For Quick Alerts
  ALLOW NOTIFICATIONS  
  For Daily Alerts

  ಜೀ ಕನ್ನಡದಲ್ಲಿ ಹೊಸ ಧಾರಾವಾಹಿ 'ಕೃಷ್ಣ ಸುಂದರಿ' ಪ್ರಾರಂಭ

  |

  ಫಿಕ್ಷನ್ ಹಾಗೂ ನಾನ್-ಫಿಕ್ಷನ್ ಕಾರ್ಯಕ್ರಮಗಳಲ್ಲಿ ತನ್ನ ವಿನೂತನ ಪರಿಕಲ್ಪನೆಗಳಿಂದ ಮುಂಚೂಣಿಯಲ್ಲಿರುವ ಜೀ ಕನ್ನಡ ವಾಹಿನಿ ಹೊಸ ಧಾರಾವಾಹಿ 'ಕೃಷ್ಣ ಸುಂದರಿ'ಯನ್ನು ಪ್ರಾರಂಭಿಸಿದೆ.

  ಕಮಲಿ, ಪಾರು, ಗಟ್ಟಿಮೇಳ, ಜೊತೆ ಜೊತೆಯಲಿ, ಸತ್ಯ, ನಾಗಿಣಿ-2 ಹಾಗೂ ಬ್ರಹ್ಮಗಂಟು ಮುಂತಾದ ಸೂಪರ್ ಹಿಟ್ ಧಾರಾವಾಹಿಗಳನ್ನು ಪ್ರಸ್ತುತಪಡಿಸುತ್ತಿರುವ ಜೀ ಕನ್ನಡದ ಕಿರೀಟಕ್ಕೆ ಇದು ಮತ್ತೊಂದು ಗರಿಯಾಗಿದೆ.

  ಜೀ ಕನ್ನಡದಲ್ಲಿ ಈ ವಾರ ಡಬಲ್ ಧಮಾಕ: ಎರಡು ಹಿಟ್ ಚಿತ್ರಗಳು ಪ್ರಸಾರಜೀ ಕನ್ನಡದಲ್ಲಿ ಈ ವಾರ ಡಬಲ್ ಧಮಾಕ: ಎರಡು ಹಿಟ್ ಚಿತ್ರಗಳು ಪ್ರಸಾರ

  ಸಮಾಜಕ್ಕೆ ಅಂಟಿಕೊಂಡಿರುವ ಕಳಂಕಗಳನ್ನು ನಿವಾರಿಸುವ ನಿಟ್ಟಿನಲ್ಲಿ ಜೀ ಕನ್ನಡ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು ಈ ಧಾರಾವಾಹಿ ಮತ್ತೊಂದು ವಿನೂತನವಾದ ನೈಜ ಪರಿಕಲ್ಪನೆಯೊಂದಿಗೆ ವೀಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಮೇ 17ರಿಂದ ಸಂಜೆ 7.00 ಗಂಟೆಗೆ ವಾರದ ಏಳು ದಿನಗಳೂ ಈ ಧಾರಾವಾಹಿ ಪ್ರಸಾರವಾಗಲಿದೆ.

  'ಕೃಷ್ಣ ಸುಂದರಿ'ಯ ಕಥೆಯು ಸಾಧಾರಣವಾಗಿ ಕಾಣುವ ಗಾಯಕಿ ಶ್ಯಾಮ ಮೌಲ್ಯಗಳನ್ನು ಜೀವಿಸುವ ಶ್ರೀಮಂತ ಅಖಿಲ್ ನನ್ನು ಮದುವೆಯಾಗುತ್ತಾಳೆ. ಆದರೆ ಆಕೆಯ ಜೀವನದ ಏರಿಳಿತಗಳನ್ನು ಮೀರಿ ಪ್ರಯಾಣಿಸಿ ಪತಿಯ ಸಹಕಾರದಿಂದ ಖ್ಯಾತ ಗಾಯಕಿಯಾಗುತ್ತಾಳೆ. ಆಕೆ ಆಧ್ಯಾತ್ಮಿಕತೆಯತ್ತ ಹೊರಳುವ ಮೂಲಕ ಶ್ರೀಕೃಷ್ಣನನ್ನು ಆರಾಧಿಸುತ್ತಾಳೆ. ಶ್ರೀಕೃಷ್ಣನೇ ಆಕೆಗೆ ಮಾರ್ಗದರ್ಶನ ನೀಡಬೇಕೆಂದು ಬಯಸುತ್ತಾಳೆ. ಅಖಿಲ್ ಆಕೆಯ ಹೊರಗಿನ ಸೌಂದರ್ಯಕ್ಕಿಂತ ಆಕೆಯ ಆಂತರಿಕ ಸೌಂದರ್ಯವನ್ನು ಮೆಚ್ಚಿಕೊಳ್ಳುತ್ತಾನೆ. ಆತನ ಸತತ ಬೆಂಬಲ ಮತ್ತು ಉತ್ತೇಜನವು ಆಕೆಯನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ.

  ಶ್ಯಾಮ ಸುಂದರಿಯ ಉತ್ಸಾಹಕರ ಪ್ರಯಾಣವನ್ನು ಕಾಣಲು ಮೇ 17, 2021ರಿಂದ ಪ್ರತಿನಿತ್ಯ ಸಂಜೆ 7.00ಕ್ಕೆ ಜೀ ಕನ್ನಡ ಮತ್ತು ಜೀ ಕನ್ನಡ ಎಚ್.ಡಿ.ಯಲ್ಲಿ ಕೃಷ್ಣ ಸುಂದರಿಗೆ ಟ್ಯೂನ್ ಮಾಡಿಕೊಳ್ಳಿ.

  English summary
  Zee Kannada Launching New Serial Krishna sundari from May 17th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X