»   » ಸಾವಿರ ಸಂಚಿಕೆಗಳತ್ತ ಜೀ ಕನ್ನಡ 'ರಾಧಾ ಕಲ್ಯಾಣ'

ಸಾವಿರ ಸಂಚಿಕೆಗಳತ್ತ ಜೀ ಕನ್ನಡ 'ರಾಧಾ ಕಲ್ಯಾಣ'

Posted By:
Subscribe to Filmibeat Kannada

ಆಗರ್ಭ ಶ್ರೀಮಂತ ಮನೆಯತನದ ಹುಡುಗ ವಿಶು, ಬಡಶಾಸ್ತ್ರಿಯ ಮಗಳು ರಾಧಿಕಾ, ಇವರಿಬ್ಬರ ಅದ್ಭುತ ಪ್ರೇಮಕತೆಯ ಹಿನ್ನಲೆಯನ್ನಿಟ್ಟುಕೊಂಡು ಬಂದ 'ರಾಧಾ ಕಲ್ಯಾಣ' ಧಾರಾವಾಹಿ ಕರ್ನಾಟಕದ ಮನೆಮಾತಾಗಿದೆ. ಇವತ್ತಿಗೂ ಜೀ ಕನ್ನಡದಲ್ಲಿ ತುಂಬಿದ ಗೃಹಗಳಿಂದ ಪ್ರದರ್ಶಿತವಾಗುತ್ತಿರುವಂತೆ ಮಾಡಿರುವುದು ಕಡಿಮೆ ಸಾಧನೆಯೇನಲ್ಲ.

ಕೇವಲ "ಶ್ರೀಮಂತ ಮನೆತನದ ಹುಡುಗ ಹಾಗೂ ಬಡ ಮನೆತನದ ಹುಡುಗಿ" ಈ ರೀತಿಯ ಸಿದ್ಧ ಕತೆಯ ಸೂತ್ರಗಳನ್ನಿಟ್ಟುಕೊಂಡು ಬಂದ ಎಷ್ಟೋ ಧಾರಾವಾಹಿಗಳು ಕಣ್ಣು ಬಿಡುವ ಮುಂಚೆಯೇ ಕಣ್ಮುಚ್ಚುವ ಈ ದಿನಗಳಲ್ಲಿ, ಇವತ್ತಿಗೂ ಅಪಾರ ಅಭಿಮಾನಿ ಬಳಗವನ್ನಿಟ್ಟುಕೊಂಡು 700 ಸಂಚಿಕೆಗಳನ್ನ ಮುಗಿಸಿ 'ರಾಧಾ ಕಲ್ಯಾಣ', ಜೀ ವಾಹಿನಿಯ ಸಹಕಾರದೊಂದಿಗೆ ಸಾವಿರದತ್ತ ದಾಪುಗಾಲಿಡುತ್ತಿದೆ. [ವಿಲನ್ ಜೊತೆ ದುಬೈಗೆ ಪರಾರಿಯಾದ ವಿಶಾಖಾ!]

A still from Radha Kalyana

ಧಾರಾವಾಹಿಗಳು ಕೇವಲ ನೂರು ಸಂಚಿಕೆಗಳನ್ನ ಮುಗಿಸುವುದರೊಳಗೆ "ಏನ್ ಎಳಿತಾರಪ್ಪಾ" ಅನ್ನುವ ವೀಕ್ಷಕರ ಮಾತಿಗೆ ಅಪವಾದವನ್ನುವಂತೆ ರಾಧಾ ಕಲ್ಯಾಣವನ್ನ ಚಿತ್ರೀಕರಿಸಿದ್ದು ಜೀ ಕನ್ನಡದ ಹೆಮ್ಮೆ. ಕತೆಯಲ್ಲಾಗಲಿ, ಮೇಕಿಂಗ್ ವಿಷಯದಲ್ಲಾಗಲಿ ರಾಧಾ ಕಲ್ಯಾಣ ಯಾವತ್ತೂ ಕಾಂಪ್ರೊಮೈಸ್ ಮಾಡಿಕೊಂಡಿಲ್ಲ. ಕಥೆಯಲ್ಲಿ ಹಾಗೂ ಕಥೆಯನ್ನ ತೋರಿಸುವ ವಿಧಾನದಲ್ಲಿ ನವನವೀನತೆಗಳನ್ನ ಒಳಗೂಡಿಸಿಕೊಂಡು ಬಂದಿರುವುದೇ ರಾಧಾ ಕಲ್ಯಾಣದ ಯಶಸ್ಸಿನ ಗುಟ್ಟುಗಳಲ್ಲೊಂದಾಗಿದೆ ಎನ್ನುತ್ತದೆ ಧಾರಾವಾಹಿ ನಿರ್ಮಾಣ ಸಂಸ್ಥೆ ಅಶು ಬೆದ್ರ ವೆಂಚರ್.

