ಕೊರೊನಾ ಹರಡದಂತೆ ತಡೆಯಲು ಝೀ ವಾಹಿನಿಯಿಂದ ಹೊಸ ಮಾರ್ಗ

ಕೊರೊನಾ ವೈರಸ್ ಎರಡನೇ ಅಲೆ ಹಿನ್ನೆಲೆ ಚಿತ್ರಮಂದಿರಗಳು ಬಂದ್ ಆಗಿವೆ. ಅದರೆ ಸಿನಿಮಾ ಶೂಟಿಂಗ್, ಧಾರಾವಾಹಿ ಅಥವಾ ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಯಾವುದೇ ತೊಂದರೆ ಇಲ್ಲ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕೆಲಸ ಮುಂದುವರಿಸಿವೆ.

ಇದೀಗ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಆಯೋಜಕರು ಕೊರೊನಾ ಎದುರಿಸಲು ಉತ್ತಮ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಈ ಕುರಿತು ನಟಿ ಹಾಗು ಕಾರ್ಯಕ್ರಮದ ತೀರ್ಪುಗಾರರಾಗಿರುವ ರಕ್ಷಿತಾ ಪ್ರೇಮ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿದ್ದಾರೆ.

ಕೊರೊನಾ ಹರಡದಂತೆ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ತೀರ್ಪುಗಾರರ ನಡುವೆ ಗ್ಲಾಸ್ ಶೀಲ್ಡ್ ಹಾಕಲಾಗಿದೆ. ಇದರಿಂದ ತೀರ್ಪುಗಾರರ ನಡುವಿನ ಅಂತರ ಕಾಪಾಡಬಹುದು.

Zee Kannada Has takes good precaution against Covid19

ರಕ್ಷಿತಾ ಪ್ರೇಮ್, ವಿಜಯ ರಾಘವೇಂದ್ರ ಹಾಗೂ ಚಿನ್ನಿ ಪ್ರಕಾಶ್ ಮಾಸ್ಟರ್ ಈ ಶೋನಲ್ಲಿ ತೀರ್ಪುಗಾರರಾಗಿದ್ದಾರೆ. ಈ ಮೂವರ ನಡುವೆ ಗ್ಲಾಸ್ ಶೀಲ್ಡ್ ಹಾಕಿ ಅಂತರ ಕಾಪಾಡಲಾಗಿದೆ. ಸ್ಪರ್ಧಿಗಳ ಆಸನ ವಿಚಾರದಲ್ಲೂ ಅಂತರ ಉಳಿಸಿಕೊಳ್ಳಲಾಗಿದೆ.

ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಈ ಸಮಯದಲ್ಲಿ ಝೀ ವಾಹಿನಿ ಇಂತಹದೊಂದು ಮಾರ್ಗ ಕಂಡುಕೊಂಡಿರುವುದು ವೀಕ್ಷಕರ ವಲಯದಲ್ಲಿ ಮೆಚ್ಚುಗೆ ಪಡೆದುಕೊಂಡಿದೆ. ರಕ್ಷಿತಾ ಅವರ ಈ ಪೋಸ್ಟ್‌ನ್ನು ನೆಟ್ಟಿಗರು ಸ್ವಾಗತಿಸಿದ್ದಾರೆ.

ಇನ್ನುಳಿದಂತೆ ಝೀ ವಾಹಿನಿಯೂ ಬೇರೆ ಯಾವ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ ಎಂದು ಈ ವಾರಾಂತ್ಯಕ್ಕೆ ಕಾರ್ಯಕ್ರಮದಲ್ಲಿ ನೋಡಬೇಕಿದೆ.

More from Filmibeat

English summary
Dance Karnataka Dance Show organizer has takes good precaution against Covid19.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X