For Quick Alerts
  ALLOW NOTIFICATIONS  
  For Daily Alerts

  ಝೇಂಡೆ ಪ್ಲಾನ್ ಸಕ್ಸಸ್: ಆದರೆ ಅನು ಪ್ರಾಣಕ್ಕಿಲ್ಲ ಕುತ್ತು!

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಸಿರಿಮನೆಗೆ ಅಪಘಾತವಾಗಿದೆ. ಆದರೆ ಈ ವಿಚಾರ ಇನ್ನೂ ಮನೆಯವರಿಗೆ ಗೊತ್ತಾಗಿಲ್ಲ. ಅನು ಎಲ್ಲಿಗೆ ಹೋಗಿದ್ದಾಳೆ ಎಂಬುದೇ ಯಾರಿಗೂ ಗೊತ್ತಾಗಿಲ್ಲ.

  ಝೇಂಡೆಗೆ ಅನು ಸಾಯುವ ಸುದ್ದಿ ಕೇಳೋ ಕಾತುರ. ಇತ್ತ ಆರ್ಯನಿಗೆ ಏನೂ ಗೊತ್ತಿಲ್ಲದೇ, ಮಲಗಿದ್ದಾನೆ. ಝೇಂಡೆ ಮಾತ್ರಾ ಸಾವಿನ ಸುದ್ದಿ ಕೇಳಲು ಮೊಬೈಲ್ ಅನ್ನು ಕೈಯಲ್ಲೇ ಹಿಡಿದು ಕುಳಿತಿದ್ದಾನೆ.

  ಇತ್ತ ಹರ್ಷವರ್ಧನ್ ಗೆ ಮಾನ್ಸಿ ಬಿಟ್ಟು ಹೋಗಿದ್ದೆ ಪ್ರಾಬ್ಲಮ್ ಆಗಿದೆ. ಮಾನ್ಸಿ ಇಂಥಹ ಸಂದರ್ಭದಲ್ಲಿ ತನ್ನನ್ನು ಬಿಟ್ಟು ಹೋಗಿದ್ದಾಳಲ್ಲಾ ಎಂದು ಯೋಚಿಸುತ್ತಿದ್ದಾನೆ. ಹರ್ಷವರ್ಧನ್ ಸಂಕಟವನ್ನು ಅರ್ಥ ಮಾಡಿಕೊಳ್ಳುವವರು ಯಾರೂ ಇಲ್ಲದಂತಾಗಿದೆ.

  ಹರ್ಷನಿಗೆ ಸಮಾಧಾನ ಮಾಡಿದ ಶಾರದಾ

  ಹರ್ಷನಿಗೆ ಸಮಾಧಾನ ಮಾಡಿದ ಶಾರದಾ

  ಶಾರದಾ ದೇವಿ ಬಳಿ ಹರ್ಷವರ್ಧನ್ ಮಾನ್ಸಿ ತನ್ನನ್ನು ಬಿಟ್ಟು ಹೋದ ವಿಚಾರವನ್ನು ಹೇಳಿಕೊಂಡು ಗೋಳಾಡುತ್ತಾನೆ. ಶಾರದಾ ದೇವಿ ಹರ್ಷನಿಗೆ ಸಮಾಧಾನ ಮಾಡುತ್ತಾಳೆ. ಎರಡು ದಿನವಾದ ಮೇಲೆ ಕೋಪ ತಣ್ಣಗಾದಾಗ ಮನೆಗೆ ವಾಪಸ್ ಬರುತ್ತಾಳೆ. ಯೋಚಿಸಬೇಡ ಹರ್ಷ. ಈ ಮನೆಯ ಜವಾಬ್ದಾರಿ ನಿನ್ನದು. ಏನು ಮಾಡಬೇಕು ಎಂಬುದು ನಿನಗೇ ಬಿಟ್ಟಿದ್ದು ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಹರ್ಷ ನನಗೆ ಮಾನ್ಸಿ ಮುಖ್ಯ ಅಲ್ವಾ.? ನಾನು ಈಗ ಅತ್ತಿಗೆಯನ್ನು ಹುಡುಕಲಾ, ಇಲ್ಲವೇ ಮಾನ್ಸಿಯನ್ನು ಹುಡುಕಲಾ ಎಂದು ಮತ್ತೆ ಪ್ರಶ್ನೆ ಮಾಡುತ್ತಾನೆ. ನಂತರ ಅತ್ತಿಗೆ ಈಗ ಡೇಂಜರ್ ಅಲ್ಲಿದ್ದಾರೆ. ಅವರನ್ನೇ ಹುಡುಕುತ್ತೇನೆ ಎಂದು ಹೇಳಿ ಹೊರಡುತ್ತಾನೆ.

