ಶರತ್ - ಅಂಬಿಕಾ ಲವ್ ಸ್ಟೋರಿ ರಿವೀಲ್; ಮಾಯಾ ಕೋಪಕ್ಕೆ ಆ ಜ್ವರವೇ ಕಾರಣ!
'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಅಂಬಿಕ ಈಗ ಇಲ್ಲ. ಆದರೆ ಅವಳ ಆತ್ಮಕ್ಕೆ ಇನ್ನು ಮುಕ್ತಿಯೂ ಸಿಕ್ಕಿಲ್ಲ. ಮಾಯಾಳಿಂದ ಮಗಳನ್ನ ಕಾಪಾಡಿಕೊಳ್ಳುವುದೇ ದೊಡ್ಡ ಸಾಹಸವಾಗಿದೆ. ಶರತ್ ಮನೆ ಸೇರಿರುವ ಮಾಯಾಗೆ ಹಿತಾಳ ಮೇಲೆ ಕಣ್ಣು. ಹಿತಾಳನ್ನ ಯಾವಾಗಲೂ ಹಿಂಸಿಸುತ್ತಾ ಇರುತ್ತಾಳೆ. ಶರತ್ ಗೆ ಅಂಬಿಕಾ ಎಂದರೆ ಪ್ರಾಣ. ಈಗ ಅವಳಿಲ್ಲ. ಆದರೆ ಹಿತಾಳನ್ನ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ.
ಮಾಯಾಗೆ ಶರತ್ ಮೇಲೆ ವಿಪರೀತ ಮೋಹ. ಅವನನ್ನ ಹೇಗಾದರೂ ಮಾಡಿ ಪಡೆಯಬೇಕೆಂದುಕೊಂಡಿರುವ ಮಾಯಾ ನಾಟಕವಾಡುತ್ತಿದ್ದಾಳೆ. ಅಂಬಿಕಾ ಕೊಲೆ ಮಾಡುವುದಕ್ಕೆಂದೆ ಮಾಳವಿಕಾ, ಮಾಯಾಳನ್ನು ಬಳಸಿಕೊಂಡಿದ್ದಳು. ಈಗ ಮದುವೆ ತನಕ ಮ್ಯಾಟರ್ ಬಂದಿದೆ. ಅಂಬಿಕಾಳನ್ನ ಕೊಲೆ ಮಾಡಿದ್ದೇಗೆ, ಶರತ್‌ಗೆ ಹತ್ತಿರವಾಗಿದ್ದೇಗೆ ಎಲ್ಲವನ್ನು ತಿಳಿಯುವ ಕುತೂಹಲ ವೀಕ್ಷಕರದ್ದು. ಆದರೆ ಅದಕ್ಕು ಮುನ್ನವೇ ಈಗ ಶರತ್ ಹಾಗೂ ಅಂಬಿಕಾ ಲವ್ ಸ್ಟೋರಿ ರಿವೀಲ್ ಆಗಿದೆ.

ಕೆಫೆಯಲ್ಲಿ ಲವ್ವಲ್ಲಿ ಬಿದ್ದ ಶರತ್
ಟ್ರಾಫಿಕ್‌ನಲ್ಲಿ ನಿಂತಿದ್ದ ಶರತ್‌ಗೆ ಕೆಫೆಗೆ ಹೋಗ್ತಾ ಇದ್ದ ಅಂಬಿಕಾ ಕಣ್ಣಿಗೆ ಬಿದ್ದಳು. ಮೊದಲ ನೋಟದಲ್ಲಿಯೇ ಶರತ್ ಲವ್‌ನಲ್ಲಿ ಬಿದ್ದ. ಮತ್ತೆ ಮತ್ತೆ ನೋಡಬೇಕೆಂದುಕೊಳ್ಳುವಾಗಲೇ ಅಂಬಿಕಾ ಮಾಯವಾಗಿದ್ದಳು. ಆದರೂ ಹುಡುಕುತ್ತಾ ಹೊರಟ ಶರತ್‌ಗೆ ಕೆಫೆಯಲ್ಲಿ ಕಂಡಳು. ಒಂದೇ ಭೇಟಿ, ಮಳೆಯೂ ಬಂತು, ಡ್ರಾಪ್ ಮಾಡಿದ, ಕಾಂಟ್ಯಾಕ್ಟ್ ನಂಬರ್ ಕೂಡ ಸಿಕ್ತು. ಆದರೆ ಮಾಯಾ ಜೊತೆಗೆ ಮಾತಾಡುತ್ತಾ, ಅಂಬಿಕಾಳ ಧ್ಯಾನ ಮಾಡ್ತಾ ಇದ್ದ.
