Gattimela: ವೈದೇಹಿ ಈಗ ಸೂರ್ಯನಾರಾಯಣ್‌ಗೆ ಮತ್ತಷ್ಟು ಹತ್ತಿರ: ಗಂಡನ ಮುಖ ನೋಡಲು‌ ಸಾಧ್ಯವಾಗುತ್ತಾ..?

By ಶೃತಿ ಹರೀಶ್ ಗೌಡ

ಗಟ್ಟಿಮೇಳ ಧಾರಾವಾಹಿ ಈಗ ಮಹತ್ವದ ತಿರುವನ್ನು ಪಡೆದುಕೊಂಡಿದೆ. ಇಷ್ಟು ದಿನ ವೈದೇಹಿಗೆ ಸೂರ್ಯನಾರಾಯಣ್ ಎಲ್ಲಿ ಇದ್ದಾರೆ ಎಂಬುವುದು ಹೇಳಿದಿರಲಿಲ್ಲ. ಈಗ ಸೂರ್ಯನಾರಾಯಣ್ ವಾಯ್ಸ್ ಇಂದ ಅವರು ಪರಿಮಳ ಮಂಜುನಾಥ್ ಅವರ ಮನೆಯಲ್ಲಿ‌ ಇದ್ದಾರೆ ಎಂಬುದು ಗೊತ್ತಾಗಿದೆ. ‌ಇದಕ್ಕಾಗಿ ಸೂರ್ಯನಾರಾಯಣ ಅವರನ್ನು ನೋಡುವ ಕಾತುರ ಅವರಲ್ಲಿ ಹೆಚ್ಚಾಗಿದ್ದು, ಧನ್ಯವಾದಗಳನ್ನು ತಿಳಿಸುವ ನೆಪದಲ್ಲಿ ಪರಿಮಳ ಅವರ ಮನೆಗೆ ವೈದೇಹಿ ಹೋಗಿದ್ದಾರೆ.

ಆದ್ಯಾಗೆ ತನ್ನ ತಂದೆಯ ನೆನಪಾಗುತ್ತಿದ್ದು ಅಜ್ಜಿಯ ಬಳಿ ತನ್ನ ತಂದೆ ಹೇಗಿದ್ದರು ಎಂದು ಕೇಳುತ್ತಾ ಇದ್ದಾಳೆ. ಇದಕ್ಕೆ ವೈಜಯಂತಿ ಅಮ್ಮ ನಿಮ್ಮ ತಂದೆ ಬಹಳ ನೀತಿವಂತರು ಎಂದು ಹೇಳಿದ್ದಾರೆ. ನೀನು ಇನ್ನೇನು ಹುಟ್ಟಬೇಕಾಗಿತ್ತು ಅಂದು ವಿರುದ್ಧ ತೀರ್ಪು ನೀಡಬೇಕಾಗಿತ್ತು. ಆ ವ್ಯಕ್ತಿ ನಿಮ್ಮ ತಂದೆಗೆ ಕೊಲೆ ಬೆದರಿಕೆಯನ್ನು ಹಾಕಿದನು. ಆದರೂ ಸಹ ಅವರು ಬಗ್ಗದೆ ತೀರ್ಪನ್ನು ನೀಡಿದ ನೀತಿವಂತರು ಎಂದು ತಿಳಿಸಿದ್ದಾರೆ. ನಾನು ನಿಮ್ಮ ತಂದೆಯನ್ನ ಅಳಿಯನನ್ನಾಗಿ ಪಡೆಯುವುದಕ್ಕೆ ತುಂಬಾ ಪುಣ್ಯ ಮಾಡಿದ್ದೆ ಎಂದು ಆದ್ಯಾ ಬಳಿ ಸೂರ್ಯನಾರಾಯಣರ ಬಗ್ಗೆ ವೈಜಯಂತಿ ಅಮ್ಮ ಹೇಳಿದ್ದಾರೆ.

