ಗಣೇಶೋತ್ಸವ ಆಚರಣೆ ಮಾಡಿದ ಸೀರಿಯಲ್ ತಾರೆಯರು: ಗಣೇಶ ಹಬ್ಬ ಬಲು ಜೋರು..!

By ಶೃತಿ ಹರೀಶ್ ಗೌಡ

ಗಣೇಶ ಹಬ್ಬವನ್ನು ಇಡೀ ದೇಶದಾದ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಇದಕ್ಕೆ ಸಿನಿಮಾ ನಟ ನಟಿಯರು ಹಾಗೂ ಸೀರಿಯಲ್‌ನ ನಟ ನಟಿಯರು ಹೊರತಾಗಿಲ್ಲ. ಜೀ ಕನ್ನಡ ಕುಟುಂಬದಲ್ಲಿ ಗಣೇಶೋತ್ಸವದ ಸಂಭ್ರಮ ಎಲ್ಲೆಲ್ಲೂ ಮನೆ ಮಾಡಿದೆ. ಪ್ರತಿಯೊಂದು ಸೀರಿಯಲ್ ತಾರೆಯರು ತಮ್ಮ ತಮ್ಮ ಸಿರಿಯಲ್ ಸೆಟ್ನಲ್ಲಿ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಎಲ್ಲಾ ವಿಘ್ನಗಳನ್ನು ನಿವಾರಿಸುವ ಗಣೇಶ ಎಲ್ಲರ ಸಂಕಷ್ಟಗಳನ್ನ ಪರಿಹರಿಸಲಿ ಎಂದು ಕೇಳಿಕೊಂಡಿದ್ದಾರೆ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹಾಗೂ ಭರ್ಜರಿ ಬ್ಯಾಚುಲರ್ಸ್ ತಂಡಗಳು ಸೇರಿಕೊಂಡು ಗಣೇಶೋತ್ಸವದ ರಂಗನ್ನು ಹೆಚ್ಚು ಮಾಡಿದ್ದಾರೆ. ಹಲವಾರು ದೇವರ ಹಾಡುಗಳಿಗೆ ನೃತ್ಯ ಮಾಡುವ ಮೂಲಕ ಎಲ್ಲರನ್ನ ಮನರಂಜಿಸಿದ್ದಾರೆ. ಇಸುಬ್ ಹಾಗೂ ಅಕ್ಷದ ಇಬ್ಬರು ಸಹ ಸೇರಿಕೊಂಡು ವಿಘ್ನ ನಾಯಕನ ಹಾಡಿಗೆ ಡ್ಯಾನ್ಸ್ ಪರ್ಫಾರ್ಮೆನ್ಸ್ ಅನ್ನು ಕೊಟ್ಟಿದ್ದಾರೆ. ಈ ಮೂಲಕ ಭರ್ಜರಿ ಬ್ಯಾಚುಲರ್ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ತಂಡಗಳು ಸಹ ವಿಘ್ನೇಶ್ವರನನ್ನ ಬರಮಾಡಿಕೊಂಡಿದ್ದಾರೆ.