ಮಾಯಾಗಿತ್ತು ತಪ್ಪು ಕಲ್ಪನೆ
ಶರತ್ ಸದಾ ಕಾಲ ಫೋನ್ ಮಾಡ್ತಾ ಇದ್ದದ್ದು ಮಾಯಾಗೆ. ಅಂಬಿಕಾಳ ವಿಚಾರವನ್ನ ಆಗಾಗ ಕೇಳುತ್ತಿದ್ದ. ಇದನ್ನ ಮಾಯಾ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಳು. ಶರತ್ ತನ್ನನ್ನೆ ಲವ್ ಮಾಡ್ತಾ ಇದಾಳೆ ಎಂದುಕೊಂಡಿದ್ದಳು. ಅವನ ಮೇಲೆ ಪ್ರೀತಿ ಹುಟ್ಟಿತ್ತು. ಮಾಯಾ ಕೂಡ ಶರತ್ ನ ಪ್ರೀತಿ ಮಾಡ್ತಾ ಇದ್ದಳು. ಮಾಯಾ ಹಾಗೂ ಅಂಬಿಕಾ ಈ ಮೊದಲು ಬೆಸ್ಟ್ ಫ್ರೆಂಡ್ಸ್ ಆಗಿದ್ದರು.
ಅಂಬಿಕಾಗೆ ಶರತ್ ಪ್ರಪೋಸ್
ಒಮ್ಮೆ ಶರತ್ ಇಂದು ಪಾರ್ಟಿ ಅರೆಂಜ್ ಮಾಡಿದ್ದರು. ಅದು ಪ್ರಪೋಸ್ ಮಾಡುವುದಕ್ಕೂ ಎಲ್ಲಾ ರೆಡಿ ಮಾಡಿಕೊಂಡಿದ್ದ. ಮೊದಲು ಮಾಯಾ ನಿಂತುದ್ದಳು. ಅವನೇಳುವ ಪದಗಳೆಲ್ಲ ತನಗೆ ಎಂದುಕೊಂಡಳು. ಆದರೆ ರಿಂಗ್ ಹಿಡಿದು, ಮಂಡಿಯೂರಿ ಪ್ರಪೋಸ್ ಮಾಡಿದಾಗ ಅಂಬಿಕಾಳ ಕೈಬೆರಳನ್ನ ಹಿಡಿದು ಪ್ರಪೋಸ್ ಮಾಡಿದ. ಇದನ್ನು ನೋಡಿದ ಮಾಯಾ ಕೆಂಡಾಮಂಡಲವಾಗಿ ಹೋದಳು. ಆದರೂ ಅವರ ಖುಷಿ ಮುಂದೆ, ಮಾಯಾಳ ಕೋಪ ಅಲ್ಲಿ ಮುಖ್ಯವಾಗಲೇ ಇಲ್ಲ.
ಅಂಬಿಕಾಗೆ ಹತ್ತಿರ ಮಾಡಿದ್ದು ಜ್ವರ
ಅಂದು ಮಾಯಾಗೆ ಆಫೀಸ್ ಕಡೆಯಿಂದ ಟ್ರಿಪ್ ಹೊರಟಿದ್ದಳು. ಅದನ್ನ ಶರತ್ ಗೆ ಹೇಳುವಾಗ, ಅಂಬಿಕಾಗೆ ಜ್ವರ ಬಂದಿರೋದನ್ನು ಹೇಳಿದ್ದಳು. ಇದನ್ನು ಕೇಳಿದ್ದ ಶರತ್ ಗೆ ಮನಸ್ಸು ತಡೆಯಲಿಲ್ಲ. ಅಂಬಿಕಾಳನ್ನು ನೋಡುವುದಕ್ಕೆ ಮನೆಗೆ ಹೋದ. ಅವಳ ಹಾರೈಕೆ ಮಾಡಿದ. ಅಲ್ಲಿಂದ ಇಬ್ಬರ ನಡುವೆಯೂ ಪ್ರೀತಿ ಶುರುವಾಯ್ತು. ಅಂಬಿಕಾ ಕೂಡ ಶರತ್ ಪ್ರಪೋಸ್ ಗೆ ಒಪ್ಪಿದಳು. ಇಬ್ಬರು ಮದುವೆ ಕೂಡ ಆದ್ರು, ಹಿತಾ ಎಂಬ ಮುದ್ದಾದ ಮಗಳು ಕೂಡ ಇದ್ದಾಳೆ. ಆದರೆ ಇವರ ಸಂಸಾರವನ್ನ ಹಾಳು ಮಾಡಿ ಶರತ್ ಪಡೆಯುವ ಹಠ ಮಾಡಿದ ಮಾಯಾ ಅದನ್ನ ಸಕ್ಸಸ್ ಕೂಡ ಮಾಡಿಕೊಂಡಿದ್ದಾಳೆ. ಆದರೆ ಅದಕ್ಕೆ ಅಂಬಿಕಾ ಬಿಡ್ಬೇಕಲ್ಲ.


Click it and Unblock the Notifications











