For Quick Alerts
  ALLOW NOTIFICATIONS  
  For Daily Alerts

  ಆರ್ಯವರ್ಧನ್‌ಗೆ ಆಕ್ಸಿಡೆಂಟ್ ಆಗಿದ್ದು ಬದುಕುಳಿಯುತ್ತಾನಾ..?

  By ಪ್ರಿಯಾ ದೊರೆ
  |

  ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನುಗೆ ಆರ್ಯವರ್ಧನ್ ಎಲ್ಲಿಗೆ ಹೋಗಿದ್ದಾನೆ ಎಂಬ ಸತ್ಯ ಅರಿವಾಗಿದೆ. ಹೀಗಾಗಿ ಆರ್ಯನನ್ನು ಹುಡುಕುವ ಬದಲು ಅನು ಸೀದಾ ಮನೆಗೆ ವಾಪಸ್ ಹೋಗಿದ್ದಾಳೆ.

  ಝೇಂಡೇ ಅಂತೂ ಆರ್ಯನನ್ನು ಹುಡುಕುತ್ತಲೇ ಇದ್ದಾನೆ. ಆರ್ಯ ಫೋನ್ ಕೂಡ ರೀಚ್ ಆಗುತ್ತಿಲ್ಲ. ಆತ ಎಲ್ಲಿದ್ದಾನೆ ಎಂಬುದು ಗೊತ್ತಾಗುತ್ತಿಲ್ಲ. ಹುಡುಗರಿಗೆ ಕರೆ ಮಾಡಿ ಬೈದಿದ್ದಾನೆ. ಇಷ್ಟೊತ್ತಾದರೂ ಆರ್ಯನನ್ನು ಪತ್ತೆ ಮಾಡಿಲ್ಲ ಎಂದು ಗರಂ ಆಗಿದ್ದಾನೆ.

  ನಟಿ ಗೀತಾ ಭಾರತಿ ಭಟ್‌ ತೂಕ ಇಳಿಸಿಕೊಳ್ಳಲು ಏನೆಲ್ಲಾ ಕರಸತ್ತು ಮಾಡ್ತಿದ್ದಾರೆ ಗೊತ್ತಾ?ನಟಿ ಗೀತಾ ಭಾರತಿ ಭಟ್‌ ತೂಕ ಇಳಿಸಿಕೊಳ್ಳಲು ಏನೆಲ್ಲಾ ಕರಸತ್ತು ಮಾಡ್ತಿದ್ದಾರೆ ಗೊತ್ತಾ?

  ಮಗಳನ್ನು ನೋಡುವ ಆಸೆಯಿಂದ ಸುಬ್ಬು ಯಾರಿಗೂ ಹೇಳದೇ ಸೀದಾ ಮನೆಗೆ ಬಂದಿದ್ದಾನೆ. ಆರ್ಯ ಮತ್ತು ಅನು ಇಬ್ಬರು ಮನೆಯಲ್ಲಿ ಇಲ್ಲದಿರುವಾಗಲೇ ಬಂದಿರುವುದಕ್ಕೆ ಶಾರದಾ ಟೆನ್ಷನ್ ಮಾಡಿಕೊಂಡಿದ್ದಾಳೆ. ಸುಬ್ಬು ಕಾದು ಕಾದು ಸಾಕಾಗಿ ವಾಪಸ್ ಮನೆಗೆ ಹೋಗಿದ್ದಾನೆ.

   ಮನೆಗೆ ಬಂದ ಅನು ಹೇಳಿದ್ದೇನು..?

  ಮನೆಗೆ ಬಂದ ಅನು ಹೇಳಿದ್ದೇನು..?

