ಜೊತೆ ಜೊತೆಯಲಿ ಸೀರಿಯಲ್ ಹಾಡು ಮಾಡಿತು ಮತ್ತೊಂದು ದಾಖಲೆ!

By ಪ್ರಿಯಾ ದೊರೆ

ಅತ್ತೆ-ಸೊಸೆ, ಪ್ರೀತಿ-ಪ್ರೇಮದ ನಡುವೆಯೇ ಸುತ್ತಿದ್ದ ಧಾರಾವಾಹಿ ಲೋಕದಲ್ಲಿ ಹೊಸ ಕತೆಯನ್ನು ಹೊತ್ತು ಬಂದದ್ದೇ ಜೊತೆ ಜೊತೆಯಲಿ ಸೀರಿಯಲ್.‌ ವಿಭಿನ್ನ ಕಥೆಯನ್ನು ಹೊತ್ತು ತಂದ ಈ ಧಾರಾವಾಹಿ ಶುರುವಿಗೂ ಮುನ್ನವೇ ಫೇಮಸ್‌ ಆಗಿತ್ತು.

ಆರೂರು ಜಗದೀಶ್ ನಿರ್ಮಾಣದ ಈ ಧಾರಾವಾಹಿ ಮರಾಠಿ ಭಾಷೆಯಲ್ಲಿ ಮೂಡಿ ಬಂದಿತ್ತು. ಅದರಲ್ಲಿ ಈ ಧಾರಾವಾಹಿ ಹಿಟ್‌ ಆಗಿತ್ತು. ಹಾಗಾಗಿ ಜೊತೆ ಜೊತೆಯಲಿ ಧಾರಾವಾಹಿಯನ್ನು ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲೂ ಪ್ರಾರಂಭಿಸಲಾಗಿದೆ. ಮರಾಠಿಯಲ್ಲಿ ನೋಡಿದವರು ಕೂಡ ಕನ್ನಡದಲ್ಲಿ ಇಷ್ಟಪಟ್ಟು ಈ ಧಾರಾವಾಹಿಯನ್ನು ನೋಡುತ್ತಿದ್ದಾರೆ.

ಈ ಧಾರಾವಾಹಿಯಲ್ಲಿ ಪ್ರಿತಿ-ಪ್ರೇಮಕ್ಕೀಂತಲೂ ಭಾವನೆಗಳ ಮೇಲೆ ಹೆಚ್ಚು ಗಮನ ಹರಿಸಲಾಗಿದೆ. ತಪ್ಪು-ಸರಿಗಳ ವಿಚಾರವನ್ನು ತಿಳಿಸಲಾಗುತ್ತಿದೆ. ಇನ್ನು ಪುಷ್ಪಾ ಮಾತುಗಳು, ಸುಬ್ಬು ಹರಟೆ, ಮಾನ್ಸಿ ಆಲೋಚನೆಗಳು, ಝೇಂಡೆ ಮಾತುಗಳು, ಮೀರಾ ನಡವಳಿಕೆ ಎಲ್ಲವೂ ಒಂದಕ್ಕಿಂದ ಒಂದು ಅಟ್ರ್ಯಾಕ್ಟೀವ್.

ಭಾವನೆಗಳೇ ಆಧಾರ!

ಭಾವನೆಗಳೇ ಆಧಾರ!

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಜಗಳ, ಕಿತ್ತಾಟವಿಲ್ಲ. ಸಾಮಾನ್ಯರ ಮನೆಗಳಲ್ಲಿ ನಡೆಯುವಂತಹ ಘಟನೆಗಳನ್ನೇ ತೋರಿಸಲಾಗುತ್ತಿದೆ. ವಠಾರ, ವಠಾರದಲ್ಲಿ ಇದ್ದ ಒಂದೇ ನಲ್ಲಿ, ಹೆಂಗಳೆಯರ ಜಗಳ, ಸುಬ್ಬು ಮನೆಯಲ್ಲಿ ಮಾಡುವ ಇಡ್ಲಿ ಉಪ್ಪಿಟ್ಟು ಹೀಗೆ ಎಲ್ಲವೂ ಒಂದಕ್ಕಿಂತ ಒಂದು ಡೈಲಾಗ್‌ ಗಳು ಕೂಡ ಚೆನ್ನಾಗಿ ಮೂಡಿ ಬರುತ್ತಿವೆ. ಇದರ ಜೊತೆಗೆ ರಾಜನಂದಿನಿ ರಹಸ್ಯ, ಸಂಕ್ರಾಂತಿ ಸಂಭ್ರಮ, ಆರ್ಯವರ್ಧನ್ ಮೂಲ, ಮದುವೆ ಸಡಗರ, ಸೀಕ್ರೆಟ್ ರೂಮ್, ಜಲಂಧರ್ ಲೆಕ್ಕಾಚಾರ ಎಲ್ಲವೂ ಕುತೂಹಲದ ಘಟ್ಟಗಳೇ. ಹೀಗಾಗಿ ಧಾರಾವಾಹಿಯನ್ನು ನಿತ್ಯ ಜನ ನೋಡಲು ಬಯಸುತ್ತಾರೆ.

ರಾಜನಂದಿಯ ಕಥೆ ಸ್ವಾರಸ್ಯಕರ!

ರಾಜನಂದಿಯ ಕಥೆ ಸ್ವಾರಸ್ಯಕರ!

ಇನ್ನು ರಾಜನಂದಿ, ಅವರ ತಂದೆ ಸಾವಿನ ರಹಸ್ಯದ ಕಥೆಯಂತೂ ಅದ್ಭುತವಾಗಿ ಮೂಡಿ ಬಂದಿತ್ತು. ನಟಿ ಸೋನು ಗೌಡ ರಾಜನಂದಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸುಭಾಷ್‌ ಪಾಟೀಲ್ ಹೇಗೆ ರಾಜನಂದಿನಿಗೆ ಮೋಸ ಮಾಡುತ್ತಾನೆ. ಆರ್ಯವರ್ಧನ್ ಎಂದು ಹೆಸರು ಹೇಗೆ ಬದಲಾಯ್ತು ಎಂಬೆಲ್ಲಾ ಕಥೆಯೂ ಕುತೂಹಲ ಸೃಷ್ಟಿಸಿತ್ತು. ಇದರ ಜೊತೆಗೆ ರಾಜನಂದಿನಿಯ ಸೀಕ್ರೆಟ್ ರೂಮ್‌ ಕೂಡ. ಆಗಾಗ ನಾಪತ್ತೆಯಾಗುತ್ತಿದ್ದ ಆರ್ಯವರ್ಧನ್, ಇದನ್ನೆಲ್ಲಾ ಗಮನಿಸುತ್ತಿರುವ ಮಾನ್ಸಿ, ಏನೂ ಅರ್ಥವಾಗದೇ ಒದ್ದಾಡುತ್ತಿದ್ದದ್ದು. ಎಲ್ಲಾ ಸತ್ಯವನ್ನು ಅರಿತುಕೊಂಡ ಅನು ಸಿರಿಮನೆಯ ಆಲೋಚನೆಗಳು ಪ್ರೇಕ್ಷಕರನ್ನು ಮೆಚ್ಚಿಸಿದೆ.

ಅನು ನಡೆಯನ್ನು ಒಪ್ಪಿಕೊಂಡ ಪ್ರೇಕ್ಷಕರು!

ಅನು ನಡೆಯನ್ನು ಒಪ್ಪಿಕೊಂಡ ಪ್ರೇಕ್ಷಕರು!

ರಾಜನಂದಿನಿ ಬಗ್ಗೆ ಸಂಪೂರ್ಣ ಕಥೆಯನ್ನು ತಿಳಿದುಕೊಂಡ ಅನು ಸಿರಿಮನೆ, ಈಗ ಆರ್ಯನ ಬಣ್ಣವನ್ನು ಬಯಲು ಮಾಡಲು ಮುಂದಾಗಿದ್ದಾಳೆ. ಇದಕ್ಕಾಗಿ ತುಂಬಾ ಪ್ಲಾನ್ ಮಾಡಿದ್ದಾಳೆ. ಅನು ಸಿರಿಮನೆ ಒಂದೊಂದೇ ಸತ್ಯವನ್ನು ಬಯಲು ಮಾಡುತ್ತಿದ್ದು, ಈಗ ಎಲ್ಲಾ ಪಾತ್ರಗಳಿಗೂ ಆರ್ಯನ ಬಗ್ಗೆ ತಿಳಿಸಿಕೊಟ್ಟಿದ್ದಾಳೆ. ಆರ್ಯವರ್ಧನ್ ಸ್ವತಃ ಅವನೇ ತಾನು ಮಾಡಿದ ತಪ್ಪುಗಳನ್ನು ಒಪ್ಪಿಕೊಳ್ಳುವಂತೆ ಮಾಡಲು ಮುಂದಾಗಿರುವುದನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದು, ಧಾರಾವಾಹಿಯನ್ನು ಟಾಪ್‌ ಸ್ಥಾನದಲ್ಲಿಟ್ಟಿದ್ದಾರೆ.

ಹಿಟ್‌ ಆದ ಟೈಟಲ್ ಸಾಂಗ್!

ಹಿಟ್‌ ಆದ ಟೈಟಲ್ ಸಾಂಗ್!

ಇನ್ನು ಜೊತೆ ಜೊತೆಯಲಿ ಧಾರಾವಾಹಿಯು ರಿಲೀಸ್‌ ಗೂ ಮುನ್ನವೇ ಹಿಟ್‌ ಆಗಿದ್ದು, ಇದರ ಟೈಟಲ್‌ ಟ್ರ್ಯಾಕ್.‌ ಜನವರಿ 2020ರಲ್ಲಿ ಈ ಧಾರಾವಾಹಿ ಪ್ರಸಾರವಾಗಲು ಶುರುವಾಯ್ತು. ಆದರೆ ಅದಕ್ಕೂ ಸುಮಾರು ತಿಂಗಳ ಹಿಂದೆಯೇ ಇದರ ಟೈಟಲ್‌ ಹಾಡು ರಿಲೀಸ್‌ ಆಗಿತ್ತು. ಯುವಕರಿಂದ ಹಿಡಿದು ಮುದುಕರು ಕೂಡ ಈ ಹಾಡನ್ನು ಇಷ್ಟ ಪಟ್ಟಿದ್ದಾರೆ. ಯೂಟ್ಯೂಬ್‌ ನಲ್ಲಿ ಇದರ ಹಾಡನ್ನು ಅಪ್‌ ಲೋಡ್‌ ಮಾಡಲಾಗಿದ್ದು, ಈಗ ಇದು 3 ಕೋಟಿಗೂ ಅಧಿಕ ವೀವ್ಸ್ ಪಡೆದಿದೆ. ಇದರೊಂದಿಗೆ ಬರೋಬ್ಬರಿ 7 ಸಾವಿರಕ್ಕೂ ಹೆಚ್ಚು ಕಮೆಂಟ್ಸ್ ಮಾಡಲಾಗಿದೆ.

More from Filmibeat

English summary
Zee Kannada Jothe Jotheyali Serial Title Track created record on Youtube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X