twitter
    For Quick Alerts
    ALLOW NOTIFICATIONS  
    For Daily Alerts

    ನಂದಿನಿ ಮೂರ್ತಿ: ಮಂಗಳೂರಿನ ಮಗಳು ದುರ್ಗಾ.. ಎಜೆ ಸೊಸೆಯಾಗಿದ್ದು ಹೇಗೆ ಗೊತ್ತಾ.?

    By ಎಸ್ ಸುಮಂತ್
    |

    'ಹಿಟ್ಲರ್ ಕಲ್ಯಾಣ'ದಲ್ಲಿ ಎಲ್ಲಾ ಪಾತ್ರಗಳು ದಿ ಎಂಗೆಸ್ಟ್ ಪಾತ್ರಗಳು ಅನ್ನೋದೆ ಗಮನಿಸಬೇಕಾದ ವಿಚಾರ. ಅಜ್ಜಿ ಒಬ್ಬರನ್ನು ಬಿಟ್ಟರೆ ಇನ್ಯಾರಿಗೂ ಅಷ್ಟಾಗಿ ವಯಸ್ಸೆ ಆಗಿಲ್ಲ. ಅತ್ತೆ ಎಲ್ಲರಿಗಿಂತ ಚಿಕ್ಕವರು. ಇನ್ನು ಸೊಸೆಯಂದಿರಿಗೆ ಹೇಳಿಕೊಳ್ಳುವಂತ ವಯಸ್ಸೇನು ಆಗಿಲ್ಲ. ಅದೆಲ್ಲವನ್ನು ಬಿಡಿ ಮಾವನಿಗೂ ವಯಸ್ಸೇ ಆಗಿಲ್ಲವಲ್ಲ ಅದೇ ಚಿಂತೆ. ಸೊಸೆಯಂದಿರಿಗೂ ಮಾವನನ್ನು ನೋಡಿದರೆ ಮಾವ ಎನ್ನುವ ಹಾಗಿಲ್ಲ. ಅದಕ್ಕೆ ಎಜೆ ಅಂತಾನೆ ಕರೆಯುತ್ತಾರೆ. ಅದು ವಯಸ್ಸಿನ ಅಂತರ.

    ಧಾರಾವಾಹಿಯಲ್ಲಿ ಸೊಸೆಯಂದಿರು ಪ್ರಮುಖ ಪಾತ್ರವಹಿಸಿದ್ದಾರೆ. ಅದರಲ್ಲೂ ದುರ್ಗಾ ಎಲ್ಲರಿಗಿಂತ ಹಿರಿಯ ಸೊಸೆ. ಅಧಿಕಾರ ಯಾವಾಗಲೂ ನನ್ನ ಬಳಿಯೇ ಇರಬೇಕು ಎಂದು ಹಂಬಲಿಸುವ ಸೊಸೆ. ಅದಕ್ಕಾಗಿಯೇ ಇರುವ ಇಬ್ಬರು ತಂಗಿಯರನ್ನು ಡಮ್ಮಿ ಮಾಡಿ ಎಲ್ಲದರಲ್ಲೂ ತಾನೂ ಮುಂದು ಎಂಬುದನ್ನು ತೋರಿಸುತ್ತಾ, ಎಜೆಗೆ ತಕ್ಕ ಸೊಸೆ ಅಂತ ಪ್ರೂವ್ ಮಾಡುತ್ತಿರುತ್ತಾರೆ. ಇದೀಗ ಆರೋಗ್ಯವಾಗಿರುವುದು ಹೇಗೆ ಎಂಬ ಟಿಪ್ಸ್ ಕೂಡ ನೀಡಿದ್ದಾರೆ.

    ಚಾರ್ಟರ್ಡ್ ಅಕೌಂಟೆಂಟ್ ಆಗಬೇಕಾದವರು ನಟಿಯಾದ ಕತೆ: ಮೈಸೂರಿನ ತೇಜಸ್ವಿನಿ ಜರ್ನಿಯೇ ಅದ್ಭುತ! ಚಾರ್ಟರ್ಡ್ ಅಕೌಂಟೆಂಟ್ ಆಗಬೇಕಾದವರು ನಟಿಯಾದ ಕತೆ: ಮೈಸೂರಿನ ತೇಜಸ್ವಿನಿ ಜರ್ನಿಯೇ ಅದ್ಭುತ!

    ಎಜೆ ಸೊಸೆ ದುರ್ಗಾ ಬಗ್ಗೆ ನಿಮಗೆಷ್ಟು ಗೊತ್ತು..?

