ಆಕ್ಟಿಂಗ್ ಮಾಡ್ತಾ ಮಾಡ್ತಾ ನಿಜವಾಗಿಯೂ ಲವ್ವಲ್ಲಿ ಬಿದ್ದ 'ಕಮಲಿ', ಹುಡುಗ ಯಾರು ಅಂತ ಗೊತ್ತು ತಾನೇ..?

By ಪ್ರಿಯಾ ದೊರೆ

ಕಮಲಿ ಧಾರಾವಾಹಿ ಮುಕ್ತಾಯವಾಗಿ ಹಲವು ವರ್ಷಗಳಾಗಿವೆ. ಇಂದಿಗೂ ಜನ ಕಮಲಿ ಧಾರಾವಾಹಿಯ ಜೋಡಿಗಳನ್ನು ಮತ್ತೆ ತೆರೆ ಮೇಲೆ ನೋಡಲು ಬಯಸುತ್ತಿದ್ದಾರೆ. ಆದರೆ, ಕಮಿಲಿ ಧಾರಾವಾಹಿಯ ನಾಯಕಿ ಅಮೂಲ್ಯ ಓಂಕಾರ ಗೌಡ ಅವರು ಕನ್ನಡದ ಶ್ರೀಗೌರಿ ಮತ್ತು ತೆಲುಗಿನ ಗುಂಡೆನಿಂದ ಗುಡಿಗಂಟಲು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ತೆಲುಗು ಹಾಗೂ ಕನ್ನಡ ಎರಡೂ ಕಿರುತೆರೆಯಲ್ಲಿ ಸಕ್ರಿಯವಾಗಿರುವ ಅಮೂಲ್ಯ ಅವರು ಈಗ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ತೆಲುಗು, ಕನ್ನಡದಲ್ಲಿ ಸಕ್ರಿಯ

ಕಮಲಿ ಧಾರಾವಾಹಿ ಮೂಲಕ ತೆರೆ ಮೇಲೆ ಹಳ್ಳಿ ಹುಡುಗಿಯಂತೆ ಕಂಡರೂ ತೆರೆ ಹಿಂದೆ ಮಾಡ್ರನ್ ಲುಕ್ ನಲ್ಲಿ ತುಂಬಾನೇ ಹಾಟ್ ಆಗಿ ಕಾಣುವ ಅಮೂಲ್ಯ ಅವರು 2014 ರಲ್ಲಿ ಸ್ವಾರ್ ಸ್ವಾತಿಮುತ್ತು ಸೀರಿಯಲ್ ಗೆ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಬಳಿಕ ಅರಮನೆ, ಪುನರ್ ವಿವಾಹ ಎಂಬ ಧಾರಾವಾಹಿಯಲ್ಲೂ ಅಮೂಲ್ಯ ನಟಿಸಿದ್ದರು. ಇನ್ನು ತೆಲುಗಿನಲ್ಲಿ ಕಾರ್ತಿಕ ದೀಪಂ ಸೀರಿಯಲ್ ನಲ್ಲಿ ಆಟೋ ಚಾಲಕಿಯಾಗಿ ಕಾಣಿಸಿಕೊಂಡಿದ್ದರು. ಹೀಗೆ ನಟನಾ ಪಯನವನ್ನು ದಶಕಗಳ ಕಾಲ ಎಲ್ಲೂ ಬ್ರೇಕ್ ಹಾಕದೇ ನಡೆಸಿಕೊಂಡು ಬಂದಿದ್ದಾರೆ. ಬಳಿಕ ಅಮೂಲ್ಯ ಅವರು ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟು ಅಭಿಮಾನಿಗಳಿಗೆ ಇನ್ನಷ್ಟು ಇಷ್ಟವಾದರು. ಉದ್ದ ಜಡೆಯ ಸುಂದರಿ, ಈ ವರ್ಷ ಶ್ರೀಗೌರಿ ಧಾರಾವಾಹಿಯಲ್ಲಿ ನಾಯಕಿ ಪಾತ್ರದ ಮೂಲಕ ಮಿಂಚುತ್ತಿದ್ದಾರೆ.

