ಜೀ ಕನ್ನಡದ ಯಾವ ಜೋಡಿಯ ಜೊತೆ ಆರ್‌ಸಿಬಿ ಮ್ಯಾಚ್ ನೋಡಲು ಬಯಸುತ್ತೀರಿ?

By ಎಸ್ ಸುಮಂತ್

ಜೀ ಕನ್ನಡದಲ್ಲಿ ಎಲ್ಲಾ ವರ್ಗದವರು ಕುಳಿತು ನೋಡುವಂತ ಧಾರಾವಾಹಿಗಳು ಬರುತ್ತಿವೆ. ಆ ಬಗ್ಗೆ ಅನುಮಾನವೇ ಇಲ್ಲ. ಫ್ಯಾಮಿಲಿಗೆ ಇಷ್ಟವಾಗುವಂತ ಧಾರಾವಾಹಿ, ಹುಡುಗ ಹುಡಗಿಯರಿಗೆ ಮನರಂಜನೆ ನೀಡುವ ಧಾರಾವಾಹಿ, ಪ್ರೇಮಿಗಳಿಗೆ ಪುಳಕ ಉಂಟು ಮಾಡುವಂತ ಧಾರಾವಾಹಿ ಹೀಗೆ ಇಡೀ ಕುಟುಂಬ ಸಮೇತ ಕುಳಿತು ನೋಡುವಂತ ಧಾರಾವಾಹಿಗಳು ಮೂಡಿ ಬರುತ್ತಿವೆ. ಅದರಲ್ಲೂ ಎಲ್ಲಾ ಧಾರಾವಾಹಿಗಳಲ್ಲೂ ಒಂದೊಂದು ಜೋಡಿ ಇದೆ. ಆ ಜೋಡಿ ಎಲ್ಲರ ಅಚ್ಚುಮೆಚ್ಚು ಎಂದರೆ ತಪ್ಪಾಗಿಲಿಕ್ಕಿಲ್ಲ.

ಸಂಜೆ 6 ಗಂಟೆಯಿಂದ ಶುರುವಾಗುವ 'ಪಾರು' ಧಾರಾವಾಹಿಯಿಂದ ಹಿಡಿದು ರಾತ್ರಿ 10ರ 'ಕಮಲಿ' ಧಾರಾವಾಹಿಯಲ್ಲಿರುವ ಜೋಡಿಗಳೆಂದರೆ ಎಲ್ಲರಿಗೂ ಇಷ್ಟ. ಅವರ ರೋಮ್ಯಾನ್ಸ್, ಪ್ರೀತಿ, ಕಿತ್ತಾಟ ನೋಡುವುದಕ್ಕೆ ಎಲ್ಲರು ಕಾಯುತ್ತಿರುತ್ತಾರೆ. ಇಷ್ಟು ಧಾರಾವಾಹಿಗಳಲ್ಲೂ ಒಂದಷ್ಟು ಜನರಿಗೆ ಒಂದಷ್ಟು ಅಚ್ಚುಮೆಚ್ಚಿನ ಜೋಡಿಯಾಗಿದ್ದಾರೆ.

