ಮಾಡೆಲಿಂಗ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ 'ಕಮಲಿ' ಧಾರಾವಾಹಿ ನಟಿ ರಚನಾ

By ಪೂರ್ವ

ಬದುಕಿನಲ್ಲಿ ಆಸಕ್ತಿ ಇದ್ದರೆ ಮಾತ್ರ ಯಾವುದಾದರೂ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಜನ ಗುರುತಿಸಲು ಸಾಧ್ಯ. ಅದಕ್ಕೆ ಪ್ರಸಕ್ತ ಉದಾಹರಣೆ ರಚನಾ ಸ್ಮಿತ್. ಅಷ್ಟಕ್ಕೂ ರಚನಾ ಸ್ಮಿತ್ ಎಂದ ಕೂಡಲೇ ಯಾರಪ್ಪಾ ಎಂಬ ಕುತೂಹಲ ಮೂಡುವುದು ಸಹಜ. ಯಾಕೆಂದರೆ ಆಕೆ ಅನಿಕಾ ಎಂದೇ ಫೇಮಸ್ಸು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಮಲಿ' ಧಾರಾವಾಹಿಯಲ್ಲಿ ಬ್ಯೂಟಿಫುಲ್ ವಿಲನ್ ಅನಿಕಾ ಅವತಾರದಲ್ಲಿ ವೀಕ್ಷಕರ ಮನ ಗೆದ್ದಿದ್ದಾರೆ.

ರಚನಾ ಸ್ಮಿತ್ ಮಾಡೆಲಿಂಗ್‌ ಮೂಲಕ ಬಣ್ಣದ ಜಗತ್ತಿಗೆ ಪರಿಚಿತರಾದ ಚೆಂದುಳ್ಳಿ ಚೆಲುವೆ. 'ಕಮಲಿ' ಧಾರಾವಾಹಿಯಲ್ಲಿ ಖಡಕ್ ಖಳನಾಯಕಿ ಅನಿಕಾ ಪಾತ್ರದಲ್ಲಿ ಮಿಂಚುತ್ತಿರುವ ರಚನಾಗೆ ಬಾಲ್ಯದಿಂದಲೂ ಮಾಡೆಲಿಂಗ್ ಎಂದರೆ ಅಪಾರ ಆಸಕ್ತಿ. ತನ್ನ ಹದಿನೇಳನೇ ವಯಸ್ಸಿಗೆ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟ ರಚನಾ ಹಿಂದಿಯ ಖಾಸಗಿ ಕಂಪನಿ ಆಯೋಜಿಸಿದ್ದ ಮಾಡೆಲಿಂಗ್ ಸ್ಪರ್ಧೆಯಲ್ಲಿ ಬೆಂಗಳೂರಿನಿಂದ ಆಯ್ಕೆಯಾದ ಇಬ್ಬರಲ್ಲಿ ರಚನಾ ಸ್ಮಿತ್ ಕೂಡಾ ಒಬ್ಬರು. ಅಷ್ಟೇ ಅಲ್ಲ, ನಂತರ ಟಾಪ್ -12 ಸ್ಪರ್ಧಿಗಳಲ್ಲಿ ಇವರು ಕೂಡಾ ಒಬ್ಬರಾಗಿ ಆಯ್ಕೆಯಾಗಿದ್ದರು.

ಅಮ್ಮನ ಮುದ್ದಿನ ಮಗಳು ರಚನಾ ಸ್ಮಿತ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಕಮಲಿ'ಯಲ್ಲಿ ಬ್ಯೂಟಿಫುಲ್ ವಿಲನ್ ಅನಿಕಾ ಮಹಾಜನ್ ಅವತಾರವೆತ್ತಿ ಕನ್ನಡ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದಾರೆ. ಚೆಂದುಳ್ಳಿ ಚೆಲುವೆ ರಚನಾ ಸ್ಮಿತ್ ಅದ್ಭುತ ಅಭಿನಯದ ಮೂಲಕ ಸೀರಿಯಲ್ ಲೋಕದಲ್ಲಿ ಮನೆ ಮಾತಾಗಿದ್ದಾರೆ. ಬೆಳ್ಳಿತೆರೆಯ ಮೂಲಕ ನಟನಾ ಪಯಣ ಶುರು ಮಾಡಿದ್ದ ರಚನಾಗೆ ಜನಪ್ರಿಯತೆ ದೊರಕಿದ್ದು 'ಕಮಲಿ'ಯ ಅನಿಕಾ ಆಗಿ ಬದಲಾದ ಬಳಿಕವೇ. ಮೊದಲ ಧಾರಾವಾಹಿಯಲ್ಲಿಯೇ ಖಳನಾಯಕಿಯಾಗಿ ಮಿಂಚಿದ್ದ ರಚನಾ ಸ್ಮಿತ್ ಇಂದು ಕಿರುತೆರೆ ಲೋಕದಲ್ಲಿ ಅದೆಷ್ಟು ಫೇಮಸ್ಸು ಎಂದರೆ, ಹಲವರಿಗೆ ಆಕೆಯ ನಿಜವಾದ ಹೆಸರು ರಚನಾ ಎಂದೇ ಗೊತ್ತಿಲ್ಲ. ಆಕೆ ಇಂದು ಎಲ್ಲೇ ಹೋದರೂ ಜನ ಈ ನಟಿಯನ್ನು ಗುರುತಿಸುವುದು ಅನಿಕಾ ಅಂತಲೇ. ಅಷ್ಟರ ಮಟ್ಟಿಗೆ ಆ ಪಾತ್ರ ಜನರಿಗೆ ಹಿಡಿಸಿದೆ. ಬೆಳ್ಳಿತೆರೆಯಿಂದ ಕಿರುತೆರೆಗೆ ಕಾಲಿಟ್ಟ ಮೋಹಕ ಬೆಡಗಿ ರಚನಾ ಇದೀಗ ಬೆಳ್ಳಿತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.

