ಗಟ್ಟಿಮೇಳ: ಅಮೂಲ್ಯಾ ಅಕ್ಕ ಆರತಿಗೆ ಏನಾಗಿದೆ?

By ಪೂರ್ವ

ಉತ್ತಮ ಕಥೆ, ಟ್ವಿಸ್ಟ್‌ಗಳ ಮೂಲಕ 'ಗಟ್ಟಿಮೇಳ' ಧಾರವಾಹಿ ದೊಡ್ಡ ಸಂಖ್ಯೆಯ ವೀಕ್ಷಕರನ್ನು ಸೆಳೆದಿದೆ. ಸುಹಾಸಿನಿ ಕುತಂತ್ರಕ್ಕೆ ಅಮೂಲ್ಯ ಎದಿರೇಟು ಕೊಡುತ್ತಿರುವುದು ವೀಕ್ಷಕರನ್ನು ರಂಜಜಿಸುತ್ತಿದೆ. ಇತ್ತ ಎಲ್ಲರ ಮನೆ ಮಾತಾಗಿರುವ ಅಮೂಲ್ಯ ಮತ್ತು ವೇದಾಂತ್ ರೋಮ್ಯಾನ್ಸ್ ನೋಡಲು, ಅವರಿಬ್ಬರು ಪ್ರೀತಿ ಕತೆ ನೋಡಲು ಜನ ಕಾತರರಾಗಿರುತ್ತಾರೆ. ಆದರೆ ಇತ್ತೀಚೆಗೆ ಅಮೂಲ್ಯ ಅಕ್ಕ ಆರತಿ ಯಾಕೋ ವಿಚಿತ್ರವಾಗಿ ಆಡುತ್ತಿದ್ದಾಳೆ.

ತನ್ನ ಮಗುವಿಗೆ ಏನಾದರೂ ಆಗಿ ಬಿಡುತ್ತದೆ ಎಂದೆಲ್ಲ ಮನದಲ್ಲಿ ಏನೇನೋ ಕಲ್ಪಿಸಿಕೊಳ್ಳುತ್ತಿದ್ದಾಳೆ ಆರತಿ. ಇದಕ್ಕೆ ಕುಮ್ಮಕ್ಕು ನೀಡುವಂತೆ ಸುಹಾಸಿನಿಯೂ ಆರತಿ ಕಿವಿಯಲ್ಲಿ ಏನೇನೂ ಊದಿರುತ್ತಾಳೆ. ಯಾರು ಮಾಡಿದ ತಿಂಡಿಯನ್ನು ತಿನ್ನ ಕೂಡದು ಮನೆಯಲ್ಲಿ ಮಾಡಿದ್ದನ್ನು ಮಾತ್ರ ತಿನ್ನಬೇಕು ಎಂದೆಲ್ಲ ಹೇಳಿರುತ್ತಾಳೆ. ಆದರೆ ಈ ಮಾತನ್ನು ಕೇಳಿ ಮನೆಯವರನ್ನು ಹೊರಗಿನವರಂತೆ ಕಾಣುತ್ತಿದ್ದಾಳೆ ಆರತಿ. ಅಮ್ಮ ಮಗಳನ್ನು ನೋಡಲು ಮನೆಗೆ ಆಗಮಿಸುತ್ತಾರೆ. ಆದರೆ ಸುಹಾಸಿನಿಯ ಕೊಂಕು ಮಾತುಗಳಿಗೆ ಬೇಸರಪಟ್ಟುಕೊಳ್ಳುತ್ತಾರೆ.

