ಯಾವೆಲ್ಲಾ ಜಿಲ್ಲೆಯಿಂದ 'ಮಹಾನಟಿ' ಆಡಿಷನ್‌ಗೆ ಬಂದಿದ್ರು? ನಿಮ್ಮ ಊರಿನವರು ಇದ್ದಾರಾ ನೋಡಿ!

By ಎಸ್ ಸುಮಂತ್

ಒಬ್ಬೊಬ್ಬರಿಗೆ ಒಂದೊಂದು ಕ್ಷೇತ್ರದಲ್ಲಿ ಆಸಕ್ತಿ ಇರುತ್ತದೆ. ಅದರಲ್ಲೂ ನಟನಾ ಕ್ಷೇತ್ರ ಬಹಳ ಬೇಗನೇ ಎಂಥವರನ್ನು ಸೆಳೆದು ಬಿಡುತ್ತದೆ. ಆದರೆ ಪ್ರತಿಭೆ ಇದ್ದರು ಅವಕಾಶ ಸಿಗುವುದು ಕಷ್ಟ. ಅಂಥ ಅವಕಾಶ ವಂಚಿತರಿಗೆ, ಪ್ರತಿಭೆಯನ್ನು ಅನಾವರಣ ಮಾಡುವುದಕ್ಕೆ ಜೀ ಕನ್ನಡ ಅದ್ಭುತ ವೇದಿಕೆಯೊಂದನ್ನು ನೀಡಿದೆ. ಅದುವೆ ಮಹಾನಟಿ ಆಡಿಷನ್.

ಈಗಾಗಲೇ ಎಲ್ಲಾ ಜಿಲ್ಲೆಗಳಿಗೂ ಜೀ ಕನ್ನಡದ ಗಾಡಿ ಸಂಚರಿಸಿ, ಒಂದಷ್ಟು ಕಲಾವಿದರನ್ನು ಎತ್ತಾಕಿಕೊಂಡು ಬಂದಿದೆ. ಆ ಕಲಾವಿದರು ಮತ್ತೆ ಜಡ್ಜಸ್ ಗಳ ಮುಂದೆ ತಮ್ಮ ಪ್ರತಿಭೆ ತೋರಿಸಿ, ಮನಸ್ಸು ಗೆಲ್ಲಬೇಕಿದೆ. ಪ್ರೇಮಾ, ರಮೇಶ್ ಅರವಿಂದ್, ತರುಣ್ ಸುಧೀರ್, ನಿಶ್ವಿಕಾ ನಾಯ್ಡು ಅಂತಹ ಮಹಾನಟಿಯರು, ಅದ್ಭುತ ಕಲಾ ಆರಾಧಕರು ತೀರ್ಪುಗಾರರ ಸ್ಥಾನದಲ್ಲಿ ಕೂತಿದ್ದಾರೆ. ಹಾಗಾದ್ರೆ ಈ ಮಹಾನಟಿ ಆಡಿಷನ್‌ಗೆ ಯಾವೆಲ್ಲಾ ಜಿಲ್ಲೆಯಿಂದ ಪ್ರತಿಭಾವಂತರು ಬಂದಿದ್ದಾರೆ, ಯಾರೆಲ್ಲಾ ಆಯ್ಕೆ ಯಾದರು ಎಂಬ ಡಿಟೈಲ್ ಇಲ್ಲಿದೆ.

Zee kannada mahanati reality show Audition highlights who all are selected

ಒಬ್ಬೊಬ್ಬರದ್ದು ಒಂದೊಂದು ಪ್ರದರ್ಶನ

'ಮಹಾನಟಿ' ಆಡಿಷನ್ ಮೂಲಕ ತಮ್ಮ ಪ್ರತಿಭೆಯನ್ನು ಹೊರ ಹಾಕುವುದಕ್ಕೆ ಒಂದೊಳ್ಳೆ ವೇದಿಕೆ ಅಂತಾನೇ ಹೇಳಬಹುದು. ಹೀಗಾಗಿ ಸಾಕಷ್ಟು ಜನ ಇದರಲ್ಲಿ ಭಾಗವಹಿಸಿದ್ದಾರೆ. ಜಿಲ್ಲೆಗಳಲ್ಲೆಲ್ಲಾ ಆಡಿಷನ್ ನಡೆಸಿ, ಫೈನಲ್ ಆಯ್ಕೆಯಾದವರನ್ನು ಮತ್ತೆ ಆಡಿಷನ್ ಮಾಡಲಾಗಿದೆ. ಈ ಆಡಿಷನ್‌ನಲ್ಲಿ ತೀರ್ಪುಗಾರರ ಮುಂದೆ ವಿಭಿನ್ನವಾದ ಪ್ರದರ್ಶನವನ್ನೇ ನೀಡಿದ್ದಾರೆ.