ಅಕ್ಕ-ತಂಗಿಯರ ಸಾವಿರ ಕಥೆಗಳ ಧಾರಾವಾಹಿಗಳು ಬಂದು ಹೋಗಿದ್ದರೂ ಕೂಡ ರಾಧಾ ಕಲ್ಯಾಣ ಇವತ್ತಿಗೂ ವಿಭಿನ್ನವಾಗಿ ನೆಲೆಯೂರಿ ನಿಂತಿರುವುದಕ್ಕೆ ನೂರಾರು ಕಾರಣಗಳಿವೆ. ಅಕ್ಕನ ಸಂತೋಷಕ್ಕಾಗಿ ತನ್ನ ಗಂಡನನ್ನೇ ಬಿಟ್ಟು ಕೊಡುವ ರಾಧಿಕಾಳ ಸಹನೆ, ಸಾವಿರ ಅಡೆತಡೆಗಳು ಎದುರಾದರೂ ರಾಧಿಕಾಳ ಪ್ರೀತಿಯಲ್ಲಿ ದೇವರನ್ನೇ ಕಾಣುವ ವಿಶುವಿನ ಅಗಾಧ ಪ್ರೀತಿ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಸಾಕು ಮಗಳೆಂಬುದನ್ನೂ ನೋಡದೇ ಹೆತ್ತ ಮಗಳಿಗಿಂತಲೂ ಪ್ರೀತಿ ತುಂಬಿ ಕೊಡುವ ಶಾಸ್ತ್ರಿ ದಂಪತಿಗಳ ನಿಸ್ವಾರ್ಥ ಪ್ರೇಮ, ಶ್ರೀಮಂತಿಕೆಯ ಅಹಮ್ಮನ್ನ ತಲೆಯೊಳಗೆ ತುಂಬಿಕೊಂಡು ರಾಧಿಕಾಳನ್ನ ಬಿಡದೇ ಕಾಡಿದ ವಿಶಾಖಾಳ ದುರ್ಗುಣ, ಒಂದೇ ಮನೆಯಲ್ಲಿದ್ದರೂ ಮನೆಯನ್ನ ಹಾಳು ಮಾಡಲು ವಿಷ್ಣು ಪ್ರದೀಪ್ ಮಾಡೂವ ಕುತಂತ್ರಗಳು, ಮನೆಯ ಮಗನೆಂದುಕೊಂಡು ಬಂದು ಇಡೀ ಮನೆಯನ್ನೇ ಅಪೋಶನ ತೆಗೆದುಕೊಳ್ಳಲು ಹವಣಿಸುತ್ತಿರುವ ಶಾಂತನು ಎಂಬ ರಾಕ್ಷಸನ ರಾಕ್ಷಸೀ ಕೃತ್ಯಗಳು, ಇವೆಲ್ಲವೂ ಸೇರಿ ರಾಧಾ ಕಲ್ಯಾಣದ ಬಗ್ಗೆ ಜನರಿಗಿರುವ "ಪ್ರತಿ ದಿನದ ಪ್ರೀತಿ" ಯನ್ನ ಹೆಚ್ಚಿಸಿವೆ.

ರಾಧಾ ಕಲ್ಯಾಣ ಏಳುನೂರು ಸಂಚಿಕೆಗಳು ಪೂರ್ಣಗೊಂಡಿರುವ ಈ ಸಮಯದಲ್ಲಿ ರಾಧಾ ಕಲ್ಯಾಣದ ಹೆಜ್ಜೆಗುರುತುಗಳನ್ನ ಧಾರಾವಾಹಿ ಬಳಗ ಎಲ್ಲರೊಂದಿಗೆ ಸಂತಸದಿಂದ ಹಂಚಿಕೊಂಡಿದೆ. ರಾಧಾ ಕಲ್ಯಾಣವನ್ನ ಅದ್ಧೂರಿ ವೆಚ್ಚದೊಂದಿಗೆ ಪ್ರಾರಂಬಿಸಿದೆವು, ಪ್ರಾರಂಭದ ಸಂಚಿಕೆಯ ಸಮಾರಂಭಕ್ಕೆ ದುನಿಯಾ ವಿಜಿ, ರವಿಶಂಕರ್, ನವೀನ್ ಕೃಷ್ಣ ಸೇರಿದಂತೆ ಕಲಾವಿದರ ದಂಡೇ ನೆರೆದಿತ್ತು!

ನಾವು ಯುಗಾದಿ ಹಾಗೂ ದೀಪಾವಳಿ ಹಬ್ಬದ ದಿನಗಳೊಂದು ಅದ್ದೂರಿ ವೆಚ್ಚದ ಸಂಚಿಕೆಗಳನ್ನ ಚಿತ್ರಿಸಿದೆವು! ಧಾರಾವಾಹಿಯೊಂದರಲ್ಲಿ ಅತೀ ಹೆಚ್ಚು ಬಾರಿ ಜಿಮ್ಮಿ ಜಿಪ್ ಬಳಸಿ ಚಿತ್ರಿಸಿದೆವು. ಯಾರೂ ಮಾಡದ ರೀತಿಯಲ್ಲಿ ಎರಡು ಮದುವೆಗಳ ಚಿತ್ರೀಕರಣವನ್ನ ಅತ್ಯಂತ ದುಬಾರಿ ವೆಚ್ಚದಲ್ಲಿ ಕನ್ನಡಿಗರಿಗೆ ತೋರಿಸಿದೆವು, ಮತ್ತು ಆ ಮದುವೆಯಲ್ಲಿ ದುಬಾರಿ ರೋಲ್ಸ್ ರಾಯ್ಸ್ ಬಳಸಿಕೊಂಡು ಚಿತ್ರೀಕರಣ ನಡೆಸಿದೆವು ಎನ್ನುತ್ತದೆ ಅಶು ಬೆದ್ರ ವೆಂಚರ್ಸ್.

ಇಷ್ಟೆಲ್ಲ "ಮೊದಲು"ಗಳನ್ನ ಕೊಟ್ಟ ನಾವು, ಕನ್ನಡಿಗರಿಗೆ ಇನ್ನೇನಾದರೂ ವಿಶೇಷವಾದದ್ದನ್ನ ಕೊಡಬೇಕೆಂದು ಅನ್ನಿಸಿದಾಗ, ಸೀದಾ ರಾಧಾ ಕಲ್ಯಾಣ ಧಾರಾವಾಹಿಯ ಚಿತ್ರೀಕರಣವನ್ನ ದೂರದ ದುಬೈ, ಅಬುದಾಬಿ ಶಾರ್ಜಾಗಳಲ್ಲಿ ಚಿತ್ರಿಸಿದೆವು, ಧಾರಾವಾಹಿಯೊಂದರಲ್ಲಿ ವಿದೇಶದ ಚಿತ್ರೀಕರಣಗೊಂಡ ಬಗೆಯನ್ನ ಕನ್ನಡಿಗರು ತುಂಬು ಹೃದಯದಿಂದ ಸ್ವಾಗತಿಸಿದರು, ಇನ್ನು ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಿಸಿದರು.

