ವೇಷ ಮರೆಸಿ ಏಜೆ ಮನೆಗೆ ಬಂದ ಲೀಲಾ, ಏಜೆ ಕೈಗೆ ಸಿಕ್ಕಿ ಬೀಳ್ತಾಳ?

By ಪೂರ್ವ

ಕಿರುತೆರೆಯಲ್ಲಿ ಉತ್ತಮವಾಗಿ ಮೂಡಿಬರುತ್ತಿರುವ ಧಾರವಾಹಿಗಳಲ್ಲಿ ಹಿಟ್ಲರ್ ಕಲ್ಯಾಣ ಕೂಡ ಒಂದು. ಧಾರಾವಾಹಿಯಲ್ಲಿ ಕುತೂಹಲಕಾರಿ ತಿರುವೊಂದ ಬಂದಿದೆ. ಲೀಲಾ ಎಜೆಯಿಂದ ಅದೆಷ್ಟು ದಿನ ದೂರ ಇರುತ್ತಾಳೆ? ಅಥವಾ ಲೀಲಾ ಮತ್ತು ಎಜೆಗೆ ಕೌಸಲ್ಯ ವಿಚ್ಚೇಧನ ಕೊಡಿಸುತ್ತಾಳ? ಹಣದ ಮೋಹಕ್ಕೆ ಒಳಗಾದ ಕೌಸಲ್ಯಾಗೆ ಮಗಳ ಜೀವನ ಹಾಳದರೂ ಚಿಂತೆ ಇಲ್ಲ ದುಡ್ಡು ಮಾತ್ರ ಮುಖ್ಯ ಎನ್ನುವ ರೀತಿಯಲ್ಲಿ ಆಡುತ್ತಿರುವುದು ಅಭಿಮಾನಿಗಳಲ್ಲಿ ಕೋಪ ತರಿಸಿದೆ.

ಇನ್ನೂ ದುರ್ಗಾ ಮನೆಯಿಂದ ಹೋದ ಮೇಲೆ ಅಜ್ಜಿಗೆ ಈ ರೀತಿ ಆಗಿರುವುದು ನನ್ನಿಂದಲೇ ಎಂದು ತಿಳಿದು ಬಹಳ ಬೇಸರ ಪಟ್ಟು ಕೊಂಡಿದ್ದಾಳೆ ಹೇಗಾದರೂ ಮಾಡಿ ಅಜ್ಜಿಯನ್ನು ನೋಡಲು ತೆರಳಬೇಕು ಎಂದು ಮನದಲ್ಲಿಯೇ ಲೀಲಾ ಅಂದುಕೊಳ್ಳುತ್ತಾಳೆ.

ಇತ್ತ ಚಂದ್ರಶೇಖರ್, ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಖಾಲಿ ಇದೆ ಎಂದು ತಿಳಿದು ಕೆಲಸ ಕೇಳಲು ಬಂದಿದ್ದಾರೆ. ಕೆಲಸವನ್ನು ಬ್ಯಾಂಕ್ ಮ್ಯಾನೇಜರ್ ಬಳಿ ಕೇಳಿದಾಗ ಮಾಲೀಕರ ಬಳಿ ಕೇಳಿ ಹೇಳುವೆ ಎಂದು ಹೋಗುತ್ತಾರೆ, ಚಂದ್ರಶೇಖರ್ ಅಲ್ಲಿಯೇ ಬದಿಯಲ್ಲಿ ನಿಂತಿರಬೇಕಾದರೆ ಏಜೆ ಕಾರಿಗೆ ಪೆಟ್ರೋಲ್ ಹಾಕಿಸಲು ಅಲ್ಲಿಗೆ ಬರುತ್ತಾರೆ.

