Na Ninna Bidalare; ಗುರುಗಳಿಗೆ ಚರಣ ಸೇವೆ ಮಾಡಿದ್ದ ಹೆಂಗಸೀಗ ಪ್ರೆಗ್ನೆಂಟ್; ದುರ್ಗಾ ಗತಿ ಏನು?
ಅಂಬಿಕಾಳಿಗೆ ಸದಾ ಕಾವಾಲಾಗಿದ್ದ ದುರ್ಗಾ ಈಗ ಅಪಾಯದಲ್ಲಿ ಸಿಲುಕಿದ್ದಾಳೆ. ದುರ್ಗಾ ತುಂಬಾ ಮುಗ್ಧಳು. ಅಮ್ಮನಿಲ್ಲದ, ಅಪ್ಪ ಹುಚ್ಚನಾದ ಬಳಿಕ ನಮ್ಮನ್ನು ಸಾಕಿದ್ದು ಚಿಕ್ಕಮ್ಮ ಎಂಬ ಅಗಾಧ ಪ್ರೀತಿ. ಚಿಕ್ಕಮ್ಮ ಏನೇ ಮಾಡಿದರೂ ಅದು ನಮ್ಮ ಒಳ್ಳೆಯದ್ದಕ್ಕೆ ಎಂಬ ನಂಬಿಕೆ. ಅದಕ್ಕೆ ಚರಣ ಸೇವೆಗೂ ದುರ್ಗಾ ಒಪ್ಪಿಕೊಂಡಿದ್ದಾಳೆ. ಗುರುಗಳ ಮುಂದೆ ಹೋಗಿ ಕುಣಿದಿದ್ದಾಳೆ.
ದುರ್ಗಾಪುರದಲ್ಲಿ ಹೇಳಿಕೊಳ್ಳುವುದಕ್ಕಷ್ಟೇ ಗುರುಗಳು. ಆದರೆ ಮಾಡೋದೆಲ್ಲಾ ಅನಾಚಾರದ ಕೆಲಸವಷ್ಟೆ. ಜನರ ಕಣ್ಣಿಗೆ ಮಣ್ಣೆರಚಲು ಗುರುಗಳಂತೆ ವೇಷಭೂಷಣ. ಆದರೆ ಪ್ರಪಂಚದ ಎಲ್ಲಾ ಸುಖವೂ ಆ ಗುರುಗಳ ಆಶ್ರಮದಲ್ಲಿದೆ. ಈಗ ಆ ಗುರುಗಳ ಕಣ್ಣು ದುರ್ಗಾ ಮೇಲೆ ಬಿದ್ದಿದೆ. ದುರ್ಗಾಳನ್ನ ಅಂಬಿಕಾ ಕಾಪಾಡಬೇಕಿದೆ. ಆದರೆ ಅದು ಸಾಧ್ಯವಾಗುವುದಾದರೂ ಹೇಗೆ ಎಂಬುದೇ ದೊಡ್ಡ ಪ್ರಶ್ನೆ.

ಅಂಬಿಕಾಳ ಮುಂದೆ ಗುರುಗಳ ಅನಾಚಾರ
ಅಂಬಿಕಾಗೆ ಎಲ್ಲಾ ಸತ್ಯ ಗೊತ್ತಾಗಿದೆ. ದುರ್ಗಾಳ ಚಿಕ್ಕಮ್ಮ ಹಣದ ಆಸೆಗೋಸ್ಕರ ದುರ್ಗಾಳನ್ನ ಗುರುಗಳಿಗೆ ಒಪ್ಪಿಸಿದ್ದಾಳೆ ಅನ್ನೋದು. ಆದರೆ ದುರ್ಗಾಗೆ ಇದು ಗೊತ್ತಿಲ್ಲದೆ ಅಪಾಯದ ಜಾಗಕ್ಕೆ ಬಂದು ಸಿಲುಕಿದ್ದಾಳೆ. ಅಂಬಿಕಾ ಕೂಡ ಗುರುಗಳ ಆಶ್ರಮಕ್ಕೆ ಬಂದಿದ್ದಾಳೆ. ಹೇಗಾದರೂ ಮಾಡಿ ಇದನ್ನ ತಪ್ಪಿಸಬೇಕೆಂದು ಓಡಾಡುತ್ತಿದ್ದಾಗ ಗುರುಗಳ ಸೀಕ್ರೆಟ್ ರೂಮಲ್ಲಿ ಮತ್ತೊಂದು ಸೀಕ್ರೆಟ್ ರಿವಿಲ್ ಆಗಿದೆ.
