Cherika: ವೇಶ್ಯೆ ಪಾತ್ರ ಮಾಡಲು ಬಯಸಿದ 'ಲಕ್ಷ್ಮೀ ನಿವಾಸ' ಚೆಲ್ವಿ!
ಕಲಾವಿದರಿಗೆ ಯಾವ ಪಾತ್ರಗಳೇ ಸಿಗಲಿ ಆ ಪಾತ್ರಗಳಿಗೆ ಜೀವ ತುಂಬುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ತಮ್ಮದೇ ಆದ ಕನಸಿನ ಪಾತ್ರ ಅಥವಾ ಇಂಥದ್ದೊಂದು ಪಾತ್ರವನ್ನ ನಾನು ಮಾಡಬೇಕಿತ್ತು ಎಂದುಕೊಂಡರು, ಆ ಪಾತ್ರಗಳು ಆರಂಭದಲ್ಲಿಯೇ ಅರಸಿ ಬರುವುದಿಲ್ಲ. ಆದರೂ ಬಂದ ಪಾತ್ರಗಳನ್ನ ಜೀವಿಸುತ್ತಾ, ಇಷ್ಟದ ಪಾತ್ರಕ್ಕಾಗಿ ಮನಸ್ಸು ಹಾತೊರೆಯುತ್ತಾ ಇರುತ್ತದೆ. ಅಂಥದ್ದೊಂದು ಪಾತ್ರಕ್ಕಾಗಿ ನಟಿ ಅಮೃತಾ ಕಾಯುತ್ತಾ ಇದ್ದಾರೆ.
ನಟಿ ಚೆರಿಕಾ ಸಿನಿಮಾದಿಂದ ನಟನೆಯನ್ನು ಆರಂಭಿಸಿದವರು. ಆದರೆ ಸೀರಿಯಲ್ ಮೂಲಕ ಖ್ಯಾತಿ ಪಡೆದುಕೊಂಡರು. ಹಲವರು ಧಾರಾವಾಹಿಗಳಲ್ಲಿ, ವಿಭಿನ್ನ ಪಾತ್ರದ ಮೂಲಕ ಕಿರುತೆರೆ ವೀಕ್ಷಕರನ್ನ ಗೆದ್ದಿದ್ದಾರೆ. ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಮುಗ್ಧ ಹುಡುಗಿಯಾಗಿ ಅಭಿನಯಿಸ್ತಾ ಇದಾರೆ. ಆದರೂ ಅವರಿಷ್ಟದ ಪಾತ್ರದ ಬಗ್ಗೆ ಮಜಾ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

ಚೆಲ್ವಿ ಪಾತ್ರದಲ್ಲಿ ಚೆರಿಕಾ
'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ವೆಂಕಿಗೆ ಮಾತು ಬರೋದಿಲ್ಲ. ಆದರೆ ಮನಸ್ಸು ಮಾತ್ರ ಚಿನ್ನದಂತ ಹುಡುಗ. ಚೆಲ್ವಿಗೆ ಯಾರೂ ಇಲ್ಲ. ಅಮ್ಮ ಒಬ್ಬರೇ ಪ್ರಪಂಚ. ಅವರಿಗೂ ಕಣ್ಣು ಕಾಣಲ್ಲ. ಚೆಲ್ವಿ ಹಾಗೂ ವೆಂಕಿ ಮದುವೆಯಾಗಿದ್ದಾರೆ. ಇದು ಸೀರಿಯಲ್ ನಲ್ಲಿ. ಆದರೆ ಇಬ್ಬರು ರಿಯಲ್ ಲೈಫ್‌ನಲ್ಲೂ ಮದುವೆಯಾಗಿ ಎಂದು ಮೆಸೇಜಸ್‌ಗಳು ಬರುತ್ತವಂತೆ. ಚೆರಿಕಾ ನೀಡಿರುವ ತಮ್ಮ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.
ಅರಿಶಿನದ ದಾರ ತೆಗೆಯಲು ಮನವಿ
ಇನ್ನು ಚೆಲ್ವಿಯದ್ದು ಬಡತನ, ವೆಂಕಿಗೂ ಏನು ಇಲ್ಲ. ಮದುವೆಯಾದ ಮೇಲೆ ಕಟ್ಟಿದ ಅರಿಶಿನದ ದಾರದಲ್ಲಿಯೇ ಜೀವನ ನಡೆಸುತ್ತಿದ್ದಾಳೆ. ಇದು ವೀಕ್ಷಕರಿಗೆ ಅದರಲ್ಲೂ ಚೆಲ್ವಿ ಅಭಿಮಾನಿಗಳಿಗೆ ಇಷ್ಟವಾಗುತ್ತಿಲ್ಲ. ಹೀಗಾಗಿ ಮೊದಲು ಆ ಅರಿಶಿನದ ದಾರ ತೆಗೆದು ತಾಳಿ ಸರ ಹಾಕಿಕೊಳ್ಳುವಂತೆ ಮನವಿ ಬರುತ್ತಾ ಇದೆಯಂತೆ. ನಿರ್ದೇಶಕರು ಹೇಳಿದ ಮೇಲೆ ಚೆಲ್ವಿಯ ಅರಿಶಿನದ ದಾರ ಬದಲಾಗಬಹುದು.
