Na Ninna Bidalare: ತಂದೆ ಕಣ್ಮುಂದೆ ಇದ್ದರು ಗುರುತು ಹಿಡಿಯಲಾಗದ ಸ್ಥಿತಿ ಅಂಬಿಕಾಳದ್ದು!

By ಎಸ್ ಸುಮಂತ್

'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಅಕ್ಕ- ತಂಗಿಯರು ಒಂದಾಗಿ ಆಯ್ತು. ಇನ್ಮೇಲೆ ಕೆಡುಕು ಜನಗಳಿಗೆ ಬುದ್ದಿ ಕಲಿಸದೆ ಬಿಡುವುದಿಲ್ಲ. ದುರ್ಗಾಳನ್ನು ದುಷ್ಟರ ಕೈಯಿಂದ ಕಾಪಾಡಿಕೊಂಡು ತನ್ನೂರಿನತ್ತ ಹೊರಟಿದ್ದಾಳೆ ಅಂಬಿಕಾ. ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯರು ಹೇಳಿದ್ದು ಹಾಲು ಅನ್ನ ಎಂಬಂತೆ ಆಯ್ತು ಅಂಬಿಕಾಳ ಸಮಯ. ಹಿತಾ ಊರಿಗೆ ಹೋದ ಮೇಲೆ ಅವಳನ್ನು ಕಾಪಾಡುವುದಕ್ಕೆ ದುರ್ಗಾಳನ್ನು ಊರಿಗೆ ಕರೆದುಕೊಂಡು ಹೋಗುವುದು ಹೇಗೆ ಎಂಬ ಚಿಂತೆಯಲ್ಲಿದ್ದವಳಿಗೆ ದೇವಿಯೇ ಉತ್ತರ ನೀಡಿದ್ದಾಳೆ.

ಇಷ್ಟು ದಿನ ಸಿಟಿಗೆ ಹೋಗುವುದಕ್ಕೆ ಸಮಯ ಕೂಡಿ ಬಂದಿರಲಿಲ್ಲ. ತಂದೆಯ ಕಡೆಯಿಂದಲೂ, ದೇವಿಯ ಕಡೆಯಿಂದಾನೂ ಅನುಮತಿ ಸಿಕ್ಕಿರಲಿಲ್ಲ. ಆದರೆ ಈಗ ಎಲ್ಲದಕ್ಕೂ ಕಾಲ ಕೂಡ ಬಂದಿದೆ. ದುರ್ಗಾಪುರದಲ್ಲಿರುವುದಕ್ಕಿಂತ ಸಿಟಿಗೆ ಹೋಗುವುದು ಬಹಳ ಮುಖ್ಯವಾಗಿದೆ. ಹಿತಾಳಿಗೆ ದುರ್ಗಾಳ ಹೆಚ್ಚಿನ ಅವಶ್ಯಕತೆ ಇದೆ.

Zee kannada Na Ninna Bidalare serial Written Update on March 14th episode

ತಂದೆಯ ಅನುಮತಿ ಪಡೆದ ದುರ್ಗಾ

ಇಷ್ಟು ದಿನ ಸಿಟಿಗೆ ಹೋಗ್ತೀನಿ ಅಂದ್ರು ಕೂಡ ಅನುಮತಿ ಸಿಕ್ಕಿರಲಿಲ್ಲ. ಆದರೆ ಈಗ ಕವಡೆಯೂ ಉತ್ತರ ನೀಡಿದೆ. ಸರಿ ಅಪ್ಪ ನಾನು ಹೋಗ್ತೀನಿ. ಆಶೀರ್ವಾದ ಮಾಡಿ. ಆದರೆ ನಿಮ್ಮ ಆರೋಗ್ಯ ನೋಡಿಕೊಳ್ಳಿ. ಗಣೇಶ ಊಟ ತಂದುಕೊಡುತ್ತಾನೆ ಸರಿಯಾದ ಸಮಯಕ್ಕೆ ಊಟ ಮಾಡಿ ಎಂದು ಬಟ್ಟೆಯನ್ನೆಲ್ಲ ತರುವುದಕ್ಕೆ ಮನೆಗೆ ಹೊರಟಿದ್ದಾಳೆ.