ಏಜೆ ವಿರುದ್ಧ ಚಂದ್ರಶೇಖರ್ ವಾಗ್ದಾಳಿ

ಏಜೆ ವಿರುದ್ಧ ಚಂದ್ರಶೇಖರ್ ವಾಗ್ದಾಳಿ

ಎಜೆಯನ್ನು ಕಂಡು ಚಂದ್ರಶೇಖರ್ ಇಲ್ಲಿಗೂ ಕೂಡ ಏಜೆ ಬಂದ್ರ ಇನ್ನು ನನಗೆ ಕೆಲಸ ಸಿಕ್ಕ ಹಾಗೆಯೇ ಎಂದು ಮನದಲ್ಲಿ ಅಂದುಕೊಳ್ಳುತ್ತಾರೆ, ಎಜೆಯನ್ನು ನೋಡಿದ ನೋಟ ಆ ರೀತಿಯೇ ಇತ್ತು. ಚಂದ್ರಶೇಖರ್‌ನ್ನು ನೋಡಿದ ಏಜೆ ಕಾರಿನಿಂದ ಇಳಿದು ಮಾತನಾಡಿಸುತ್ತಾನೆ. ''ನನ್ನ ಇದ್ದ ಕೆಲಸವನ್ನು ಕಿತ್ತುಕೊಂಡಿರಿ ಇದೀಗ ಇಲ್ಲಿಗೂ ಆಗಮಿಸಿದ್ದೀರಾ, ದಯವಿಟ್ಟು ಇಲ್ಲಿಂದ ಹೊರಟು ಹೋಗಿ'' ಎಂದು ಕೈ ಮುಗಿಯುತ್ತಾರೆ. ಇದನ್ನೆಲ್ಲ ಕೇಳಿಸಿಕೊಂಡ ಎಜೆಗೆ ಬಹಳ ಬೇಸರವಾಗುತ್ತದೆ ಬಳಿಕ ಅಲ್ಲಿಂದ ಹೊರಟು ಹೋಗುತ್ತಾರೆ.

ಸಪ್ಪೆ ಮುಖ ಹಾಕಿದ ಚಂದ್ರಶೇಖರ್

ಸಪ್ಪೆ ಮುಖ ಹಾಕಿದ ಚಂದ್ರಶೇಖರ್

ಮರೆಯಲ್ಲಿ ನಿಂತು ಇದನ್ನೆಲ್ಲ ನೋಡುತ್ತಿದ್ದ ಪೆಟ್ರೋಲ್ ಬಂಕ್ ಮ್ಯಾನೇಜರ್ ಬಳಿ ಬಂದ ಕೆಲಸದಾಕೆ ಹೇಳುತ್ತಾಳೆ, ಅವರು ಏಜೆ ಮಾವ ಚಂದ್ರ ಶೇಖರ್ ಎಂದು ಹೇಳುವಾಗ ಆತನಿಗೆ ಶಾಕ್ ಆಗುತ್ತದೆ. ಇನ್ನೂ ಪೆಟ್ರೋಲ್ ಬಂಕ್ ಮಾಲೀಕ ಆಗಮಿಸಿದಾಗ ಅವರ ಬಳಿ ಚಂದ್ರಶೇಖರ್ ಕೆಲಸ ಕೇಳುತ್ತಾರೆ ಈ ವೇಳೆ ಅವರು ಚೆನ್ನಾಗಿ ಬಯ್ಯುತ್ತಾರೆ ಈ ವೇಳೆ ಬಂದ ಮ್ಯಾನೇಜರ್ ಸರ್ ಇವರು ಏಜೆ ಮಾವ ಎಂದು ಹೇಳಿದಾಗ ಮಾಲೀಕ ಹೇಳುತ್ತಾರೆ ನಿಮ್ಮನ್ನ ಇಲ್ಲಿ ಕೆಲಸಕ್ಕೆ ಸೇರಿಸಿಕೊಂಡರೆ ನಮ್ಮ ಕೆಲಸವೂ ಹೋಗುತ್ತದೆ, ಸರ್‌ಗೆ ಜ್ಯುಸ್ ಕೊಡಿ ಎಂದು ಹೇಳಿ ಅಲ್ಲಿಂದ ತೆರಳುತ್ತಾರೆ. ಇತ್ತ ಚಂದ್ರಶೇಖರ್ ಸಪ್ಪೆ ಮುಖಮಾಡಿ ಇದನ್ನೆಲ್ಲ ನೋಡುತ್ತ ನಿಲ್ಲುತ್ತಾರೆ.

