Mahanati: ಮಗನಿಂದ ಹೊರಗೆ ಬಿದ್ದ ತಾಯಿ: ಬಿಂದು ನಟನೆಗೆ ಎಂಥವರು ಭಾವುಕ!

By ಎಸ್ ಸುಮಂತ್

ಮಹಾನಟಿ ವೇದಿಕೆಯಲ್ಲಿ ಅದೆಷ್ಟೋ ಭಾವನೆಗಳು ಮನಸ್ಸನ್ನು ತಟ್ಟುತ್ತವೆ. ಅದೆಷ್ಟೋ ಜೀವನದ ಸತ್ಯಗಳು ವೇದಿಕೆ ಮೇಲೆ ಅನಾವರಣವಾಗುತ್ತವೆ. ಅದೆಷ್ಟೋ ನೋವುಗಳು ಕಣ್ಣಮುಂದೆ ತೆರೆದುಕೊಳ್ಳುತ್ತವೆ. ಇದು ನಟನೆಯ ಅಥವಾ ನಿಜಕ್ಕೂ ನಮ್ಮ ಕಣ್ಣ ಮುಂದೆ ನಡೆಯುತ್ತಿರುವ ಸತ್ಯವಾ ಎಂಬಷ್ಟು ರಿಯಾಲಿಟಿಗೆ ಹತ್ತಿರವಾದಂತ ಕಥೆಗಳು ತೆರೆದುಕೊಳ್ಳುತ್ತವೆ. ಅಂಥ ಪ್ರತಿಭೆಗಳು ಮಹಾನಟಿ ವೇದಿಕೆಯಲ್ಲಿದ್ದು, ಅದ್ಭುತ ಅಭಿನಯವನ್ನೇ ಮಾಡುತ್ತಾರೆ.

ವಿದ್ಯಾವಂತರಾದರೂ, ಪ್ರಜ್ಞಾವಂತರಾದರೂ ಅದೆಷ್ಟೋ ಮಕ್ಕಳು ಈಗಲೂ ತಮ್ಮ ತಂದೆ ತಾಯಿಯನ್ನು ಸಾಕುವುದಕ್ಕೆ ಹೋಗಲ್ಲ. ಅನಾಥಶ್ರಮಕ್ಕೋ, ಕಾಣದೂರಿಗೋ ಬಿಟ್ಟು ಬರುತ್ತಾರೆ. ಇದು ಈಗಲೂ ನಡೆಯುತ್ತಲೆ ಇರುವ ಘಟನೆಗಳು‌. ಅದೇ ಸನ್ನಿವೇಶವನ್ನು ಇಂದು ಬಿಂದು ಹೊನ್ನಾಳಿ ವೇದಿಕೆ ಮೇಲೆ ಅಭಿನಯಿಸಿ, ಎಲ್ಲರ ಕಣ್ಣಲ್ಲೂ ನೀರು ತರಿಸಿದ್ದಾರೆ.

Zee kannada Mahanati reality show Bindu latest skit

ಅಪ್ಪಟ ತಾಯಿಯಂತೆ ನಟಿಸಿದ ಬಿಂದು

ಕೆಲವೊಂದಿಷ್ಟು ಮಂದಿಗೆ ವಯಸ್ಸಾದ ತಂದೆ-ತಾಯಿಯನ್ನು ಕಂಡರೆ ತಾತ್ಸಾರ, ಸಾಕಲಾರದ ಸಂಕಟ, ಅವರ ಜವಾಬ್ದಾರಿಯೇ ಹೆಚ್ಚಾದವರಂತೆ ಆಡುತ್ತಾರೆ. ಅದನ್ನೇ ತಾಯಿ ಕೂಡ ಯೋಚನೆ ಮಾಡಿದ್ದರೆ ಮಕ್ಕಳು ಹುಟ್ಟುತ್ತಲೂ ಇರಲಿಲ್ಲ, ದೊಡ್ಡವರು ಆಗುತ್ತಿರಲಿಲ್ಲ. ಆದರೆ ಬೆಳೆಯುತ್ತಾ ಬೆಳೆಯುತ್ತಾ ಮಕ್ಕಳಿಗೆ ಮಾತ್ರ ತಾಯಂದಿರು ಭಾರವಾಗಿ ಬಿಡುತ್ತಾರೆ. ಜವಬ್ದಾರಿಯಿಂದ ನುಳುಚಿಕೊಳ್ಳುವುದಕ್ಕೆ ನೋಡುತ್ತಿರುತ್ತಾರೆ. ಈಗ ಅಂಥಹದೊಂದು ಮನಕರಗುವ ದೃಶ್ಯದಲ್ಲಿ ಬಿಂದು ಹೊನ್ನಾಳಿ ಅಭಿನಯಿಸಿದ್ದಾರೆ.

