»   » ಟೀಕಾಕಾರರ ಬಾಯಿಗೆ ಬೀಗ ಜಡಿದ ಜೀ ಕನ್ನಡ ವಾಹಿನಿ ಮುಖ್ಯಸ್ಥ

ಟೀಕಾಕಾರರ ಬಾಯಿಗೆ ಬೀಗ ಜಡಿದ ಜೀ ಕನ್ನಡ ವಾಹಿನಿ ಮುಖ್ಯಸ್ಥ

Posted By:
Subscribe to Filmibeat Kannada

'ಸರಿಗಮಪ ಸೀಸನ್ 13' ರಲ್ಲಿ ಹಿಂದೂ ಭಕ್ತಿಗೀತೆ ಹಾಡಿ ರಾಷ್ಟ್ರ ಮಟ್ಟದಲ್ಲಿ ಸಾಗರದ ಹುಡುಗಿ ಸುಹಾನ ಸೈಯದ್ ಸುದ್ದಿ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಸುಹಾನ ಮೊನ್ನೆ ''ಮುಕುಂದ.. ಮುರಾರಿ'' ಎಂಬ ಮತ್ತೊಂದು ಭಕ್ತಿಗೀತೆ ಹಾಡಿ ವಿವಾದಕ್ಕೆ ಶುಭಂ ಹಾಡಿದರು.

ಸುಹಾನ ಜೊತೆಯಲ್ಲಿ ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ಕೂಡ 'ಸರಿಗಮಪ ಸೀಸನ್ 13' ವೇದಿಕೆ ಮೇಲೆ ಎಲ್ಲರ ತಲೆಯಲ್ಲಿ ಮೂಡಿರಬಹುದಾದ ಅನುಮಾನಗಳಿಗೆ ಕ್ಲಾರಿಟಿ ಕೊಟ್ಟರು.['ಸರಿಗಮಪ' ಸುಹಾನಳಿಗೆ ಬೇಕಿರುವುದು ಪ್ರೋತ್ಸಾಹವೇ ಹೊರತು, ಪ್ರಚಾರವಲ್ಲ!]

ಅಷ್ಟಕ್ಕೂ, ರಾಘವೇಂದ್ರ ಹುಣಸೂರು ರವರ ಬಾಯಿಂದ ಬಂದ ಮಾತುಗಳೇನು.? ತಿಳಿಯಲು ಮುಂದೆ ಓದಿರಿ....

ಈ ವೇದಿಕೆ ಮೇಲೆ ಎಲ್ಲರಿಗೂ ಉತ್ತರ ಸಿಗಬೇಕು.!

''ಸರಿಗಮಪ'... ಹದಿಮೂರನೇ ಸೀಸನ್ ನಡೆಯುತ್ತಿದೆ. ಹನ್ನೆರಡು ಸೀಸನ್ ಮುಗಿದಿದೆ. ಇಲ್ಲಿಯವರೆಗೂ ಇಷ್ಟು ದೊಡ್ಡ ಸುದ್ದಿ ಆಗಲು ಕಾರಣವಾಗಿದ್ದು ಆ ಒಂದು ಹಾಡು ಮತ್ತು ಸನ್ನಿವೇಶ ಈ ವೇದಿಕೆ ಮೇಲೆ. ಹೀಗಾಗಿ ಈ ವೇದಿಕೆ ಮೇಲೆ ಎಲ್ಲ ಪ್ರಶ್ನೆಗಳಿಗೂ ಎಲ್ಲರಿಗೂ ಉತ್ತರ ಸಿಗಬೇಕು ಅನ್ನೋದು ನಮ್ಮ ಅಭಿಲಾಷೆ. ಸೋ, ನಾವು ಬೇರೆ ಕಡೆ ಉತ್ತರ ಕೊಡಲು ಹೋಗಲಿಲ್ಲ'' - ರಾಘವೇಂದ್ರ ಹುಣಸೂರು, ಜೀ ಕನ್ನಡ ವಾಹಿನಿ ಮುಖ್ಯಸ್ಥ

ಸಾಗರದ ಆಡಿಷನ್ ನಲ್ಲಿ ಆಗಿದ್ದೇನು.?

