ಲೀಲಾ ತಂದೆಗೆ ಕ್ಷಮೆ ಕೇಳಿಸಿದ ಏಜೆ: ದುರ್ಗಾ ಬಣ್ಣ ಬಯಲಾಗುತ್ತಾ?

By ಪೂರ್ವ

ಕಿರುತೆರೆಯಲ್ಲಿ ಕಮಾಲ್ ಮಾಡುತ್ತಿರುವ ಹಿಟ್ಲರ್ ಕಲ್ಯಾಣ ಧಾರವಾಹಿ ಒಂದರಮೇಲೊಂದರಂತೆ ಸರ್‌ಪ್ರೈಸ್‌ ಹಾಗೂ ಥ್ರಿಲ್ಲರ್ ಅನುಭವಗಳನ್ನು ನೀಡುತ್ತಾ ಬಂದಿದೆ. ವೀಕ್ಷಕರಿಗೆ ದಿನನಿತ್ಯ ಹಿಟ್ಲರ್ ಕಲ್ಯಾಣ ಧಾರವಾಹಿಯು ರಸದೌತಣ ನೀಡುತ್ತಿದೆ.

ಇತ್ತೀಚಿಗೆ ಹಿಟ್ಲರ್ ಕಲ್ಯಾಣ ಧಾರವಾಹಿಯನ್ನು ಕಾತರದಿಂದ ನೋಡಲು ಅನೇಕ ಅಭಿಮಾನಿಗಳು ಕಾಯುವಂತಾಗಿದೆ. ಇದೀಗ ಬ್ಯಾಂಕಿನ ಎಂಡಿ ಆಗಿ ಎಜೆ ಆಯ್ಕೆಯಾಗಿರುವುದನ್ನು ನೋಡಿದ ಲೀಲಾ ಮತ್ತು ಲೀಲಾ ತಂದೆಗೆ ಶಾಕ್ ಆಗಿದೆ. ದುರ್ಗಾ, ಸರಸ್ವತಿಗೆ ಆಶ್ಚರ್ಯವಾಗಿದೆ. ಬ್ಯಾಂಕಿನಲ್ಲಿರುವ ಉದ್ಯೋಗಿಗಳ ಕಷ್ಟ-ಸುಖದ ಬಗ್ಗೆ ಎಜೆ ಈಗಾಗಲೇ ಆಲೋಚಿಸಿದ್ದಾರೆ ಹಾಗೆಯೇ ಅವರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುತ್ತಿದ್ದಾರೆ.

ಬ್ಯಾಂಕ್ ಉದ್ಯೋಗಿಗಳ ಸಂಬಳ ಹೆಚ್ಚಳ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಇನ್‌ಶೂರೆನ್ಸ್ ಹಾಗೂ ಉತ್ತಮ ಜೀವನ ಮಾಡಲು ಒಂದು ಮನೆಯನ್ನು ಕೊಡುವುದಾಗಿ ಎಜೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಇದನ್ನು ಕಂಡ ಲೀಲಾಗೆ ಎಲ್ಲಿಲ್ಲದ ಕೋಪ ಬಂದಿದೆ. ಎಜೆ ಮಾತು ಮುಗಿದ ಬಳಿಕ ಇಲ್ಲೋಬ್ಬರಿಗೆ ನನ್ನಿಂದ ಬಹಳ ನೋವಾಗಿದೆ, ಅದನ್ನು ಸರಿಪಡಿಸಲು ಇದೇ ಸೂಕ್ತ ವೇದಿಕೆ ಎಂದು ಹೇಳಿ ಬನ್ನಿ ಇಲ್ಲಿಗೆ ಎಂದು ಲೀಲಾರ ತಂದೆಯನ್ನು ಕರೆದಿದ್ದಾನೆ ಎಜೆ.

Zee Kannada Hitler Kalyana Serial June 06th Episode Written Update

ಲೀಲಾ ತಂದೆಯ ಮೇಲೆ ಅತ್ಯಾಚಾರ ಆರೋಪ ಮಾಡಿದವಳು ವೇದಿಕೆಗೆ ಆಗಮಿಸುತ್ತಾಳೆ. ಅದನ್ನು ನೋಡಿದ ಲೀಲಾ ತಂದೆಗೆ ಭಯವಾಗುತ್ತದೆ ಲೀಲಾ ಬಳಿ ಬಾ ಹೋಗೋಣ ನಾವು ಇಲ್ಲಿಂದ ಎಂದು ಬಹಳ ಹೆದರಿಕೊಂಡು ಹೇಳಿದಾಗ ನಿನ್ನ ಮರ್ಯಾದೆ ತೆಗೆದು ನೋಡಲಿ ಆಗ ಎಜೆಯ ಮರ್ಯಾದಿ ಹೆಗೆ ತೆಗೆಯುತ್ತೇನೆ ಎಂಬುವುದನ್ನು ನೋಡುತ್ತಿರಿ ಎಂದು ಹೇಳುತ್ತಾಳೆ. ಬಳಿಕ ನನ್ನ ಮೇಲೆ ನಂಬಿಕೆ ಇದೆ ಅಲ್ವಾ ನಿನಗೆ, ಇದ್ದರೆ ಸುಮ್ಮನೇ ಇದ್ದುಬಿಡು ಎಂದು ಹೇಳುತ್ತಾಳೆ ಲೀಲಾ. ಬಳಿಕ ಎಜೆ, ನಡೆದ ವಿಚಾರವನ್ನೆಲ್ಲ ವೇದಿಕೆಯಲ್ಲಿ ಹೇಳಿ ಬಳಿಕ ಯಾಕೆ ಈ ರೀತಿ ಮಾಡಿರುವುದು ಎಂದೆಲ್ಲ ಪ್ರಶ್ನೆ ಮಾಡುತ್ತಾರೆ.

ಅತ್ಯಾಚಾರ ಆರೋಪ ಮಾಡಿದಾಕೆ ಕೈಮುಗಿದು ನನ್ನನ್ನು ಕ್ಷಮಿಸಿ ಸಾರ್ ಹಣಕ್ಕಾಗಿ ಇಂಥಹ ಕೆಲಸ ಮಾಡಿಬಿಟ್ಟೆ ಎಂದೆಲ್ಲ ಹೇಳಿ ವೇದಿಕೆ ಮೇಲೆ ಅತ್ತುಬಿಡುತ್ತಾಳೆ. ಇದನ್ನೆಲ್ಲ ನೋಡುತ್ತಿದ್ದ ದುರ್ಗಾಗೆ ಕೊಂಚ ಶಾಕ್ ಆಗಿದ್ರು ಸ್ವಲ್ಪ ರಿಲೀಫ್ ಆಗುತ್ತಾಳೆ. ಏಕೆಂದರೆ ದುರ್ಗಾ ಇದಾಗಲೇ ಅತ್ಯಾಚಾರ ಆರೋಪ ಮಾಡಿದಾಕೆಗೆ ಕರೆ ಮಾಡಿ ನನ್ನ ಹೆಸರು ಹೇಳಿದರೆ ನಿನ್ನ ಮಗುವು ನಿನ್ನ ಕೈಗೆ ಸೇರಲ್ಲ ಎಂದು ಹೆದರಿಸಿರುತ್ತಾಳೆ. ಇದನ್ನೆಲ್ಲ ಅತ್ಯಾಚಾರ ಆರೋಪ ಮಾಡಿದಾಕೆ ಎಜೆ ಮುಂದೆ ಬಾಯಿಬಿಡುತ್ತಾಳಾ ಇದೆಲ್ಲವನ್ನು ಕಾದು ನೋಡಬೇಕಿದೆ.

English summary
Zee Kannada Hitler Kalyana Serial June 06th Episode Written Update. Hitler kalyana is an Kannada language television serial.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X