    ಎಜೆ ಸೊಸೆ ದುರ್ಗಾ ಬಗ್ಗೆ ನಿಮಗೆಷ್ಟು ಗೊತ್ತು..?

    ಮಂಗಳೂರಿನವರಾದ ನಂದಿನಿ ಮೂರ್ತಿ ಸರಳ ಹುಡುಗಿ. 10 ವರ್ಷಗಳ ಹಿಂದೆ ಅಮೆರಿಕದಲ್ಲಿ ನಡೆದ ಕಾರು ಅಪಘಾತದಲ್ಲಿ ನಂದಿನಿ ತನ್ನ ಹೆತ್ತವರನ್ನು ಕಳೆದುಕೊಂಡಿದ್ದರಂತೆ. ತಮ್ಮ ತಂದೆಯ ಅಪಘಾತವನ್ನು ನೋಡಿದ ನಂತರ ತನ್ನ ಸಹೋದರನ ನಿಗೂಢ ಕಾಯಿಲೆಗೆ ಚಿಕಿತ್ಸೆ ನೀಡಲು ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮನೊಂದಿಗೆ ಮುಂಬೈಗೆ ತೆರಳುತ್ತಾರೆ. ಬಾಹ್ಯಾಕಾಶ ಅಕಾಡೆಮಿಯ ಬಗ್ಗೆ ಅವರ ಮೊದಲ ಕೆಟ್ಟ ಅಭಿಪ್ರಾಯದ ಹೊರತಾಗಿಯೂ, ನಂದಿನಿ ತನ್ನ ಸಹೋದರರ ಚಿಕಿತ್ಸೆಗಾಗಿ ಹಣವನ್ನು ಉಳಿಸಲು ಸ್ಕಾಲರ್‌ಶಿಪ್ ಪಡೆದು ಅಲ್ಲಿಗೆ ಸೇರಿದ್ದರು. ಇಲ್ಲಿ ನಂದಿನಿಗೆ ನವ್ಯಾ ನವೇಲಿ ಆತ್ಮೀಯ ಸ್ನೇಹಿತೆ ಸಿಗುತ್ತಾರೆ. ಅವರ ಜೀವನದ ಪ್ರತಿಯೊಂದು ಕಷ್ಟದ ಪರಿಸ್ಥಿತಿಯಲ್ಲಿ ಸಹಾಯ ಮಾಡುತ್ತಾ ಹೋಗುತ್ತಾರೆ.

    ಎಜೆ ಸೊಸೆಯ ಸೌಂದರ್ಯದ ಗುಟ್ಟೇನು?

    ಆರೋಗ್ಯ ಎಲ್ಲರಿಗೂ ತುಂಬಾನೇ ಮುಖ್ಯ. ಅದಕ್ಕಾಗಿಯೇ ಸಾಕಷ್ಟು ಟಿಪ್ಸ್ ಗಳನ್ನು ಫಾಲೋ ಮಾಡುತ್ತಾ ಇರುತ್ತೀವಿ. ವಿಟಮಿನ್ಸ್ ಕಡಿಮೆಯಾಗುತ್ತವೆ. ಡಯೆಟ್ ಬಗ್ಗೆ ಸರಿಯಾದ ಫ್ಲ್ಯಾನ್ ಗೊತ್ತಿರುವುದಿಲ್ಲ. ಆದರೆ ಆರೋಗ್ಯವನ್ನು ಪ್ರತಿದಿನ ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ನಂದಿನಿ ಮೂರ್ತಿ ತಿಳಿಸಿದ್ದಾರೆ. ಬೆಳಗ್ಗೆ ಎದ್ದ ಕೂಡಲೇ ಏನು ತಿನ್ನಬೇಕು? ಎಷ್ಟು ತಿನ್ನಬೇಕ? ಮುಖ್ಯವಾಗಿ ಎಷ್ಟು ಗಂಟೆ ನಿದ್ದೆ ಮಾಡಬೇಕು ಎಂಬೆಲ್ಲಾ ಟಿಪ್ಸ್ ಕೊಟ್ಟಿದ್ದಾರೆ. ಈ ಟಿಪ್ಸ್ ಫಾಲೋ ಮಾಡಿದರೆ ಖಂಡಿತ ನಂದಿನಿಯಷ್ಟೇ ತೆಳುವಾಗಿ, ಬ್ಯೂಟಿಫುಲ್ ಆಗಿ ಇರಬಹುದಾಗಿರುತ್ತದೆ.

