ಜೀ ಕನ್ನಡ ಕುಟುಂಬ ಅವಾರ್ಡ್ಸ್ 2022: ಯಾವ ನಟರಿಗೆ ಯಾವ ಪ್ರಶಸ್ತಿ?
ಜೀ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿ, ರಿಯಾಲಿಟಿ ಶೋನ ಕಲಾವಿದರು, ತಂತ್ರಜ್ಞರು ಒಟ್ಟಿಗೆ ಸೇರುವ ಜೀ ಕನ್ನಡ ಕುಟುಂಬ ಅವಾರ್ಡ್ಸ್-2022 ಈ ಬಾರಿಯೂ ನಡೆದಿದ್ದು, ಅಭಿಮಾನದ ಪ್ರಶಸ್ತಿಯ ಮೆರುಗಲ್ಲಿ ಸಂಬಂಧಗಳನ್ನು ಸಂಭ್ರಮಿಸುವ ಹಬ್ಬ ಅದ್ಧೂರಿಯಾಗಿಯೇ ಆಚರಣೆಗೊಂಡಿದೆ. ಜೀ ಕನ್ನಡ ಕುಟುಂಬ ಅವಾರ್ಡ್ಸ್-2022 ಕಾರ್ಯಕ್ರಮಕ್ಕೆ ನಟ ನಟಿಯರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.
ಇನ್ನು ಅನೇಕ ನಟ ನಟಿಯರಿಗೆ ಬೆಸ್ಟ್ ಪೋಷಕ ನಟ. ಹಾಗೆಯೇ ನಾಯಕ ನಟ, ಬೆಸ್ಟ್ ತಂದೆ ಅವಾರ್ಡ್ ಗಳನ್ನು ಗೆದ್ದುಕೊಂಡು ಖುಷಿ ವ್ಯಕ್ತಪಡಿಸಿದರು. ಜೊತೆಗೆ ಕೆಲವು ಹಿರಿಯ ನಟ-ನಟಿಯರು ತಮ್ಮ ಜೀವನಾನುಭವವನ್ನು ವೇದಿಕೆ ಮೇಲೆ ಹಂಚಿಕೊಂಡರು. ಇನ್ನು ಕೆಲವರು ಧಾರಾವಾಹಿಯೊಟ್ಟಿಗಿನ, ಪ್ರೇಕ್ಷಕರೊಟ್ಟಿಗಿನ ಭಾವುಕ ಸಂಬಂಧದ ಬಗ್ಗೆ ಮಾತನಾಡಿದರು. ಹಲವು ನಟ-ನಟಿಯರು ಹಾಡಿ ಕುಣಿದು ರಂಜಿಸಿದರು. ಕೆಲವರು ಪ್ರೇಕ್ಷಕರನ್ನು ನಕ್ಕು ನಲಿಸಿದರು. ಉಮಾಶ್ರೀ ತಮ್ಮ ಬದುಕಿನ ಬಗ್ಗೆ ಹೇಳಿದ್ದು ಹೆಚ್ಚು ಗಮನ ಸೆಳೆಯಿತು.
ಇನ್ನು ಜೀ ಕನ್ನಡ ಧಾರಾವಾಹಿಯ ವಿಶೇಷ ಅಭಿಮಾನಿ ಸುಮಾ ಅವರನ್ನು ವೇದಿಕೆಯಲ್ಲಿ ಪರಿಚಯಿಸಲಾಯ್ತು. ಅವರಿಗೆ ಎರಡು ಕಣ್ಣು ಕಾಣುವುದಿಲ್ಲ. ಆದರೆ ಅವರು ಕಲಾವಿದರ ಧ್ವನಿ ಕೇಳಿ ಯಾರು ಎಂಬುವುದನ್ನು ಹೇಳುತ್ತಾರೆ. ಕಣ್ಣಿಲ್ಲದೆ ಇರಬಹುದು ಅವರು ಯಾವ ತರ ಮಾತನಾಡುತ್ತಾರೆ. ಅವರು ಯಾವ ತರ ಆಕ್ಟ್ ಮಾಡುತ್ತಾ ಇರಬಹುದು ಅನ್ನೋದನ್ನು ಕಲ್ಪನೆ ಮಾಡಿಕೊಳ್ಳುತ್ತೇವೆ. ಜೀ ಕನ್ನಡದಲ್ಲಿ ಧಾರವಾಹಿಗಳು ಬಹಳ ಚೆನ್ನಾಗಿ ಇರುತ್ತವೆ. ಪಾರು ಧಾರವಾಹಿ, ಹಿಟ್ಲರ್ ಕಲ್ಯಾಣ, ಜೊತೆ ಜೊತೆಯಲಿ, ಹೀಗೆ ಹಲವಾರು ಧಾರಾವಾಹಿಯನ್ನು ಪ್ರತಿ ದಿನ ಕೇಳಿಸಿ ಕೊಳ್ಳುತ್ತಾರಂತೆ. ಈ ಅಪರೂಪದ ಅಭಿಮಾನಿಗೆ ಅವಾರ್ಡ್ ಕೊಟ್ಟು ಸನ್ಮಾನ ಮಾಡಲಾಗುತ್ತದೆ.