ಮಹಾನಟಿಗೆ ರಾಜ್ಯಾದ್ಯಂತ ಸ್ಪರ್ಧೆ

ಶೋಗೆ ಮೊದಲೇ ಹೇಳಿದಂತೆ ರಾಜ್ಯಾದ್ಯಂತ ಆಡಿಷನ್ ನಡೆದಿದೆ. ಆದರೆ ಫೈನಲ್ ರೌಂಡ್‌ನಲ್ಲಿ ಬೆಂಗಳೂರು, ಶಿವಮೊಗ್ಗದ ತೀರ್ಥಹಳ್ಳಿ, ಶಿರಸಿ, ಚಿತ್ರದುರ್ಗ, ಮಂಗಳೂರು, ಮೈಸೂರು, ಚಿಕ್ಕಮಗಳೂರಿನ ತರಿಕೆರೆ, ದಾವಣಗೆರೆಯ ಹೊನ್ನಾಳಿ, ರಾಜಸ್ಥಾನದಿಂದ ತಮ್ಮ ಪ್ರತಿಭೆಯನ್ನು ವೇದಿಕೆ ಮೇಲೆ ಅನಾವರಣ ಮಾಡಿ ಗೆದ್ದಿದ್ದಾರೆ. ಮಹಾನಟಿಗೆ ಆಯ್ಕೆಯಾಗಿದ್ದಾರೆ. ಇನ್ನು ಶನಿವಾರ-ಭಾನುವಾರ ಇವರುಗಳ ಕಲೆಯಿಂದ ಒಳ್ಳೆ ಮನರಂಜನೆ ಸಿಗುವುದರಲ್ಲಿ ನೋ ಡೌಟ್.

Zee kannada mahanati reality show Audition highlights who all are selected

ಆಯ್ಕೆಯಾದವರು ಎಷ್ಟು ಜನ?

ತಮ್ಮ ಪ್ರತಿಭೆಯಿಂದಾನೇ ಗಮನ ಸೆಳೆದು ಆಯ್ಕೆಯಾದವರ ಪಟ್ಟಿ‌ ಇಲ್ಲಿದೆ. ಮಂಥರೆಯ ಪಾತ್ರದ ಮೂಲಕ ಪ್ರವಳಿಕ, ದೌರ್ಜನ್ಯಕ್ಕೊಳಗಾದ ಹೆಣ್ಣಿನ ಅಭಿನಯ ಮಾಡಿದ ಆಶಿಕಾ ಸೋಮಶೇಖರ್ ಮತ್ತು ಏರಿಸಿದ ಪಾತ್ರದಲ್ಲಿ ರಿಯಾ ಬಗರೆ, ಚಟಪಟ ಮಾತಿನಲ್ಲಿ ಗಗನಾ, ಮೀನು ಮಾರುತ್ತಾ ಬಂದ ಆರಾಧನಾ ಭಟ್, ಸೂಪರ್‌ ಕಾಪ್‌ ಆಗಿ ನಿರೋಷಿ, ಮಾವನಿಗೆ ಪ್ರೀತಿ ಹೇಳಿಕೊಳ್ಳುತ್ತಾ ಅಭಿನಯಿಸಿದ ಬಿಂದು ಹೊನ್ನಾಳಿ, ಮೂರು ಪಾತ್ರದಲ್ಲಿ ಗಮನ ಸೆಳೆದ ಧನ್ಯಶ್ರೀ, ಹಳ್ಳಿ ಸೊಗಡಿನಲ್ಲಿ ಗಮನ ಸೆಳೆದ ಪ್ರಿಯಾಂಕ, ಧ್ವನಿ ನೀಡಿ, ಕಣ್ಣೀರು ಹಾಕಿಸಿದ ಆಶಿಕಾ ಶರ್ಮಾ ತಮ್ಮ ಮನೋಜ್ಞ ಅಭಿನಯದ ಮೂಲಕ ಆಯ್ಕೆಯಾಗಿದ್ದಾರೆ.

ಕಣ್ಣೀರು, ನಗು ಎಲ್ಲವೂ ಇದೆ

ಒಂದು ರಿಯಾಲಿಟಿ ಶೋ ಎಂದರೆ ಎಲ್ಲರಿಗೂ ಒಂದೇ ಆಗಿರುವುದಿಲ್ಲ. ಒಬ್ಬರಿಗೆ ಪ್ಯಾಷನ್ ಆಗಿದ್ದರೆ ಇನ್ನೊಬ್ಬರಿಗೆ ಹೊಟ್ಟೆಪಾಡಾಗಿರುತ್ತದೆ. ಇಲ್ಲಿಯೂ ಆ ಕೆಲವೊಂದು ವಿಭಾಗಗಳು ಅನಾವರಣವಾಗುತ್ತಿವೆ. ಒಬ್ಬರ ಪ್ರತಿಭೆಯಿಂದ ಮನ ತುಂಬಿ ನಗು ಬಂದರೆ, ಇನ್ನು ಕೆಲವರ ಪ್ರತಿಭೆಯಿಂದ ಕಣ್ಣಾಲಿಗಳಲ್ಲಿ ನೀರು ತುಂಬಿಕೊಳ್ಳುವಂತಾಗಿದೆ. ಹೀಗಾಗಿ ಮಹಾನಟಿ ಆಡಿಷನ್ ತೀರ್ಪುಗಾರರಿಗೆ ಮಾತ್ರವಲ್ಲ ನೋಡುಗರಿಗೂ ಕರುಳು ಚುರ್ ಎನ್ನುವ ದೃಶ್ಯವನ್ನು ಕಟ್ಟಿಕೊಡುತ್ತಿದೆ, ಬದುಕಿನಲ್ಲಿ ಸ್ಪೂರ್ತಿಯನ್ನು ನೀಡುತ್ತಿದೆ. ಮನರಂಜನೆಯ ಜೊತೆಗೆ ಒಂದಷ್ಟು ಪ್ರೇರಣೆ ಸಿಗುತ್ತಿದೆ ಎಂದರೆ ತಪ್ಪಾಗಲ್ಲ.

More from Filmibeat

English summary
zee kannada reality show mahanati Written Update on March 31st episode. Here is the details about From which districts are involved in the Mahanati Audition;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X