Zee Kannada gowri ganesha chaturthi celebration

ಶಿವನಿಗೆ ಸವಾಲು ಹಾಕಿದ ಶಿವಪ್ರಸಾದ್

ಭೂಮಿಗೆ ಬಂದ ಭಗವಂತ ಧಾರವಾಹಿಯಲ್ಲಿ ಶಿವಪ್ರಸಾದ್ ಶಿವನಿಗೆ ಸವಾಲನ್ನು ಹಾಕಿದ್ದಾರೆ. ನೀನು ಕುಟುಂಬ ಸಮೇತ ಭೂಲೋಕ್ಕೆ ಬಂದು ಪೂಜೆ ಮಾಡಿಸಿಕೊಂಡು ಹೋಗು ಎಂದಿದ್ದಾರೆ.‌ಇದಕ್ಕೆ ಶಿವ ನಗುತ್ತಾ ಆಯ್ತು ಎಂದು ಶಿವಪ್ರಸಾದನಿಗೆ ತಿಳಿಸಿದ್ದಾರೆ. ಶಿವನ ಸಂಭಾಷಣೆಗೆ ಈಗಾಗಲೇ ಪ್ರೇಕ್ಷಕರು ಪಿಧಾ ಆಗಿದ್ದು, ಗಣೇಶ‌ ಹಾಗೂ ಗೌರಿಯ ಜೊತೆಗೆ ಶಿವ ಕೈಲಾಸದಿಂದ ಭೂಲೋಕಕ್ಕೆ ಯಾವ ವೇಷದಲ್ಲಿ ಬಂದು ಶಿವಪ್ರಸಾದ್‌‌ಗೆ ಯಾವ ನೀತಿ ಭೋದನೆ ಮಾಡುತ್ತಾರೆ ಎಂಬುದನ್ನು ಎದುರು ನೋಡುತ್ತಾ ಇದ್ದಾರೆ.

ಹಬ್ಬದ ಸಂಭ್ರಮದಲ್ಲಿ ಹಿಟ್ಲರ್ ಕಲ್ಯಾಣ ಫ್ಯಾಮಿಲಿ

ತಾತನಿಗೆ ಗಣೇಶ ತರುವಂತೆ ಹೇಳಿದ ಸಿಹಿ ಪುಟಾಣಿ

ಹಿಟ್ಲರ್ ಕಲ್ಯಾಣ ಕುಟುಂಬದಲ್ಲಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಲೀಲಾ ಗಣಪತಿ ಸ್ತುತಿಯನ್ನು ಮಾಡಿದ್ದು, ಮಕ್ಕಳ ಕೈನಲ್ಲಿ ಗಣಪತಿಗೆ ಪೂಜೆಯನ್ನು ನೆರವೇರಿಸಿದ್ದಾಳೆ. ಏಕದಂತ ಎಲ್ಲರ ಬಾಳಿನಲ್ಲೂ ಸಂತೋಷವನ್ನು ತರಲಿ ಎಂದು ಶುಭಾರೈಸಿದ್ದಾರೆ. ಪಾರು ಸೀರಿಯಲ್ ತಂಡ ಸಹ ಗಣೇಶ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದು, ನಮ್ಮ ಅಭಿಮಾನಿ ವರ್ಗಕ್ಕೆ ಶುಭ ಹಾರೈಸಿದ್ದಾರೆ.

ಸೀತಾ ಹಾಗೂ ಸಿಹಿ ಇಬ್ಬರು ಗಣೇಶನ ಮಾಡಿಕೊಳ್ಳಲು ತುಂಬಾ ಸಂಭ್ರಮದಿಂದ ಕಾತುರರಾಗಿದ್ದಾರೆ. ಸಿಹಿ ತಾತನಿಗೆ ತಾತ ಇನ್ನೂ ಗಣೇಶನನ್ನ ತಂದಿಲ್ವಾ ಎಂದು ಕಾಲೆಳೆದಿದ್ದಾಳೆ. ಇದಕ್ಕೆ ಅಜ್ಜಿ ಸಹ ಧ್ವನಿಯನ್ನು ಸೇರಿಸಿದ್ದು, ಈ ತಾತನನ್ನು ನಂಬಿಕೊಂಡರೆ ಗಣೇಶನ ಬರುವುದಿಲ್ಲ ಗೌರಿಯು ಬರುವುದಿಲ್ಲ ಎಂದು ತಮಾಷೆಯನ್ನ ಮಾಡಿದ್ದಾರೆ. ಇನ್ನು ಸೀತಾ ಬದುಕಲ್ಲಿ ರಾಮ ಬಂದು ಸೀತಾಗೆ ಬಂದಿರುವ ವಿಘ್ನಗಳನ್ನು ನೆರವೇರಿಸುತ್ತಾನ ನೋಡಬೇಕಾಗಿದೆ.

Zee Kannada gowri ganesha chaturthi celebration

ಗಣಪತಿಗೆ ಪೂಜೆ ನೆರವೇರಿಸಿದ ಭೂಮಿ

ಬಂಗಾರಮ್ಮನ ಮನೆಯಲ್ಲಿ ಗಣೇಶೋತ್ಸವ

ಭೂಮಿಕಾ ಗೌತಮ್ ಮನೆಗೆ ಮೊದಲ ಬಾರಿಗೆ ಬಂದಿದ್ದು ಸೇರನ್ನು ಹೊದ್ದು ಒಳಗೆ ಬಂದಿದ್ದಾರೆ. ಗೌತಮ್ ಹಾಗೂ ಭೂಮಿಕಾ ಇಬ್ಬರು ಸೇರಿಕೊಂಡು ಗಣೇಶನಿಗೆ ಮೊದಲಿಗೆ ಪೂಜೆ ಸಲ್ಲಿಸಿದ್ದಾರೆ. ಗಣೇಶ ಹಬ್ಬದಂದೇ ಭೂಮಿ ಗೌತಮ್ ಮನೆಗೆ ಬಲಗಾಲಿಟ್ಟು ಬಂದಿದ್ದಾರೆ. ಗೌತಮ್ ಮನೆಯಲ್ಲಿರುವ ಎಲ್ಲರಿಗೂ ಸಹ ತುಂಬಾ ಸಂತೋಷವಾಗಿದೆ. ಎಲ್ಲರೂ ಭೂಮಿ ಕಾಗೆ ನೀನು ನಿನ್ನ ತವರು ಮನೆಯನ್ನ ಬೆಳಗಿದಂತೆ ಈ ಮನೆಯನ್ನ ಬೆಳಗು ಎಂದು ಗೌರಿ ಗಣೇಶ ಹಬ್ಬದಂದು ಶುಭ ಹಾರೈಸಿದ್ದಾರೆ.

ಪುಟ್ಟಕ್ಕನ ಮಕ್ಕಳು ಧಾರಾವಾಹಿ ತಂಡ ಅದ್ಧೂರಿಯಾಗಿ ಗಣೇಶನನ್ನು ಬರಮಾಡಿಕೊಂಡಿದ್ದಾರೆ. ಬಂಗಾರಮ್ಮನ ಮನೆಯಲ್ಲಿ ಗಣೇಶನನ್ನು ಕೂರಿಸಿದ್ದು ಸ್ನೇಹ ಹಾಗೂ ಪುಟ್ಟಕ್ಕ ಇಬ್ಬರೂ ಸಹ ಬಂಗಾರಮ್ಮನ ಮನೆಯಲ್ಲಿ ಗಣೇಶ ಹಬ್ಬವನ್ನು ಮಾಡುತ್ತಾ ಇದ್ದಾರೆ. ಸ್ನೇಹ ಸಹ ಎಲ್ಲವನ್ನೂ ಮರೆತು ಬಂಗಾರಮ್ಮನ ಮನೆಯ ಸೊಸೆಯಾಗಿ ಹಬ್ಬವನ್ನು ತಾನೇ ಮುಂದೆ ನಿಂತು ಮಾಡುತ್ತಾ ಇದ್ದಾಳೆ. ಪಾರು, ಹಿಟ್ಲರ್ ಕಲ್ಯಾಣ, ಗಟ್ಟಿಮೇಳ, ಪುಟ್ಟಕ್ಕನ ಮಕ್ಕಳು,ಸೀತಾರಾಮ, ಸತ್ಯ, ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿ ಗಣೇಶ ಹಬ್ಬ ಆಚರಣೆ ಮಾಡಲಾಗುತ್ತಿದೆ.

More from Filmibeat

English summary
Gowri ganesha chaturthi: zee Kannada serials celebrating ganesha festival.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X