»   » ನಿಮ್ಮ ಮನೆ-ಮನಕ್ಕೆ 'ಮುದ್ದು ಗುಮ್ಮ'ನಾಗಿ ಬರ್ತಿರೋ ‘ಅಂಜಲಿ’

ನಿಮ್ಮ ಮನೆ-ಮನಕ್ಕೆ 'ಮುದ್ದು ಗುಮ್ಮ'ನಾಗಿ ಬರ್ತಿರೋ ‘ಅಂಜಲಿ’

Posted By:
Subscribe to Filmibeat Kannada

ಜೀ ಕನ್ನಡ ವಾಹಿನಿ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು, ಈವರೆಗೆ 'ಡ್ರಾಮ ಜ್ಯೂನಿಯರ್ಸ್' ನೋಡಲು ಎಲ್ಲಾ ಮನೆ ಮಂದಿ ಸರಿಯಾದ ಸಮಯಕ್ಕೆ, ಟಿವಿ ಎದುರು ಹಾಜರಾಗುತ್ತಿದ್ದವರು, ಇನ್ನುಮುಂದೆ 'ಮುದ್ದು ಗುಮ್ಮ ಅಂಜಲಿ'ಯನ್ನು ನೋಡಲು ಟಿವಿ ಮುಂದೆ ಕೂರುತ್ತಾರೆ.

ಯಾರಿ?, 'ಮುದ್ದು ಗುಮ್ಮ ಅಂಜಲಿ' ಅಂತ ಯೋಚನೆ ಮಾಡುತ್ತಿದ್ದೀರಾ, ಜಾಸ್ತಿ ಯೋಚನೆ ಮಾಡೋಕೆ ಹೋಗಬೇಡಿ, ಇನ್ನೇನು ಕೆಲವೇ ದಿನಗಳಲ್ಲಿ ನಿಮ್ಮ ಮನೆ-ಮನೆಯಲ್ಲಿ ಸಂಜೆ ಹಾಜರಾಗುತ್ತಾಳೆ. ಬಿಡಿ ಆವಾಗ್ಲೆ ನೋಡುವಿರಂತೆ.['ಡ್ರಾಮಾ'ದಲ್ಲಿ ಮಾತ್ರ ಅಲ್ಲ, ಓದಿನಲ್ಲೂ ಪುಟ್ಟರಾಜು ನಂ.1..!]

ಈವರೆಗೆ 'ಒಗ್ಗರಣೆ ಡಬ್ಬಿ' ಮೂಲಕ ಕನ್ನಡಿಗರ ಮನದಲ್ಲಿ ಚಿರವಾಗಿ ನಿಂತಿದ್ದ ಮುರಳಿ ಈಗ ಧಾರಾವಾಹಿಯ ನಿರ್ಮಾಣದತ್ತ ಮುಖ ಮಾಡಿದ್ದಾರೆ. 'ಮುದ್ದು ಗುಮ್ಮ ಅಂಜಲಿ' ಎಂಬ ವಿನೂತನ ಹಾರರ್ ಕಥಾನಕವನ್ನು, ಜೀ ವಾಹಿನಿಯ ವೀಕ್ಷಕರಿಗಾಗಿ ಅಂತಾನೇ ಅವರು ನಿರ್ಮಿಸುತ್ತಿದ್ದಾರೆ. ಮುಂದೆ ಓದಿ.....

ಹಾರರ್ ಕಥಾನಕ

ಈವರೆಗೆ ಬರೀ ಫ್ಯಾಮಿಲಿ ಡ್ರಾಮಾ, ತ್ರಿಕೋನ ಪ್ರೇಮಕಥೆಗಳು, ಕ್ರೈಂ ಸ್ಟೋರಿ ಹಿನ್ನೆಲೆಯ ಧಾರಾವಾಹಿಗಳನ್ನೇ ನೋಡಿ-ನೋಡಿ ಬೇಸತ್ತ ವೀಕ್ಷಕರಿಗೆ, ಇದೀಗ ಹಾರರ್ ಕಥೆಯನ್ನು ಹೊಂದಿರುವಂತಹ ಧಾರಾವಾಹಿಯನ್ನು ವೀಕ್ಷಿಸುವ ಅವಕಾಶವನ್ನು ಜೀ ವಾಹಿನಿ ಕಲ್ಪಿಸಿಕೊಟ್ಟಿದೆ.[ಎಕ್ಸ್ ಕ್ಲೂಸಿವ್:'ಡ್ರಾಮಾ ಜ್ಯೂನಿಯರ್ಸ್' ಗೆದ್ದ ಮಕ್ಕಳಿಗೆ ಸಿಕ್ಕ ಬಹುಮಾನ ಮೊತ್ತವೆಷ್ಟು?]

'ಮುದ್ದು ಗುಮ್ಮ ಅಂಜಲಿ' ಅಂದ್ರೆ?

