'ಗಟ್ಟಿಮೇಳ' ಕಥೆ ಮುಗೀತಾ? ಬರ್ತಿದೆ ತುಂಬು ಕುಟುಂಬದ ಹೊಸ ಕಥೆ

By ಪ್ರಿಯಾ ದೊರೆ

ಮನರಂಜನಾ ವಾಹಿನಿಗಳಲ್ಲಿ ಧಾರಾವಾಹಿಗಳಿಗೆ ಕಡಿಮೆ ಏನೂ ಇಲ್ಲ. ಒಂದಾದ ಮೇಲೆ ಒಂದರಂತೆ ಧಾರಾವಾಹಿಗಳು ಮೂಡಿ ಬರುತ್ತಲೇ ಇರುತ್ತವೆ.

ಜೀ ಕನ್ನಡ ವಾಹಿನಿ ಕಳೆದ 16 ವರ್ಷಗಳಿಂದ ಕನ್ನಡ ವೀಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ. ಒಂದಾದ ಮೇಲೆ ಒಂದರಂತೆ ವಿಭಿನ್ನ ಕಥೆಯುಳ್ಳ ಧಾರಾವಾಹಿಗಳು ಮೂಡಿ ಬರುತ್ತಲೇ ಇವೆ.

ಕುಟುಂಬಕ್ಕೆ ಹೆಚ್ಚು ಒತ್ತು ಕೊಡುವ ಜೀ ಕನ್ನಡ ವಾಹಿನಿ, ವೀಕ್ಷಕರಿಗೆ ಮೆಚ್ಚುಗೆಯಾಗುವಂತಹ ಕಥೆಗಳನ್ನು ಆರಿಸಿ, ಧಾರಾವಾಹಿಗಳು ಪ್ರಸಾರ ಮಾಡುತ್ತಾ ಬರ್ತಿದೆ. ಮೆಗಾ ಧಾರಾವಾಹಿಗಳ ಮೂಲಕ ಸಂಚಲನ ಸೃಷ್ಟಿಸುತ್ತಲೇ ಇದೆ.

Lakshmi-Nivasa-new-serial

ನಟಿ ಶ್ವೇತಾ ಕಮ್ ಬ್ಯಾಕ್

ನಟಿ ಶ್ವೇತಾ ಅಲಿಯಾಸ್ ವಿನೋದಿನಿ ಈಗ ಮತ್ತೆ ಕನ್ನಡ ಕಿರುತೆರೆಗೆ ಎಂಟ್ರಿಕೊಟ್ಟಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಹೊಸ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ವಿನೋದಿನಿ ಮೂಲತಃ ತಮಿಳುನಾಡಿನವರು. ಕನ್ನಡದ 'ಚೈತ್ರದ ಪ್ರೇಮಾಂಜಲಿ' ಸಿನಿಮಾ ಮೂಲಕ ಶ್ವೇತಾ ಎಂದೇ ಖ್ಯಾತಿ ಪಡೆದರು. ಕನ್ನಡದ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಚೈತ್ರದ ಪ್ರೇಮಾಂಜಲಿ', 'ಲಕ್ಷ್ಮೀ ಮಹಾಲಕ್ಷ್ಮೀ', 'ಕರ್ಪೂರದ ಗೊಂಬೆ', 'ಮಿನುಗುತಾರೆ', 'ನಮ್ಮ ಸಂಸಾರ ಆನಂದ ಸಾಗರ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರು.

ಜೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ

ಶ್ರೀಧರ್ ಎಂಬುವರನ್ನು ಮದುವೆಯಾದ ನಟಿ ವಿನೋದಿನಿ ಮನೆ, ಸಂಸಾರ ಎಂದು ಬ್ಯುಸಿಯಾಗಿ ಬಿಟ್ಟರು. ನಟನೆಗೆ ಗುಡ್ ಬೈ ಹೇಳಿದ್ದರು. ಇದೀಗ ಮತ್ತೆ ಧಾರಾವಾಹಿಯಲ್ಲಿ ನಟಿಸುವ ಮೂಲಕ ರೀ-ಎಂಟ್ರಿ ಕೊಟ್ಟಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಪ್ರಸಾರ ಕಾಣಲಿದೆ. ದೀಪಾವಳಿ ಹಬ್ಬದ ಪ್ರೋಮೋವನ್ನು ರಿಲೀಸ್ ಮಾಡಿದೆ. ಸಾಮಾನ್ಯ ಕುಟುಂಬದ ವ್ಯಕ್ತಿ ಶ್ರೀನಿವಾಸ್ ಎಂಬುವರು ಬ್ಯಾಂಕ್ ಒಂದರಲ್ಲಿ ಸೂಪರ್ ವೈಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀನಿವಾಸ್‌ಗೆ ಬದುಕಿನಲ್ಲಿ ಒಂದು ಸ್ವಂತ ಮನೆಯನ್ನು ಕಟ್ಟಬೇಕು ಎಂಬ ಆಸೆ.

Lakshmi-Nivasa-new-serial

ತುಂಬು ಕುಟುಂಬದ ಕಥೆ

ಶ್ರೀನಿವಾಸ್ ಅವರ ಪತ್ನಿ ಲಕ್ಷ್ಮೀ. ಆಕೆಗೆ ತನ್ನ ಹೆಣ್ಣು ಮಕ್ಕಳ ಮದುವೆ ಮಾಡಬೇಕು ಎಂಬುದೇ ದೊಡ್ಡ ಕನಸು. ಲಕ್ಷ್ಮೀ ಪಾತ್ರಕ್ಕೆ ನಟಿ ಶ್ವೇತಾ ಬಣ್ಣ ಹಚ್ಚಿದ್ದಾರೆ. ಧಾರಾವಾಹಿಯ ಪ್ರೋಮೋದಲ್ಲಿ ಮನೆ ಕಟ್ಟಿ ನೋಡು, ಒಂದು ಮದುವೆ ಮಾಡಿ ನೋಡು ಎಂದು ಹಂಬಲಿಸುವ ಪ್ರತೀ ತುಂಬು ಕುಟುಂಬದ ಕಥೆ ಲಕ್ಷ್ಮೀ ನಿವಾಸ ಎಂದು ಹೇಳಿದೆ. ಅತೀ ಶೀಘ್ರದಲ್ಲಿ ಧಾರಾವಾಹಿ ಪ್ರಸಾರ ಎಂದು ಹೇಳಲಾಗಿದೆ. ಹಾಗಾದರೆ, ಯಾವ ಧಾರಾವಾಹಿ ಮುಗಿಯುತ್ತೆ ಅನ್ನೋ ಕುತೂಹಲ ವೀಕ್ಷಕರಿಗೆ ಹೆಚ್ಚಾಗಿದೆ.

ಯಾವ ಧಾರಾವಾಹಿ ಅಂತ್ಯಗೊಳ್ಳುತ್ತೆ..?

ಸೋಶಿಯಲ್ ಮೀಡಿಯಾದಲ್ಲಿ ಪ್ರೋಮೋ ನೋಡುತ್ತಿದ್ದಂತೆ, ಕೆಲ ವೀಕ್ಷಕರು ಗೆಸ್ ಕೂಡ ಮಾಡಿದ್ದಾರೆ. 'ಗಟ್ಟಿಮೇಳ' ಧಾರಾವಾಹಿ ಮುಗಿಯಬಹುದು ಎಂದು ಊಹಿಸಿದ್ದಾರೆ. ಈಗಾಗಲೇ ಆ ಧಾರಾವಾಹಿ ಕೊನೆಯ ಹಂತ ತಲುಪಿದೆ. ವೇದಾಂತ್‌ಗೂ ತನ್ನ ತಂದೆ ಸೂರ್ಯ ನಾರಾಯಣ್ ಮಾಹಿತಿ ಸಿಕ್ಕಿದೆ. ಇನ್ನೇನು ವೇದಾಂತ್ ತಾಯಿ ವೈಜಯಂತಿನೇ ಎನ್ನುವ ವಿಚಾರ ತಿಳಿಯುವುದು ಬಾಕಿ ಇದೆ ಅಷ್ಟೇ. ಹೀಗಾಗಿ ಈ ಧಾರಾವಾಹಿ ಮುಕ್ತಾಯಗೊಳ್ಳುತ್ತಿದ್ದಂತೆ 'ಲಕ್ಷ್ಮೀ ನಿವಾಸ' ಧಾರಾವಾಹಿ ಮೂಡಿ ಬರುತ್ತದೆ ಎಂದು ನೀರೀಕ್ಷಿಸಿದ್ದಾರೆ. ಆದರೆ, ಈ ಬಗ್ಗೆ ವಾಹಿನಿ ಇನ್ನೂ ಯಾವುದೇ ಖಚಿತ ಮಾಹಿತಿ ನೀಡಿಲ್ಲ. ಕೆಲವರು ನಟಿ ಶ್ವೇತಾ ಕಮ್ ಬ್ಯಾಕ್ ಮಾಡಿರುವುದಕ್ಕೆ ಸಂತಸವನ್ನು ಕೂಡ ವ್ಯಕ್ತಪಡಿಸಿದ್ದಾರೆ.

More from Filmibeat

English summary
Zee kannada channel shared new serial lakshmi nivasa promo;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X