Gattimela: ಅಮೂಲ್ಯ ಬಳಿ ಸತ್ಯ ಹೇಳಿದ ವೇದಾಂತ್..! ವಾಪಸ್ ಹೋಗುತ್ತೇನೆಂದ ಸೂರ್ಯನಾರಾಯಣ
ವೇದಾಂತ್ ಹೇಳಿದ ಕೆಲಸ ಚಾಚು ತಪ್ಪದೆ ಕಾಂತ ಮಾಡುತ್ತಿದ್ದಾನೆ. ಈಗಾಗಲೇ ಅಗ್ನಿ ಮನೆಗೆ ಕಾಂತ ಎಂಟ್ರಿ ಕೊಟ್ಟಾಗಿದೆ. ಇದೇ ವೇಳೆ ಅಗ್ನಿ, ಕಾಂತಾನನ್ನ ನೂರಾರು ಪ್ರಶ್ನೆ ಕೇಳಿದ್ದಾನೆ. ಇದಕ್ಕೆ ಕಾಂತ ತನ್ನ ಹೆಸರು ಕಾರದಪುಡಿ ಶಾಂತ ಎಂದು ಹೇಳಿಕೊಂಡಿದ್ದಾನೆ. ಆ ಹೆಸರಿಗೆ ಕಾರಣ ಏನು ಎಂದು ಹೇಳಿದ್ದಾನೆ.
ಇನ್ನು ಕಾಂತಾಗೆ ಅಗ್ನಿಯನ್ನ ನೋಡಿದ ಕೂಡಲೇ ತಾನು ಹುಲಿಯ ಬೋನಿಗೆ ಬಿದ್ದಿರುವ ರೀತಿ ಅನಿಸುತ್ತಿದೆ. ಅಗ್ನಿ ಹೋಗುವವರೆಗೂ ಅಗ್ನಿ ಕೇಳುವ ಎಲ್ಲಾ ಪ್ರಶ್ನೆಗಳಿಗೂ ಸಹ ಸಮಾಧಾನವಾಗಿ ಉತ್ತರಿಸಿದ್ದಾನೆ. ನಿನ್ನದು ಏನಿದ್ದರೂ ಅಡುಗೆ ಮಾಡುವ ಕೆಲಸ ಅದಕ್ಕಿಂತ ಹೆಚ್ಚಾಗಿ ಮೂಗು ತೂರಿಸ ಬೇಡ ಎಂದು ಕಾಂತಾಗೆ ಅಗ್ನಿ ವಾರ್ನಿಂಗ್ ಮಾಡಿದ್ದಾನೆ. ಇದಕ್ಕೆ ಕಾಂತ ಆಯ್ತು ಎಂದಿದ್ದಾನೆ.

ಕಾಂತಾ ತಾನು ಯಾರಿಗೆ ಅಡುಗೆ ಮಾಡಿ ಬಡಿಸಬೇಕು ಅವರನ್ನು ನೋಡಬೇಕು ಎಂದು ಹೇಳಿದ್ದಾನೆ. ಇದಕ್ಕೆ ಯಾಕೆ ಅವರನ್ನ ನೋಡಬೇಕು ಎಂದು ರೌಡಿ ಕೇಳಿದ್ದಕ್ಕೆ ಅವರಿಗೆ ಏನು ಇಷ್ಟ ಏನು ಇಷ್ಟ ಇಲ್ಲ ಎಂಬುದನ್ನ ನಾನು ತಿಳಿದುಕೊಳ್ಳಬೇಕು. ಅದಕ್ಕೆ ಕೇಳಬೇಕು ಎಂದು ಹೇಳಿ ಸೂರ್ಯನಾರಾಯಣರು ಇರುವ ರೂಮಿಗೆ ಹೋಗಿದ್ದಾನೆ. ಇನ್ನು ಇದೇ ವೇಳೆ ಸೂರ್ಯನಾರಾಯಣರ ಬಳಿ ಮಾತನಾಡುತ್ತಾ ನಿಮಗೆ ಏನು ಇಷ್ಟ ಏನು ಮಾಡಿ ಬಡಿಸಬೇಕು ಎಂದು ಕೇಳಿದ್ದಾನೆ. ಬರೀ ರಸಂ ಸಾಕು ಎಂದು ಹೇಳಿದಾಗ ಕಾಂತಾ ಹೊರಗಡೆ ಬಂದಿದ್ದಾನೆ.
ಅಮೂಲ್ಯ ಬಳಿ ಸತ್ಯ ಹೇಳಿದ ವೇದಾಂತ್
ವೇದಾಂತ್ ಬಳಿ ಅಮೂಲ್ಯ, ವೈದೇಹಿ ಅಮ್ಮನನ್ನ ನೀನು ಯಾಕೆ ಹೊರಗಡೆ ಕಳುಹಿಸಿದೆ ಎಂದು ನಾನು ಕೇಳೋದಿಲ್ಲ. ಆ ವಿಷಯ ಬಂದಾಗ ನೀನು ತುಂಬಾ ಬೇಸರ ಮಾಡಿಕೊಳ್ಳುತ್ತೀಯ ಎಂದು ಹೇಳಿದ್ದಾಳೆ. ಇನ್ನು ವೇದಾಂತ್ ಇದೇ ವೇಳೆ ಅಮೂಲ್ಯ ಬಳಿ ಯಾವುದನ್ನು ಮುಚ್ಚಿಡದೆ ತಾನು ಯಾವ ಕಾರಣಕ್ಕೆ ವೈದೇಹಿ ಅಮ್ಮನನ್ನ ಮನೆಯಿಂದ ಹೊರಗೆ ಕಳುಹಿಸಿದೆ ಎಂಬ ವಿಚಾ ಹೇಳಿದ್ದಾನೆ. ಅಗ್ನಿ ಅಪ್ಪಾಜಿ, ವೈದೇಹಿಯನ್ನ ಮನೆಯಿಂದ ಹೊರಗಡೆ ಕಳುಹಿಸಿದರೆ ಮಾತ್ರ ನಾನು ನಿಮ್ಮ ಮನೆಗೆ ಬರುವುದಾಗಿ ಹೇಳಿದರು ಎಂದಿದ್ದಾನೆ.