ನಿಮ್ಮ ಜೋಡಿ ಜೊತೆ ಕೂತು RCB ಮ್ಯಾಚ್ ನೋಡಬಹುದು

ನಿಮ್ಮ ಜೋಡಿ ಜೊತೆ ಕೂತು RCB ಮ್ಯಾಚ್ ನೋಡಬಹುದು

ಜೀ ಕನ್ನಡ ಒಂದೊಳ್ಳೆ ಆಫರ್ ನೀಡಿದೆ. ಅದು ಇಷ್ಟವಾದ ಜೋಡಿ ಜೊತೆಗೆ ಕೂತು RCB ಮ್ಯಾಚ್ ನೋಡುವಂತ ಅವಕಾಶ. ಇಡೀ ಧಾರಾವಾಹಿಗಳಲ್ಲಿ ಸಿಕ್ಕಾಪಟ್ಟೆ ಇಷ್ಟವಾಗುವ ಜೋಡಿಯೆಂದರೆ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಸ್ನೇಹಾ ಮತ್ತು ಕಂಠಿ, 'ಸತ್ಯ' ಧಾರಾವಾಹಿಯ ಕಾರ್ತಿಕ್ ಮತ್ತು ಸತ್ಯ, 'ಜೊತೆ ಜೊತೆಯಲಿ' ಧಾರಾವಾಹಿಯ ಅನು ಮತ್ತು ಆರ್ಯ. 'ಗಟ್ಟಿಮೇಳ' ಧಾರಾವಾಹಿಯ ಅಮೂಲ್ಯ ಹಾಗೂ ವೇದಾಂತ್‌ಗೂ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಆದ್ರೀಗ ಜೀ ಕನ್ನಡ RCB ಮ್ಯಾಚ್ ಅನ್ನು ಯಾರ ಜೊತೆ ನೋಡುತ್ತೀರಿ ಎಂದು ಆಫರ್ ಕೊಟ್ಟಿದೆ. ಅದಕ್ಕೆ ನೆಟ್ಟಿಗರು ಸ್ನೇಹಾ ಮತ್ತು ಕಂಠಿ ಬಗ್ಗೆ ಕಮೆಂಟ್ ಮಾಡಿದ್ದಾರೆ. ಅಂದರೆ ಈಗ ಮೋಸ್ಟ್ ಪಾಪ್ಯುಲರ್ ಜೋಡಿ ಎಂದರೆ ಪುಟ್ಟಕ್ಕನ ಮಗಳು ಮತ್ತು ಬಂಗಾರಮ್ಮನ ಮಗ.

ಈ ಜೋಡಿ ಜೊತೆ RCB ಮ್ಯಾಚ್ ನೋಡೋದು ಹೇಗೆ?

ಜೀ ಕನ್ನಡ ಪ್ರೇಕ್ಷಕರಿಗೆ, ಕ್ರಿಕೆಟ್ ಪ್ರೇಮಿಗಳಿಗೆ RCB ಮ್ಯಾಚ್ ನೋಡುವ ಆಸೆಯನ್ನೇನೋ ಹುಟ್ಟು ಹಾಕಿದೆ. ಅದರಲ್ಲೂ ಪುಟ್ಟಕ್ಕನ ಅಳಿಯ ಮಗಳನ್ನು ಕಂಡರೆ ಬಲು ಪ್ರೀತಿ ಇದ್ದು, ಕ್ರಿಕೆಟ್ ಎಂದರೆ ಇನ್ನು ಪ್ರೀತಿ ಇದ್ದವರಿಗೆ ಎರಡೆರಡು ಆಫರ್‌ಗಳನ್ನು ಒಟ್ಟಿಗೆ ಕೊಟ್ಟಾಗ ಖುಷಿಯಾಗುವುದಿಲ್ಲವೇ. ಅಂತಹ ಆಫರ್ ಕೊಟ್ಟಿರುವ ಜೀ ಕನ್ನಡ ಎಷ್ಟೊತ್ತಿಗೆ, ಹೇಗೆ ಮ್ಯಾಚ್ ಜೊತೆಯಲ್ಲಿ ಕೂತು ನೋಡುವುದು ಎಂಬುದನ್ನು ಮಾತ್ರ ಹೇಳಿಲ್ಲ. ಇದನ್ನು ತಿಳಿಯಲಾಗದೆ ಅಭಿಮಾನಿಗಳು ಕಂಗಾಲಾಗಿದ್ದಾರೆ.

