Zee Ganeshotsava: ಚಿತ್ರದುರ್ಗದಲ್ಲೇ ಶುರು ಗಗನಾ ಹವಾ; ಗುರು ಡ್ಯಾನ್ಸ್ ಮುಂದೆ ಶಿಷ್ಯಂದಿರು ಠುಸ್..!
ಜೀ ಕನ್ನಡದಲ್ಲಿ 'ಮಹಾನಟಿ' ಎಂಬ ರಿಯಾಲಿಟಿ ಶೋವೊಂದನ್ನು ಮೊದಲ ಬಾರಿಗೆ ಆರಂಭಿಸಿದ್ದರು. ಈ ಶೋ ಮಾತ್ರ ಅದ್ಭುತವಾಗಿ ಮೂಡಿ ಬಂದಿತ್ತು. ಅದರಲ್ಲಿ ಸಿಕ್ಕಾಪಟ್ಟೆ ಗಮನ ಸೆಳೆದಿದ್ದು ಮಾತ್ರ ಚಿತ್ರದುರ್ಗದ ಹುಡುಗಿ ಗಗನಾ ಬಾರಿ. ಆದರೆ ಗೆದ್ದಿದ್ದು ಪ್ರಿಯಾಂಕ. ಮಹಾನಟಿಗೆ ಉತ್ತಮ ರೆಸ್ಪಾನ್ಸ್ ಕೂಡ ಬಂದಿತ್ತು. ಮತ್ತೆ ಶೋ ಆರಂಭಿಸಿ ಎಂಬ ಬೇಡಿಕೆಗಳು ಶುರುವಾಗುತ್ತಿವೆ.
ಈ 'ಮಹಾನಟಿ' ವೇದಿಕೆಯಿಂದಾನೇ ಹಲವು ಪ್ರತಿಭೆಗಳು ಇಂಡಸ್ಟ್ರಿಗೆ ಪರಿಚಯವಾದಂತೆ ಆಯಿತು. ಕಲೆಯ ಬಗ್ಗೆ ಆಸಕ್ತಿ, ನಟನೆ ಬಗ್ಗೆ ಕ್ರೇಜ್ ಹೊಂದಿದ್ದಂತ ಪ್ರತಿಭೆಗಳಿಗೆ ಅದೊಂದು ಒಳ್ಳೆಯ ವೇದಿಕೆ ಆಗಿತ್ತು. ತಮ್ಮ ನಟನಾ ಶಕ್ತಿಯನ್ನು ಆ ಮೂಲಕ ಪ್ರದರ್ಶನ ಮಾಡಿದರು. ಇದೀಗ ಗಗನಾ ಬಾರೀ ತಮ್ಮದೇ ಊರಿಗೆ ಜೀ ಕನ್ನಡದಿಂದ ಹೋಗಿದ್ದಾರೆ. ಅಲ್ಲಿಯೇ ಶಿಷ್ಯಂದಿರು ಕೂಡ ಸಿಕ್ಕಿದ್ದಾರೆ.

ಕೋಟೆ ನಾಡಿನಲ್ಲಿ ಜೀ ಗಣೇಶೋತ್ಸವ
ಗಗನಾ ಮೂಲತಃ ಚಿತ್ರದುರ್ಗದ ಹುಡುಗಿ. 'ಮಹಾನಟಿ' ಶೋಗೆ ಆಯ್ಕೆಯಾಗಿದ್ದರು. ಆ ವೇದಿಕೆಯಲ್ಲೂ ಸಾಕಷ್ಟು ಬಾರಿ ತಮ್ಮ ದುರ್ಗವನ್ನು ನೆನೆದಿದ್ದಾರೆ. ದುರ್ಗದ ಬಗ್ಗೆ ಕೊಂಡಾಡಿದ್ದಾರೆ. ಇಂದು ಲಕ್ಷ್ಮೀ ನಿವಾಸ ಟೀಂ ಚಿತ್ರದುರ್ಗದಲ್ಲಿ ಗಣೇಶೋತ್ಸವ ಆಚರಿಸಿದ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಗಗನಾ, ಗಣೇಶನಿಗೆ ಪೂಜೆ ಸಲ್ಲಿಸಿ, ಒಂದು ನೃತ್ಯವನ್ನು ಮಾಡಿದ್ದಾರೆ.
ಚಿತ್ರದುರ್ಗದಲ್ಲಿ ಗಗನಾ ಮಾತು
ಸ್ವರ್ಗ ನಮ್ಮದುರ್ಗ.. ಇದು ಗಗನಾ ತನ್ನೂರನ್ನು ಯಾವಾಗಲೂ ನೆನೆಯುವ ಪರಿ. ಈಗ ದೊಡ್ಡ ವೇದಿಕೆ ಮೇಲೆ ನಿಂತು ತನ್ನೂರಿನ ಜನತೆ ಬಗ್ಗೆ ಮಾತನಾಡಿದ್ದಾರೆ. ಇಂದು ನಾನು ಇಷ್ಟು ದೊಡ್ಡ ವೇದಿಕೆಯಲ್ಲಿ ನಿಂತಿರುವುದಕ್ಕೆ ಜೀ ಕನ್ನಡ ಕಾರಣ. 8 ವರ್ಷದ ಹಿಂದೆ ಆ ಜಾಗದಲ್ಲಿ ನಿಂತು ನಾನು ನೋಡ್ತಾ ಇದ್ದೆ. ಆದರೆಇಂದು ಇಲ್ಲಿರುವುದು ನನಗೆ ತುಂಬಾನೇ ಹೆಮ್ಮೆ ಆಗ್ತಾ ಇದೆ. ನಮ್ಮವರೇ ನಮ್ಮನ್ನು ಹೊಗಳಿದಾಗ, ಹೊತ್ತು ಮೆರೆಸಿದಾಗ ಖುಷಿಯಾಗುತ್ತೆ. ಒಬ್ಬ ಸಾಮಾನ್ಯ ಹುಡುಗಿಯಾಗಿ ಇಲ್ಲಿಯ ತನಕ ಬಂದು ಸಾಧನೆ ಮಾಡಿರುವುದು ಖುಷಿ ಇದೆ ಎಂದಿದ್ದಾರೆ.

