Karna Serial: ಮೆಡಿಕಲ್ ಕಾಲೇಜಿಗೆ ಟಾಪರ್ ಆದ ನಿಧಿ; ಕರ್ಣನಿಂದ ಅದ್ದೂರಿ ಸೆಲೆಬ್ರೇಷನ್

ಕನ್ನಡ ಕಿರುತೆರೆಯ ಇತ್ತೀಚಿನ ಕ್ರೇಜ್ ಅಂದ್ರೆ ಅದು 'ಕರ್ಣ' ಧಾರಾವಾಹಿ. ಈ ಸೀರಿಯಲ್ ಪ್ರತಿ ಸಂಚಿಕೆಯಲ್ಲೂ ಹೊಸ ಟ್ವಿಸ್ಟ್ ನೀಡುತ್ತಾ ವೀಕ್ಷಕರನ್ನ ಸೆಳೆಯುತ್ತಿದೆ. ಈಗ ಕಥೆಯಲ್ಲಿ ಕರ್ಣ ಮತ್ತು ನಿಧಿಯ ಜೀವನದ ಒಂದು ಮುಖ್ಯ ಘಟ್ಟದ ಬಗ್ಗೆ ಚರ್ಚೆ ಶುರುವಾಗಿದೆ.

ನಮ್ಮ ಕಥಾನಾಯಕಿ ನಿಧಿ ಈಗ ಕಾಲೇಜು ಜೀವನ ಮುಗಿಸಿ ಹೊರಬಂದಿದ್ದಾಳೆ. ಕೇವಲ ಪದವಿ ಅಷ್ಟೇ ಅಲ್ಲ, ಇಡೀ ಮೆಡಿಕಲ್ ಕಾಲೇಜಿಗೆ ಆಕೆ ಟಾಪರ್ ಆಗಿದ್ದಾಳೆ. ಈ ಸಾಧನೆಯಿಂದ ನಿಧಿ ಮನೆಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ.

Zee Kannada Karna serial written Update on February 12th episode

ನಿಧಿ ಯಶಸ್ಸನ್ನು ಕಂಡು ಕರ್ಣನ ಸಂತೋಷಕ್ಕೆ ಕೊನೆಯೇ ಇಲ್ಲ. ನಿಧಿಯ ಈ ವಿಶೇಷ ದಿನವನ್ನು ಮತ್ತಷ್ಟು ಕಲರ್ ಫುಲ್ ಮಾಡಲು ಕರ್ಣ ಪ್ಲ್ಯಾನ್ ಮಾಡಿದ್ದಾನೆ. ಆಕೆಯ ಈ ಅದ್ಭುತ ಸಾಧನೆಗೆ ಆತ ನೀಡಿದ ಉಡುಗೊರೆ ನೋಡಿ ವೀಕ್ಷಕರು ಫಿದಾ ಆಗಿದ್ದಾರೆ.

ಮೆಡಿಕಲ್ ಕಾಲೇಜಿಗೆ ನಿಧಿ ಟಾಪರ್...

ನಿಧಿ ಬಾಲ್ಯದಿಂದಲೂ ಕಲಿಕೆಯಲ್ಲಿ ತುಂಬಾ ಚುರುಕು. ಈಗ ಆಕೆಯ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ವಸಿಷ್ಠ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ವಿಭಾಗದಲ್ಲಿ ನಿಧಿ ಅತಿ ಹೆಚ್ಚು ಅಂಕ ಗಳಿಸಿದ್ದಾಳೆ. ಕಾಲೇಜಿನ ಮುಂಭಾಗದಲ್ಲಿ ನಿಧಿಯ ಭಾವಚಿತ್ರವಿರುವ ದೊಡ್ಡ ಬ್ಯಾನರ್ ಹಾಕಲಾಗಿದೆ. ಇದನ್ನು ನೋಡಿ ನಿಧಿ ಒಂದು ಕ್ಷಣ ಭಾವುಕಳಾಗಿದ್ದಾಳೆ. ತನ್ನ ಸಾಧನೆಯನ್ನು ಇಡೀ ಕಾಲೇಜು ಕೊಂಡಾಡುತ್ತಿರುವುದು ಆಕೆಗೆ ಹೆಮ್ಮೆ ತಂದಿದೆ.

