Jodi No1: ಒಲವಿನ ಉಡುಗೊರೆ ನೀಡಿದ ಜೋಡಿಗಳು: ವೇದಿಕೆಯ ಮೇಲೆ ಹಲವು ರಹಸ್ಯಗಳು ರಿವೀಲ್..!

By ಶೃತಿ ಹರೀಶ್ ಗೌಡ

ಜೋಡಿ ನಂಬರ್ -1 ಸೀಸನ್ 2 ಅತ್ಯುತ್ತಮವಾಗಿ ಮೂಡಿ ಬರುತ್ತಿದೆ. ಪ್ರತಿ ವಾರವು ಸಹ ಒಂದೊಂದು ಟಾಸ್ಕ್ ಅನ್ನ ದಂಪತಿಗೆ ನೀಡಲಾಗುತ್ತೆ. ಈ ವಾರ ಒಲವಿನ ಉಡುಗೊರೆ ಎಂಬ ಟಾಸ್ಕ್ ಅನ್ನು ನೀಡಲಾಗಿತ್ತು. ಇಲ್ಲಿ ಪ್ರತಿಯೊಬ್ಬರೂ ಸಹ ತಮ್ಮ ಪತಿ ಹಾಗೂ ಪತ್ನಿಗೆ ಒಲವಿನ ಉಡುಗೊರೆಯನ್ನು ನೀಡಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ವೇದಿಕೆಯ ಮೇಲೆ ಹಲವು ರಹಸ್ಯಗಳು ಸಹ ರಿವೀಲ್ ಆಗಿದೆ ಇದುವರೆಗೂ ಯಾರಿಗೂ ಹೇಳಿರದ ಕೆಲವೊಂದು ರಹಸ್ಯಗಳು ಹೊರಗೆ ಬಂದಿವೆ.

ಜೋಡಿ ನಂಬರ್ 1 ವೇದಿಕೆಯಲ್ಲಿ ಫೈಟರ್ ಚಿತ್ರ ತಂಡ ಕಾಲವನ್ನು ಕಳೆಯಿತು. ಕುರಿ ಪ್ರತಾಪ್ ಅವರು ಎಲ್ಲರ ಕಾಲು ಎಳೆದು ಮತ್ತು ಮಜಾ ಮಾಡಿದರು. ಡೈರೆಕ್ಟರ್ ಹಾಗೂ ನಟ ಹಾಗೂ ನಟಿ ಭಾಗಿಯಾಗಿ ತಮ್ಮ ಚಲನಚಿತ್ರದ ಬಗ್ಗೆ ಮಾತನಾಡಿದರು. ಇನ್ನು ಹೆಜ್ಜಾರು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ನಿರ್ದೇಶಕ ಹರ್ಷಪ್ರಿಯಾ ಅವರು ಜೋಡಿ ನಂಬರ್ ಒನ್ ವೇದಿಕೆಯಲ್ಲಿ ಹಂಚಿಕೊಂಡರು. ಹರ್ಷಪ್ರಿಯಾ ಅವರು ಜೀ ಕನ್ನಡದಲ್ಲಿ ಕೆಲಸವನ್ನು ಮಾಡಿ ಈಗ ಚಲನಚಿತ್ರ ರಂಗಕ್ಕೆ ಎಂಟ್ರಿಯನ್ನು ಕೊಟ್ಟಿದ್ದಾರೆ. ವೇದಿಕೆಗೆ ಬಂದ ಹರ್ಷಪ್ರಿಯ ನನ್ನ ಕನಸಿನ ಚಿತ್ರ ಇದಾಗಿದ್ದು ಎಲ್ಲರೂ ಸಹ ತಮ್ಮ ಬೆಂಬಲವನ್ನ ನೀಡಬೇಕು ಎಂದು ಕೇಳಿಕೊಂಡರು. ವೇದಿಕೆಯಲ್ಲಿ ಟೈಟಲ್ ಸಾಂಗ್ ಅನ್ನು ಪ್ರದರ್ಶನ ಮಾಡಲಾಯಿತು.