Zee Kannada Kamali Serial Actress Rachana Smith Biography and Life Journey

ಮುರುಗ ಆಲಿಯಾಸ್ ಮುನಿಕೃಷ್ಣ ಅಭಿನಯದ 'ಕೊಡೆಮುರುಗ' ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. 'ವರದನಾಯಕ', 'ವಿಕ್ಟರಿ', 'ಗೆಸ್ಟ್ ಹೌಸ್' ಮುಂತಾದ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ರಂಜಿಸಿದ ರಚನಾ ಸ್ಮಿತ್ ಇದೀಗ 'ಕೊಡೆ ಮುರುಗ' ಸಿನಿಮಾದಲ್ಲಿ ಡಾಕ್ಟರ್ ಆಗಿ ನಟಿಸಿದ್ದಾರೆ. ರಚನಾ ಸ್ಮಿತ್ ಬಣ್ಣದ ಲೋಕಕ್ಕೆ ಕಾಲಿಟ್ಟು ಬರೋಬ್ಬರಿ 9 ವರ್ಷಗಳು ಕಳೆದಿದೆ. ಇಂದು ರಚನಾ ನಟನಾ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರೆ ಅದಕ್ಕೆ 'ಕಮಲಿ' ಧಾರಾವಾಹಿಯೇ ಕಾರಣ.

Zee Kannada Kamali Serial Actress Rachana Smith Biography and Life Journey

ಕಿರುತೆರೆಯಲ್ಲಿ ಭಾಗವಹಿಸಿದ್ದ ರಚನಾ

ಮಾಡೆಲಿಂಗ್ ಮೂಲಕ ಬಣ್ಣದ ನಂಟು ಬೆಳೆಸಿಕೊಂಡ ರಚನಾ, ಮೊದಲ ಬಾರಿ ರ್ಯಾಂಪ್ ವಾಕ್ ಮಾಡಿದಾಗ ಬರೀ ಹದಿನೇಳು ವರ್ಷ. ಹಿಂದಿಯ ಖಾಸಗಿ ಟಿವಿಯಲ್ಲಿ ಆಯೋಜಿಸಿದ್ದ ಮಾಡೆಲಿಂಗ್ ಸ್ಪರ್ಧೆಯಲ್ಲಿ ಬೆಂಗಳೂರಿನಿಂದ ಇಬ್ಬರು ಆಯ್ಕೆಯಾಗಿದ್ದು ಅದರಲ್ಲಿ ಒಬ್ಬರು ರಚನಾ ಸ್ಮಿತ್. ಒಂದಷ್ಟು ಫ್ಯಾಷನ್ ಶೋಗಳಲ್ಲಿ ಹೆಜ್ಜೆ ಹಾಕಿರುವ ರಚನಾ ಕಿರುತೆರೆ ಪಯಣ ಶುರುವಾಗಿದ್ದು ರಿಯಾಲಿಟಿ ಶೋ ಮೂಲಕ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲೈಫ್ ಸೂಪರ್ ಗುರು ರಿಯಾಲಿಟಿ ಶೋ ವಿನಲ್ಲಿ ಭಾಗವಹಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ರಚನಾ ಅಲ್ಲೂ ಸೈ ಎನಿಸಿಕೊಂಡಾಕೆ.

'ಕಮಲಿ'ಯಲ್ಲಿ ಖಳನಾಯಕಿಯಾಗಿ ನಟಿಸಿ, ಕಿರುತೆರೆ ವೀಕ್ಷಕರ ಮನ ಗೆದ್ದಿರುವ ರಚನಾ ಈ ಬಾರಿಯ ಜೀ ಕುಟುಂಬ ಅವಾರ್ಡ್‌ನಲ್ಲಿ ಬೆಸ್ಟ್ ವಿಲನ್ ಪ್ರಶಸ್ತಿ ಪಡೆದಿದ್ದಾರೆ. ಇಷ್ಟು ದಿನ ಸೀರಿಯಲ್ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ರಚನಾ ಇದೀಗ ಸಿನಿಮಾ ಮೂಲಕ ಮನರಂಜನೆ ನೀಡುತ್ತಿದ್ದಾರೆ.

More from Filmibeat

English summary
Zee Kannada Kamali Serial Actress Rachana Smith Biography and Life Journey. Hear is more details about Rachana Simth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X