ಚೆರಿಕಾಗಿತ್ತು ಹುಚ್ಚಿಯಾಗುವ ಆಸೆ
ಮೊದಲೇ ಹೇಳಿದಂತೆ ಕಲಾವಿದರಿಗೆ ತಮ್ಮದೇ ಆದ ಪಾತ್ರಗಳ ಆಯ್ಕೆ, ಪ್ರೀತಿ ಇರುತ್ತದೆ. ಅದರಂತೆ ಚೆರಿಕಾಗೂ ಹುಚ್ಚಿಯ ಪಾತ್ರದ ಆಸೆ ಇತ್ತಂತೆ. ಆ ಪಾತ್ರದ ಕನಸು ಈಗಾಗಲೇ ನನಸಾಗಿದೆ. 'ಮರಳಿ ಮನಸಾಗಿದೆ' ಧಾರಾವಾಹಿ ಬರ್ತಾ ಇತ್ತು. ಆ ಧಾರಾವಾಹಿಯಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ನಟಿಸಿದ್ದ ಚೆರಿಕಾ, ಹುಚ್ಚಿಯ ಪಾತ್ರ ನಿಭಾಯಿಸಿದ್ದರು. ಹೀಗಾಗಿ ಆ ಪಾತ್ರದ ಕನಸು ನನಸಾಗಿದ್ದು, ಇನ್ನು ಒಂದು ಪಾತ್ರ ಬಾಕಿ ಇದೆ. ಆ ಪಾತ್ರದ ಬಗ್ಗೆಯೂ ಚೆರಿಕಾ ಮಾತನಾಡಿದ್ದಾರೆ.
ವೇಶ್ಯೆ ಪಾತ್ರ ಬಯಸಿದ್ಯಾಕೆ?
ಚೆರಿಕಾ, ಚೆಲ್ವಿ ಪಾತ್ರವನ್ನು ಜೀವಿಸುತ್ತಿದ್ದಾರೆ. ಲಂಗ ದಾವಣಿ ಹಾಕಿ, ಬಡತನದ ಜೀವನದಲ್ಲಿರುವ ಒಬ್ಬಹೆಣ್ಣು ಮಗಳು ಹೇಗೆ ಇರುತ್ತಾಳೋ ಹಾಗೇ ನಟಿಸುತ್ತಿದ್ದಾರೆ. ಅವರ ತಾಯಿಗೆ ಚೆಲ್ವಿ ಪಾತ್ರದ ಮೇಕಪ್, ಹೇರ್ ಸ್ಟೈಲ್ ತುಂಬಾ ಇಷ್ಟವಂತೆ. ಆದರೆ ಸ್ವಲ್ಪ ದಪ್ಪ ಆಗಿದ್ದೀಯಾ ಅನ್ನೋ ದೂರನ್ನು ಹೇಳ್ತಾರಂತೆ. ಇದೆಲ್ಲೆವನ್ನು ಹೇಳಿದ ಚೆರಿಕಾ ಮತ್ತೊಂದು ಪಾತ್ರದ ಬಗ್ಗೆಯೂ ಮಾತನಾಡಿದ್ದಾರೆ. ಅದುವೇ ವೇಶ್ಯೆ ಪಾತ್ರ. ಆ ಪಾತ್ರವನ್ನ ಎಲ್ಲರೂ ಮಾಡುವುದಕ್ಕೆ ಆಗಲ್ಲ. ಅದೊಂದು ಚಾಲೆಂಜಿಂಗ್ ಪಾತ್ರ. ಹೀಗಾಗಿ ಪಾತ್ರಗಳ ಮೂಲಕ ಗುರುತಿಸಿಕೊಳ್ಳುವ ಸಲುವಾಗಿ ಅಂಥದ್ದೊಂದು ಪಾತ್ರ ಬೇಕು ಎಂದಿದ್ದಾರೆ.


Click it and Unblock the Notifications