ಗಗನಾ ಶಿಷ್ಯಂದಿರ ಹೆಸರನ್ನೊಮ್ಮೆ ಕೇಳಿ
ಗಗನಾ ಡ್ಯಾನ್ಸ್ ಮಾಡುವುದರಲ್ಲಿ ಎಂಥ ಎಕ್ಸ್ಪರ್ಟ್ ಅನ್ನೋದು ಎಲ್ಲರಿಗೂ ಗೊತ್ತು. ಉಲ್ಲಾಸದ ಹೂ ಮಳೆ ಎಂಬ ಹಾಡು ಸಿಕ್ಕಿದರೆ ಸಾಕು, ಆ ಹಾಡಿಗೆ ಒಂದೇ ಸ್ಟೆಪ್ ಹಾಕೋದು. ಈಗ ಗಗನಾಗೆ ಶಿಷ್ಯಂದಿರು ಬೇರೆ ಸಿಕ್ಕವ್ರೆ. ಆ ಶಿಷ್ಯಂದಿರ ಹೆಸರೇಳುತ್ತಿದ್ದಂತೆ, ನನ್ನ ಡ್ಯಾನ್ಸ್‌ಗೆ ಶಿಷ್ಯಂದಿರಾಗವ್ರೆ ಅಂದ್ರೆ ಆ ಶಿಷ್ಯಂದಿರು ಇನ್ನೇಗಿರಬೇಡ ಅರ್ಥ ಮಾಡ್ಕೊಳಿ ಅಂತ ತನ್ನ ಶಿಷ್ಯಂದಿರ ಬಗ್ಗೆ ಗಗನಾಗೆ ಅನುಮಾನ. ಆನಂದ್, ಅವರನ್ನೆಲ್ಲ ವೇದಿಕೆ ಮೇಲೆ ಕರೆಸಿದರು. ನಂದ, ಚಮಚ, ಪೌಡರ್ ಎಂಬ ಮೂವರು ಗಗನಾ ಶಿಷ್ಯಂದಿರು.
ಗಗನಾ ಮುಂದೆ ಪೌಡರ್ ಢಮಾರ್..!
ಮೂವರು ವೇದಿಕೆ ಮೇಲೆ ಬಂದರು. ಗುರುವಿಗೆ ನಮಸ್ಕಾರ ಕೂಡ ಮಾಡಿದರು. ಆ ನಮಸ್ಕಾರ ನೋಡಿನೇ ಗಗನಾಗೆ ಶಾಕ್ ಆಗೋಯ್ತು. ಆಮೇಲೆ ತನ್ನ ಶಿಷ್ಯಂದಿರ ಜೊತೆಗೆ ಡ್ಯಾನ್ಸ್ ಸ್ಪರ್ಧೆಗೆ ನಿಂತರು ಗಗನಾ. ಆರಂಭದಲ್ಲಿ ಶಿಷ್ಯಂದಿರು ಗಗನಾ ಹಾಡಿದಂತೆಯೇ ಮಾಡುತ್ತಿದ್ದರು. ಆದರೆ ಎಷ್ಟೇ ಆಗಲಿ ಗುರುಗಳಲ್ಲವೇ, ತನ್ನ ಶಿಷ್ಯಂದಿರನ್ನೇ ಯಾಮಾರಿಸುವಷ್ಟು ಸಖತ್ ಸ್ಟೆಪ್ ಹಾಕಿದ್ದಾರೆ ಗಗನಾ. ಇದೊಂದು ತಮಾಷೆಯ ಭಾಗವೇ ಆಗಿತ್ತು. ಆದರೆ ಗಗನಾ ಮಾತ್ರ ತನ್ನೂರಿನ ಜನತೆ ಮುಂದೆ, ಅದರಲ್ಲೂ ಜೀ ಕನ್ನಡದ ಜೊತೆಗೆ ಗಣೇಶ ಹಬ್ಬ ಆಚರಿಸಿ ಫುಲ್ ಖುಷಿಯಾಗಿದ್ದಾರೆ.


Click it and Unblock the Notifications