  ಝೇಂಡೆ ಖುಷಿಗೆ ಪಾರವೇ ಇಲ್ಲ

  ಝೇಂಡೆ ಖುಷಿಗೆ ಪಾರವೇ ಇಲ್ಲ

  ಝೇಂಡೆ, ಅನು ಸಿರಿಮನೆ ಸಾವಿನ ಸುದ್ದಿ ಕೇಳಿ ಫುಲ್ ಖುಷಿಯಾಗಿದ್ದಾನೆ. ತನ್ನ ಮತ್ತು ಆರ್ಯನ ನಡುವೆ ಇದ್ದ ಅನು ಇನ್ಮುಂದೆ ಇರೋದಿಲ್ಲ. ಅನು ಸತ್ತಾಯ್ತು. ಇನ್ನು ತಾನು ಹಾಗೂ ಆರ್ಯನದ್ದೇ ಸಾಮ್ರಾಜ್ಯ. ನಾನು ಆರ್ಯ ಮೊದಲಿನಂತೆ ಇರಬಹುದು. ರಾಜನಂದಿನಿ ಸತ್ತಾಗ ಆರ್ಯ ಸ್ವಲ್ಪ ದಿನ ನರಳಾಡಿದ್ದ. ಆಗ ಅವನ ದುಃಖಕ್ಕೆ ನಾನು ಹೆಗಲು ಕೊಟ್ಟಿದ್ದೇ. ಇದೀಗ ಅನು ಸತ್ತಿದ್ದಕ್ಕೂ ಸ್ವಲ್ಪ ದಿನ ಒದ್ದಾಡುತ್ತಾನೆ. ನಾನು ಅವನ ಜೊತೆಗಿದ್ದರೆ ಆಯ್ತು. ಆಮೇಲೆ ಎಲ್ಲವೂ ಸರಿ ಹೋಗುತ್ತದೆ. ಮತ್ತೆ ನಾನು ಆರ್ಯನ ನಂಬಿಕೆಯನ್ನು ಗಳಿಸಬಹುದು. ಇನ್ನು ನಮ್ಮಿಬ್ಬರ ನಡುವೆ ಯಾರೂ ಇರುವುದಿಲ್ಲ ಎಂದು ಹೇಳಿಕೊಂಡು ಖುಷಿ ಪಡುತ್ತಾನೆ.

  ವಠಾರದಲ್ಲಿ ನಿಂತ ಜಗಳ

  ವಠಾರದಲ್ಲಿ ನಿಂತ ಜಗಳ

  ಇನ್ನು ವಠಾರದಲ್ಲಿ ಬೆಳ್ಳಿ ಬಟ್ಟಲು ಹಾಗೂ ಸ್ಪೂನ್ ಕಳೆದು ಹೋಗಿದೆ ಎಂದು ಎರಡು ಮನೆಯವರ ಮಧ್ಯೆ ಜಗಳ ಶುರುವಾಗಿದೆ. ಇದನ್ನು ಬಗೆಹರಿಸಲು ಇಡೀ ವಠಾರದ ಜನ ಸೇರಿರುವುದಲ್ಲದೇ, ಜೋಗ್ತವ್ವ ಕೂಡ ಅಲ್ಲೇ ಇದ್ದಾಳೆ. ಮೊದಲಿಗೆ ಬೆಳ್ಳಿ ಬಟ್ಟಲು ಹಾಗೂ ಸ್ಪೂನ್ ಅನ್ನು ರೋಹಿಣಿ ಕದ್ದಿದ್ದಾಳೆ ಎಂದು ಸಾಬೀತಾಗುತ್ತದೆ. ಬಳಿಕ ಜೋಗ್ತವ್ವ ಕಂಡಿದ್ದೆಲ್ಲವೂ ಸತ್ಯವಲ್ಲ. ಸತ್ಯ ಇನ್ನಷ್ಟೇ ಗೊತ್ತಾಗಬೇಕಿದೆ ಎಂದು ಹೇಳಿ ಹೊರಡುತ್ತಾಳೆ. ಬಳಿಕ ಬೆಳ್ಳಿ ಬಟ್ಟಲನ್ನು ರೋಹಿಣಿ ಕದ್ದಿಲ್ಲ ಎಂಬ ಸತ್ಯ ಗೊತ್ತಾಗುತ್ತಾಗುತ್ತದೆ. ಇದು ತಿಳಿದ ಬಳಿಕ ವಠಾರದವರೆಲ್ಲರೂ ತಮ್ಮ ತಮ್ಮ ಕೆಲಸಗಳಿಗೆ ತೆರಳುತ್ತಾರೆ.

  ಅನುಳನ್ನು ಮನೆಗೆ ಕರೆತಂದ ಹರ್ಷ

  ಅನುಳನ್ನು ಮನೆಗೆ ಕರೆತಂದ ಹರ್ಷ

  ಹರ್ಷವರ್ಧನ್ ಅನುಳನ್ನು ಹುಡುಕಿಕೊಂಡು ಹೊರಟಿದ್ದಾನೆ. ಇದೇ ವೇಳೆಗೆ ಹರ್ಷನಿಗೆ ನಿಮ್ಮ ಮನೆಯ ಕಾರೊಂದು ಆಕ್ಸಿಡೆಂಟ್ ಆಗಿದೆ ಎಂದು ಹೇಳುತ್ತಾರೆ. ಆಗ ಅಲ್ಲಿಗೆ ತೆರಳುವ ಹರ್ಷ ಅನುಳ ಸ್ಥಿತಿ ಕಂಡು ಶಾಕ್ ಆಗಿ, ಆಕೆಯನ್ನು ಮನೆಗೆ ಎತ್ತಿಕೊಂಡು ಬರುತ್ತಾನೆ. ಅನುಳನ್ನು ಹರ್ಷ ಕರೆದುಕೊಂಡು ಬಂದಿದ್ದನ್ನು ನೋಡಿದ ಶಾರದಾ ದೇವಿ ಗಾಬರಿಯಾಗುತ್ತಾಳೆ. ಅನು ದೇಹ ಸಂಪೂರ್ಣವಾಗಿ ತಣ್ಣಗಾಗಿರುತ್ತದೆ. ಮುಂದೆ ಅನುಗೆ ಏನಾಗುತ್ತದೆ.? ಆರ್ಯನಿಗೆ ಝೇಂಡೆ ನಿಜ ಬಣ್ಣ ಗೊತ್ತಾಗುತ್ತದಾ ಎಂಬುದನ್ನು ಕಾದು ನೋಡಬೇಕಿದೆ.

  English summary
  Anu met with an accident as planned by Jhende in serial Jothe Jotheyali. Here is the detail about the episode.
  Tuesday, July 19, 2022, 20:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X