''ಶಿವಮೊಗ್ಗದ ಕಾಲೇಜ್ ಒಂದರಲ್ಲಿ ನಾವು ಆಡಿಷನ್ ಗೆ ಹೋಗಿದ್ವಿ. ಅದು ನಮ್ಮ ಸೀಸನ್ 13ನೇ ಆಡಿಷನ್. ಶಿವಮೊಗ್ಗಗೆ ಆಡಿಷನ್ ಗೆ ಹೋದ ನಮ್ಮ ತಂಡ ಹುಡುಕ್ಕೊಂದು ಹೋಗಿದ್ದು ಸುಹಾನ ಸೈಯದ್ ನ ಅಲ್ಲ. ಬದಲಾಗಿ ಒಂದು ಗಾಯಕಿಯನ್ನ. ಅಲ್ಲಿ ಶಾರ್ಟ್ ಲಿಸ್ಟ್ ಆಗಿ ಬಂದ ನೂರೈವತ್ತು-ಇನ್ನೂರು ಟಾಪ್ ಸಿಂಗರ್ ಗಳಲ್ಲಿ ಸುಹಾನ ಒಬ್ಬರಾಗಿದ್ದರು'' - ರಾಘವೇಂದ್ರ ಹುಣಸೂರು, ಜೀ ಕನ್ನಡ ವಾಹಿನಿ ಮುಖ್ಯಸ್ಥ[ಮತ್ತೊಂದು 'ಭಕ್ತಿಗೀತೆ' ಹಾಡಿ ವಿವಾದಕ್ಕೆ ತೆರೆ ಎಳೆದ ಸುಹಾನ ಸೈಯದ್!]

ಕಾರ್ಯಕ್ರಮದ ಫಾರ್ಮ್ಯಾಟ್ ಏನು.?

''ಸುಹಾನ ಒಳ್ಳೆ ಗಾಯಕಿ ಅಂತ್ಹೇಳಿ ನಾವು ಟಾಪ್ 30ಗೆ ಸೆಲೆಕ್ಟ್ ಮಾಡಿದ್ವಿ. ನೀವು ನಮ್ಮ ಫಾರ್ಮ್ಯಾಟ್ ನೋಡಿರ್ತೀರಾ... ಅನುಶ್ರೀ ನಿಂತ್ಕೋತಾರೆ... ಜಡ್ಜಸ್ ಅಲ್ಲಿ ಕೂತಿರ್ತಾರೆ... ಮೂರು ಜನ ಜಡ್ಜಸ್ ಗೆ ಬ್ಲೈಂಡ್ ಫೋಲ್ಡ್ ಆಗುತ್ತೆ... ಲೈಟ್ ಫೇಡ್ ಆಗುತ್ತೆ... ಸ್ಪರ್ಧಿ ಇಲ್ಲಿಗೆ ಬಂದು ಹಾಡುತ್ತಾರೆ.. 100 ಸೆಕೆಂಡ್ ಟೈಮರ್ ಓಡುತ್ತೆ... ಅದು ಮುಗಿಯುವ ಒಳಗೆ ಸ್ಪರ್ಧಿಗಳ ಹಾಡು ನಮ್ಮ ತೀರ್ಪುಗಾರರ ಕಣ್ಣನ್ನ ತೆರೆಸಬೇಕಾಗುತ್ತೆ. ಆಗ ಆ ಸ್ಪರ್ಧಿ ಆಯ್ಕೆ ಆಗುತ್ತಾರೆ'' - ರಾಘವೇಂದ್ರ ಹುಣಸೂರು, ಜೀ ಕನ್ನಡ ವಾಹಿನಿ ಮುಖ್ಯಸ್ಥ

ತೀರ್ಪುಗಾರರ ಮನದಲ್ಲಿ ಇದ್ದದ್ದು ಏನು.?

''100 ಸೆಕೆಂಡ್ ಮುಗಿದು ಜಡ್ಜಸ್ ಕಣ್ಣು ತೆಗೆದಾಗ ಅವರಿಗೆ ಗೊತ್ತಿದದ್ದು ಸುಹಾನ ಅಲ್ಲ... Contestant ನಂಬರ್ 21'' - ರಾಘವೇಂದ್ರ ಹುಣಸೂರು, ಜೀ ಕನ್ನಡ ವಾಹಿನಿ ಮುಖ್ಯಸ್ಥ

