Na Ninna Bidalare; ಲಿರಿಕಲ್ ಸಾಂಗ್ ರಿಲೀಸ್; ಭಾವನೆ ತುಂಬಿದ ಪದಗಳಿಗೆ ಜೀವ ತುಂಬಿದ ಅನುರಾಧ ಭಟ್

By ಎಸ್ ಸುಮಂತ್

'ನಾ ನಿನ್ನ ಬಿಡಲಾರೆ' ಧಾರಾವಾಹಿ ಆರಂಭವಾದ ಕೆಲವೇ ದಿನಗಳಲ್ಲಿ ಜನಮಾನಸದಲ್ಲಿ ಸ್ಥಾನ ಪಡೆದಿದೆ. ಇದು ತಾಯಿ‌ ಮಗಳ ಬಂಧದ ಕಥೆ. ಶರತ್ ಮತ್ತು ಅಂಬಿಕಾ ಪ್ರೀತಿಸಿ ಮದುವೆಯಾದವರು. ಆದರೆ ಮಾಳವಿಕ ಸ್ವಾರ್ಥ ಅಂಬಿಕಾಳ ಜೀವವನ್ನೇ ಬಲಿ ಪಡೆದಿದೆ. ಆದರೆ ಆ ಆತ್ಮಕ್ಕೆ ಶಾಂತಿ ಸಿಕ್ಕಿಲ್ಲ. ಮಗಳ ಮೇಲಿನ ಅತಿಯಾದ ಪ್ರೀತಿ, ಆಯಸ್ಸೆ ಮುಗಿಯದೇ ಕುತಂತ್ರಕ್ಕೆ ಬಲಿಯಾದ ಅಂಬಿಕಾ ಈಗಲೂ ಆತ್ಮವಾಗಿ ಅಲೆಯುತ್ತಿದ್ದಾಳೆ.

ಅಂಬಿಕಾ ತನ್ನ ಅತ್ತೆ ಮಾಳವಿಕಾಳನ್ನ ಒಳ್ಳೆಯವಳು ಎಂದೇ ನಂಬಿದ್ದಾಳೆ. ಇಲ್ಲಿ ಎಲ್ಲರಿಗೂ ಕೆಟ್ಟದ್ದನ್ನು ಮಾಡಿ, ಏನನ್ನೋ ಅಗೋಚರವಾದದ್ದನ್ನು ಪಡೆಯುವುದಕ್ಕೆ ಪ್ಲ್ಯಾನ್ ಮಾಡ್ತಾ ಇರೋದು ಇದೇ ಮಾಳವಿಕಾ. ಆ ಸತ್ಯ ಗೊತ್ತಿರೋದು ಮಾಯಾಗೆ ಮಾತ್ರ. ಈ ಧಾರಾವಾಹಿಯಲ್ಲಿ ತಾಯಿಯ ಮೇಲಿನ ಗೀತೆಯೊಂದು ಇದೆ. ಈಗ ಈ ಲಿರಿಕಲ್ ಸಾಂಗ್ ರಿಲೀಸ್‌ ಆಗಿದೆ.

Zee kannada Na Ninna Bidalare serial lyrical song released

ಒಳ್ಳೆ ರೆಸ್ಪಾನ್ಸ್ ಪಡೆಯುತ್ತಿರೋ ಹಾಡು

ಧಾರಾವಾಹಿಗಳಲ್ಲಿ ಟೈಟಲ್ ಟ್ರ್ಯಾಕ್‌ಗಳು ಬಹಳ ಮುಖ್ಯವಾಗುತ್ತವೆ. ಧಾರಾವಾಹಿಯಲ್ಲಿ ಬರುವ ಮುಖ್ಯ ಸನ್ನಿವೇಶಗಳಿಗೆ ಈ ಹಾಡನ್ನ ಬಳಸಿಕೊಳ್ಳುತ್ತಾರೆ. ಹಾಗೇ ಸೀರಿಯಲ್ ನ ಮುಖ್ಯ ಪಾತ್ರವನ್ನ ಗಮನದಲ್ಲಿಟ್ಟುಕೊಂಡು ಹಾಡನ್ನು ರಚಿಸಲಾಗಿರುತ್ತದೆ. ಇದೀಗ 'ನಾ ನಿನ್ನ ಬಿಡಲಾರೆ' ಧಾರಾವಾಹಿಯ ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು, ಅಮ್ಮ ಮಗಳ ಹಾಡಿಗೆ ಒಳ್ಳೆ ರೆಸ್ಪಾನ್ಸ್ ಬರ್ತಿದೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಹಾಡು ಸಿಕ್ಕಾಪಟ್ಟೆ ರೀಚ್ ಆಗುತ್ತಿದೆ.

ಅನುರಾಧ ವಾಯ್ಸ್‌ಗೆ ಫ್ಯಾನ್ಸ್ ಫಿದಾ

'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಜೋಗುಳ ಪದವಿದೆ. ಹಿತಾಗಾಗಿ ಅಂಬಿಕಾ ಯಾವಾಗ್ಲೂ ಹಾಡುತ್ತಾ ಇದ್ದ ಹಾಡು. ಈಗ ಅಂಬಿಕಾ ಇಲ್ಲದೆ ಹೋದರೂ ರೆಕಾರ್ಡ್ ಆಗಿರುವ ಹಾಡನ್ನೇ ಹಿತಾ ಕೇಳಿಕೊಂಡು ಮಲಗುವುದು. ಈಗ ಆ ಫುಲ್ ಹಾಡು ರಿಲೀಸ್ ಆಗಿದೆ. ಅನುರಾಧ ಭಟ್ ವಾಯ್ಸ್ ನಲ್ಲಿ ಈ ಹಾಡು ಕೇಳೋದೆ ಚೆಂದ. ಸುಧೀಂದ್ರ ಭಾರಧ್ವಾಜ್ ಸಾಹಿತ್ಯ ಬರೆದಿದ್ದು, ಸುನಾದ್ ಗೌತಮ್ ಸಂಗೀತ ನೀಡಿದ್ದಾರೆ.

ಮಗಳಿಗಾಗಿ ಅಮ್ಮ ಹಾಡಿದ್ದ ಹಾಡು

ಇತ್ತೀಚೆಗೆ ದೇವಿಯೇ ಅಂಬಿಕಾಗೆ ಆಶೀರ್ವಾದ ಮಾಡಿದ್ದಳು. ಅಂಬಿಕಾಗೆ ತನ್ನ ಮಗಳ ಬಳಿಗೆ ಹೋಗುವಷ್ಟು ಶಕ್ತಿ‌ ನೀಡಿದ್ದಳು. ಹೀಗಾಗಿ ಮಾಯಾ ಎಂಬ ಪಾತಕಿಯಿಂದ ತನ್ನ ಮಗಳು ಹಿತಾಳನ್ನ ಅಂಬಿಕಾ ಕಾಪಾಡಿಕೊಳ್ಳುತ್ತಿದ್ದಳು. ಹಾಗೇ ಅಪ್ಪ ಮಗಳನ್ನ ಹೊಂದು ಮಾಡುವ ಕೆಲಸವನ್ನು ಮಾಡುತ್ತಿದ್ದಳು. ಆಗ ಲಾಲಿ ಹಾಡನ್ನ ಅಂಬಿಕಾ ಹಾಡುತ್ತಿದ್ದಳು. ಇದು ಮಾಯಾಗೂ ಕೇಳಿಸಿ, ಶಾಕ್ ಆಗಿದ್ದಳು. ಮಹಾ ದಿಗ್ಭಂಧನ ಮಾಡಿ, ಅಂಬಿಕಾಳನ್ನ ಮತ್ತೆ ಹೊರಗೆ ಉಳಿಯುವಂತೆ ಮಾಡಿದ್ದಾರೆ.

Zee kannada Na Ninna Bidalare serial lyrical song released

ದುರ್ಗಾಳ ಅಕ್ಕನೇ ಈ ಅಂಬಿಕಾ

ಈಗ ಅಂಬಿಕಾಗೆ ತನ್ನ ಮಗಳನ್ನು ಕಾಪಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಅದಕ್ಕೆ ದಾರಿ ದೀಪವಾಗಿರುವುದು ದುರ್ಗಾ. ಯಾಕಂದ್ರೆ ಅಂಬಿಕಾ ಅತ್ಮ ದುರ್ಗಾಳ ಕಣ್ಣಿಗೆ ಮಾತ್ರ ಕಾಣಿಸುತ್ತಿದೆ. ದೇವಿ ತನ್ನ ಭಕ್ತೆ ಅಲ್ಲ ಎಂದು ಹೇಳುವ ದುರ್ಗಾಳಿಗೆ ಮಾತು ಕೊಟ್ಟಿದ್ದಾಳೆ. ತನ್ನ ಅಕ್ಕನನ್ನು ತೋರಿಸುತ್ತೇನೆ ಎಂದು. ಈಗ ಕಣ್ಮುಂದೆಯೇ ಅಂಬಿಕಾ ಇದ್ದರು ಇವಳೇ ನನ್ನ ಅಕ್ಕ ಎಂದು ತಿಳಿಯುತ್ತಿಲ್ಲ. ಆದರೆ ಅಂಬಿಕಾಳ ಮಗಳನ್ನು ಹಾಗೂ ಗಂಡನನ್ನು ಕಾಪಾಡುವ ಹೊಣೆಯನ್ನು ದುರ್ಗಾಳೇ ಹೊರಲಿದ್ದಾಳೆ.

More from Filmibeat

English summary
Zee kannada Na Ninna Bidalare serial; Here is the details about Anuradha Bhatt sang the lyrical song;
Read more about: serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X