ಅಭಿಷೇಕ್ ಕಾಲೆಳೆದ ಅನುಶ್ರೀ
ವೇದಿಕೆ ಮೇಲೆ ಅಭಿಷೇಕ್ ಅಂಬರೀಶ್ ಹಾಗೂ ರವಿಚಂದ್ರನ್ ಅನುಶ್ರೀ ಮೋಡಿ ಮಾಡಿದರು. ಇನ್ನು ಅವಾರ್ಡ್ ಕೊಡಲು ನಟಿ ಮಾಲಾಶ್ರೀ ಅವರು ಆಗಮಿಸಿದ ವೇಳೆ ರವಿಚಂದ್ರನ್ ಅವರನ್ನು ನೋಡಿ ಬಹಳ ಖುಷಿಪಟ್ಟರು. ಬಳಿಕ ರಾಮಾಚಾರಿ ಚಿತ್ರದ ಒಂದು ಹಾಡಿಗೆ ಡಾನ್ಸ್ ಮಾಡಿದ ಬಳಿಕ ನೆಚ್ಚಿನ ಮಗ ಅವಾರ್ಡ್ ಪುಟ್ಟಕ್ಕನ ಮಗಳು ಧಾರವಾಹಿ ಕಂಠಿ ಎಂದು ಜೋರಾಗಿ ಹೇಳುತ್ತಾರೆ.

ಕಾಂತರ ಚಿತ್ರವನ್ನು ಹಾಡಿ ಹೊಗಳಿದ ಅಚ್ಯುತ್
ಇನ್ನು 'ಕಾಂತಾರ' ಚಿತ್ರದ ಬಗ್ಗೆ ಮಾತನಾಡಿದ ನಟ ಅಚ್ಯುತ್ 'ಕಾಂತಾರ' ಚಿತ್ರ ಕನ್ನಡದಲ್ಲಿ ಮಾಡಿದ ಬಹಳ ಅದ್ಭುತ ಚಿತ್ರ. ಇದರಲ್ಲಿ ಆಕ್ಟ್ ಮಾಡುತ್ತಿದ್ದ ಜನರನ್ನು ಗುರುತಿಸುವ ಕೆಲಸ ಮಾಡುತ್ತಾ ಇದ್ದಾರೆ. ಇದನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ತುಂಬಾ ಖುಷಿ ಆಗುತ್ತದೆ ಎಂದು ಈ ಸಂದರ್ಭ ಹೇಳುತ್ತಾರೆ. 'ಹಿಟ್ಲರ್ ಕಲ್ಯಾಣ'ದ ಪೋಷಕ ನಟಿಯಾಗಿ ದುರ್ಗಾ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡರು. ಬಳಿಕ ಉತ್ತಮ ಮನರಂಜನಾ ಕಾರ್ಯಕ್ರಮಗಳು ಈ ವೇದಿಕೆಯಲ್ಲಿ ನಡೆಯಿತು.

ಪ್ರಶಸ್ತಿ ಗೆದ್ದ ನಟ-ನಟಿಯರು
ನೆಚ್ಚಿನ ಅಜ್ಜಿ ಅವಾರ್ಡ್ ಸತ್ಯ ಧಾರಾವಾಹಿಯ ಗಿರಿಜಮ್ಮನ ಪಾಲಾದರೆ ನೆಚ್ಚಿನ ಅತ್ತೆ ಅವಾರ್ಡ್ ಗಟ್ಟಿ ಮೇಳ ಧಾರವಾಹಿ ಪರಿಮಳ ಪಾಲಾಗಿದೆ. ನೆಚ್ಚಿನ ಸೊಸೆಯಾಗಿ 'ಪಾರು' ಧಾರಾವಾಹಿಯ ಪಾರು ಅವಾರ್ಡ್ ಸ್ವೀಕಾರ ಮಾಡಿದರು. ಇನ್ನು ನೆಚ್ಚಿನ ಅಳಿಯ ಆಗಿ ಸತ್ಯ ಧಾರಾವಾಹಿಯ ಕಾರ್ತಿಕ್ ಸೆಲೆಕ್ಟ್ ಆಗಿದ್ದಾರೆ. ನೆಚ್ಚಿನ ಪೋಷಕ ನಟನಾಗಿ ಪಾರು ಧಾರಾವಾಹಿಯ ವೀರಯ್ಯ ದೇವ ಸೆಲೆಕ್ಟ್ ಆಗಿದ್ದಾರೆ. ನೆಚ್ಚಿನ ನಾಯಕ ನಟನಾಗಿ ಹಿಟ್ಲರ್ ಕಲ್ಯಾಣ ಧಾರಾವಾಹಿಯ ಅಭಿರಾಮ್ ಜಯಶಂಕರ್ ಆಯ್ಕೆ ಆದರೆ ನೆಚ್ಚಿನ ನಾಯಕಿ ನಟಿ ಅವಾರ್ಡ್ ಇಬ್ಬರ ಪಾಲಾಗಿದೆ . ಹಿಟ್ಲರ್ ಕಲ್ಯಾಣ ಧಾರಾವಾಹಿಯ ಲೀಲಾಗೆ ಹಾಗೂ ಸತ್ಯ ಧಾರಾವಾಹಿಯ ಸತ್ಯಗೆ ಅವಾರ್ಡ್ ದೊರಕಿದೆ. ಜನ ಮೆಚ್ಚಿದ ಮಾವ ಆಗಿ ಪಾರು ಧಾರಾವಾಹಿಯ ರಘು ಸೆಲೆಕ್ಟ್ ಆಗಿದ್ದಾರೆ. ಹಾಗೆ ಹಲವಾರು ಜನ ಉತ್ತಮವಾಗಿ ಆಕ್ಟ್ ಮಾಡಿ ಜನರ ಮನ ಗೆದ್ದಿದ್ದಾರೆ. ಸಾಧಕರನ್ನು ಪ್ರೋತ್ಸಾಹಿಸಲು ಜೀ ಕನ್ನಡ ಉತ್ತಮ ಮನರಂಜನಾ ಕಾರ್ಯಕ್ರಮ ನೀಡುತ್ತಿರುವುದು ಖುಷಿಯ ಸಂಗತಿ.


Click it and Unblock the Notifications











