Na Ninna Bidalare; ದುರ್ಗಾ ಅಂತ್ಯವೆಂದ ಅಮೃತೇಶ್ವರ ಸ್ವಾಮೀಜಿಯೇ ಅಂತ್ಯ; ಹೆಣ್ಣಿನ ಬಗ್ಗೆ ಕೇವಲವಾಗಿ ಮಾತಾಡಿದ್ರೆ!
ಅಮೃತೇಶ್ವರ ಸ್ವಾಮಿಗಳ ಚರಣ ಸೇವೆ ಮಾಡಿದರೆ ಕೈತುಂಬಾ ದುಡ್ಡು ಸಿಗುತ್ತೆ ಅನ್ನೋದು ಪ್ರಭಕ್ಕನಿಗೆ ಗೊತ್ತಾದ ಮೇಲೆ ದುರ್ಗಾಳನ್ನ ನಂಬಿಸಿ ಮೋಸ ಮಾಡಿದ್ದಾಳೆ. ಚಿಕ್ಕಮ್ಮನನ್ನ ಅಪಾರವಾಗಿ ನಂಬಿದ್ದ ದುರ್ಗಾ, ನೃತ್ಯ ಮಾತ್ರ ಅಂದುಕೊಂಡಿದ್ದಳು. ಅದಕ್ಕೆ ಒಪ್ಪಿಕೊಂಡಿದ್ದಳು. ಆದರೆ ಅಮೃತೇಶ್ವರ ಗುರುಗಳಿಗೆ ಚರಣ ಸೇವೆಯನ್ನು ಮಾಡಬೇಕಿದೆ ಅನ್ನೋ ಅರಿವು ಇರಲಿಲ್ಲ.
ಅಂಬಿಕಾಳಿಗೆ ಈ ಸತ್ಯ ತಿಳಿದ ಮೇಲೆ ದುರ್ಗಾಳನ್ನ ಉಪಾಯ ಮಾಡಿ, ಗುರುಗಳಿಂದ ಗರ್ಭಿಣಿಯಾಗಿದ್ದ ಹೆಂಗಸನ್ನು ತೋರಿಸಿದಳು. ಈ ಸತ್ಯ ತಿಳಿದ ದುರ್ಗಾ, ಅಂಬಿಕಾಳ ಸಹಾಯದಿಂದ ಅಲ್ಲಿಂದ ತಪ್ಪಿಸಿಕೊಂಡು ಮನೆಗೇನೋ ಬಂದಳು ಆದರೆ ಮತ್ತೆ ಚಿಕ್ಕಮ್ಮ ಪ್ರಭಕ್ಕ ಅವಳನ್ನ ಕರೆದುಕೊಂಡು ಅಮೃತೇಶ್ವರ ಗುರುಗಳ ಬಳಿಗೆ ಕರೆದುಕೊಂಡು ಹೋದರು.

ದುರ್ಗಾಳ ರಕ್ಷಣೆಗೆ ಬಂದ ದೇವಿ
ಅಂಬಿಕಾಳ ಸಹಾಯದಿಂದ ದುರ್ಗಾ ತಪ್ಪಿಸಿಕೊಂಡು ಬಂದಳು. ಆದರೆ ಅಮೃತೇಶ್ವರ ಸ್ವಾಮಿಗಳ ಕಡೆಯವರು ಅವಳ ಹುಡುಕಾಟದಲ್ಲಿರುವಾಗಲೇ ಅಮೃತೇಶ್ವರನಿಗೆ ದುರ್ಗಾ ಕಂಡಿದ್ದಾಳೆ. ಅದು ಒಂದು ಬೆಟ್ಟದ ಮೇಲೆ. ಅಲ್ಲಿ ಯಾರೂ ಇಲ್ಲ. ದುರ್ಗಾ ಒಬ್ಬಳೆ. ಈಗ ಅವಳ ಕಥೆ ಮುಗೀತು ಅಂತಾನೇ ಅಮೃತೇಶ್ವರ ಸ್ವಾಮಿಗಳು ಥಿಂಕ್ ಮಾಡಿದ್ರು. ಗಾಡಿ ನಿಲ್ಲಿಸಿ, ಸೀದಾ ದುರ್ಗಾಳ ಕಡೆಗೆ ಬಂದನು. ಆದರೆ ಅಲ್ಲಿ ನಿಂತಿರೋದು ದುರ್ಗಾ ಅಲ್ಲ ದೇವಿ ಅನ್ನೋದು ಅವನಿಗೇಗೆ ಅರ್ಥವಾಗಬೇಕು. ತನ್ನ ಭಕ್ತೆಗಾಗಿ ಅವಳ ರೂಪವನ್ನೇ ಹೊತ್ತು ದುಷ್ಟ ಸಂಹಾರಕ್ಕೆ ನಿಂತಿದ್ದಾಳೆ.
ಅಂತ್ಯ ಎಂದವನಿಗೆ ಮಾಡಿದ್ದೇನು?
ದುರ್ಗಾಳನ್ನು ಕಂಡ ಅಮೃತೇಶ್ವರ ಸ್ವಾಮಿಗಳು ಇಂದೇ ನಿನ್ನ ಅಂತ್ಯ ಎಂದಾಗ, ದೇವಿಯೂ ಯಾವ್ ಯಾವಾಗ ಹೆಣ್ಣಿ ಅಂತ್ಯ ಎಂದಿದ್ದಾರೋ ಹಾಗೆಲ್ಲ ಹೊಸ ಜಗತ್ತೆ ಸೃಷ್ಟಿಯಾಗಿದೆ ಎಂದು ಅರಿವು ಮೂಡಿಸಿದ್ದಾಳೆ. ಆದರೂ ಬಗ್ಗದ ಅಮೃತೇಶ್ವರ, ನೀನು ನನ್ನ ಚರಣ ಸೇವಕಿಯಾದರೆ ಆ ದೇವಿಯೇ ನನ್ನ ಸೇವಕಿಯಾದಂತೆ ಎಂದು ಮುಟ್ಟಲು ಹೋದಾಗ ಅವನ ಕೈಗೆ ಶಾಕ್ ಹೊಡೆದಿದೆ.