zee-kannada-kamali-serial-actor-amulya-gowda-and-niranjan-in-love


ನಿರಂಜನ್ ಬಣ್ಣದ ಪಯಣ

ಇನ್ನು ಕಮಲಿ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದ ನಿರಂಜನ್ ಅವರು ಇಂದಿಗೂ ರಿಷಿ ಪಾತ್ರದ ಮೂಲಕವೇ ಗುರುತಿಸಿಕೊಳ್ಳುತ್ತಾರೆ. ಕಮಲಿ ಧಾರಾವಾಹಿಯಲ್ಲಿ ಇಂಗ್ಲಿಷ್ ಲೆಕ್ಚರರ್ ಆಗಿ ನಟಿಸಿದ್ದ ಇವರು ಗಾಂಧಾರಿ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು. ಆದರೆ ಅದಕ್ಕೂ ಮುನ್ನ, ನಿರಂಜನ್ ಅವರು ಸಾಕಷ್ಟು ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ನಾಟ್ ಎ ಮರ್ಡರ್ ಎಂಬುದು ಇವರ ಮೊದಲ ಕಿರುಚಿತ್ರ. ಬಳಿಕ ಶಿವ, ಬಿಬಿಎಂಪಿ ಸ್ವಚ್ಛತೆಯ ಪ್ರಕರಣ, ಶ್ರೀರಾಮಚಂದ್ರ ವಿತ್ಗರ್ಲ್ಸ್, ಹೃದಯಾನೇ ಜೋಕಾಲಿ ಹೀಗೆ ಹತ್ತಕ್ಕೂ ಹೆಚ್ಚಿನ ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ತೆಲುಗಿನ ಧಾರಾವಾಹಿಗಳಲ್ಲೂ ನಟಿಸಿರುವ ನಿರಂಜನ್ ಸದ್ಯ ಕನ್ನಡದ ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು, ತೆಲುಗಿನ ಸೀರಿಯಲ್ ಒಂದಕ್ಕೂ ಬಣ್ಣ ಹಚ್ಚಿದ್ದಾರೆ.


ರಟ್ಟಾಯ್ತು ಪ್ರೀತಿಯ ಗುಟ್ಟು

ಇನ್ನು ಈ ಜೋಡಿಗಳು ಮತ್ತೆ ಕಿರುತೆರೆಯಲ್ಲಿ ಒಟ್ಟಿಗೆ ಪ್ರಾಜೆಕ್ಟ್ ಮಾಡಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ. ಇಂದಿಗೂ ಈ ಜೋಡಿಗಳು ಸೂಪರ್ ಎಂದು ಹೇಳುತ್ತಿದ್ದಾರೆ. ಆದರೆ, ಇಬ್ಬರೂ ಕನ್ನಡ ಮತ್ತು ತೆಲುಗು ಎರಡೂ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದರೂ ಕೂಡ ನಟಿಸುತ್ತಿರುವುದು ಮಾತ್ರ ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ. ಇತ್ತೀಚೆಗೆ ತೆಲುಗಿನಲ್ಲಿ ನಡೆದ ಕಾರ್ಯಕ್ರಮ ಒಂದಕ್ಕೆ ಅಮೂಲ್ಯ ತೆರಳಿದ್ದರು. ಅಲ್ಲಿನ ನಿರೂಪಕಿ ಅಮೂಲ್ಯ ಅವರ ಫೋನ್ ನಲ್ಲಿ ನಿರಂಜನ್ ಏನೆಂದು ಸೇವ್ ಆಗಿದ್ದಾರೆ ಎಂದು ಕೇಳುತ್ತಾರೆ. ಆಗ ಅಮೂಲ್ಯ ಟಾಮ್ ಎಂದು ಹೇಳಿದ್ದು, ಫೋನ್ ಮಾಡಿ ಸ್ಪೀಕರ್ ಹಾಕಲು ತಿಳಿಸಿದ್ದು, ನಿರಂಜನ್ ಫೊನ್ ರಿಸೀವ್ ಮಾಡುತ್ತಿದ್ದಂತೆ ಇತ್ತ ಅಮೂಲ್ಯ ಅವರು ಸ್ಪೀಕರ್ ನಲ್ಲಿ ಇದ್ದೀನಿ ಎಂದು ಎಚ್ಚರಿಸಿದ್ದಾರೆ.


ನಾಚಿಕೊಂಡ ಜೋಡಿಗಳು

ಈ ಮಾತನ್ನು ಕೇಳುತ್ತಿದ್ದಂತೆಯೇ ನಿರೂಪಕಿ ಶಾಕ್ ಆಗಿದ್ದಾರೆ. ಎಷ್ಟು ವರ್ಷದಿಂದ ಈ ಸತ್ಯವನ್ನು ಮುಚ್ಚಿಟ್ಟಿದ್ದೀರಾ. ಮದುವೆಗೆ ಕರೆಯದಿದ್ದರೂ ಪರವಾಗಿಲ್ಲ. ಎಂದು ಕಾಮಿಡಿ ಮಾಡುತ್ತಾರೆ. ನಿರಂಜನ್ ಆಕ್ಟ್ ಮಾಡಲು ಮುಂದಾಗುತ್ತಾರೆ. ಆದರೆ, ನಿರಂಜನ್ ಅವರ ನಗು ಹಾಗೂ ಅಮೂಲ್ಯ ಮುಖದಲ್ಲಿನ ನಾಚಿಕೆ ಎರಡೂ ಇಬ್ಬರೂ ಗುಟ್ಟಾಗಿ ಪ್ರೀತಿಸುತ್ತಿದ್ದಾರೆ ಎಂಬ ಸತ್ಯವನ್ನು ತಿಳಿಸಿಕೊಟ್ಟಿದೆ. ಈ ವಿಚಾರವನ್ನು ಕೇಳಿದ ಅಭಿಮಾನಿಗಳು ಫುಲ್ ಹ್ಯಾಪಿ ಆಗಿದ್ದಾರೆ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X