ಇಲ್ಲಿ 'ಅಂಜಲಿ' ಎಂದರೆ ವಯಸ್ಸಿಗೆ ಬಂದನಂತರ, ಮರಣ ಹೊಂದಿದ ಅತೃಪ್ತ ಮಹಿಳೆಯ ಕಥೆಯಲ್ಲ. ಸುಮಾರು ಐದಾರು ವರ್ಷದ ಪುಟ್ಟ ಕಂದಮ್ಮ ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿ. ಬೇಬಿ ಶ್ರೀತಾ 'ಅಂಜಲಿ'ಯಾಗಿ ಈ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ.[ಜೀ ಕನ್ನಡದಲ್ಲಿ ಮುಂದಿನ ವಾರದಿಂದ ಹರಿಯಲಿದೆ 'ಮಹಾನದಿ']

ನಿರ್ದೇಶಕ ಯಾರು?

ಪ್ರಸ್ತುತ ಜೀವನದ ವಾಸ್ತವತೆಯನ್ನು ತಿಳಿದು ಬದುಕನ್ನು ಅರಿತುಕೊಳ್ಳಬಯಸುವ ಜೀವವೊಂದರ ಕಥೆಯನ್ನು ಹೇಳ ಹೊರಟಿರುವ, ಈ ಅಂಜಲಿ ಧಾರಾವಾಹಿಯನ್ನು ಎಂ.ಸಿ. ದಿಲೀಪ್‍ ಕುಮಾರ್ ನಿರ್ದೇಶನ ಮಾಡಲಿದ್ದಾರೆ.

ತಾರಾಗಣದಲ್ಲಿ ಯಾರ್ಯಾರಿದ್ದಾರೆ

ಹೊಸ ತರದ ಕಥೆ, ನಿರೂಪಣೆಯನ್ನು ಹೊಂದಿರುವ ಈ ಧಾರಾವಾಹಿಯ ಪ್ರಮುಖ ತಾರಾಗಣದಲ್ಲಿ ಋತು, ಶಿವಧ್ವಜ್, ಮಧು ಹೆಗಡೆ ಸೇರಿದಂತೆ ಕನ್ನಡ ಚಿತ್ರರಂಗದ ಹಿರಿಯ ಹಾಗೂ ಕಿರಿಯ ಕಲಾವಿದರೆಲ್ಲರೂ ಅಭಿನಯಿಸಿರುವುದು ವಿಶೇಷ. ಈ ಧಾರಾವಾಹಿಯ ಚಿತ್ರೀಕರಣಕ್ಕಾಗಿ ಬೆಂಗಳೂರು ಹೊರವಲಯದಲ್ಲಿ ಅದ್ಧೂರಿಯಾಗಿ ಸೆಟ್ಟನ್ನು ಕೂಡ ಹಾಕಲಾಗುತ್ತಿದೆ.

'ಅಂಜಲಿ' ಎಲ್ಲಾ ಮಕ್ಕಳಿಗೂ ಇಷ್ಟವಾಗುತ್ತಾಳೆ

'ಅಂಜಲಿ' ತನ್ನ ಮುದ್ದು ಮೊಗದಿಂದ, ಪುಟ್ಟ-ಪುಟ್ಟ ಮಕ್ಕಳೆಲ್ಲಾ ನೋಡಿ ಖುಷಿಪಡುವಂತಹ, ವಿನೂತನ ಆತ್ಮವಾಗಿ ಎಲ್ಲರ ಗಮನವನ್ನು ಸೆಳೆಯುತ್ತಾಳೆ. ಧನಾತ್ಮಕ ಅಂಶಗಳನ್ನು ನೆನೆಸಿಕೊಂಡು ಮಾತನಾಡುವ ಮುದ್ದು ಆತ್ಮವೊಂದು ಅಂಜಲಿ ರೂಪದಲ್ಲಿ ಕಿರುತೆರೆಯ ಮೇಲೆ ಮೂಡಿಬರಲಿದೆ.

'ಅಂಜಲಿ' ಬರೋದು ಯಾವಾಗ?

ಮಕ್ಕಳನ್ನು ಮೆಚ್ಚಿಸುವ ಮುದ್ದು ಗುಮ್ಮನಾಗಿ ಅಂಜಲಿ ಮೂಡಿಬರುತ್ತಿದ್ದು, ತನ್ನ ಸೂಪರ್ ನ್ಯಾಚುರಲ್ ಶಕ್ತಿಯ ಮೂಲಕ ಮಕ್ಕಳ ಮನಸ್ಸನ್ನು ಗೆಲ್ಲುವ ‘ಅಂಜಲಿ' ಜೀ ವಾಹಿನಿಯ ಮತ್ತೊಂದು ಕೊಡುಗೆಯಾಗಿದೆ. ಅಕ್ಟೋಬರ್ 3ರಿಂದ ಸಂಜೆ 6 ಗಂಟೆಗೆ 'ಅಂಜಲಿ' ಜೀ ವೀಕ್ಷಕರಿಗಾಗಿ, ಎಲ್ಲರ ಮನೆಗಳಲ್ಲಿ ಹಾಜರಾಗಲಿದ್ದಾಳೆ.

English summary
Kannada Entertainment Channel Zee Kannada has come up with a new serial called 'Anjali' which will go on air from October 3rd.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada