ಆರ್ಯವರ್ಧನ್ ಕಾಣೆಯಾಗಿದ್ದಾನೆ ಎಂದು ಗಾಬರಿಯಾಗಿರುವ ಅನು!
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಹೊಸ ಕತೆ ಶುರುವಾಗಿದೆ. ಆರ್ಯವರ್ಧನ್ ಅವರ ತಾಯಿ ಪ್ರಿಯಾ ಅವರ ಎರಡನೇ ಮಗ ವಿಕಾಸ್ ಸೋತು ಭಾರತಕ್ಕೆ ಬಂದಿದ್ದಾನೆ. ತನ್ನ ಬಿಸಿನೆಸ್‌ನಲ್ಲಿ ಕೋಟಿಗಟ್ಟಲೆ ಸಾಲ ಮಾಡಿಕೊಂಡಿದ್ದಾನೆ.
ಇತ್ತ ಆರ್ಯವರ್ಧನ್ ತನ್ನ ಖುರ್ಚಿಯನ್ನು ಹರ್ಷವರ್ಧನ್‌ಗೆ ಬಿಟ್ಟು ಕೊಟ್ಟಿದ್ದಾನೆ. ಅಲ್ಲದೇ, ಇದ್ದಕ್ಕಿದ್ದ ಹಾಗೆಯೇ ಮನೆಯಿಂದ ಯಾರಿಗೂ ಹೇಳದೆ ಹೊರಗೆ ಹೋಗಿದ್ದಾನೆ. ಇದರಿಂದ ಮನೆಯಲ್ಲಿ ಎಲ್ಲರೂ ಶಾಕ್ ಆಗಿದ್ದಾರೆ.
ಮಾನ್ಸಿ ಮತ್ತು ಮೀರಾ ಮನಸ್ಸಿನಲ್ಲಿ ಈಗ ಅನು ಮಾತುಗಳೇ ಗುಯ್ ಗುಡುತ್ತಿವೆ. ಅನು ಮೊದಲು ಆಡಿದ ಮಾತುಗಳಿಗೂ, ಈಗ ನಡೆದುಕೊಳ್ಳುತ್ತಿರುವ ರೀತಿಯೂ ತೀರಾ ಹೊಸದರಂತಿದೆ. ಅನು ಮೇಲೆ ಇಬ್ಬರಿಗೂ ಕೆಲ ಸಂಶಯಗಳು ಸೃಷ್ಟಿಯಾಗಿವೆ.

ತಂದೆ ಜೊತೆ ಮನಬಿಚ್ಚಿ ಮಾತನಾಡಿದ ವಿಕಾಸ್
ವಿಕಾಸ್ ಫಾರಿನ್‌ಗೆ ಹೋದ ಮೇಲೆ ತನ್ನ ತಂದೆಯ ಜೊತೆಗೆ ಮಾತನಾಡಿದ್ದೇ ಇಲ್ಲ. ಆದರೆ ಈಗ ಸೋತು ವಾಪಸ್ ಬಂದಿದ್ದಾನೆ. ತನ್ನ ಸೋಲನ್ನು ಒಪ್ಪಿಕೊಳ್ಳಲಾಗದೇ ಒದ್ದಾಡುತ್ತಿದ್ದಾನೆ. ಇದೇ ವೇಳೆಗೆ ಅಪ್ಪನ ಬಳಿ ಬಂದು ಯೋಗ ಕ್ಷೇಮ ವಿಚಾರಿಸಿಕೊಂಡಿದ್ದಾನೆ. ಮಗ ಮಾತನಾಡಿಸಿದ್ದನ್ನು ಕೇಳಿ ತುಂಬಾ ಖುಷಿ ಪಟ್ಟಿದ್ದಾನೆ. ನನ್ನ ಮಗ ಸಾಧಿಸಿದ್ದಾನೆ. ನಿನ್ನ ಸಾಧನೆಯನ್ನು ನಾನು ನಿತ್ಯ ಇಲ್ಲೆಲ್ಲಾ ಹೇಳಿಕೊಂಡು ಖುಷಿ ಪಡುತ್ತಿದ್ದೇನೆ ಎಂದು ತಮ್ಮ ಮನದ ಮಾತುಗಳನ್ನು ಮೊದಲ ಬಾರಿಗೆ ಮಗನ ಎದುರು ಹೇಳಿಕೊಳ್ಳುತ್ತಾರೆ. ವಿಕಾಸ್ ಕೂಡ ಮನ ಬಿಚ್ಚಿ ಮಾತನಾಡಲು ಮುಂದಾಗಿದ್ದಾನೆ.