ಆರತಿ ಮಲಗಿರುವ ಸಮಯದಲ್ಲಿ ಯಾಕೆ ನೀವು ಬಂದಿರುವುದು ನಿಮಗೆ ಟೈಂ ಸೆನ್ಸ್ ಇಲ್ವಾ ಎಂದೆಲ್ಲಾ ಹೇಳುತ್ತಾರೆ ಈ ಮಾತಿಗೆ ಆರತಿ ತಾಯಿ ಬಹಳ ಬೇಸರ ಪಟ್ಟುಕೊಳ್ಳುತ್ತಾರೆ. ಆದರೆ ಈ ವೇಳೆ ಅಮೂಲ್ಯ ಮನೆಯಲ್ಲಿ ಇರುವುದಿಲ್ಲ. ಅಮೂಲ್ಯ ಆಫೀಸಿಗೆ ಹೋಗಿರುತ್ತಾಳೆ. ಆರತಿ ತಾಯಿ ಇನ್ನೇನು ಹೊರಡಬೇಕು ಎಂದುಕೊಂಡಾಗ ಆರತಿ ಮೇಲಿಂದ ಇಳಿದುಕೊಂಡು ಬರುತ್ತಾಳೆ, ಅಮ್ಮ ಎಂದು ಕರೆಯುತ್ತಾಳೆ, ಆ ವೇಳೆ ಆರತಿ ತಾಯಿಗೆ ಬಹಳ ಖುಷಿಯಾಗುತ್ತದೆ. ಮಗಳಿಗೆ ಮಾಡಿರುವುದನ್ನೆಲ್ಲ ತಂದು ಆರತಿಯ ಕೈಗೆ ಕೊಡುತ್ತಾಳೆ ಆದರೆ ಆರತಿ ಪ್ರೀತಿಯಿಂದ ತೆಗೆದುಕೊಳ್ಳುತ್ತಾಳೆ.

ಅಮ್ಮ ಕೊಟ್ಟ ತಿನಿಸು ತಿನ್ನದ ಆರತಿ

ಅಮ್ಮ ಕೊಟ್ಟ ತಿನಿಸು ತಿನ್ನದ ಆರತಿ

ಬಳಿಕ ಮಗಳ ಕ್ಷೇಮ ಸಮಾಚಾರ ವಿಚಾರಿಸಿಕೊಂಡು ಅಲ್ಲಿಂದ ತೆರಳುತ್ತಾರೆ ಆರತಿ ತಾಯಿ. ಇನ್ನೂ ಮನೆಗೆ ಆರತಿ ತಾಯಿ ತಂದಿದ್ದ ಸ್ವೀಟುಗಳನ್ನೆಲ್ಲ ತಿನ್ನದಂತೆ ಆರತಿಗೆ ಕಿವಿ ಮಾತು ಹೇಳುತ್ತಾಳೆ ಸುಹಾಸಿನಿ. ಯಾರು ಏನೇ ತಂದರು ತೆಗೆದುಕೊಳ್ಳಬಾರದು ಎಂದು ಸುಹಾಸಿನಿ ಹೇಳುತ್ತಾಳೆ ಇದನ್ನು ಕೇಳಿಸಿಕೊಂಡ ಆರತಿ ಸುಮ್ಮನೆ ತನ್ನ ರೂಮಿಗೆ ತೆರಳುತ್ತಾಳೆ.

ಅಕ್ಕನ ಮಾತಿಗೆ ಕೆಂಡಾಮಂಡಲ

ಅಕ್ಕನ ಮಾತಿಗೆ ಕೆಂಡಾಮಂಡಲ

ಅಮ್ಮ ಮನೆಗೆ ಬಂದ ವಿಚಾರ ತಿಳಿದು ಅಮೂಲ್ಯ ಖುಷಿ ಪಡುತ್ತಾಳೆ. ಅಕ್ಕನಿಗೋಸ್ಕರ ಬಾದಾಮ್ ಹುಡಿ ಇದೆಲ್ಲವನ್ನು ತಂದಿರುವುದನ್ನು ನೋಡಿದ ಅಮೂಲ್ಯ ಅಕ್ಕನಿಗಾಗಿ ಹಾಲು ತಂದು ಕೊಡುತ್ತಾಳೆ. ಅಕ್ಕ ತಗೋ ಬಾದಾಮ್ ಹಾಲು ಕುಡಿ ಅಮ್ಮ ತಂದಿರುವುದು ಎಂದು ಹೇಳುತ್ತಾಳೆ. ಅದಕ್ಕೆ ಆರತಿ ಇಲ್ಲ ನನಗೆ ಬೇಡ ನಾನು ಹೊರಗಿನವರು ಯಾರು ಏನು ತಂದರು ನಾನು ತಿನ್ನುವುದಿಲ್ಲ ಕುಡಿಯುವುದಿಲ್ಲ ಎಂದು ಹೇಳುತ್ತಾಳೆ.