ಮಗನನ್ನು ಹುಡುಕುತ್ತಿರುವ ತಾಯಿ

ಮಗನಿಗೆ ಭಾರವಾದ ಮೇಲೆ ಆ ತಾಯಿ ಇನ್ನೆಲ್ಲೋ ಇರುತ್ತಾರೆ. ಈಗ ಬಿಂದು ಹೊನ್ನಾಳಿ ದೇವಸ್ಥಾನದಲ್ಲಿ ಇದ್ದಾರೆ. ಮೂರು ದಿನವಾಗಿದೆ. ಮಗ ಈಗ ಬರಬಹುದು, ಆಗ ಬರಬಹುದು ಎಂದೇ ಕಾಯುತ್ತಿದ್ದಾಳೆ. ತಾಯಿಯ ಕೂಗು ಮಗನಿಗೆ ಕೇಳಿಸುತ್ತಿಲ್ಲ. ಆದರೆ ಆ ತಾಯಿಗೆ ಮಗನ ಹೊರತಾಗಿ ಬೇರೆ ಯಾರು ಗೊತ್ತಿಲ್ಲ. ಯಾರೇ ಬಂದರು ಅವರಲ್ಲಿ ಮಗನನ್ನು ಹುಡುಕುತ್ತಿದ್ದಾಳೆ. ಮಗನೇ ಬಂದ ಎಂದು ಸಂತಸ ಪಡುತ್ತಿದ್ದಾಳೆ. ಆದರೆ ಮಗ ಅವನಾಗಿರುವುದಿಲ್ಲ. ಆಗ ಆ ತಾಯಿಗೆ ಮತ್ತಷ್ಟು ದುಃಖ ಉಮ್ಮಳಿಸಿ ಬಂದಿದೆ.

Zee kannada Mahanati reality show Bindu latest skit

ಬಿಂದು ನಟನೆ ಸೂಪರ್

ಆ ತಾಯಿಗೆ ಜಾಗ ಹೊಸದು, ಜನ ಹೊಸದು. ಮಗ ಅಲ್ಲಿ ಯಾಕೆ ಬಿಟ್ಟು ಹೋದ ಗೊತ್ತಿಲ್ಲ. ಯಾರೋ ಯಾಕಮ್ಮ ನೀನು ಇಲ್ಲಿ ಇದ್ದೀಯ ಎಂದು ಕೇಳಿದಾಕ್ಷಣ ಅಳು ಜೋರಾಗಿದೆ. ನನ್ನ ಮಗನನ್ನು ಕಷ್ಟ ಪಟ್ಟು ಬೆಳೆಸಿದೆ. ನನಗೆ ಕಷ್ಟವಾದರೂ ಸರಿ ಅವನಿಗೆ ಕಷ್ಟವಾಗದಂತೆ ಬೆಳೆಸಿದೆ. ಅವನು ಓದಿದ್ದನ್ನು ಓದಿಸಿದೆ. ಅವನು ಇಷ್ಟಪಟ್ಟ ಹುಡುಗಿಯನ್ನೇ ಮದುವೆ ಮಾಡಿಕೊಟ್ಟೆ. ಆದರೆ ಸೊಸೆಗೆ ನಾನೇ ಇಷ್ಟವಾಗಲಿಲ್ಲ. ಅದಕ್ಕೆ ಮಗ ಇಲ್ಲಿ ಕರೆದು ತಂದು ಬಿಟ್ಟಿದ್ದಾನೆ. ಹಾಗಾದ್ರೆ ನಾನು ಮಾಡಿದ್ದೆಲ್ಲವೂ ತಪ್ಪಾ ಎಂದು ನೋವು ತೋಡಿಕೊಂಡಿದ್ದಾಳೆ.

ತಾಯಿಯ ಪ್ರೀತಿಗೆ ಸಮನಾರು

ಅದೆಷ್ಟೋ ಮನೆಯ ಸೊಸೆಯಂದಿರ ನಡವಳಿಕೆ ಇದು. ಅದರಲ್ಲಿ ಪ್ರೈವೆಸಿ ಎಂಬ ಹೆಸರಿನಲ್ಲಿ ಇತ್ತಿಚೆಗೆ ಅತ್ತೆ-ಮಾವನನ್ನು ನೋಡಿಕೊಳ್ಳುವ ಉಸಾಬರಿಗೇನೆ ಹೋಗುವುದಿಲ್ಲ. ಅನಾಥಶ್ರಮಕ್ಕೋ, ಮತ್ತೆಲ್ಲಿಗೋ ಕಳುಹಿಸುತ್ತಾರೆ. ನಿಜಕ್ಕೂ ಬಿಂದು ಹೊನ್ನಾಳಿಯ ಈ ನಟನೆ ಅದ್ಭುತವಾಗಿತ್ತು. ಅದೆಷ್ಟೋ‌ಜನರ ಕಣ್ಣು ತೆರೆಸಿದೆ. ಕಣ್ಣಲ್ಲಿ ನೀರು ಚೆಲ್ಲುವಂತೆ ಮಾಡಿದೆ. ನಿಜಕ್ಕೂ ತಂದೆ-ತಾಯಿಯ ಪರಿಸ್ಥಿತಿ ನೆನೆದು ನೋಡುಗರ ಕಣ್ಣಲ್ಲಿ ನೀರು ಬರಿಸಿದೆ. ಬಿಂದು ಹೊನ್ನಾಳಿಯ ನಟನೆಗೆ ಎಲ್ಲರು ಸೈ ಎಂದಿದ್ದಾರೆ.

More from Filmibeat

English summary
zee kannada reality show mahanati Written Update on May 18th episode. Here is the details about The son left his mother in the temple;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X