ಇವ್ರು ಯಾರು ಅಂತ ಗೊತ್ತಾಯ್ತಾ? ಸದಾ ಲಂಗ ದಾವಣಿ ಹಾಕೋ ಹುಡುಗಿ ಈಕೆ?
'ನಾ ನಿನ್ನ ಬಿಡಲಾರೆ' ಧಾರಾವಾಹಿಯನ್ನ ಕಿರುತೆರೆ ವೀಕ್ಷಕರ ಫೇವರಿಟ್ ಎನಿಸಿಕೊಂಡಿದೆ. ಹೀಗಾಗಿಯೇ ಟಿಆರ್ಪಿ ಕೂಡ ಮೊದಲ ಸ್ಥಾನವನ್ನ ತಲುಪಿದೆ. ಕಥೆ ಕೂಡ ಅಷ್ಟೇ ಅದ್ಭುತವಾಗಿದೆ. ಅಕ್ಕ ತಂಗಿಯರ ಕಥೆಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಾ ಇದೆ.
ಈ ಧಾರಾವಾಹಿಯಲ್ಲಿ ದುರ್ಗಾ ಹಾಗೂ ಅಂಬಿಕಾ ಹೈಲೇಟ್. ಆದರೆ ತನ್ನ ಜೊತೆಗಿರೋ ದೇವಿಯೇ ತನ್ನ ಸತ್ತು ಹೋಗಿರೋ ಸ್ವಂತ ಅಕ್ಕ ಅನ್ನೋದು ದುರ್ಗಾಗೆ ಗೊತ್ತಾಗೋದು ಯಾವಾಗ ಎಂಬ ಕುತೂಹಲವೇ ಜಾಸ್ತಿಯಾಗಿದೆ.

ಸದ್ಯ ಅಕ್ಕ ತಂಗಿ ಇಬ್ಬರು ಸಿಟಿಯಲ್ಲಿದ್ದಾರೆ. ದುರ್ಗಾ ಹೇಗೋ ಶರತ್ ಫ್ಯಾಕ್ಟರಿಯಲ್ಲಿಯೇ ಕೆಲಸಕ್ಕೆ ಸೇರಿದ್ದಾಳೆ. ಆದರೆ ಚಿಕ್ಕಮ್ಮ ಪ್ರಭಾಗೆ ಮಾತ್ರ ಇನ್ನು ಸ್ವಾರ್ಥದ ಬುದ್ದಿ ಕಡಿಮೆ ಆಗಿಲ್ಲ. ದುರ್ಗಾಳನ್ನ ಮತ್ತೆ ಸ್ವಾಮೀಜಿಗೆ ಒಪ್ಪಿಸಬೇಕು ಎಂದುಕೊಂಡಿದ್ದಾಳೆ. ಆದರೆ ಅಂಬಿಕಾ ಅದಕ್ಕೆಲ್ಲಾ ಅವಕಾಶ ಕೊಡೋದೆ ಇಲ್ಲ. ಇದೆಲ್ಲ ಸೀರಿಯಲ್ ಸಮಾಚಾರ. ಆದ್ರೆ ರಿಯಲ್ ಆಗಿ ಒಂದು ಸಮಾಚಾರ ಇದೆ ನೋಡಿ.
ಮಾಡ್ರನ್ ಹುಡುಗಿ
ದುರ್ಗಾ ರಿಯಲ್ ಲೈಫ್‌ನಲ್ಲಿ ಮಾಡ್ರನ್ ಹುಡುಗಿ ಕೂಡ. ಅವರ ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಫಾಲೋವರ್ಸ್ ಇದಾರೆ. ಅವರು ಶೇರ್ ಮಾಡುವ ಒಂದೊಂದು ವಿಡಿಯೋ ಮಿಲಿಯನ್‌ಗಟ್ಟಲೇ ಓಡುತ್ತೆ. 'ನಾ ನಿನ್ನ ಬಿಡಲಾರೆ 'ಧಾರಾವಾಹಿಯಲ್ಲಿ ದುರ್ಗಾ ಆಗಿ ಅಭಿನಯಿಸ್ತಾ ಇರುವ ಇವರ ರಿಯಲ್ ಹೆಸರು ರಿಷಿಕಾ. ಸಿಕ್ಕಾಪಟ್ಟೆ ಮಾಡ್ರನ್ ನಟಿ ಕೂಡ.
ಸೀರಿಯಲ್‌ನಲ್ಲಿ ಟ್ರೆಡಿಷನಲ್
'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ದುರ್ಗಾ ಕಂಪ್ಲೀಟ್ ಗ್ರಾಮೀಣ ಭಾಗದ ಹುಡುಗಿಯರ ಲುಕ್ ಅನ್ನೇ ಮೇಂಟೈನ್ ಮಾಡಿದ್ದಾರೆ. ಅಂದ್ರೆ ಸದಾ ಕಾಲ ಲಂಗ ದಾವಣಿ ಹಾಕುವುದು, ಉದ್ದ ಜಡೆ ಹೆಣೆದುಕೊಳ್ಳುವುದು ಹೀಗೆ. ಯಾಕಂದ್ರೆ ಆ ಪಾತ್ರವೂ ಅದೇ ರೀತಿ ಇರುವ ಕಾರಣ ದುರ್ಗಾ ಪಾತ್ರಕ್ಕೆ ಯಾವ ರೀತಿಯ ಬಟ್ಟೆ ಹಾಕಬೇಕು, ಮೇಕಪ್ ಮಾಡಿಕೊಳ್ಳಬೇಕೊ ಅದೇ ರೀತಿ ಮಾಡಿಕೊಂಡಿರುತ್ತಾರೆ ರಿಷಿಕಾ. ಆ ರೀತಿಯ ಡ್ರೆಸ್ ನಲ್ಲಿಯೇ ತುಂಬಾ ಮುದ್ದಾಗಿ ಕಾಣಿಸುತ್ತಾರೆ.
ಹೊಸ ಲುಕ್‌ಗೆ ಫಿದಾ
ರಿಷಿಕಾ ಸೋಷಿಯಲ್ ಮೀಡಿಯಾ ನೋಡಿದವರಿಗೆ ಒಂದು ಕ್ಷಣ ಶಾಕ್ ಆಗದೆ ಇರುವುದಿಲ್ಲ. ನಿಜಕ್ಕೂ ಇದು 'ನಾ ನಿನ್ನ ಬಿಡಲಾರೆ' ಸೀರಿಯಲ್‌ನಲ್ಲಿ ದುರ್ಗಾ ಪಾತ್ರ ಮಾಡುವ ನಟಿನಾ ಎನಿಸುತ್ತದೆ. ಅವರ ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಅದರಲ್ಲಿ ಸ್ಕೂಲ್ ಸ್ಟೈಲ್ ಫೋಟೋಸ್, ಮಾಡ್ರನ್ ಡ್ರೆಸ್, ಗೌನ್ ರೀತಿಯ ಡ್ರೆಸ್‌ಗಳಲ್ಲೆಲ್ಲಾ ಪೋಸ್ ಕೊಟ್ಟಿರುವ ಫೋಟೋಗಳನ್ನ ಹಂಚಿಕೊಳ್ಳಲಾಗಿದೆ. ಆ ಫೋಟೋಗಳನ್ನು ನೋಡಿದವರು ಫಿದಾ ಆಗದೆ ಇರಲಾರರು.
ಹಲವು ಧಾರಾವಾಹಿಗಳಲ್ಲಿ ನಟನೆ
ದುರ್ಗಾ ಅಲಿಯಾಸ್ ರಿಷಿಕಾ ಈಗಾಗಲೇ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈ ಮೊದಲೇ 'ಕನ್ಯಾದಾನ' ಧಾರಾವಾಹಿಯಲ್ಲಿ ಐದು ಜನ ಹೆಣ್ಣುಮಕ್ಕಳಲ್ಲಿ ಇವರು ಒಬ್ಬರು. ಹಾಗೇ 'ಕನ್ಯಾಕುಮಾರಿ' ಧಾರಾವಾಹಿಯಲ್ಲೂ ನಟಿಸಿದ್ದಾರೆ. ಈ ಮೊದಲು ಮಾಡಿರೋ ಎರಡು ಧಾರಾವಾಹಿಯಲ್ಲೂ ದುರ್ಗಾ ಅಲಿಯಾಸ್ ರಿಷಿಕಾ ಟ್ರೆಡಿಷನಲ್ ಪಾತ್ರಗಳನ್ನೇ ಮಾಡಿದ್ದಾರೆ. ಈಗ ನೋಡಿದರೆ ದುರ್ಗಾ ಪಾತ್ರವನ್ನು ಅದೇ ರೀತಿಯಾಗಿ ಮಾಡಿದ್ದಾರೆ. ರಿಷಿಕಾ ಪಾಲಿಗೆ ಅದೇ ರೀತಿಯ ಪಾತ್ರಗಳೇ ಹುಡುಕಿಕೊಂಡು ಬಂದರು ಸಹ, ಈ ನಟಿ ಅಂತಹ ಪಾತ್ರಗಳಲ್ಲಿ ಅದ್ಭುತವಾಗಿ ಕಾಣಿಸುತ್ತಾರೆ.


Click it and Unblock the Notifications