zee-kannada-gattimela-serial

ಇದೆಲ್ಲವನ್ನೂ ಮರೆಯಲ್ಲಿ ನಿಂತು ಸುಹಾಸಿನಿ ಕೇಳಿಸಿಕೊಳ್ಳುತ್ತಾ ಇದ್ದಾಳೆ. ಇನ್ನು ಆದ್ಯಾಗೆ ಒಂದು ಕರೆ ಬಂದಿದ್ದು ಅವಳು ಫೋನ್ ತೆಗೆದುಕೊಂಡು ಹೊರಗಡೆ ಹೋಗಿದ್ದಾಳೆ. ಅಷ್ಟರಲ್ಲಿ ಸುಹಾಸಿನಿ ಅಮ್ಮನ ರೂಂಗೆ ಬಂದಿದ್ದಾಳೆ. ನೀನು ಆದ್ಯಾಗೆ ಏನನ್ನ ಹೇಳುತ್ತಿದ್ದೆ. ನೀನು ಯಾಕೆ ಸೂರ್ಯನಾರಾಯಣರ ಬಗ್ಗೆ ಹೇಳುತ್ತಿದ್ದೀಯ ನೀನು ನಾನು ಹೇಳಿದ್ದೆ ತಾನೇ ಅವರ ಬಗ್ಗೆ ಆದ್ಯಾಗಲಿ ವೇದಾಂತ್‌ಗೆ ಆಗಲಿ ಏನನ್ನು ಹೇಳಬಾರದು ಎಂದು ನೀನು ಯಾಕೆ ಈ ರೀತಿ ಮಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಾಳೆ. ನಿನ್ನನ್ನ ನಾನು ಆನಂತರ ವಿಚಾರಿಸಿಕೊಳ್ಳುತ್ತೇನೆ ಎಂದು ಹೇಳಿ ಅಲ್ಲಿಂದ ಹೊರಟಿದ್ದಾಳೆ.

ಸೂರ್ಯನಾರಾಯಣರಿಗೆ ಹತ್ತಿರವಾದ ವೈದೇಹಿ, ಗಂಡನ ನೋಡುವ ಕಾತುರದಲ್ಲಿರುವ ಹೆಂಡತಿ

ಸೂರ್ಯನಾರಾಯಣರ ವಾಯ್ಸ್ ಕೇಳಿದ ವೈದೇಹಿ ಕೂಡಲೇ ಪರಿಮಳ ಅವರ ಮನೆಗೆ ಕಜ್ಜಾಯವನ್ನ ಮಾಡಿಕೊಂಡು ಹೋಗಿದ್ದಾಳೆ. ಪರಿಮಳ ಯಾವಾಗ ಬಂದ್ರಿ ಎಂದು ವಿಚಾರ ಮಾಡುವಾಗ ಸೂರ್ಯನಾರಾಯಣರು ನಾನು ಈ ವಾಯ್ಸ್ ಅನ್ನು ಎಲ್ಲೋ ಕೇಳಿದ್ದೇನೆ ಎಂದುಕೊಂಡಿದ್ದಾರೆ. ವೈದೇಹಿ ಸಹ ಮನೆಗೆ ಯಾರೋ ಬಂದಿದ್ದಾರೆ ಎಂದರಲ್ಲ ಅವರು ಎಲ್ಲಿದ್ದಾರೆ ಅವರ ಹೆಸರೇನು ಎಂದು ಪರಿಮಳ ಬಳಿ ಕೇಳಿದ್ದಾರೆ.

ಇದೇ ವೇಳೆ ಪರಿಮಳ ಇಲ್ಲೇ ಇದ್ದಾರೆ ಬನ್ನಿ ತೋರಿಸುತ್ತೇನೆ ಎಂದು ಹೇಳಿ ಕರೆದುಕೊಂಡು ಹೋಗುವಷ್ಟರಲ್ಲಿ ಪರಿಮಳಾಗೆ ಕಾಲ್ ಬಂದಿದೆ. ಪರಿಮಳ ವೈದೇಹಿಯವರನ್ನ ಒಂದು ರೂಮಿಗೆ ಕೂಡಿಹಾಕಿ ನಂತರ ಸೂರ್ಯನಾರಾಯಣರ ಬಳಿ ತೆರಳಿ ಅಣ್ಣ ಬನ್ನಿ ಅಪಾಯ ಕಾದಿದೆ ಎಂದು ಸೂರ್ಯನಾರಾಯಣರನ್ನು ಸಹ ವೈದೇಹಿ ಇರುವ ರೂಮಿಗೆ ಕೂಡಿ ಹಾಕಿದ್ದಾರೆ. ಸೂರ್ಯನಾರಾಯಣರು ವೈದೇಹಿಯನ್ನು ನೋಡುವ ಪ್ರಯತ್ನವನ್ನು ಮಾಡಿದ್ದಾರೆ.

zee-kannada-gattimela-serial

ಮಂಜುನಾಥ್ ಮನೆಗೆ ಬಂದ ಅಗ್ನಿ ಕಡೆಯವರು, ರೌಡಿಗಳನ್ನು ಓಡಿಸಿದ ಪರಿಮಳ!

ಸೂರ್ಯನಾರಾಯಣರನ್ನು ಹುಡುಕಿಕೊಂಡು ರೌಡಿಗಳು ಪರಿಮಳ ಮಂಜುನಾಥ್ ಮನೆಗೆ ಬಂದಿದ್ದಾರೆ. ಇದಕ್ಕೂ ಮೊದಲೇ ಮಂಜುನಾಥ್ ಪರಿಮಳಗೆ ಕಾಲ್ ಮಾಡಿ ಅಗ್ನಿ ಕಡೆಯವರು ಸೂರ್ಯನಾರಾಯಣರನ್ನು ಹುಡುಕಿಕೊಂಡು ನಮ್ಮ ಮನೆಗೆ ಬರುತ್ತಿದ್ದಾರೆ ಎಚ್ಚರದಿಂದ ಇರು ಎಂದು ಹೇಳಿದರು. ಇದಕ್ಕೆ ಪರಿಮಳ ಅವರನ್ನ ರೂಮ್ನಲ್ಲಿ ಕೂಡಿಹಾಕಿ ರೌಡಿಗಳು ಬಂದ ತಕ್ಷಣವೇ ಏನು ಎಂದು ವಿಚಾರಿಸಿದ್ದಾರೆ. ಇದಕ್ಕೆ ರೌಡಿಗಳು ಸೂರ್ಯನಾರಾಯಣರ ಫೋಟೋವನ್ನು ತೋರಿಸಿ ಈ ವ್ಯಕ್ತಿ ಏನಾದರೂ ಇಲ್ಲಿಗೆ ಬಂದಿದ್ರಾ ಎಂದು ಕೇಳಿದ್ದಾರೆ.

ಇದಕ್ಕೆ ಪರಿಮಳ ಈ ವ್ಯಕ್ತಿಗೂ ನಮಗೂ ಸಂಬಂಧವಿಲ್ಲ ಅವರು ಅಂದು ಬಂದಿದ್ದರು, ನಿಮ್ಮ ಜೊತೆಗಿನ ವ್ಯಕ್ತಿ ತಾನೆ ಎಂದು ಹೇಳಿದ್ದಾರೆ. ಇದು ಹೆಣ್ಣುಮಕ್ಕಳು ಇರುವ ಮನೆ ಏನಾದರೂ ಗಲಾಟೆ ಮಾಡಿದರೆ ಅಕ್ಕ ಪಕ್ಕದವರು ಏನಾದರೂ ಅಂದುಕೊಳ್ಳುತ್ತಾರೆ. ದಯವಿಟ್ಟು ನೀವು ಇಲ್ಲಿಂದ ಹೊರಡಿ ಎಂದು ರೌಡಿಗಳಿಗೆ ಹೇಳಿದ್ದಾರೆ. ಮನೆಯನ್ನು ಇನ್ನೇನು ಹುಡುಕಬೇಕು ಎನ್ನುವಷ್ಟರಲ್ಲಿ ಪರಿಮಳ ಅವರು ರೌಡಿಗಳನ್ನು ಮನೆಯಿಂದ ಹೊರಗಡೆ ಓಡಿಸಿದ್ದಾರೆ.

More from Filmibeat

English summary
Zee Kannada Gattimela serial October 6th episode details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X