Na Ninna Bidalare; ಅಂಬಿಕಾಗೆ ಸಿಕ್ಕೇ ಬಿಡ್ತು ದೇವಿ ಉತ್ತರ; ಮಗಳಿಗಾಗಿ ಬಣ್ಣ ಹಚ್ಚಿದ ಶರತ್
ಅಂದು ಮಾಳವಿಕಾಳ ತಾಯಿ ಅರ್ಥಾತ್ ಶರತ್ ಅಜ್ಜಿಯ ಮಾಂತ್ರಿಕ ತಂತ್ರದಿಂದ ಶರತ್ ತಾನೂ ಪ್ರೀತಿಸಿದ ಅಂಬಿಕಾಳನ್ನ ಕಳೆದುಕೊಂಡ. ಬೆಂಕಿಯಲ್ಲಿ ಅಂಬಿಕಾಳ ದೇಹ ಹೊತ್ತಿ ಉರಿಯುತ್ತಿದ್ದರು, ಆತನಿಗೆ ಅದರ ಅರಿವೇ ಇಲ್ಲದಂತೆ ಆಗಿತ್ತು. ಹಿತಾ ಓಡಿ ಬಂದು ಅಮ್ಮನನ್ನು ಕಾಪಾಡು ಅಪ್ಪ ಎಂದಾಗಲೇ ಅದರ ಅರಿವಾಗಿದ್ದು. ಆದರೆ ಅಷ್ಟರಲ್ಲಿ ಅಂಬಿಕಾ ಅರ್ಧ ಬೆಂದು ಹೋಗಿದ್ದಳು.
ಕಣ್ಮುಂದೆ ಅಮ್ಮ ಸಾಯುತ್ತಿದ್ದರು ನೋಡದ ಅಪ್ಪನ ಮೇಲೆ ಅಂದು ಮಗಳಿಗೆ ಹುಟ್ಟಿದ ದ್ವೇಷ ಇಂದಿಗೂ ಸರಿ ಹೋಗಿಲ್ಲ. ಮನೆಯಲ್ಲಿ ಯಾರ ಬಳಿಯೂ ಮಾತಾಡಲ್ಲ, ಬೆಂಕಿಯಲ್ಲಿ ಅಮ್ಮ ಬೆಂದಿದ್ದನ್ನ ನೋಡಿದ್ದಷ್ಟೇ ಮಾತೇ ನಿಂತೋಗಿದೆ ಹಿತಾಗೆ. ಆದರೆ ಹೇಗಾದರೂ ಮಾಡಿ ಮಗಳನ್ನು ಮಾತಾಡಿಸಬೇಕೆಂಬ ಆಸೆ ಶರತ್ ದು. ಅದಕ್ಕಾಗಿ ಈಗ ಜೋಕರ್ ಆಗಿದ್ದಾನೆ.