    ರೀಲ್ಸ್ ಮಾಡುವಲ್ಲಿ ಸೊಸೆಯಂದಿರು ಎಕ್ಸ್‌ಪರ್ಟ್

    ರೀಲ್ಸ್ ಮಾಡುವಲ್ಲಿ ಸೊಸೆಯಂದಿರು ಎಕ್ಸ್‌ಪರ್ಟ್

    ಎಜೆ ಮೂವರು ಸೊಸೆಯಂದಿರು ಫ್ಯಾಷನ್ ಐಕಾನ್‌ಗಳಿದ್ದಂತೆ. ತೆರೆ ಮೇಲೆ ಮಾತ್ರ ಅಲ್ಲ ಶೂಟಿಂಗ್ ವೇಳೆ ಬ್ರೇಕ್ ಸಿಕ್ಕಿದ್ರು ಕೂಡ ಫುಲ್ ಆಕ್ಟಿವ್ ಆಗಿ ಬಿಡುತ್ತಾರೆ. ನಂದಿನಿ ಮೂರ್ತಿಯ ಸೋಷಿಯಲ್ ಮೀಡಿಯಾಗೆ ಒಮ್ಮೆ ವಿಸಿಟ್ ಕೊಟ್ಟರೆ ಸಾಕು, ಅದರಲ್ಲಿ ಸೊಸೆಯಂದಿರ ಜೊತೆಗಿನ ರೀಲ್ಸ್ ವಿಡಿಯೋಗಳೇ ಕಣ್ಣಿಗೆ ಬೀಳುತ್ತವೆ. ಗ್ಯಾಪ್ ಸಿಕ್ಕಿದರೆ ಸಾಕು ಮೂವರು ಮಸ್ತ್ ಮಜಾ ಮಾಡುತ್ತಾರೆ ಎಂಬುದು ಇದರಿಂದಾನೇ ತಿಳಿಯುತ್ತೆ. ಇನ್ನು, ನಂದಿನಿ 'ಚಿ ಸೌ ಸಾವಿತ್ರಿ' ಧಾರಾವಾಹಿ ಮುಗಿದ ಬಳಿಕ 'ಹಿಟ್ಲರ್ ಕಲ್ಯಾಣ'ದಿಂದ ಮತ್ತೆ ಜರ್ನಿ ಶುರು ಮಾಡಿದ್ದಾರೆ. ಆದರೆ ಅವರನ್ನು ಸಿಕ್ಕಾಪಟ್ಟೆ ಜನ ಫಾಲೋ ಮಾಡುತ್ತಾರೆ. ಸುಮಾರು 63 ಸಾವಿರ ಜನ ಫಾಲೋವರ್ಸ್ ಇದ್ದಾರೆ.

    ಸೀರೆ ಪ್ರಿಯರಿಗೆ ಇವರೇ ಮಾದರಿ

    ಸೀರೆ ಪ್ರಿಯರಿಗೆ ಇವರೇ ಮಾದರಿ

    ನಂದಿನಿ ಎಜೆ ಸೊಸೆಯಾಗಿ ಕಾಣಿಸಿಕೊಂಡಿದ್ದಾರೆ. ಅದು ಮೊದಲ ಸೊಸೆಯಾಗಿ. ಆ ಪಾತ್ರ ಕೇಳುತ್ತೆ ಅಂತ ಸೀರೆಗಳಲ್ಲಿಯೇ ಮಿಂಚುತ್ತಿದ್ದಾರೆ. ಆಗಾಗ ಸೀರೆಯಲ್ಲಿಯೇ ವೆರೈಟಿ ವೆರೈಟಿ ಡಿಸೈಜ್ ಸೀರೆಗಳನ್ನು ಹಾಕುತ್ತಾರೆ. ಸದ್ಯ ಸೀರೆ ಲವ್ವರ್ಸ್ ಗಳು ಇವರನ್ನೇ ಫಾಲೋ ಮಾಡುವ ಹಂಗಾಗಿದೆ. ಸೀರೆಯಲ್ಲೂ ಹೇಗೆಲ್ಲಾ ಮಾಡ್ರನ್ ಆಗಿ ಕಾಣಬಹುದು ಎಂಬುದನ್ನು ನಂದಿನಿ ಮೂರ್ತಿ ತೋರಿಸಿಕೊಟ್ಟಿದ್ದಾರೆ.

    English summary
    Zee Kannada Hitler kalyana Serial Actress Nandhini Murthy Biography And Life Style. Here is the details
    Thursday, May 5, 2022, 20:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X