ಮುಸ್ಲಿಂ ಎಂಬ ಕಾರಣದಿಂದ ಗೆಲ್ಲುವುದಿಲ್ಲ

''ಸುಹಾನ ಈ ಕಾರ್ಯಕ್ರಮಕ್ಕೆ ಆಯ್ಕೆ ಆಗಿರುವುದು ಅವರಲ್ಲಿರುವ ಅದ್ಭುತ ಪ್ರತಿಭೆಯಿಂದ. ಈ ಕಾರ್ಯಕ್ರಮದಲ್ಲಿ ನೀವೊಬ್ಬ ಹಿಂದು ಅಂತ್ಹೇಳಿ ಸೋಲುವುದಿಲ್ಲ. ಅಥವಾ ಮುಸ್ಲಿಂ ಎಂಬ ಕಾರಣದಿಂದ ಗೆಲ್ಲುವುದಿಲ್ಲ. ಒಬ್ಬ ಒಳ್ಳೆಯ ಹಾಡುಗಾರರು ಎಂಬ ಕಾರಣದಿಂದ ಮಾತ್ರ ಗೆಲ್ಲುತ್ತೀರಾ'' - ರಾಘವೇಂದ್ರ ಹುಣಸೂರು, ಜೀ ಕನ್ನಡ ವಾಹಿನಿ ಮುಖ್ಯಸ್ಥ

ಎಲ್ಲರ ಪೈಕಿ ಸುಹಾನ ಒಬ್ಬರು ಅಷ್ಟೇ.!

''ಅಲ್ಲಿ ಕೂತಿರುವ ಹದಿನಾರು ಸ್ಪರ್ಧಿಗಳು ಹೇಗೋ, ಸುಹಾನ ಕೂಡ ಒಬ್ಬರು ಅಷ್ಟೇ. ಸಂಗೀತ ಎಲ್ಲ ಧರ್ಮವನ್ನು ಮೀರಿದ್ದು. ಎಲ್ಲವನ್ನು ಮೀರಿ ಸುಹಾನರನ್ನ ನಾವು ಈ ವೇದಿಕೆ ಮೇಲೆ ಕರ್ಕೊಂಡು ಬಂದಿರೋದು ಹಾಡಿಸುವುದಕ್ಕೆ. ಅದನ್ನ ಮಾತ್ರ ಮಾಡುತ್ತಾ ಹೋಗುತ್ತೇವೆ'' - ರಾಘವೇಂದ್ರ ಹುಣಸೂರು, ಜೀ ಕನ್ನಡ ವಾಹಿನಿ ಮುಖ್ಯಸ್ಥ

ವಿವಾದಕ್ಕೆ ಪೂರ್ಣ ವಿರಾಮ

''ಈ ಪ್ರಶ್ನೆಗೆ ಈ ವೇದಿಕೆ ಮೇಲೆ ಈ ರೀತಿಯಾಗಿ ಪೂರ್ಣ ವಿರಾಮ ಇಡುತ್ತಿದ್ದೇವೆ. ಯಾಕಂದ್ರೆ, ಬೇರೆ ಬೇರೆ ರೌಂಡ್ ಗಳಲ್ಲಿ ಆಕೆ ಬೇರೆ ಬೇರೆ ರೀತಿಯ ಹಾಡುಗಳನ್ನ ಹಾಡಬೇಕಾಗುತ್ತೆ. ಅವರ ಗಮನ ಇರುವುದು ಈ ವೇದಿಕೆ ಮೇಲೆ ಅವರ ಸಂಗೀತ ಪ್ರತಿಭೆಯನ್ನ ತೋರಿಸಲು'' - ರಾಘವೇಂದ್ರ ಹುಣಸೂರು, ಜೀ ಕನ್ನಡ ವಾಹಿನಿ ಮುಖ್ಯಸ್ಥ

ಗಿಮಿಕ್ಸ್ ಮಾಡಬೇಕಾಗಿಲ್ಲ

''ಸರಿಗಮಪ' ಗೆಲ್ಲಿಸುವುದಕ್ಕೆ ಈ ತರಹ ಗಿಮಿಕ್ಸ್ ನಮಗೆ ಅವಶ್ಯಕತೆ ಇಲ್ಲ. ಯಾಕಂದ್ರೆ, ವೀಕೆಂಡ್ ನಲ್ಲಿ ಟಾಪ್ ಶೋ ಆಗಿ ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಶೋಗೆ ನಮಗೆ ಟ್ರಿಕ್ಸ್ ಗಳ ಅವಶ್ಯಕತೆ ಇಲ್ಲ. ಅದರ ಅನಿವಾರ್ಯತೆ ನಮಗೆ ಇಲ್ಲ. ಅದನ್ನ ಮಾಡುವ ಮನಃಸ್ಥಿತಿಯಲ್ಲೂ ನಾವಿಲ್ಲ'' - ರಾಘವೇಂದ್ರ ಹುಣಸೂರು, ಜೀ ಕನ್ನಡ ವಾಹಿನಿ ಮುಖ್ಯಸ್ಥ

English summary
Zee Kannada Channel head Raghavendra Hunsur clarified the Controversy surrounding SaReGaMaPa Season-13 Contestant Suhana.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada