ಹಿಟ್ಲರ್ ಕಲ್ಯಾಣ: ಏಜೆಗೆ ಮತ್ತೆ ಮನಸ್ಸು ಒಪ್ಪಿಸುತ್ತಾಳಾ ಲೀಲಾ?

By ಪೂರ್ವ

'ಹಿಟ್ಲರ್ ಕಲ್ಯಾಣ' ಧಾರವಾಹಿಯಲ್ಲಿ ಏಜೆ ಒಳ್ಳೆತನಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ. ಲೀಲಾ ತಂದೆಯ ಮೇಲೆ ಅತ್ಯಾಚಾರ ಆರೋಪ ಮಾಡಿದಾಕೆ ''ಚಂದ್ರಶೇಖರ್ ಸರ್ ನನ್ನದು ತಪ್ಪಾಯಿತು ನನ್ನ ಕ್ಷಮಿಸಿ ಸರ್ ಎಂದೆಲ್ಲ ಪರಿ ಪರಿಯಾಗಿ ಬೇಡಿಕೊಂಡಿದ್ದು ನೋಡಿ ಚಂದ್ರಶೇಖರ್‌ಗೆ ಅಶ್ಚರ್ಯವಾಗಿದೆ. ಲೀಲಾ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ದಾಳೆ. ಅಪ್ಪನಿಗೆ ಕ್ಷಮೆ ಕೇಳಿಸಿದ ಏಜೆ ಮಾಡಿದ ಕೆಲಸಕ್ಕೆ ಲೀಲಾ ಮನಸೋಲುವ ಸಂಭವ ಇದೆ.

ಇನ್ನು ಏಜೆ ಪೊಲೀಸನ್ನು ಕರೆದು ಸುಳ್ಳು ಆರೋಪ ಮಾಡಿದಾಕೆಯನ್ನು ಕಸ್ಟಡಿಗೆ ಒಪ್ಪಿಸಿದ್ದಾನೆ. ಅತ್ಯಾಚಾರ ಆರೋಪ ಮಾಡಿದಾಕೆಯ ಮಗು ಕೂಡ ಸಂಕಷ್ಟದಲ್ಲಿದೆ. ದುರ್ಗಾ ಆಕೆಗೆ ಕಾಲ್ ಮಾಡಿ ನೀನು ನನ್ನ ಹೆಸರು ಬಾಯಿಬಿಟ್ಟರೆ ನಿನ್ನ ಮಗುನ ಕಳೆದುಕೊಳ್ಳುತ್ತಿಯಾ ಎಂದೆಲ್ಲ ವಾರ್ನಿಂಗ್ ಮಾಡಿದ್ದಾಳೆ ಇದನ್ನೆಲ್ಲ ಯೋಚಿಸುತ್ತಿದ್ದ ಆಕೆಗೆ ಪೊಲೀಸರು ಸೆರೆ ಹಿಡಿದಿರುವುದು ಕಂಡು ಬಹಳ ಶಾಕ್ ಆಗುತ್ತದೆ ಏಜೆ ಬಳಿ ಪರಿ ಪರಿಯಾಗಿ ಬೇಡಿಕೊಳ್ಳುತ್ತಾಳೆ. ಆದರೆ ಏಜೆ ಆಕೆಯತ್ತ ಚೂರು ಗಮನ ಕೊಡದೇ ಎಳೆದುಕೊಂಡು ಹೋಗಿ ಸರ್ ಎಂದು ಹೇಳುತ್ತಾರೆ.