ಅಂತರಾಳನ್ನು ನೆನೆದು ಏಜೆ ಭಾವುಕ

ಅಂತರಾಳನ್ನು ನೆನೆದು ಏಜೆ ಭಾವುಕ

ಇತ್ತ ಏಜೆ ಬ್ಯಾಂಕ್ ಮ್ಯಾನೇಜರನ್ನು ಕರೆದು ಕೆಲಸದಿಂದ ಚಂದ್ರಶೇಖರ್‌ ಅನ್ನು ಯಾಕೆ ತೆಗೆದುಹಾಕಿರುವುದು ರೀಸನ್ ಏನು ಎಂದು ಕೇಳಿದಾಗ ಏಜೆ ಮನೆಯಲ್ಲಿ ನಡೆದ ಘಟನೆ ಎಂದು ಗೊತ್ತಾಗುತ್ತದೆ ಈ ಬಗ್ಗೆ ಮಾತುಕತೆಯಾಗುತ್ತಿರಬೇಕಾದರೆ ದೇವ್ ಮರೆಯಲ್ಲಿ ನಿಂತು ಇದನ್ನೆಲ್ಲ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಾನೆ. ಇನ್ನು ಏಜೆ ಭಾವುಕರಾಗುತ್ತಾರೆ, ಯಾಕಿಷ್ಟು ನನಗೆ ಕಷ್ಟ, ನೀನು ಹೇಳಿದ ಹುಡುಗಿಯನ್ನೇ ಮದುವೆಯಾಗಿದ್ದೇನೆ ಆದರೂ ಈ ಕಷ್ಟ ತಪ್ಪಿಲ್ಲ, ಯಾಕೆ ಹೀಗೆಲ್ಲ ಆಗುತ್ತಿದೆ ಅಂತರ ನೀನು ಹೇಳು ಎಂದು ಕಂಬನಿ ಮೀಡಿಯುತ್ತಾರೆ ಏಜೆ.

ವೇಷ ಬದಲಿಸಿ ಬಂದ ಲೀಲಾ

ವೇಷ ಬದಲಿಸಿ ಬಂದ ಲೀಲಾ

ಏಜೆ ಮನೆಗೆ ಲೀಲಾ ಎಂಟ್ರಿ ನಿಡುತ್ತಾಳೆ, ಕ್ಲೀನಿಂಗ್ ಮಾಡುವ ನೆಪದಲ್ಲಿ ಏಜೆ ಮನೆಗೆ ಆಗಮಿಸುತ್ತಾಳೆ ಲೀಲಾ, ಬಳಿಕ ಮೂವರು ಸೊಸೆಯಂದಿರ ಪ್ರಶ್ನೆಗಳಿಗೆಲ್ಲ ಉತ್ತರ ನೀಡಿ ಮನೆಯೊಳಗೆ ಹೋಗಲು ಅನುಮತಿ ಸಿಕ್ಕಿದೆ ಇನ್ನೂ ಲೀಲಾ ಮಾತ್ರ ಮೊದಲು ಅಜ್ಜಿಯ ರೂಮಿಗೆ ಹೋಗಲು ಕಾಯುತ್ತಿರುತ್ತಾಳೆ. ಇತ್ತ ದುರ್ಗಾ ಸರಸ್ವತಿಗೆ ಆಕೆ ಮೇಲೆ ಒಂದು ಕಣ್ಣಿಟ್ಟಿರು ಎಂದು ಹೇಳುತ್ತಾಳೆ. ಲೀಲಾ ಅಜ್ಜಿ ರೂಮಿಗೆ ಹೋಗಿ ಕ್ಷಮಿಸಿಬಿಡು ಅಜ್ಜಿ ನನ್ನ ಎಂದು ಕಾಲು ಮುಟ್ಟುವ ವೇಳೆ ಏಜೆ ಅಜ್ಜಿ ರೂಮ್‌ಗೆ ಎಂಟ್ರಿ ನೀಡುತ್ತಾರೆ. ಏಜೆ ಎದುರು ಸಿಕ್ಕಿ ಬಿಳುತ್ತಾಳ ಲೀಲಾ ಕಾದು ನೋಡಬೇಕಿದೆ.

More from Filmibeat

English summary
Zee kannada Hitler Kalyana Serial May 30th Episode Written Update. Hitler kalyana is an Kannada language television serial. Hear is more details about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X