾಳೆ. ಆದರೆ ವೈದೇಹಿ ಆ ಲೆಟರ್ ಅನ್ನು ಅಜ್ಜಿಯ ಕೈಲಿ ಬರೆಸಿದಳು. ಅಮ್ಮ ನಾನು ಬರೆದರೆ ಅದು ಸುಹಾಸಿನಿಗೆ ಗೊತ್ತಾಗಿ ಹೋಗುತ್ತದೆ. ಅದಕ್ಕಾಗಿ ನೀನು ಈ ಲೆಟರ್ ಬರೆ ಎಂದು ಹೇಳಿದ್ದಾರೆ. ಇದಕ್ಕೆ ಮಗಳ ಮಾತಿಗೆ ಇಲ್ಲ ಎನ್ನದೆ ವೈ ಜಯಂತಿ ಅಮ್ಮ ಆ ಲೆಟರ್ ಅನ್ನ ಬರೆದು ಮಗಳ ಕೈಗೆ ಕೊಟ್ಟಿದ್ದಾರೆ.
ಅತ್ತೆಯನ್ನು ಪ್ರಶ್ನೆ ಮಾಡಿದ ಅಮೂಲ್ಯ
ಆರತಿಯ ಮಾತಿನಿಂದ ಬಚಾವಾದ ಸುಹಾಸಿನಿ
ವೈದೇಹಿ ಬರೆದಿರುವ ಲೆಟರ್ ಅಮೂಲ್ಯ ಕೈಗೆ ಸಿಕ್ಕಿದೆ, ಆ ಲೆಟರ್ ಹಿಡಿದುಕೊಂಡು ಸುಹಾಸಿನಿಯ ಮುಂದೆ ಬಂದ ಅಮೂಲ್ಯ ಅತ್ತೆ ನಿಮಗೆ ಸೂರ್ಯನಾರಾಯಣ ಅಪ್ಪಾಜಿ ಬಗ್ಗೆ ಏನಾದರೂ ವಿಷಯ ಗೊತ್ತಿದ್ಯಾ? ಎಂದು ನೇರವಾಗಿಯೇ ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ಗಾಬರಿಯಾದ ಸುಹಾಸಿನಿ ನನಗೆ ಏನು ಸಹ ಗೊತ್ತಿಲ್ಲ ಎಂದಿದ್ದಾಳೆ. ಆದರೂ ಸಹ ಅಮೂಲ್ಯ ಬಿಟ್ಟಿಲ್ಲ ನಿಮಗೆ ಗೊತ್ತಿಲ್ಲ ಎಂದರೆ ಈ ಲೆಟರ್‌ನಲ್ಲಿ ಯಾಕೆ ಈ ರೀತಿ ಬರೆಯುತ್ತಿದ್ದರು ಎಂದು ಲೆಟರ್ ಅನ್ನು ತೋರಿಸಿದ್ದಾಳೆ.

ಲೆಟರ್ ತೆಗೆದುಕೊಂಡ ಸುಹಾಸಿನಿ ಲೆಟರ್ ಓದಿ ಇದು ಯಾರೋ ನಮ್ಮ ಹಾಲಿನಂತ ಕುಟುಂಬದಲ್ಲಿ ಹುಳಿಯಿಂಡಲೂ ಪ್ರಯತ್ನಿಸುತ್ತಿದ್ದಾರೆ ಅದು ಯಾರು ಎಂದು ನಾನು ಕಂಡುಹಿಡಿಯುತ್ತೇನೆ ಎಂದಿದ್ದಾಳೆ. ಇನ್ನು ಆರತಿ ಅತ್ತೆಯ ಮೇಲೆ ಅನುಮಾನ ಪಡುವುದು ಸರಿಯಲ್ಲ ಎಂದು ಅಮೂಲ್ಯಗೆ ಹೇಳಿ ಅಲ್ಲಿಂದ ಕರೆದುಕೊಂಡು ಬಂದಿದ್ದಾಳೆ ಈ ವೇಳೆ ಸುಹಾಸಿನಿ ಅಮೂಲ್ಯ ಕೈನಿಂದ ಬಚಾವಾಗಿದ್ದಾಳೆ.
ಸುಹಾಸಿನಿ ರೂಮ್‌ನಲ್ಲಿ ಯಂತ್ರವಿಡಲು ನಿರ್ಧಾರ
ಹೊಸ ಪ್ಲಾನ್ ಮಾಡಿದ ಅಮೂಲ್ಯ
ಅಮೂಲ್ಯ ಸುಹಾಸಿನಿಯ ಎಲ್ಲಾ ಬಿಸಿನೆಸ್ ತಿಳಿದುಕೊಳ್ಳಲು ಒಂದು ಪ್ಲಾನ್ ಮಾಡಿದ್ದಾಳೆ. ಸುಹಾಸಿನಿ ರೂಮ್‌ಗೆ ಒಂದು ಯಂತ್ರವನ್ನು ಇಟ್ಟು ಬ್ಲೂಟೂತ್ ಕನೆಕ್ಟ್ ಮಾಡಿಕೊಂಡು ಏನೇನು ಮಾತನಾಡುತ್ತಾಳೆ ಎಂಬುದನ್ನೆಲ್ಲ ತಿಳಿದುಕೊಳ್ಳಬೇಕು ಎಂದು ಒಂದು ಯಂತ್ರವನ್ನು ತಂದು ಇಟ್ಟುಕೊಂಡಿದ್ದಾಳೆ. ಇದಕ್ಕಾಗಿ ಭಾರತೀಯ ಬಳಿ ಸಹಾಯ ಕೇಳಿದ್ದಾಳೆ. ಅಕ್ಕ ನೀನು ನನಗೆ ಒಂದು ಸಹಾಯ ಮಾಡಬೇಕು.
'ಅಕ್ಕ ನೀನು ಸುಹಾಸಿನಿ ಅತ್ತೆ ಆ ರೂಂಗೆ ಹೋಗಿ ಈ ಯಂತ್ರವನ್ನು ಇಟ್ಟು ಬಾ ನಾನೇನಾದರೂ ಸುಹಾಸಿನಿ ಅತ್ತೆಯಾ ರೂಂಗೆ ಹೋದರೆ ಅವರಿಗೆ ಅನುಮಾನ ಬರುತ್ತದೆ. ಅದಕ್ಕಾಗಿ ನೀನೆ ಈ ಕೆಲಸ ಮಾಡು ಸುಹಾಸಿನಿ ಅತ್ತೆ ಮಾಡುತ್ತಿರುವ ಎಲ್ಲಾ ವ್ಯವಹಾರಗಳನ್ನ ನಾವು ಕಂಡುಹಿಡಿಯೊಣ. ಜೊತೆಗೆ ಸೂರ್ಯನಾರಾಯಣ ಅಪ್ಪಾಜಿಯ ಬಗ್ಗೆಯೂ ಸಹ ಯಾವುದಾದರೂ ಒಂದು ವಿಚಾರ ನಮ್ಮ ಕಿವಿಗೆ ಬೀಳುತ್ತದೆ. ಆಗ ನಾವು ಏನಾದರೂ ನಿರ್ಧಾರವನ್ನ ಮಾಡೋಣ ಎಂದು ಹೇಳಿದ್ದಾಳೆ.


Click it and Unblock the Notifications