ಮಾನ್ಸಿ- ಹರ್ಷ ಸಹಾಯಕ ಕೇಳಿದ ಅನು
ಆರ್ಯನ ಫೋನ್ ಕರೆಗೆ ಸಿಗುತ್ತಿಲ್ಲ. ಈ ಸಲ ಆರ್ಯ ಹೇಳದೇ ಕೇಳದೇ ಹೋಗಿರುವುದು ಅನುಗೆ ಭಯವನ್ನುಂಟು ಮಾಡಿದೆ. ಶಾರದಾ ದೇವಿ ಬಳಿ ತನ್ನ ಆತಂಕವನ್ನು ಹೇಳಿಕೊಂಡಿದ್ದಾಳೆ. ಶಾರದಾ ಝೇಂಡೇಗೆ ಕರೆ ಮಾಡಿ ವಿಚಾರಿಸಿದ್ದಾರೆ. ಝೇಂಡೇ ನಾವಿಬ್ಬರು ಈಗ ಭೇಟಿಯಾಗುತ್ತೇವೆ. ಆರ್ಯನಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಸುಳ್ಳು ಹೇಳುತ್ತಾನೆ. ಆದರೆ ಅನು ಝೇಂಡೇ ಮಾತನ್ನು ನಂಬುವುದಿಲ್ಲ. ಹೀಗಾಗಿ ಮಾನ್ಸಿ ಹಾಗೂ ಹರ್ಷನ ಸಹಾಯ ಕೇಳುತ್ತಾಳೆ. ಆದರೆ ಮಾನ್ಸಿ ತುಂಬಾನೇ ನೆಗ್ಲೆಟ್ ಆಗಿ ಮಾತನಾಡಿ ಅನುಳನ್ನು ಕಳಿಸುತ್ತಾಳೆ. ಅನು ಕಾರು ತೆಗೆದುಕೊಂಡು ಆರ್ಯನನ್ನು ಹುಡುಕಲು ಹೊರಡುತ್ತಾಳೆ.

ಮಾನ್ಸಿ- ಹರ್ಷಗೆ ಶಾರದಾ ದೇವಿ ಕ್ಲಾಸ್
ಮಾನ್ಸಿ ಹಾಗೂ ಹರ್ಷನ ರೂಮಿಗೆ ಶಾರದಾ ದೇವಿ ಬರುತ್ತಾಳೆ. ಬಂದವಳೇ ಮಾನ್ಸಿಗೆ ಬೈಯುತ್ತಾಳೆ. ಮಾನ್ಸಿ ಎದುರು ಮಾತನಾಡುತ್ತಾಳೆ. ಆಗ ಶಾರದಾ ಹರ್ಷನಿಗೆ ಒಬ್ಬ ಜವಾಬ್ದಾರಿಯುತನಂತೆ ನಡೆದುಕೋ. ಸದಾ ಹೆಂಡತಿ ಮಾತನ್ನು ಕೇಳಿಕೊಂಡು ಇರಬೇಡ. ಅನು ಗರ್ಭಿಣಿ. ಇಂತಹ ಸಂದರ್ಭದಲ್ಲೂ ಆರ್ಯನನ್ನು ಹುಡುಕಲು ಈ ರಾತ್ರಿಯಲ್ಲಿ ಹೋಗಿದ್ದಾಳೆ. ನಿಮಗೇನು ಅನ್ನಿಸುವುದಿಲ್ಲವಾ. ಅವಳು ಬಂದು ಸಹಾಯ ಬೇಡಿದರೆ, ಹೀಗಾ ನಡೆದುಕೊಳ್ಳುವುದು ಎಂದು ಬೈದು ಹೋಗುತ್ತಾಳೆ.

ಆರ್ಯನಗಾಗಿ ಅನು- ಝೇಂಡೇ ಹುಡುಕಾಟ
ಇನ್ನು ಝೇಂಡೇ ಹಾಗೂ ಅನು ಇಬ್ಬರೂ ಆರ್ಯನನ್ನು ಊರೆಲ್ಲಾ ಹುಡುಕುತ್ತಿರುತ್ತಾರೆ. ಅನು ಆರ್ಯನನ್ನು ಹುಡುಕುತ್ತಿರುವುದನ್ನು ಝೇಂಡೇ ನೋಡುತ್ತಾನೆ. ಈ ರಾತ್ರಿಯಲ್ಲಿ ನೀವು ಯಾಕೆ ಹುಡುಕುತ್ತೀರಾ.? ಮನೆಗೆ ಹೋಗಿ ಮೇಡಂ ಎನ್ನುತ್ತಾನೆ. ಅದಕ್ಕೆ ಅನು ಮನೆಯಲ್ಲಿ ಸುಳ್ಳು ಯಾಕೆ ಹೇಳಿದಿರಿ. ನೀವು ಮಾಡಿದ್ದು ತಪ್ಪು ಅಲ್ವಾ ಎಂದು ಹೇಳುತ್ತಾರೆ. ಝೇಂಡೇ ಮನೆಯಲ್ಲಿರುವವರಿಗೆ ಗಾಬರಿ ಆಗಬಾರದು ಎಂದು ಹಾಗೆ ಮಾಡಿದೇ ಎನ್ನುತ್ತಾನೆ. ಅನು ಝೇಂಡೇಗೆ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ಬಳಿಕ ನನ್ನ ಗಂಡನನ್ನು ಹುಡುಕುವುದು ನನಗೆ ಗೊತ್ತಿದೆ. ನಾನೇ ಹುಡುಕುತ್ತೇನೆ ಎಂದು ಹೇಳುತ್ತಾಳೆ.


Click it and Unblock the Notifications