ದುರ್ಗಾಳನ್ನ ರಕ್ಷಿಸಿದ ಅಂಬಿಕಾ
ದುರ್ಗಾ ಮತ್ತೆ ಆ ಕೆಟ್ಟ ಸ್ವಾಮಿಯ ಬಲೆಯಲ್ಲಿಯೇ ಸಿಲುಕಿದ್ದಳು. ಅದು ಅಂಬಿಕಾಳ ಗಮನಕ್ಕೆ ಬಂದ ಮೇಲೆ ಅಲ್ಲಿಗೆ ಬಂದು ಕಾಪಾಡಿದ್ದಾಳೆ. ಊರಿನ ಒಳಗಂತು ಬಂದಿದ್ದಾರೆ. ಅಷ್ಟರಲ್ಲಿ ಗಿಣಿರಾಮನು ಅಲ್ಲಿಗೆ ಬಂದಿದ್ದು, ಊರವರಿಗೆಲ್ಲಾ ವಿಷಯ ಮುಟ್ಟಿಸಿದ್ದಾನೆ. ದುರ್ಗಾಳನ್ನ ಅಮೃತೇಶ್ವರ ಸ್ವಾಮಿ ಹಿಂಸಿಸ್ತಾ ಇದಾನೆ ಅಂತ ಹೇಳಿದ್ದಾನೆ. ಇದನ್ನ ಕೇಳಿದ ಊರಿನವರೆಲ್ಲ ದುರ್ಗಾಳ ಸಹಾಯಕ್ಕೆ ಧಾವಿಸಿದ್ದಾರೆ. ಪ್ರಭ ಅಂತು ಈ ವಿಚಾರವೆಲ್ಲ ತಿಳಿದು ಆತಂಕಗೊಂಡಿದ್ದಾಳೆ. ಊರಿನ ಜನರ ಜೊತೆಗೆ ಅವಳು ಓಡಿದ್ದಾಳೆ. ಆದರೆ ದುರ್ಗಾ ಅರ್ಧಕ್ಕೆ ಸುಸ್ತಾಗಿ ನಿಂತು ಬಿಟ್ಟಿದ್ದಾಳೆ.
ಇನ್ಮೇಲೆ ದುರ್ಗಾ ಸಿಟಿ ಸೇರ್ತಾಳಾ?
ದುರ್ಗಾ ಹಾಗೂ ಅಂಬಿಕಾ ಅಕ್ಕ ತಂಗಿಯರು. ಆದರೆ ಅದು ಇಬ್ಬರಿಗೂ ಗೊತ್ತಿಲ್ಲ. ಇಬ್ವರ ಕತ್ತಿನ ಬಳಿ ಇರುವ ಅರ್ಧ ಸೂರ್ಯಾಕಾರ ಒಂದೇ ಸಮಯಕ್ಕೆ ಕಂಡರೆ ಅದಕ್ಕೆ ಸ್ಪೆಷಲ್ ಶಕ್ತಿ ಬರಲಿದೆ. ಆ ಶಕ್ತಿಯಿಂದಾನೇ ದುರ್ಗಾ ಹಾಗೂ ಅಂಬಿಕಾ ಅಲ್ಲಿಂದ ಹೊರ ಬಂದಿದ್ದು. ಚಿಕ್ಕಮ್ಮ ಹಣಕ್ಕಾಗಿ ಏನು ಮಾಡೋದಕ್ಕೂ ರೆಡಿ ಇದ್ದಾರೆ ಅನ್ನೋದು ದುರ್ಗಾಗೆ ಅರ್ಥವಾಗಿದೆ. ಈಗೇನಿದ್ದರು ಅಂಬಿಕಾಳೆ ಅವಳಿಗೆ ಆಸರೆ. ಅಂಬಿಕಾ ಬಯಸಿದಂತೆ ದುರ್ಗಾ ಕೂಡ ಬೆಂಗಳೂರು ಸೇರುವ ಸಾಧ್ಯತೆ ಇದೆ. ಆದ್ರೆ ಬೆಂಗಳೂರು ಹೋದ ಮೇಲೆ ಶರತ್ ಮನೆ ಸೇರುವ ಎಪಿಸೋಡ್ ಬಹಳ ಕುತೂಹಲವಾಗಿದೆ.


Click it and Unblock the Notifications