ನ್ಯಾಯ ಕೇಳಿದವಳಿಗೆ ಅನ್ಯಾಯ
ಈ ಹಿಂದೆ ಇದೇ ಗುರುಗಳ ಚರಣ ಸೇವೆ ಮಾಡಿದ್ದ ಹೆಂಗಸೊಬ್ಬಳು ಈಗ ಗರ್ಭಿಣಿಯಾಗಿದ್ದಾಳೆ. ಅದಕ್ಕೆ ನ್ಯಾಯ ಕೇಳೋದಕ್ಕೆ ಅಂತ ಆಕೆಯ ಅಣ್ಣ ಅವಳನ್ನು ಕರೆದುಕೊಂಡು ಬಂದು ಗುರುಗಳ ಮುಂದೆ ನಿಂತಿದ್ದಾನೆ. ಈ ಮಗುವಿಗೆ ನೀವೇ ತಂದೆ, ಇದಕ್ಕೆಲ್ಲ ನೀವೆ ಕಾರಣ ಎಂದಿದ್ದಾನೆ. ಇದನ್ನು ಗುರುಗಳು ಸಹಿಸುವುದುಂಟ, ಅನಾಚಾರ ಮಾಡಿದವನಿಗೆ ಕೊಲೆ ಮಾಡುವುದಕ್ಕೆ ಭಯವಿದೆಯಾ. ಖಂಡಿತ ಇಲ್ಲ. ಅವಳಿಗೆ ವಿಷದ ಪ್ರಸಾದ ತಿನ್ನಿಸಿ, ಮುಂದೆ ಸಾಗಿದ್ದಾನೆ. ಇದೆಲ್ಲವನ್ನು ಅಂಬಿಕಾ ನೋಡಿದ್ದು, ಗಾಬರಿಯಾಗಿದ್ದಾಳೆ.
ದುರ್ಗಾಳ ಬಗ್ಗೆ ಅಂಬಿಕಾ ಆತಂಕ
ಯಾಕಂದ್ರೆ ದುರ್ಗಾ ಕೂಡ ಚರಣ ಸೇವೆ ಮಾಡಲು ಬಂದಿದ್ದಾಳೆ. ದುರ್ಗಾ ಅಂದುಕೊಂಡಿರೋದು ಕೇವಲ ನೃತ್ಯ ಮಾಡಿ ಬರುವುದು ಅಂತ. ಆ ನೃತ್ಯಕ್ಕೆ ಅಂಬಿಕಾ ಕೂಡ ಸಾಥ್ ಕೊಟ್ಟಿದ್ದಳು. ಆದರೆ ಬಣ್ಣ ಹಚ್ಚಿ ಇನ್ಯಾವುದಕ್ಕೋ ಆಹ್ವಾನವನ್ನು ಕೊಟ್ಟಾಗಿದೆ. ಇದರಿಂದ ಅಂಬಿಕಾ ಗಾಬರಿಯಾಗಿದ್ದಾಳೆ. ದುರ್ಗಾ ಕೂಡ ಈ ಗುರುಗಳ ಅಪಾಯದಲ್ಲಿ ಸಿಲುಕಿದ್ದಾಳೆ. ಅವಳನ್ನ ಕಾಪಾಡೋದು ಹೇಗೆ ಎಂಬ ಆತಂಕ ಅವಳನ್ನ ಕಾಡುತ್ತಿದೆ. ಗುರುಗಳು ಬೇರೆ ದುರ್ಗಾಳ ಕಡೆಗೆ ಹೊರಟಿದ್ದಾರೆ. ಈಗ ಅಂಬಿಕಾಳಿಗೆ ಸವಾಲಿನ ಸಮಯವೇ ಸರಿ.
ವೀಕ್ಷಕರ ನಿರೀಕ್ಷೆ ನಿಜವಾಗುತ್ತಾ?
ಇನ್ನು ಸಾಕಷ್ಟುಬಾರಿ ಹಿತಾಳನ್ನ ಕಾಪಾಡಿದ್ದು ದುರ್ಗಾಳೆ. ಈಗ ದುರ್ಗಾಳನ್ನ ಬೆಂಗಳೂರಿಗೆ ಕರೆದುಕೊಂಡು ಹೋಗಬೇಕು ಎಂದರೆ ಶರತ್ ಏನಾದ್ರೂ ಒಂದೊಳ್ಳೆ ಕೆಲಸ ಮಾಡಬೇಕು ಹಾಗೇ ದುರ್ಗಾಳಿಗೆ ತನ್ಮ ಚಿಕ್ಕಮ್ಮ ಕೆಟ್ಟ್ನ ಗೊತ್ತಾಗಬೇಕು. ಹೀಗಾಗಿ ಇಂಥ ಕಷ್ಟದ ಸಮಯದಲ್ಲಿ ದುರ್ಗಾಳನ್ನು ಶರತ್ ಕಾಪಾಡುತ್ತಾನೆ ಎಂಬುದು ವೀಕ್ಷಕರ ಅಭಿಪ್ರಾಯ. ಅಥವಾ ಗುರುಗಳಿಂದ ಕಾಪಡಿ, ದುರ್ಗಾಳನ್ನೇ ಮದುವೆಯಾಗಲೇಬೇಕಾದಂತ ಪರಿಸ್ಥಿತಿ ಕೂಡ ನಿರ್ಮಾಣವಾಗಬಹುದೇನೋ. ಆ ರೀತಿಯ ಪರಿಸ್ಥಿತಿ ಬಂದ್ರೆ ವೀಕ್ಷಕರಂತು ಫುಲ್ ಖುಷಿಯಾಗೋದ್ರಲ್ಲಿ ಅನುಮಾನವೇ ಇಲ್ಲ. ಸದ್ಯ ದುರ್ಗಾಳನ್ನ ಕಾಪಾಡೋದಕ್ಕೆ ಯಾರೂ ಬರ್ತಾರೆ ಎಂಬುದೇ ಕುತೂಹಲ.


Click it and Unblock the Notifications