Zee kannada Jodi No1 season 2, Olavina Udugore

ಮಂಜು ಅವರು ಅವರ ಪ್ರೀತಿಯ ಮಡದಿ ಅನುಷಾಗೆ 22 ಉಡುಗೊರೆಗಳ ಹೂ ಗುಚ್ಛವನ್ನಿ ಕೊಟ್ಟಿದ್ದಾರೆ. ಹುಟ್ಟುಹಬ್ಬ ಹಬ್ಬದ ದಿನದಂದು ಮಾಡಿದ್ದ ಪ್ರಾಮೀಸ್‌ನ್ನು ಇಂದು ಜೋಡಿ ನಂಬರ್ 1 ವೇದಿಕೆಯಲ್ಲಿ ಈಡೇರಿಸಿದ್ದಾರೆ. 22 ಗಿಫ್ಟ್ ಕೊಡುವ ಮೂಲಕ ಹೆಂಡತಿಗೆ ಖುಷಿ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮಂಜುಗೆ ಅನುಷಾ ಒಂದು ಉಂಗುರವನ್ನು ನೀಡುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಆನಂದ್ ಅವರು ತಮ್ಮ ಪತ್ನಿ ಚೈತ್ರಾಗೆ ಮಮತೆಯ ಸೀರೆಯನ್ನು ನೀಡಿ ಚೈತ್ರಾ ಕಣ್ಣಲ್ಲಿ ನೀರನ್ನು ತರಿಸಿದ್ದಾರೆ.

ಯಾರಿಗೂ ಹೇಳದ ರಹಸ್ಯ ರಿವೀಲ್ ಮಾಡಿದ ಮಾಲತಿ
ಮಗಳು ಮಗುವಾಗಿದ್ದಾಗ ಎರಡು ಕೆನ್ನೆಗೆ ಹೊಡೆದಿದ್ರಂತೆ!

ಮಾಲತಿ ಹಲವಾರು ಧಾರಾವಾಹಿ ಹಾಗೂ ಚಲನಚಿತ್ರಗಳಲ್ಲಿ ನಟಿಸಿ ಸೈ ಅನಿಸಿಕೊಂಡವರು ಇಂದು ಒಂದು ರಹಸ್ಯವನ್ನು ಹೇಳಿದ್ದಾರೆ. ಪತಿ ಯಶವಂತ್ ಹಾಗೂ ಮಗಳು ದೋಸ್ತಿ ಎದುರು ಒಂದು ಕಹಿ ಸತ್ಯವನ್ನು ಹೇಳಿದ್ದಾರೆ. ದೋಸ್ತಿ ಮಗುವಾಗಿದ್ದಾಗ ಹಾಲು ಕುಡಿಯದ ವೇಳೆ ಎರಡು ಕೆನ್ನೆಗೆ ಹೊಡೆದು ಬಿಟ್ಟಿದ್ದೆ. ನಾನು ಈ ಸತ್ಯವನ್ನು ಯಶವಂತ್ ಬಳಿಯೂ ಹೇಳಿಲ್ಲ ಎಂದು ಮಗಳ ಬಳಿ ಸಾರಿ ಕೇಳಿದ್ದಾರೆ. ಈ ವೇಳೆ ಪತಿಗೆ ಒಂದು ಬ್ರಾಸ್ಲೆಟ್ ಗಿಫ್ಟ್ ಮಾಡಿದ್ದಾರೆ.