ಅಷ್ಟೇ ಅಲ್ಲದೇ, ಭಾರತದ ರಮಣೀಯ ತಾಣಗಳಾದ ಗೋವಾದ ಬೀಚುಗಳು, ದೂದ್ ಸಾಗರ್ ನಂತಹ ಅದ್ಭುತ ತಾಣಗಳಲ್ಲಿ ರಾಧಾ ಕಲ್ಯಾಣದ ಕ್ಯಾಮೆರಾ ಓಡಾಡಿ ಬಂದಿದೆ, ಧಾರಾವಾಹಿಯಲ್ಲಿ ಕರ್ನಾಟಕದ ಕಲೆ ಸಂಸ್ಕೃತಿಗೆ ಹೆಚ್ಚಿನ ಮಹತ್ವ ನೀಡಿದೆ, ಕರ್ನಾಟಕದ ಜನಪ್ರಿಯ ಉತ್ಸವಗಳಾದ ಕೆಸರುಗದ್ದೆ ಓಟ, ಕಂಬಳ, ಯಕ್ಷಗಾನವನ್ನ ನಮ್ಮ ಕಥೆಯಲ್ಲಿ ಬಳಸಿಕೊಂಡು, ಅವುಗಳು ನಡೆಯುವ ಜಾಗಕ್ಕೇ ಹೋಗಿ ಚಿತ್ರೀಕರಿಸಿ ಕರ್ನಾಟಕದ ಮನೆ ಮನೆಗೆ ತೋರಿಸಲಾಯಿತು, ಎಲ್ಲದಕ್ಕಿಂತ ಮುಖ್ಯವಾಗಿ ಒಂದು ಕಾಲದ ಖ್ಯಾತ ಫ್ರೆಂಚ್ ನಟಿ ಮಾರಿಯಾನ ರಾಧಾ ಕಲ್ಯಾಣದಲ್ಲಿ ಅಭಿನಯಿಸುವಂತೆ ಮಾಡಿರುವುದು, ಕನ್ನಡದ ಖ್ಯಾತ ನಟರಾದ ಶಿವರಾಂ, ರಮೇಶ್ ಪಂಡಿತ್, ಕೀರ್ತಿರಾಜ್, ನಾಗೇಶ್ ಮಯ್ಯ, ಮುಂತಾದ ಕಲಾವಿದರು ಕೇವಲ ಅತಿಥಿ ನಟರಾಗಿ ರಾಧಾ ಕಲ್ಯಾಣದಲ್ಲಿ ಅಭಿನಯಿಸಿದ್ದಾರೆ.

ಕೇವಲ ಇದಿಷ್ಟು ಕೇವಲ ಮನರಂಜನೆಯ ಮಾತಾದರೆ, ರಾಧಾ ಕಲ್ಯಾಣ ಅದಿರಿಂದಾಚೆಗೂ ಯೋಚಿಸಿದೆ, ಧಾರಾವಾಹಿ ತಂಡ ಅನಾಥಾಶ್ರಮಗಳಿಗೆ ಭೇಟಿ ನೀಡಿದೆ, ಅಲ್ಲಿನ ಅಂಧ ಮಕ್ಕಳು ಹಾಗು ವೃದ್ಧರಿಗೆ ಕೈಲಾದ ಸಹಾಯ ಮಾಡಿದೆ, ಅವರೊಂದಿಗೆ ಕಾಲ ಕಳೆದಿದೆ, ಅವರ ನೋವಿನಲ್ಲಿ ಭಾಗಿಯಾಗಿದೆ, ತುಂಬಾ ಕಡುಬಡತನದಲ್ಲಿದ್ದ ವೃದ್ಧೆಯೊಬ್ಬರಿಗೆ ಮನೆಯನ್ನ ಕಟ್ಟಿಕೊಳ್ಳಲು ಧನಸಹಾಯ ಮಾಡಿದೆ ಎಂದು ಹೆಮ್ಮೆಯಿಂದ ಧಾರಾವಾಹಿಯನ್ನು ನಿರ್ಮಾಣ ಮಾಡಿರುವ ಅಶು ಬೆದ್ರ ವೆಂಚರ್ಸ್. (ಒನ್ಇಂಡಿಯಾ ಕನ್ನಡ)

English summary
Zee Kannada mega soap Radha Kalyna completes 700 episodes and successfully running towards 1000 episodes. Ashu Bedra Ventures Ashu has taken up risks with passion to give wonderful treat to family viewers of the television serials. Zee Kannada channel also came up for his support in supporting expenditure.
Please Wait while comments are loading...