  ಅನು ಸೀದಾ ಮನೆಗೆ ಬಂದಿದ್ದಾಳೆ. ಬಂದವಳೇ ಶಾರದಾ ದೇವಿ ಬಳಿ ಆರ್ಯ ಪ್ರಿಯದರ್ಶಿನಿ ಅಮ್ಮನರನ್ನು ನೋಡಲು ಬೆಳಗಾವಿಗೆ ಹೋಗಿದ್ದಾರೆ. ಪ್ರಿಯದರ್ಶನಿ ಅವರು ನನಗೆ ಕರೆ ಮಾಡಿದ್ದರು. ಆಗಲೇ ನನಗೂ ಗೊತ್ತಾಗಿದ್ದು ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಶಾರದಾ, ಏನಾದರೂ ಪ್ರಾಬ್ಲಂ ಅಂತ.? ಯಾಕಿಷ್ಟು ಅವಸರವಾಗಿ ಹೋಗಿರಬಹುದು ಎಂದಾಗ, ಅನು ನನಗೂ ಗೊತ್ತಿಲ್ಲ ಅಮ್ಮ. ನಾನು ಏನನ್ನು ಕೇಳೋದಕ್ಕೆ ಹೋಗಲಿಲ್ಲ ಎಂದು ಹೇಳುತ್ತಾಳೆ. ಹೋಗಲಿ ಯಾವುದೋ ಅರ್ಜೆಂಟ್ ಕೆಲಸಕ್ಕೆ ಹೋಗಿರಬೇಕು ಎಂದುಕೊಂಡು ಸುಮ್ಮನಾಗುತ್ತಾರೆ.

  'ರಾಜಿ' ತಾಳ್ಮೆಯ ಕಟ್ಟೆ ಒಡೆದಿದೆ.. ಕೆಣಕಿದ ವಿರಾಟನ ಜೀವದ ಕತೆಯೇನು?'ರಾಜಿ' ತಾಳ್ಮೆಯ ಕಟ್ಟೆ ಒಡೆದಿದೆ.. ಕೆಣಕಿದ ವಿರಾಟನ ಜೀವದ ಕತೆಯೇನು?

   ಅಮ್ಮನ ಮನೆಗೆ ಬಂದ ಅನು

  ಅಮ್ಮನ ಮನೆಗೆ ಬಂದ ಅನು

  ಇನ್ನು ದೀಪ ಹಚ್ಚಿ ಆರ್ಯ ಸರ್ ಜೋಪಾನವಾಗಿ ಹೋಗಿ ಬರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾಳೆ. ಅನು ಏನನ್ನೂ ತಿಂದಿಲ್ಲ ಎಂದು ಶಾರದಾ ದೇವಿಯೇ ಅನುಗೆ ತಿಂಡಿಯನ್ನು ತಿನ್ನಿಸುತ್ತಾಳೆ. ಈ ವೇಳೆ ಅನು ನಾನು ಅಮ್ಮನ ಮನೆಗೆ ಹೋಗಲಾ ಎಂದು ಕೇಳುತ್ತಾಳೆ. ಅದಕ್ಕೆ ಶಾರದಾ ಹೋಗಿ ಬಾ ಎನ್ನುತ್ತಾಳೆ. ಸೀದಾ ತಾಯಿ ಮನೆಗೆ ಹೋಗುವ ಅನುಳನ್ನು ನೋಡಿ ರಮ್ಯ ಶಾಕ್ ಆಗುತ್ತಾಳೆ. ಇಂಥಹ ಸಂದರ್ಭದಲ್ಲಿ ಒಬ್ಬಳೇ ಹೇಗೆ ಬಂದೆ ಎಂದು ಕೇಳುತ್ತಾಳೆ. ಆಗ ಅನು ಆರ್ಯ ಸರ್ ಮನೆಯಲ್ಲಿಲ್ಲ ಹೊರಗೆ ಹೋಗಿದ್ದಾರೆ ಎಂದು ಇಬ್ಬರು ಕೊಂಚ ರಿಲ್ಯಾಕ್ಸ್ ಆಗಿ ಮಾತನಾಡುತ್ತಾರೆ. ಅಷ್ಟರಲ್ಲಿ ಸುಬ್ಬು ಮತ್ತು ಪುಷ್ಪಾ ಬರುತ್ತಾರೆ.

   ಆರ್ಯನ ಹತ್ಯೆಗೆ ಝೇಂಡೇ ಸ್ಕೆಚ್..?!

  ಆರ್ಯನ ಹತ್ಯೆಗೆ ಝೇಂಡೇ ಸ್ಕೆಚ್..?!

  ಇತ್ತ ಝೇಂಡೇ ಆರ್ಯನನ್ನು ಹುಡುಕಿಸುತ್ತಿದ್ದಾನೆ. ಬೆಳಗಾವಿಗೆ ಆರ್ಯ ಹೋಗುತ್ತಿರುವುದು ಗೊತ್ತಾಗಿದೆ. ಈ ವೇಳೆ ಝೇಂಡೇ ತನ್ನ ಹುಡುಗರಿಗೆ ಆರ್ಯ ಯಾವುದೇ ಕಾರಣಕ್ಕೂ ತಮ್ಮ ಕಣ್ತಪ್ಪಿಸಿ ಹೋಗದಂತೆ ನೋಡಿಕೊಳ್ಳಿ ಎಂದು ಹೇಳುತ್ತಾನೆ. ಆದರೆ ಆರ್ಯನನ್ನೇ ಫಾಲೋ ಮಾಡುತ್ತಿದ್ದ ಮತ್ತೊಂದು ಕಾರಿನಿಂದ ಆರ್ಯನನ್ನು ಕೊಲ್ಲಲು ಯತ್ನಿಸುತ್ತಾರೆ. ಎರಡು ಮೂರು ಬಾರಿ ಯತ್ನಿಸುತ್ತಾರೆ. ಆರ್ಯ ಸ್ಪೀಡ್ ಆಗಿ ಹೋಗಲು ಪ್ರಯತ್ನಿಸುತ್ತಾನೆ. ಆದರೆ ಎದುರಿಗೆ ಲಾರಿ ಒಂದು ಬಂದು ಆರ್ಯನ ಕಾರು ಅಪಘಾತಕ್ಕೆ ಒಳಗಾಗುತ್ತದೆ. ಆರ್ಯನ ಮುಖ ಜಜ್ಜಿ ಹೋಗಿರುತ್ತದೆ.

  ಆದಿಗೆ ಎರಡನೇ ಮದುವೆ ಭಾಗ್ಯ! ಹಾಗಿದ್ರೆ ಪಾರು ಕತೆ ಏನು?ಆದಿಗೆ ಎರಡನೇ ಮದುವೆ ಭಾಗ್ಯ! ಹಾಗಿದ್ರೆ ಪಾರು ಕತೆ ಏನು?

   ಆತ್ಮಹತ್ಯೆ ಮಾಡಿಕೊಂಡನಾ ವಿಶ್ವಾಸ್..!!

  ಆತ್ಮಹತ್ಯೆ ಮಾಡಿಕೊಂಡನಾ ವಿಶ್ವಾಸ್..!!

  ಇತ್ತ ವಿಶ್ವಾಸ್ ತಾನು ಮಾಡಿಕೊಂಡ ಸಾಲವನ್ನು ತೀರಿಸಲಾಗದೇ ಒದ್ದಾಡುತ್ತಿದ್ದಾನೆ. ಹೀಗಾಗಿ ಮನೆಯಿಂದ ಹೊರಗೂ ಬಂದಿದ್ದಾನೆ. ಆದರೆ ಎಲ್ಲಿಗೆ ಹೋಗುತ್ತಿದ್ದೇನೆ ಎಂಬ ಬಗ್ಗೆ ಯಾರಿಗೂ ಹೇಳಿಲ್ಲ. ಕಾರಿನಲ್ಲಿ ಕೂತ ವಿಶ್ವಾಸ್ ನದಿಯ ಬ್ರಿಡ್ಜ್ ಬಳಿ ಡ್ರಾಪ್ ತೆಗೆದುಕೊಳ್ಳುತ್ತಾನೆ. ವಾಚ್, ಪರ್ಸ್, ಮೊಬೈಲ್ ಅನ್ನು ಕಾರಿನಲ್ಲೆ ಬಿಟ್ಟು ಹೋಗಿ ನದಿಗೆ ಹಾರುತ್ತಾನೆ. ಡ್ರೈವರ್ ಓಡಿ ಬಂದು ವೇದಾಂತ್, ಆದಿತ್ಯ ಹಾಗೂ ಎಜೆಗೆ ಕರೆ ಮಾಡಿ ವಿಷಯ ತಿಳಿಸುತ್ತಾನೆ.ಈಗ ವಿಶ್ವಾಸ್ ಮತ್ತು ಆರ್ಯ ಇಬ್ಬರನ್ನೂ ಒಂದೇ ಆಸ್ಪತ್ರೆಗೆ ಸೇರಿಸಲಾಗಿದೆ.

  English summary
  aryavardhan met with accident and vishwas attempted suicide
  Thursday, September 8, 2022, 15:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X