»   » ''ಜೊತೆ ಜೊತೆಯಲಿ'' ಹಸೆಮಣೆ ಏರಿದ ಅಭಯ್-ಶಾಲಿನಿ

''ಜೊತೆ ಜೊತೆಯಲಿ'' ಹಸೆಮಣೆ ಏರಿದ ಅಭಯ್-ಶಾಲಿನಿ

Posted By:
Subscribe to Filmibeat Kannada

ಜೀ ಕನ್ನಡ ವಾಹಿನಿಯ ಜನಪ್ರಿಯ 'ಜೊತೆ ಜೊತೆಯಲಿ' ಧಾರಾವಾಹಿ 100 ಸಂಚಿಕೆಗಳನ್ನ ಪೂರೈಸುವುದಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಧಾರಾವಾಹಿಯ ಪ್ರಮುಖ ಘಟ್ಟಕ್ಕೆ, ಅಂದ್ರೆ ನಾಯಕ ಅಭಯ್ ಮತ್ತು ನಾಯಕಿ ಶಾಲಿನಿಯ ಮದುವೆ ಹಂತಕ್ಕೆ ಬಂದು ತಲುಪಿದೆ.

ಈಗಾಗಲೇ ಟಿ.ಆರ್.ಪಿ ರೇಟಿಂಗ್ ನಲ್ಲಿ ಟಾಪ್ ನಲ್ಲಿರುವ 'ಜೊತೆ ಜೊತೆಯಲಿ' ಧಾರಾವಾಹಿಯ ಮದುವೆಯ ಸಂಚಿಕೆಗಳು ಹೆಚ್ಚು ಬೂಸ್ಟ್ ನೀಡುವುದರಿಂದ ಅದ್ದೂರಿಯಾಗಿ ಚಿತ್ರೀಕರಿಸಲಾಗಿದೆ. ಸೀರಿಯಲ್ ನ ಪ್ರಮುಖ ಕಲಾವಿದರೆಲ್ಲಾ ಈ ಮದುವೆಯ ಸಂಭ್ರಮದಲ್ಲಿ ಭಾಗವಹಿಸಿದ್ದು, ವಿಶೇಷ ಮೆರಗು ನೀಡಿದ್ದಾರೆ.

Zee Kannada Jothe Jotheyali Serial: Marriage Special

ವಾಹಿನಿಯೊಂದರ ವರದಿಗಾರನಾಗಿ ಕೆಲಸ ಮಾಡುವ ಶ್ರೀಮಂತ ಮನೆತನದ ಅಭಯ್, ತನಗಿಂತಲೂ 5 ವರುಷ ಹಿರಿಯಳಾದ ಮಧ್ಯಮ ವರ್ಗದ ಶಾಲಿನಿಯನ್ನು ಪ್ರೀತಿಸುತ್ತಾನೆ.

ವಿರೋಧಗಳ ನಡುವೆಯೂ ಹಸೆಮಣೆ ಏರುವ ಈ ಜೋಡಿಯ ಮದುವೆ ಸಂಭ್ರಮವನ್ನ ನಾಲ್ಕು ವಿಶೇಷ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲಾಗಿದ್ದು, ಇದಕ್ಕಾಗಿ ವಿಶೇಷ ಸೆಟ್ ನಿರ್ಮಾಣ ಮಾಡಲಾಗಿದೆ.

Zee Kannada Jothe Jotheyali Serial: Marriage Special

ಮದುವೆಯ ನಂತರ ಶಾಲಿನಿ ಬದುಕಿನ ಬಹುದೊಡ್ಡ ಸತ್ಯವೊಂದು ಅಭಯ್ ಗೆ ತಿಳಿಯುತ್ತದೆ. ಮುಂದೆ ಅಭಯ್-ಶಾಲಿನಿ ಸಂಸಾರ ನೌಕೆ ಎತ್ತ ಸಾಗುತ್ತೆ ಎಂಬುದು 'ಜೊತೆ ಜೊತೆಯಲಿ' ಧಾರವಾಹಿಯ ನಂತರದ ಟ್ವಿಸ್ಟ್. [ಜೀ ಕನ್ನಡದಿಂದ 'ಶುಭವಿವಾಹ'ಕ್ಕೆ ಒಲವಿನ ಕರೆಯೋಲೆ]

ಧಾರಾವಾಹಿಗೆ ಸಿಗುವ ದೊಡ್ಡ ತಿರುವು ಮುನ್ನ ಮದುವೆಯ ನಾನಾ ಶಾಸ್ತ್ರಗಳ ಜೊತೆಗೆ, ಮನರಂಜನೆಯನ್ನೂ ಸೇರಿಸಿ 'ಮದುವೆ ಸೀರೀಸ್' ರೆಡಿಮಾಡಲಾಗಿದೆ. ಫೆಬ್ರವರಿ 7 ರಿಂದ ಎರಡು ವಾರಗಳ ಕಾಲ ರಾತ್ರಿ 7.30 ಕ್ಕೆ ಮದುವೆಯ ವಿಶೇಷ ಸಂಚಿಕೆಗಳು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. (ಫಿಲ್ಮಿಬೀಟ್ ಕನ್ನಡ)

English summary
Zee Kannada's popular serial 'Jothe Jotheyali' Marriage sequence episodes will be aired from February 07th at 7.30 P.M.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada