ಜೊತೆ ಜೊತೆಯಲಿ: ರಾಜನಂದಿನಿಯನ್ನು ಅಟ್ಟಿಸಿಕೊಂಡು ಬರುವವರು ಯಾರು?

By Priya Dore

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ರಾಜನಂದಿನಿ ಆರ್ಯನ ಬಗ್ಗೆ ತಿಳಿದು ಅಪ್ಸೆಟ್ ಆಗಿರುತ್ತಾಳೆ. ಆರ್ಯನ ಬಳಿ, ನಿನ್ನ ಅರ್ಥ ಮಾಡಿಕೊಳ್ಳೋದಕ್ಕೆ ಆಗುತ್ತಿಲ್ಲ ಎಂದು ಹೇಳುತ್ತಾಳೆ. ಆಗ ಆರ್ಯ ಶಾಕ್ ಆಗುತ್ತಾನೆ. ಏನ್ ಹೇಳುತ್ತಿದ್ದೀಯಾ ನಂದು, ಅಂದಾಗ ತಲೆ ನೋಯುತ್ತಿದೆ. ನಾನು ಮಲಗುತ್ತೇನೆ ಎಂದು ರಾಜನಂದಿನಿ ಹೇಳುತ್ತಾಳೆ.

ಆರ್ಯವರ್ಧನ್ ಹಾಗೂ ಝೇಂಡೇ ವಠಾರದ ಮನೆಯಲ್ಲಿ ಕೂತು ಕೇರಂ ಆಡುತ್ತಿರುತ್ತಾರೆ. ಆಗ ಡ್ರೈವರ್ ಬಂದು ರಾಜನಂದಿನಿ ಮೇಡಂ ಕೊಟ್ರು ಅಂತ ಹೇಳಿ ಒಂದು ಟೆಪ್ರೆಕಾರ್ಡರ್ ಅನ್ನು ಕೊಡುತ್ತಾರೆ. ನನ್ನ ಹೆಂಡತಿ ಪ್ರೇಮದ ಸಂದೇಶವನ್ನು ಕಳಿಸಿದ್ದಾಳೆ ಅಂತ ಖುಷಿ ಪಡುತ್ತಾನೆ.

ಟೇಪ್ ರೆಕಾರ್ಡರ್‌ ಆನ್ ಮಾಡಿದಾಗ ರಾಜನಂದಿನಿ, ಆರ್ಯ ನಾನು ನಿನ್ನ ಮೇಲಿಟ್ಟಿದ್ದ ನಂಬಿಕೆಯನ್ನು ಸುಳ್ಳು ಮಾಡಿದ್ದೀಯಾ. ನನ್ನಿಂದ ನನ್ನ ಮನೆ, ಅಪ್ಪ, ಬ್ಯುಸಿನೆಸ್ ಎಲ್ಲವನ್ನೂ ಕಿತ್ತುಜೊಂಡೆ. ನೀನು ಮಾಡಿದ್ದೆಲ್ಲವೂ ನನಗೆ ಗೊತ್ತಾಗಿದೆ. ಇನ್ನು ಏನೇನು ಕಥೆ ಹೆಣೆಯಬೇಕು ಅಂದುಕೊಂಡಿದ್ದೀಯೋ ರೆಡಿ ಮಾಡಿಕೊ ಎಂದು ಹೇಳುತ್ತಾಳೆ.

Zee Kannada Jothe Jotheyali Serial Written Update on April 29th Aryavardhan Attack on Rajanandini

ರಾಜನಂದಿನಿಗೆ ಕಾದು ಅಪಾಯ

ಇದನ್ನು ಕೇಳಿದ ಆರ್ಯ ಮತ್ತು ಝೇಂಡೇ ಶಾಕ್ ಆಗುತ್ತಾರೆ. ಎಲ್ಲವೂ ಮುಗಿದೇ ಹೋಯ್ತು ಎಂದುಕೊಳ್ಳೂತ್ತಾನೆ ಝೇಂಡೇ. ಆದರೆ, ಆರ್ಯ ಸ್ವಲ್ಪವೂ ಜಗ್ಗದೇ ನಾನೇನು ಮಾಡೇ ಇಲ್ಲ ಎನ್ನುವ ಹಾಗೆ ಮಾತನಾಡುತ್ತಾನೆ. ಅಪಾಯ ಬಂದರೆ ಏನು ಮಾಡಬೇಕು ಅಂತ ನನಗೆ ಗೊತ್ತಿದೆ ಎಂದು ಹೇಳುತ್ತಾನೆ.

ಇತ್ತ ರಾಜನಂದಿನಿ ಆರ್ಯ ಹಾಗೂ ಝೇಂಡೇ ಆಫೀಸ್‌ನಲ್ಲಿ ಮಾತನಾಡಿಕೊಂಡಿದ್ದನ್ನೆಲ್ಲಾ ಕೇಳಿಸಿಕೊಂಡಿರುತ್ತಾಳೆ. ಆಗ ಆರ್ಯ ಫೋನ್ ಮಾಡಿ, ನಂದಿನಿ ಅವರೇ ನಾನು ನಿಮ್ಮ ಹತ್ರ ಮಾತನಾಡಬೇಖು. ನಾನು ನಿಮ್ಮ ಹತ್ತಿರ ಕೆಲ ವಿಚಾರಗಳನ್ನು ಮುಚ್ಚಿಟ್ಟಿದ್ದೀನಿ ಅದೆಲ್ಲವನ್ನೂ ನಾನು ಹೇಳಬೇಕು. ಆಮೇಲೆ ನೀವು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಕ್ಕೆ ನಾನು ಬದ್ಧವಾಗಿರುತ್ತೇನೆ. ದಯವಿಟ್ಟು ನಾನು ಹೇಳುವ ಜಾಗಕ್ಕೆ ಬನ್ನಿ.. ಪ್ಲೀಸ್ ಎಂದು ಕೇಳುತ್ತಾನೆ. ಆಗ ರಾಜನಂದಿನಿ ಇಷ್ಟು ದಿನ ಎಲ್ಲದಕ್ಕೂ ಎಸ್ ಅಂದಿದ್ದೆ ಅಲ್ವಾ. ಇದು ಕೊನೆಯ ಬಾರಿ ಎಸ್ ಅನ್ನೋದು ಅಂತ ಹೇಳುತ್ತಾಳೆ.

ರಾಜನಂದಿನಿಗೆ ಎಚ್ಚರಿಕೆ ಕೊಟ್ಟ ಜೋಗ್ತವ್ವ

ಅಷ್ಟರಲ್ಲಿ ಜೋಗ್ತವ್ವ ಬಂದು ಎಚ್ಚರವಾಗಿರು, ಅಪಾಯ ಕಾದಿದೆ ಎಂದು ಎಚ್ಚರಿಸಿ ಹೋಗುತ್ತಾಳೆ. ರಾತ್ರಿ ಸಮಯದಲ್ಲಿ ಮನೆಯಿಂದ ಹೊರಗೆ ಹೊರಟ ರಾಜನಂದಿನಿಯನ್ನು ಅವರ ತಾಯಿ ಶಾರದಾ ಪ್ರಶ್ನೆ ಮಾಡುತ್ತಾಳೆ. ಕೆಲಸದ ಮೇಲೆ ಆರ್ಯನ ಜೊತೆಗೆ ಹೋಗುತ್ತಿದ್ದೇನೆ. ರಾಜನಂದಿನಿ ಮನಸಿನಲ್ಲಿ ಆರ್ಯನಿಗೆ ಜಾಗವಿಲ್ಲ. ಇನ್ನು ಆರ್ಯ ಈ ಮನೆಗೆ ಬಂದರೆ ಏನು? ಬಿಟ್ಟರೆ ಏನು ಎಂದು ಹೇಳಿ ಹೊರಡುತ್ತಾಳೆ. ಹೋಗುವಾಗ ಅಮ್ಮ ಹೋಗುತ್ತೇನೆ ಅಮ್ಮ ಎಂದು ಹೇಳುತ್ತಾಳೆ. ರಾಜನಂದಿನಿಯೇ ರಾತ್ರಿಯಲ್ಲಿ ಕಾರನ್ನು ತೆಗೆದುಕೊಂಡು ಹೋಗುತ್ತಾಳೆ.

ಇತ್ತ ರಾಜನಂದಿನಿಗೆ ಎಲ್ಲಾ ಗೊತ್ತಾಗಿದೆ ಎಂದು ತಿಳಿದ ಝೇಂಡೇ ಆರ್ಯನನ್ನು ತಡೆಯಲು ಪ್ರಯತ್ನಿಸುತ್ತಾನೆ. ಆದರೆ ಆರ್ಯ, ನನಗೆ ಇದೇ ವರ್ಧನ್ ಕಂಪನಿ ಹಾಗೂ ಇದೇ ಮನೆ ಬೇಕು. ಇದು ನನ್ನದು ಎಂದು ಕಿರುಚುತ್ತಾನೆ. ನಾನು ರಾಜನಂದಿನಿಯನ್ನು ಅರ್ಥ ಮಾಡಿಸುತ್ತೀನಿ ಎಂದು ಹೇಳುತ್ತಾನೆ. ಆರ್ಯನಿಗೆ ಅರ್ಥವಾಗೋದಿಲ್ಲ. ರಾಜನಂದಿನಿ ನಮ್ಮನ್ನು ಪೊಲೀಸರಿಗೆ ಹಿಡಿದು ಕೊಡುತ್ತಾಳೆ. ನನ್ನ ಗೆಳೆಯನನ್ನು ನಾನೇ ಹೇಗಾದರೂ ಮಾಡಿ, ಕಾಪಾಡಿಕೊಳ್ಳಬೇಕು ಎಂದು ಝೇಂಡೇ ನಾಲ್ಕು ಜನರನ್ನು ಕರೆಸಿ, ರಾಜನಂದಿಯನ್ನು ದಾರಿ ಮಧ್ಯೆ ಅಟ್ಯಾಕ್ ಮಾಡುವಂತೆ ಹೇಳುತ್ತಾನೆ. ರಾಜನಂದಿನಿಯನ್ನು ಆ ನಾಲ್ವರು ಅಟ್ಯಾಕ್ ಮಾಡುತ್ತಾರೆ. ರಾಜನಂದಿನಿ ತಪ್ಪಿಸಿಕೊಂಡು ಓಡುತ್ತಾಳೆ. ಆಗ ಅಲ್ಲಿಗೆ ಜೋಗ್ತವ್ವ ಬರುತ್ತಾಳೆ. ಮುಂದೆ ಏನಾಗುತ್ತದೆ ಎಂಬುದನ್ನು ಮುಂದಿನವಾರದವರೆಗೂ ಕಾದು ನೋಡಬೇಕಿದೆ.

More from Filmibeat

English summary
Zee Kannada Jothe Jotheyali Serial Written Update on April 29th Aryavardhan Attack on Rajanandini, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X