ಜೀ ತಾರೆಯರಿಂದ ಕ್ರಿಕೆಟ್ ಬಗ್ಗೆ ಸಲಹೆ ಸೂಚನೆ

ಜೀ ತಾರೆಯರಿಂದ ಕ್ರಿಕೆಟ್ ಬಗ್ಗೆ ಸಲಹೆ ಸೂಚನೆ

ಕ್ರಿಕೆಟ್ ಮ್ಯಾಚ್ ಶುರುವಾದಾಗೆಲ್ಲಾ ಮನೆಯಲ್ಲಿ ರಿಮೋಟ್ ಗಾಗಿ ಯುದ್ಧ ನಡೆದೆ ಇರುತ್ತದೆ. ಇಂಥವರ ಮನೆಯಲ್ಲಿ ರಿಮೋಟ್‌ಗಾಗಿ ಯುದ್ಧ ನಡೆದಿದೆ, ನಡೆದಿಲ್ಲ ಅಂತಲ್ಲ. ಎಲ್ಲರ ಮನೆಯಲ್ಲೂ ಈ ಜಗಳ ನಡೆದೆ ನಡೆದಿರುತ್ತದೆ. ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಧಾರಾವಾಹಿ ಕ್ರೇಜ್, ಗಂಡು ಮಕ್ಕಳಿಗೆ ಕ್ರಿಕೆಟ್ ನೋಡುವ ಕ್ರೇಜ್. ಹೀಗಾಗಿ ಇಬ್ಬರ ಜಗಳದಲ್ಲಿ ಮುನಿಸು, ಕೋಪ-ತಾಪ ಶುರುವಾಗುತ್ತಲೆ ಇರುತ್ತದೆ. ಇದಕ್ಕೆ ಸಲಹೆ ಸೂಚನೆಗಳನ್ನು ಕೊಡುತ್ತಾ ನಮ್ಮ ಧಾರಾವಾಹಿಗಳನ್ನು ಆಪ್ ನಲ್ಲಿಯೇ ನೋಡಿ ಅಂತ ಎಲ್ಲಾ ತಾರೆಯರು ತಮ್ಮ ವೀಕ್ಷಕರಿಗೆ ಸೂಚನೆ ಕೂಡ ಕೊಡುತ್ತಾ ಬಂದಿದ್ದಾರೆ.

ಅನು-ಆರ್ಯನ ಜಾಗಕ್ಕೆ ಬಂದ ಕಂಠಿ-ಸ್ನೇಹಾ

ಅನು-ಆರ್ಯನ ಜಾಗಕ್ಕೆ ಬಂದ ಕಂಠಿ-ಸ್ನೇಹಾ

ಮೊದ ಮೊದಲಿಗೆ 'ಜೊತೆ ಜೊತೆಯಲಿ' ಧಾರಾವಾಹಿ ನಂಬರ್ ಒನ್ ಸ್ಥಾನವನ್ನು ಉಳಿಸಿಕೊಂಡು ಬಂದಿತ್ತು. ಈಗಲೂ ಆ ಖ್ಯಾತಿಯನ್ನು ಉಳಿಸಿಕೊಂಡು ಸಾಗುತ್ತಿದೆ. ಆದರೆ ನಂಬರ್ ಒನ್ ಸ್ಥಾನವನ್ನು 'ಪುಟ್ಟಕ್ಕನ ಮಕ್ಕಳು' ಬಿಟ್ಟುಕೊಡದೆ ಮುಂದೆ ಸಾಗುತ್ತಿದೆ. ಅದರಂತೆ ಅದರಲ್ಲಿರುವ ಜೋಡಿ ಸ್ನೇಹಾ ಮತ್ತು ಕಂಠಿ ಎಲ್ಲರ ಮನಸ್ಸನ್ನು ಕದ್ದಿದ್ದಾರೆ. ಅವರಿಗಾಗಿಯೇ ಫ್ಯಾನ್ ಪೇಜ್ ಗಳು ಕ್ರಿಯೇಟ್ ಆಗಿವೆ. ನಾಗ, ಮುಂಗುಸಿ ತೆರೆ ಮೇಲೆ ಅವರಿಬ್ಬರ ಪ್ರೀತಿಗೆ ಸಹಾಯ ಮಾಡುತ್ತಿದ್ದರೆ, ತೆರೆ ಹಿಂದೆ ಅಂದರೆ ಸೋಷಿಯಲ್ ಮೀಡಿಯಾದಲ್ಲಿ ಪುಟ್ಟಕ್ಕನ ಮಗಳು ಸ್ನೇಹಾ ಮತ್ತು ಬಂಗಾರಮ್ಮನ ಮಗ ಕಂಠಿಯ ಪೇಜ್‌ಗಳು ಸೃಷ್ಟಿಯಾಗಿವೆ. ವೀಕ್ಷಕರು ನೀವಿಬ್ಬರೂ ಬೇಗ ಒಂದಾಗಿ ಅಂತ ಅರಸಿ, ಹಾರೈಸುತ್ತಿದ್ದಾರೆ.

More from Filmibeat

English summary
Zee Kannada Giving opportunity to watch RCB Match with Serial Stars. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X