ಮಾಳವಿಕಾಳ ಬಗ್ಗೆ ಎಚ್ಚರಿಸಿದ ತಂದೆ

ದುರ್ಗಾಳ ತಂದೆ ಈಗಲೂ ಒಗಟಾಗಿಯೇ ಉತ್ತರ ನೀಡಿದ್ದಾರೆ. ಆ ಮನೆ, ಅವಳು ಬೆಂಕಿ, ಹುಷಾರು, ಆ ಮನೆಗೆ ಸೇರುತ್ತೀಯಾ ಅಂತೆಲ್ಲಾ ಸೂಚನೆ ಕೊಟ್ಟಿದ್ದಾರೆ. ಇದು ದುರ್ಗಾಳಿಗೂ ಅರ್ಥವಾಗುತ್ತಿಲ್ಲ ಅಂಬಿಕಾಳಿಗೂ ಅರ್ಥವಾಗುತ್ತಿಲ್ಲ. ಕಷ್ಟದಲ್ಲಿರುವ ದುರ್ಗಾಳನ್ನ ನಾನೇ ಕಾಪಾಡ್ತೀನಿ ಅಂತ ಹೊಣೆ ಹೊತ್ತಿದ್ದಾಳೆ. ಇದು ಆ ತಂದೆಗೂ ನೆಮ್ಮದಿ ಕೊಟ್ಟಿದೆ. ದುರ್ಗಾಪುರಕ್ಕೆ ಬಂದಿದ್ದ ಮಾಳವಿಕಾಳ ತಾಯಿ ಅಂದು ಮಗುವಿನ ಕೈಹಿಡಿದು ಕರೆದುಕೊಂಡು ಹೋದ ಮೇಲೆ ಏನಾಯ್ತು ಅನ್ನೋದು ಗೊತ್ತಿಲ್ಲ. ಅವಳು ಶರತ್ ನನ್ನು ಹೇಗೆ ಮದುವೆಯಾದಳು ಇದೆಲ್ಲವೂ ತಿಳಿಯಬೇಕಾಗಿದೆ. ಸದ್ಯ ಅಕ್ಕನ ಜೊತೆಗೆ ಸಿಟಿಗೆ ಹೊರಟಿದ್ದಾಳೆ.

ಧನ್ಯವಾದ ಹೇಳಿದ ಅಂಬಿಕಾ

ಅಂಬಿಕಾ ಯಾರ ಕಣ್ಣಿಗೂ ಕಾಣಿಸುವುದಿಲ್ಲ. ದುರ್ಗಾಳ ಕಣ್ಣಿಗೆ ಬಿಟ್ಟರೆ. ಆದರೆ ಈಗ ನೋಡಿದ್ರೆ ದುರ್ಗಾಳ ಕಣ್ಣಿಗೂ ಕಾಣಿಸುತ್ತಿದ್ದಾಳೆ. ಹುಚ್ಚನಂತಾಗಿರುವ ದುರ್ಗಾಳ ತಂದೆ ಒಬ್ಬೊಬ್ಬರೆ ಏನೇನೋ ಮಾತಾಡ್ತಾ ಇದ್ದ ಮಾತುಗಳು ಅಂಬಿಕಾಳ ಮನಸ್ಸಿಗೆ ನಾಟಿದೆ. ತನ್ನ ಜೀವನಕ್ಕೂ ಹತ್ತಿರವಾದಂತೆ ಕೇಳಿಸುತ್ತಿದೆ. ಆದರೆ ಆ ಕಥೆ ಸಂಪೂರ್ಣವಾಗಿ ಅರ್ಥವಾಗುತ್ತಿಲ್ಲ. ಆದರೂ ಈಗ ದುರ್ಗಾಳನ್ನು ತನ್ನ ಜೊತೆಗೆ ಕಳುಹಿಸಿಕೊಡುತ್ತಿರುವುದಕ್ಕೆ ಧನ್ಯವಾದ ತಿಳಿಸಿದ್ದಾಳೆ.

ಅಂಬಿಕಾಗೆ ತಂದೆ ಗುರುತು ಸಿಗುತ್ತಿಲ್ಲ

ತಂಗಿಯನ್ನ ಯಾವಾಗ ಗುರುತು ಹಿಡಿಯುವುದು
ಅಂಬಿಕಾಳಿಗೆ ತಂದೆ ಹೇಳಿದ ಕಥೆ ರಿಲೆಟೆಡ್ ಅನ್ನಿಸುತ್ತಿದೆ. ಆದರೆ ಅವರೇ ತನ್ನ ತಂದೆ ಎಂಬುದು ತಿಳಿಯುತ್ತಿಲ್ಲ. ಅದರಲ್ಲೂ ಗಡ್ಡ, ಮೀಸೆ ಎಲ್ಲವನ್ನು ಬೆಳೆಸಿಕೊಂಡು ಹುಚ್ಚನಂತಾಗಿರುವ ಕಾರಣಕ್ಕೆ ಅಂಬಿಕಾಗೆ ಗುರುತು ಸಿಗುತ್ತಿಲ್ಲ. ಆದರೆ ಈಗ ತಂಗಿಯನ್ನೇ ಕರೆದುಕೊಂಡು ಹೊರಟಿದ್ದಾಳೆ. ಆದರೂ ಸ್ವಂತ ತಂಗಿ ಅನ್ನೋದು ಅವಳಿಗೆ ಗೊತ್ತಿಲ್ಲ. ಇನ್ನು ಸ್ವಂತ ಅಕ್ಕನನ್ನು ಹುಡುಕಿ ಹೊರಟ ದುರ್ಗಾಳಿಗೆ ತನ್ನ ಜೊತೆಗೆ ಇರುವವರೇ ಅಕ್ಕ ಎನ್ನುವುದು ತಿಳಿದಿಲ್ಲ. ಈಗ ಶರತ್ ಮನೆ ಸೇರಬೇಕಿರುವ ದುರ್ಗಾಳಿಗೆ ಏನೆಲ್ಲಾ ಸವಾಲುಗಳು ಎದುರಾಗುವ ಸೂಚನೆ ಇದೆ. ಅದೆಲ್ಲವನ್ನು ಹೇಗೆ ನಿಭಾಯಿಸುತ್ತಾಳೆ ಎಂಬುದನ್ನು ನೋಡಬೇಕಿದೆ.

More from Filmibeat

English summary
Na Ninna Bidalare serial today episode. Here is the details about Durga left for the city with Ambika
Read more about: kannada serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X