ಕೇವಲ ಬ್ಯಾನರ್ ಹಾಕುವುದಕ್ಕೆ ಕರ್ಣ ಸುಮ್ಮನಾಗಿಲ್ಲ. ಕಾಲೇಜು ಆವರಣದಲ್ಲಿ ನಿಧಿಗಾಗಿ ಒಂದು ಅದ್ದೂರಿ ಮೆರವಣಿಗೆಯನ್ನೇ ಆಯೋಜಿಸಿದ್ದಾನೆ. ನಿಧಿಯನ್ನು ಹೊತ್ತು ಕುಣಿದಾಡುವ ಮೂಲಕ ತನ್ನ ಸಂತೋಷವನ್ನು ವ್ಯಕ್ತಪಡಿಸಿದ್ದಾನೆ. "ನಿನ್ನ ಈ ಸ್ಥಿತಿಯಲ್ಲಿ ನೋಡ್ತಿದ್ದೀನಲ್ಲ, ಇದು ನನ್ನ ಲೈಫ್ನಲ್ಲಿ ಸಿಕ್ಕ ಬೆಸ್ಟ್ ಗಿಫ್ಟ್" ಎಂದು ಕರ್ಣ ಹೇಳುವ ಮಾತುಗಳು ಮನಮಿಡಿಯುವಂತಿದೆ. ಇಬ್ಬರ ನಡುವಿನ ಈ ಬಾಂಧವ್ಯ ನೋಡುಗರಿಗೆ ಖುಷಿ ನೀಡುತ್ತಿದೆ.

ಆಸ್ಪತ್ರೆಗೆ ಸರ್ಜನ್ ಆಗಿ ಎಂಟ್ರಿ...

ಕಾಲೇಜು ದಿನಗಳು ಮುಗಿದ ಬೆನ್ನಲ್ಲೇ ನಿಧಿಗೆ ಮತ್ತೊಂದು ಶುಭ ಸುದ್ದಿ ಸಿಕ್ಕಿದೆ. ಆಕೆ ಇಂದಿನಿಂದಲೇ ವಸಿಷ್ಠ ಆಸ್ಪತ್ರೆಗೆ ಸರ್ಜನ್ ಆಗಿ ಕೆಲಸಕ್ಕೆ ಸೇರಿಕೊಳ್ಳಲಿದ್ದಾಳೆ. ಕಾಲೇಜಿನಲ್ಲಿ ಟಾಪರ್ ಆದ ಮೇಲೆ ಆಸ್ಪತ್ರೆಗೆ ದೊಡ್ಡ ಜವಾಬ್ದಾರಿಯೊಂದಿಗೆ ಹೆಜ್ಜೆ ಇಡುತ್ತಿದ್ದಾಳೆ. ಆಸ್ಪತ್ರೆಯ ಸಿಬ್ಬಂದಿ ಕೂಡ ಆಕೆಯನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಆದರೆ, ಕೆಲಸದ ಆರಂಭದಲ್ಲೇ ನಿಧಿಗೆ ಹೊಸ ಸವಾಲುಗಳು ಎದುರಾಗುತ್ತವೆಯೇ?

ನಿಧಿಯ ಯಶಸ್ಸು ಎಲ್ಲರಿಗೂ ಖುಷಿ ಕೊಟ್ಟರೆ, ಶತ್ರುಗಳಿಗೆ ಇದು ನುಂಗಲಾರದ ತುತ್ತಾಗಿದೆ. ನಿಧಿಯ ಬೆಳವಣಿಗೆಯನ್ನು ಸಹಿಸದವರು ಯಾವುದಾದರೂ ಸಂಚು ಹೂಡುತ್ತಾರಾ? ಆಸ್ಪತ್ರೆಯ ಕೆಲಸದ ಒತ್ತಡದಲ್ಲಿ ನಿಧಿ ಮತ್ತು ಕರ್ಣನ ಸಂಬಂಧ ಹೇಗಿರಲಿದೆ? ಇವೆಲ್ಲವನ್ನೂ ತಿಳಿಯಲು ನೀವು ಮುಂದಿನ ಸಂಚಿಕೆಗಳನ್ನು ತಪ್ಪದೇ ನೋಡಬೇಕು. ಒಟ್ಟಿನಲ್ಲಿ 'ಕರ್ಣ' ಧಾರಾವಾಹಿ ಈಗ ರೋಚಕ ಹಂತಕ್ಕೆ ತಲುಪಿದೆ.

More from Filmibeat

Read more about: serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X