ಇದರಲ್ಲಿ ಏನೋ ರಹಸ್ಯ ಇದೆ
ಅಮೂಲ್ಯಾಗೆ ಇದರಲ್ಲಿ ಏನು ಒಂದು ಮರ್ಮ ಅಡಗಿದೆ ಎಂಬುದು ಗೊತ್ತಾಗಿದೆ. ಅಮ್ಮನಿಗೂ ಸೂರ್ಯನಾರಾಯಣ ಅಪ್ಪಾಜಿಗೂ ಏನೋ ಒಂದು ಸಂಬಂಧ ಇರಬೇಕು ಅದಕ್ಕಾಗಿ ಆ ಅಗ್ನಿ ಈ ರೀತಿ ಮಾಡಿಸುತ್ತಾ ಇದ್ದಾನೆ ಎಂದು ಅಮೂಲ್ಯ, ವೇದಾಂತ್ ಬಳಿ ಹೇಳಿದ್ದಾಳೆ. ನನಗೂ ಕೂಡ ಹಾಗೆ ಅನಿಸುತ್ತಿದೆ, ಇದರಲ್ಲಿ ಏನೋ ಇದೆ ಎಂದು. ಅದನ್ನು ಮೊದಲು ನಾನು ಕಂಡುಹಿಡಿಯಬೇಕು ಎಂದಿದ್ದಾನೆ.
ವೈದೇಹಿಗೆ ಸೂರ್ಯನಾರಾಯಣ ಪ್ರಶ್ನೆ
ಸೂರ್ಯನಾರಾಯಣರಿಗೆ ತಾವು ತಪ್ಪು ಕೆಲಸ ಮಾಡುತ್ತಿದ್ದೇನೆ ಎನಿಸುತ್ತಿದೆ. ಇದಕ್ಕಾಗಿ ಅಗ್ನಿ ಬಳಿ ಬಂದು ನನ್ನ ಕೈಯಲ್ಲಿ ಯಾಕೆ ಈ ರೀತಿಯ ಕೆಲಸ ಮಾಡಿಸುತ್ತಾ ಇದ್ದೀಯಾ. ನನಗೆ ಇದ್ಯಾವುದು ಸಹ ಸರಿ ಕಾಣಿಸುತ್ತಿಲ್ಲ ಎಂದು ಅಂದಿದ್ದಾರೆ. ಮನೆಯಲ್ಲಿ ಇರುವ ವೈದೇಹಿ ಎನ್ನುವರನ್ನು ಹೊರಗಡೆ ಹಾಕು ಎಂದು ಯಾಕೆ ಹೇಳಿದೆ ಎಂದು ಸಹ ಕೇಳಿದ್ದಾರೆ. ಅವರು ಅವನ ಮನೆಯಿಂದ ಹೋದಾಗ ಎಲ್ಲಿ ಇರುತ್ತಾರೆ ನನ್ನಿಂದ ಇಂತಹ ಪಾಪದ ಕೆಲಸಗಳನ್ನ ಮಾಡಲು ಸಾಧ್ಯವಿಲ್ಲ. ನನ್ನ ದಾರಿಯೇ ಬೇರೆ ಎಂದು ಸೂರ್ಯನಾರಾಯಣರು ಅಗ್ನಿ ಬಳಿ ಹೇಳಿದ್ದಾನೆ.
ಸೂರ್ಯನಾರಾಯಣ ಮಾತಿಗೆ ಅಗ್ನಿ ಶಾಕ್
ನನ್ನ ದಾರಿಯೇ ಬೇರೆಯಾಗಿದೆ. ನಾನು ನನ್ನ ದಾರಿಯನ್ನ ನೋಡಿಕೊಳ್ಳುತ್ತೇನೆ. ನಾನು ವಾಪಸ್ ಸಂಪಿಗೆಪುರಕ್ಕೆ ಹೋಗುತ್ತೇನೆ ಎಂದು ಸೂರ್ಯನಾರಾಯಣ, ಅಗ್ನಿಯ ಬಳಿ ಹೇಳಿ ಅಲ್ಲಿಂದ ಹೊರಟಿದ್ದಾನೆ. ಅಗ್ನಿಗೆ ಸೂರ್ಯನಾರಾಯಣರ ಮಾತನ್ನ ಕೇಳಿದ ಕೂಡಲೇ ಶಾಕ್ ಆಗಿದೆ.


Click it and Unblock the Notifications