ಸದಾನಂದ ಅವರು ಹೆಂಡತಿಗೆ ಬಹಳ ಇಷ್ಟದ ಹೂವು ಹಾಗೂ ಸೀರೆಯನ್ನು ಗಿಫ್ಟ್ ಆಗಿ ನೀಡಿದ್ದಾರೆ. ಗಂಡನ ಉಡುಗೊರೆಯನ್ನು ನೋಡಿದ ನೇತ್ರಾವತಿ ಕಣ್ಣೀರು ಸುರಿಸಿದ್ದಾರೆ. ಇದೇ ವೇಳೆ ಬಂಗಾರದ ಸರವನ್ನು ಸಹ ಪ್ರೆಸೆಂಟ್ ಮಾಡಿದ್ದಾರೆ. ಇನ್ನೂ ಗಣೇಶ್ ಕಾರಂತ್ ಅವರು ಒಳ್ಳೆಯ ರೋಮ್ಯಾಂಟಿಕ್ ಸೆಟ್ ಹಾಕಿ ಹೆಂಡತಿಗೆ ಚಿನ್ನದ ಉಂಗುರವನ್ನು ಉಡುಗೊರೆ ಕೊಟ್ಟಿದ್ದಾರೆ. ಇದೇ ವೇಳೆ ತಮ್ಮ ಪ್ರೀತಿಯ ದಿನವನ್ನು ನೆನಪಿಸಿಕೊಂಡು ಖುಷಿಪಟ್ಟಿದ್ದಾರೆ.

Zee kannada Jodi No1 season 2, Olavina Udugore

ಖುಷಿಯಲ್ಲಿ ತೇಲಾಡಿದ ಲಾವಣ್ಯ, ಹಳೆಯ ದಿನ ನೆನೆದು ಕಣ್ಣೀರು

ಲಾವಣ್ಯ ಶಶಿ ಕೊಟ್ಟ ಗಿಫ್ಟ್ ನೋಡಿ ಕಣ್ಣೀರು ಹಾಕಿದ್ದಾರೆ. ಇಬ್ಬರು ಸಹ ಲವ್ ಮ್ಯಾರೇಜ್ ಆಗಿದ್ದು ತಾವು ಮದುವೆಯಾದ ಸಂದರ್ಭದಲ್ಲಿ ಯಾವ ರೀತಿ ಕಷ್ಟವನ್ನು ಎದುರಿಸಿ ಜೀವನವನ್ನು ಕಟ್ಟಿಕೊಂಡರು ಎಂದು ಮಾತನಾಡಿದ್ದಾರೆ. ಇಬ್ಬರಿಗೂ ಸಹ ಯಾವುದೇ ಕೆಲಸ ಇಲ್ಲದೆ ಇದ್ದಾಗ ಲಾವಣ್ಯ ನನ್ನಿಂದಲೇ ಕಷ್ಟವಾಗಿತ್ತು ಎಂದು ಅಂದುಕೊಂಡೆ ಎಂದು ಶಶಿ ಮುಂದೆ ಹೇಳಿದ್ದಾರೆ.

ಇನ್ನೂ ಶಶಿ ಹೆಂಡತಿಗೆ ಒಂದು ಬೈಕ್ ಪ್ರೆಸೆಂಟ್ ಮಾಡಿ ಸಪ್ರೈಸ್ ಕೊಟ್ಟಿದ್ದಾರೆ. ಸಂಜು ಬಸಯ್ಯ ಅವರು ತಮ್ಮ ಮುದ್ದಿನ ಮಡದಿಗೆ ಕಾಲ್ಗೆಜ್ಜೆಯನ್ನು ಕೊಟ್ಟಿದ್ದಾರೆ. ಪ್ರತಿಯೊಬ್ಬರೂ ಸಹ ಉಡುಗೊರೆಗಳನ್ನು ನೀಡಿದ್ದು ವೇದಿಕೆಯಲ್ಲಿ ಇದ್ದ ಜಡ್ಜಸ್ ಎಲ್ಲರ ಪ್ರೀತಿಯ ಮಾತುಗಳಿಗೆ ಕಿವಿಯಾಗಿದ್ದರು.

More from Filmibeat

English summary
Zee kannada jodi no1, season 2 olavina udugore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X