ಚಂದ್ರಶೇಖರ್‌ಗೆ ಸನ್ಮಾನ ಮಾಡಿದ ಬ್ಯಾಂಕ್ ಸಿಬ್ಬಂದಿ

ಚಂದ್ರಶೇಖರ್‌ಗೆ ಸನ್ಮಾನ ಮಾಡಿದ ಬ್ಯಾಂಕ್ ಸಿಬ್ಬಂದಿ

ಇದೆಲ್ಲ ಆದಮೇಲೆ ಲೀಲಾ ತಂದೆ ಚಂದ್ರಶೇಖರ್ ಅವರನ್ನು ವೇದಿಕೆಗೆ ಕರೆದು ಯಾರು ಅವರನ್ನು ಕೆಲಸದಿಂದ ತೆಗೆದಿದ್ದರೋ ಅವರೇ ಅವರನ್ನು ಸ್ವಾಗತಿಸಬೇಕು ಎಂದು ಏಜೆ ಆದೇಶಿಸಿದ್ದಾರೆ. ಇದರಿಂದ ಖುಷಿಗೊಂಡ ಚಂದ್ರಶೇಖರ್ ವೇದಿಕೆಗೆ ಆಗಮಿಸುತ್ತಾರೆ ಬಳಿಕ ಅವರನ್ನು ಸನ್ಮಾನಿಸಲಾಗುತ್ತದೆ ಇದನ್ನೆಲ್ಲ ನೋಡಿದ ದುರ್ಗಾಗೆ ಶಾಕ್ ಆಗುತ್ತದೆ, ತನ್ನ ಯಾವುದೇ ಪ್ಲಾನ್ ವರ್ಕ್ ಆಗುತ್ತಿಲ್ಲ ಅಂತ ಮನದಲ್ಲಿಯೇ ಸಿಟ್ಟಿಗೇರುತ್ತಿದ್ದಾಳೆ. ಏಜೆ ಲೀಲಾಳನ್ನು ನೋಡಿದಾಗ ಲೀಲಾ ಮರೆಮಾಚಿಕೊಳ್ಳುತ್ತಾಳೆ. ತಾನು ಮಾಡಿದ ಕೆಲಸವನ್ನು ನೆನೆಸಿಕೊಳ್ಳುತ್ತಾ ಎಜೆಯ ಮುಂದೆ ನಿಲ್ಲಲು ಮುಜುಗರವಾಗುತ್ತದೆ. ಬಳಿಕ ಅವಳು ಅಲ್ಲಿಂದ ಹೊರಡುತ್ತಾಳೆ ಇದನ್ನು ಚಂದ್ರಶೇಖರ್ ನೋಡುತ್ತಾರೆ. ಮಗಳು ಕಾರ್ಯಕ್ರಮವನ್ನು ಬಿಟ್ಟು ತೆರಳುತ್ತಿರುವುದನ್ನು ನೋಡಿದ ಅವರಿಗೆ ಅರ್ಥವಾಗುತ್ತದೆ.

ಲೀಲಾಳನ್ನು ಮನೆಗೆ ಕರೆಯಲು ಬಂದ ಏಜೆ

ಲೀಲಾಳನ್ನು ಮನೆಗೆ ಕರೆಯಲು ಬಂದ ಏಜೆ

ಕಾರ್ಯಕ್ರಮ ಮುಗಿದ ಬಳಿಕ ಚಂದ್ರಶೇಖರ್ ಏಜೆ ಬಳಿ ಬಂದು ನನ್ನ ಕ್ಷಮಿಸಿಬಿಡಿ ಸರ್ ನಿಮ್ಮನ್ನ ತುಂಬಾ ಬೈಕೊಂಡು ಬಿಟ್ಟೆ ನಿಮ್ಮ ಈ ಗುಣಕ್ಕೆ ನಾನು ನಿಮ್ಮ ಮುಂದೆ ಚಿಕ್ಕವನಾಗಿ ಬಿಟ್ಟೆ ಎಂದು ಹೇಳುತ್ತಾರೆ. ಅದಕ್ಕೆ ಏಜೆ ಹೇಳುತ್ತಾರೆ ಅಂದು ಅವಮಾನ ಮಾಡಿರುವುದು ಸಣ್ಣ ಮಾತಲ್ಲ ನೀವು ಕೋಪ ಮಾಡಿರುವುದರಲ್ಲಿ ಅರ್ಥ ಇದೆ ಎಂದರು. ಇನ್ನೂ ಏಜೆ ಚಂದ್ರಶೇಖರ್ ಬಳಿಯಲ್ಲಿ ಲೀಲಾನ ಮನೆಗೆ ಕರೆದುಕೊಂಡು ಹೋಗಬಹುದಾ ಎಂದು ಕೇಳಿದಾಗ ಚಂದ್ರಶೇಖರ್ ಅವರು ಖಂಡಿತವಾಗಿಯೂ ಕರೆದುಕೊಂಡು ಹೋಗಿ ಅವಳು ನಿಮ್ಮ ಮನೆಯವಳು ಎಂದು ಹೇಳುತ್ತಾರೆ.