ಹಾಲನ್ನ ಕುಡಿದ ಆರತಿ

ಹಾಲನ್ನ ಕುಡಿದ ಆರತಿ

ಇದನ್ನು ಕೇಳಿದ ಅಮೂಲ್ಯಳಿಗೆ ಸಖತ್ ಕೋಪ ಬರುತ್ತದೆ. ನಮ್ಮ ಅಮ್ಮ ಇದೀಗ ನಿನಗೆ ಬೇರೆಯವಳ ಎಂದು ಕೆನ್ನೆಗೆ ಬಾರಿಸಲು ಹೋಗುತ್ತಾಳೆ. ಇದನ್ನು ನೋಡಿದ ಆರತಿಗೆ ಶಾಕ್ ಆಗುತ್ತದೆ ಅಮೂಲ್ಯ ಹೇಳುತ್ತಾಳೆ ಇದನ್ನು ಬೇಗ ಕುಡಿ ಇಲ್ಲಾಂದ್ರೆ ಗರ್ಭಿಣಿ ಅಂತಾನೂ ನೋಡಲ್ಲ ಮೂಗು ಹಿಡಿದು ಕುಡಿಸ್ತೀನಿ ಎಂದು ಹೇಳುತ್ತಾಳೆ. ಬಳಿಕ ಹಾಲನ್ನು ಅಮೂಲ್ಯ, ಅಕ್ಕನಿಗೆ ಬಲವಂತದಿಂದ ಕುಡಿಸುತ್ತಾಳೆ.

ಸುಹಾಸಿನಿಯನ್ನು ಆಟಕ್ಕೆ ಲಗಾಮ್

ಸುಹಾಸಿನಿಯನ್ನು ಆಟಕ್ಕೆ ಲಗಾಮ್

ಅಕ್ಕನನ್ನು ಹಾಲ್‌ಗೆ ಕರೆದುಕೊಂಡು ಬಂದು ಅಮ್ಮ ಮಾಡಿರುವ ಸಿಹಿ ತಿನಿಸನ್ನು ಎಲ್ಲರಿಗೂ ಕೊಟ್ಟು ಆರತಿಗೂ ಕೊಟ್ಟು ಅಮ್ಮನಿಗೆ ಕಾಲ್ ಮಾಡುತ್ತಾಳೆ ಅಮೂಲ್ಯ ಎಲ್ಲರೂ ಸಿಹಿ ತಿನಿಸು ತಿನ್ನುವುದನ್ನು ವಿಡಿಯೋ ಕಾಲ್‌ನಲ್ಲಿ ನೋಡಿದ ಆರತಿ ತಾಯಿ ಖುಷಿ ಪಡುತ್ತಾರೆ. ಇನ್ನೂ ವೇದಾಂತ್ ಹೇಳುತ್ತಾನೆ ಅತ್ತೆ ಇನ್ನೊಮ್ಮೆ ಸಿಹಿ ತಿನಿಸು ಮಾಡಿದರೆ ನಮಗೂ ತನ್ನಿ ಎಂದು ಹೇಳಿದಾಗ ಖುಷಿಯಾಗುತ್ತದೆ. ಇದನ್ನೆಲ್ಲ ನೋಡಿದ ಸುಹಾಸಿನಿಗೆ ಹೊಟ್ಟೆಯಲ್ಲಿ ಬೆಂಕಿ ಬಿದ್ದ ರೀತಿಯಾಗುತ್ತದೆ. ಅಮೂಲ್ಯ ಸುಹಾಸಿನಿಯತ್ತ ತಿರುಗಿ ಹೆಂಗೆ ಎಂದು ಕಣ್ಣು ಸನ್ನ ಮಾಡುತ್ತಾಳೆ. ಮುಂದೇನಾಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Zee kannada serial Gattimela written update on June 9th episode. Here is more details about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X