ಮಗಳನ್ನು ಕಾಪಾಡಿದ ದುರ್ಗಾ
ಹಿತಾ ಏನು ತಿಳಿಯದೆ ಕೆರೆಯ ಬಳಿ ಹೋಗಿ ನಿಂತಿದ್ದಳು. ಅಮ್ಮನ ನೆನಪಾಗಿ ಇನ್ನೇನು ಬಿದ್ದೇ ಬಿಡುತ್ತಿದ್ದಳು. ಆದರೆ ಅಷ್ಟರಲ್ಲಿ ದುರ್ಗಾಳ ಗಿಣಿ ಆ ಬಗ್ಗೆ ಮಾಹಿತಿ ನೀಡಿತ್ತು. ದುರ್ಗಾ ಅಲ್ಲಿಗೆ ಹೋಗಿ ಮಗುವನ್ನು ಕಾಪಾಡಿದಳು. ಕಾಲಜ್ಞಾನಿಯಾಗಿರೋ ದುರ್ಗಾಳ ತಂದೆಗೆ ಇದೆಲ್ಲವೂ ತಿಳಿದಿತ್ತು. ಸ್ಮಶಾನದಲ್ಲಿಯೇ ಖುಷಿಪಟ್ಟ. ತಾಯಿ ಹೇಳಿದಂತೆ ಆಗಿದೆ. ಮೊದಲು ತಾಯಿ, ಆಮೇಲೆ ಹೆಂಡತಿ ಎಂದು. ಅಂದ್ರೆ ಹಿತಾಳಿಗೆ ತಾಯಿಯಾಗಿ ಬರೋದು ಇದೇ ದುರ್ಗಾ ಅನ್ನೋದು ಅರ್ಥವಾಯ್ತು.
ಸೈಕಲ್ ಕಳ್ಳ ಮತ್ತೆ ಸಿಕ್ಕಿ ಬಿದ್ದ
ಹಿತಾಗೆ ಸೈಕಲ್ ಇಷ್ಟ ಅಂತ ಶರತ್ ದೇವಸ್ಥಾನದ ಬಳಿ ನಿಂತಿದ್ದ ಸೈಕಲ್ ನೋಡುತ್ತಿದ್ದ. ಅಷ್ಟರಲ್ಲಿ ಅಲ್ಲಿಗೆ ಬಂದ ದುರ್ಗಾ, ಸೈಕಲ್ ಕಳ್ಳದು ಜಗಳ ಶುರು ಮಾಡಿದಳು. ಈಗಂತು ಆಗಾಗ ಅಡ್ಡ ಸಿಗುತ್ತಲೇ ಇರುತ್ತಾರೆ. ಸಿಕ್ಕಾಗೆಲ್ಲಾ ದುರ್ಗಾಳ ಬಾಯಿಂದ ತಪ್ಪಿಸಿಕೊಳ್ಳುವುದೇ ದೊಡ್ಡ ಸಾಹಸಗಾಥೆಯಾಗಿದೆ. ಇದನ್ನು ಕಂಡ ಅಂಬಿಕಾಗೂ ನಗು ಒಂದು ಕಡೇ ಅಯ್ಯೋ ಪಾಪ ಅನ್ನಿಸುತ್ತಿದೆ. ಶರತ್ ಮತ್ತೆ ಮತ್ತೆ ಸಿಕ್ಕಿ ಬೀಳ್ತಾ ಇದಾರಲ್ಲ ಎಂದು.
ಮಗಳಿಗಾಗಿ ಜೋಕರ್ ಆದ ಶರತ್
ದೇವಸ್ಥಾನದಲ್ಲಿ ಶರತ್ ಮತ್ತೊಮ್ಮೆ ದುರ್ಗಾಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಮತ್ತೆ ಮತಾನಾಡುತ್ತಾ ದೇವಸ್ಥಾನದ ಮುಂದೆ ಹಾಕಿದ್ದ ರಂಗೋಲಿಯನ್ನ ತುಳಿದಿದ್ದಾನೆ. ಮುಗೀತು ಮತ್ತೆ ಬಂದ ದುರ್ಗಾಳಿಂದ ಫುಲ್ ಕ್ಲಾಸ್. ಶರತ್ ಕೈಯಿಂದಾನೇ ರಂಗೋಲಿ ಹಾಕಿಸುವ ತನಕ ಬಿಟ್ಟಿಲ್ಲ. ಅದೇ ಸಮಯಕ್ಕೆ ಹಿತಾ ಕೂಡ ಬಂದಳು. ಅಪ್ಪನ ಸ್ಥಿತಿ ಕಂಡು ಸ್ವಲ್ಪ ನಗು ಮುಖ ಮಾಡಿದಳು. ಮಗಳನ್ನ ನಗಿಸುವ ಸಾಕಷ್ಟು ಪ್ರಯತ್ನವಾಗಿದೆ. ಈಗ ಮಗಳು ನಗಲೆಂದು ಮುಖಕ್ಕೆಲ್ಲ ಬಣ್ಣ ಬಳಿದುಕೊಂಡಿದ್ದಾನೆ. ಅಪ್ಪನ ಅವಸ್ಥೆ ನೋಡಿ ಹಿತಾ ನಗು ಬಂದರು ಕಂಟ್ರೋಲ್ ಮಾಡಿಕೊಂಡಿದ್ದಾಳೆ.

ಅಂಬಿಕಾಗೆ ಉತ್ತರ ಕೊಟ್ಟ ದೇವಿ
ಅಂಬಿಕಾ ಕಾಣಿಸುವುದು ದುರ್ಗಾಗೆ ಮಾತ್ರ. ತನ್ನ ಮಗಳಿಗೂ ಕಾಣಿಸುತ್ತಿಲ್ಲ. ಆದರೆ ತನ್ನ ಮಗಳನ್ನು ಕಾಪಾಡಲು ಒಬ್ಬರು ಬೇಕಾಗಿದೆ. ಆ ಒಬ್ಬರು ದುರ್ಗಾನೇ ಆಗಿರಲಿ ದೇವಿ ಎಂದು ಅಂಬಿಕಾ ಕೇಳಿಕೊಳ್ಳುತ್ತಾ ಇರುತ್ತಾಳೆ. ಇದೀಗ ದುರ್ಗಾನೆ ಅದಕ್ಕೆ ಉತ್ತರ ಹುಡುಕುವ ಮಾರ್ಗ ತೋರಿಸಿದ್ದಾಳೆ. ಕಲ್ಯಾಣಿಯಲ್ಲಿ ಒಂದು ಆಮೆ ಇದೆ. ನಾವಂದುಕೊಂಡದ್ದು ಸತ್ಯ ಆಗೋದಾದ್ರೆ ಅದು ಮೇಲೆ ಬರುತ್ತಂತೆ ಅಂತ. ದುರ್ಗಾಳೆ ನನ್ನೆಲ್ಲ ಪ್ರಶ್ನೆಗೆ ಉತ್ತರ ಆಗೋದಾದ್ರೆ ದರ್ಶನ ಕೊಡು ದೇವಿ ಎಂದು ಕೇಳಿದ ಕೂಡಲೇ ಆಮೆ ಮೇಲೆ ಬಂದಿದೆ.


Click it and Unblock the Notifications