ಲೀಲಾ ಮಾತು ಕೇಳಿ ಕೌಸಲ್ಯ ಶಾಕ್

ಲೀಲಾ ಮಾತು ಕೇಳಿ ಕೌಸಲ್ಯ ಶಾಕ್

ಲೀಲಾ ಮನೆಗೆ ಆಗಮಿಸುತ್ತಾಳೆ ಈ ವೇಳೆ ಅವಳ ತಾಯಿ ಬಳಿಯಲ್ಲಿ ಎಲ್ಲಾ ವಿಚಾರವನ್ನು ಹೇಳಿಕೊಳ್ಳುತ್ತಾಳೆ. ಖುಷಿ ಪಡುತ್ತಾಳೆ. ಇದನ್ನು ಕೇಳಿದ ಕೌಸಲ್ಯಗೆ ಶಾಕ್ ಆಗುತ್ತದೆ. ಮಗಳ ಜೀವನ ಹಾಳಾದರು ಚಿಂತೆ ಇಲ್ಲ ಎಂದು ವಿಚ್ಚೇದನಕ್ಕೆ ಈಗಾಗಲೇ ಪ್ಲಾನ್ ಮಾಡುತ್ತಿರುವ ಕೌಸಲ್ಯ, ಏಜೆ ಮನೆಗೆ ಹೋಗಲು ಒಪ್ಪಬೇಡ ಎಂದು ಲೀಲಾಗೆ ಹೇಳುತ್ತಾರೆ. ಅದಕ್ಕೆ ಲೀಲಾ ಇಲ್ಲಪ್ಪ ನಾನು ಹೋಗಲ್ಲ ಎಂದು ಹೇಳಿ ತನ್ನ ರೂಮಿಗೆ ಹೋಗುತ್ತಾಳೆ. ಇದನ್ನು ಕೇಳಿಸಿಕೊಂಡ ಕೌಸಲ್ಯಗೆ ಸ್ವಲ್ಪ ಸಮಾಧಾನವಾಗುತ್ತದೆ ಲೀಲಾ ಮನೆ ಬಿಟ್ಟು ಎಲ್ಲೂ ಹೋಗಲ್ಲ, ಏಜೆ ವಿಚ್ಚೇದನ ಕೊಡಿಸಿ ಸುಲಭದಲ್ಲಿ ಹಣ ಮಾಡಬಹುದು ಎಂದೆಲ್ಲ ಯೋಚಿಸುತ್ತಾಳೆ.

ಲೀಲಾ ಮನವೊಲಿಸುತ್ತಾರಾ ಏಜೆ

ಲೀಲಾ ಮನವೊಲಿಸುತ್ತಾರಾ ಏಜೆ

ಚಂದ್ರಶೇಖರ್ ಏಜೆನ ಮನೆಗೆ ಕರೆತರುತ್ತಾರೆ. ಒಂದು ಕುರ್ಚಿಯಲ್ಲಿ ಕುಳ್ಳಿರಿಸಿ ಲೀಲಾಳನ್ನು ಕರೆದುಕೊಂಡು ಬರಲು ಹೋಗುತ್ತಾರೆ. ಲೀಲಾ ರೂಮಿಗೆ ರೇವತಿ ಬಂದು ಅಕ್ಕ ನೀನೇನು ಇಲ್ಲಿ ಮಾಡುತ್ತಿದ್ದೀಯಾ ಭಾವ ಬಂದಿದ್ದಾರೆ ನಿನ್ನ ನೋಡಲು ಎಂದು ಹೇಳುತ್ತಾಳೆ ಅದಕ್ಕೆ ಲೀಲಾ ಹೋಗೆ ನಾನು ಅವರ ಜೊತೆ ಹೋಗುವುದಿಲ್ಲ ಎಂದು ಹಠ ಹಿಡಿಯುತ್ತಾಳೆ. ಬಳಿಕ ಲೀಲಾ ತಂದೆ ಚಂದ್ರಶೇಖರ್ ಬಂದು ಹೇಳುತ್ತಾರೆ ಏಜೆ ಬಂದಿದ್ದಾರೆ ಬಾ ಅಮ್ಮ ಎಂದು ಹೇಳುತ್ತಾರೆ. ಹಿಂದೆ ಅವರು ಮಾಡಿದೆಲ್ಲ ಯೋಚನೆ ಮಾಡು ಎಂದು ಹೇಳುತ್ತಾಳೆ ಲೀಲಾ ಅದಕ್ಕೆ ಚಂದ್ರಶೇಖರ್ ನಸು ನಕ್ಕು ನಿನಗೂ ಏಜೆ ಕ್ಷಮೆ ಕೇಳಬೇಕಾ ಎಂದು ಹೇಳುತ್ತಾರೆ. ಇನ್ನೂ ಲೀಲಾ ಏಜೆ ಜೊತೆ ಮನೆಗೆ ತೆರಳುತ್ತಾಳ ಅಥವಾ ಅಮ್ಮನ ಮಾತು ಕೇಳಿ ವಿಚ್ಚೇದನ ನೀಡುತ್ತಾಳ ಎಂಬುವುದನ್ನು ಕಾದು ನೋಡಬೇಕಿದೆ

More from Filmibeat

English summary
Zee Kannada Hitler Kalyana Serial June 07th Episode Written Update. Serial getting many twists and turns daily.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X