Na Ninna Bidalare: ಫ್ಯಾಕ್ಟರಿಯಲ್ಲಿ ಮಾಯಾ ಕಣ್ಣಿಗೆ ಬಿದ್ಲಲ್ಲ ದುರ್ಗಾ; ಮುಂದೇನು ಗ್ರಹಚಾರವೋ?
ಚಿಕ್ಕಮ್ಮನ ದುರಾಸೆ, ಅಮೃತೇಶ್ವರ ಗುರುಗಳ ಕೆಟ್ಟತನದಿಂದ ತಪ್ಪಿಸಿಕೊಂಡು ದುರ್ಗಾ ನೇರವಾಗಿ ಸಿಟಿಗೆ ಬಂದಿದ್ದಾಳೆ. ದುರ್ಗಾಳನ್ನ ಕಾಪಾಡ್ತೀನಿ ಅಂತ ಮಾತು ಕೊಟ್ಟು ಅಂಬಿಕಾ ಕರೆದುಕೊಂಡು ಬಂದಿದ್ದಾಳೆ. ಸಿಟಿಗೆ ಬಂದ ದುರ್ಗಾಳಿಗೆ ಬೆಂಗಳೂರು ಎಂಬುದು ಮಹಾಸಾಗರದಂತೆ ಕಂಡಿದೆ. ಇಲ್ಲಿ ನಿಜಕ್ಕೂ ನಾನು ಬದುಕು ಕಟ್ಟಿಕೊಳ್ಳಬಹುದಾ ಎಂಬ ಅನುಮಾನ ಶುರುವಾಗಿದೆ. ಆದರೆ ಅವಳಿಗೆ ಇರುವ ಧೈರ್ಯವೇ ಅಂಬಿಕಾ.
ದುರ್ಗಾಳಿಗೆ ಅಂಬಿಕಾ ತನ್ನ ನಿಜವಾದ ಹೆಸರನ್ನ ಹೇಳಿಲ್ಲ. ದೇವಿ ಅಂತಾನೇ ಪರಿಚಯ ಮಾಡಿಕೊಂಡಿದ್ದಾಳೆ. ಹೀಗಾಗಿ ನನ್ನ ಜೊತೆಗೆ ದೇವಿ ಇದ್ದಾಳೆ ಎಂಬ ನಂಬಿಕೆ ದುರ್ಗಾಳದ್ದು. ಅದಷ್ಟೇ ಅಲ್ಲ ದೇವಿಗೂ ದುರ್ಗಾಳೆಂದರೆ ಇಷ್ಟ. ತನ್ನ ಭಕ್ತೆ ಕಷ್ಟದಲ್ಲಿದ್ದಾಗೆಲ್ಲಾ ಸಹಾಯಕ್ಕೆ ನಿಂತಿದ್ದಾಳೆ. ಈಗ ಸಿಟಿಗೆ ಬಂದಿರೋ ದುರ್ಗಾಳನ್ನ ಕಾಪಾಡದೆ ಇರುವಳೆ..?

ದುರ್ಗಾ ಸೇರಬೇಕಾದ ಜಾಗ
ಈ ಸಮುದ್ರದಲ್ಲಿ ನನಗೆ ಕೆಲಸ ಸಿಗುತ್ತಾ ಎಂಬ ಅನುಮಾನದಲ್ಲಿದ್ದ ದುರ್ಗಾಳಿಗೆ ಕಣ್ಣ ಮುಂದೆ ದೊಡ್ಡದಾಗಿ ಕಂಡದ್ದು ಶರತ್ ಕಂಪನಿ. ಇಲ್ಲಿ ನನಗೆ ಗೊತ್ತಿರುವವರು ಇದ್ದಾರೆ, ನಿನಗೆ ಖಂಡಿತ ಕೆಲಸ ಆಗುತ್ತೆ ಎಂದು ದುರ್ಗಾಳಿಗೆ ಭರವಸೆ ನೀಡಿ ಅಂಬಿಕಾ ಕರೆದುಕೊಂಡು ಬಂದಿದ್ದಳು. ದುರ್ಗಾಳಿಗೂ ಕಂಪನಿ ನೋಡಿ ಕೊಂಚ ಸಮಾಧಾನವಾಯ್ತು. ಕೆಲಸ ಸಿಕ್ಕಿದರೆ ಸಾಕು ಎಂದೇ ಯೋಚಿಸುತ್ತಿದ್ದಾಳೆ. ಊರು ಬಿಟ್ಟು ಬಂದ ದುರ್ಗಾಳಿಗೆ ಈಗ ಅಂಬಿಕಾ ಬಿಟ್ಟರೆ ಬೇರೆ ಯಾವ ಆಸರೆಯೂ ಇಲ್ಲ.
ಅಡ್ಡ ಬಂದ ಮಾಯಾ
ದುರ್ಗಾಳನ್ನ ಈ ಕಂಪನಿಗೆ ಹೋಗು ಎಂದು ಹೇಳಿದ್ದಾಳೆ. ಈ ಕಂಪನಿಯಲ್ಲಿ ನಿಜಕ್ಕೂ ಕೆಲಸ ಸಿಗುತ್ತೆ ಎಂಬ ಭರವಸೆಯನ್ನು ನೀಡಿದ್ದಾಳೆ. ಖುಷಿಯಿಂದ ಮುಂದೆ ಹೋಗುತ್ತಿದ್ದ ದುರ್ಗಾಳಿಗೆ ಅಡ್ಡವಾಗಿ ಬಂದದ್ದು ಮಾಯಾ. ನೀನಾ..? ಇಲ್ಲೇನು ಮಾಡ್ತಾ ಇದ್ದೀಯಾ ಎಂದು ಪ್ರಶ್ನೆ ಕೇಳುತ್ತಿದ್ದಂತೆ ದುರ್ಗಾಳಿಗೆ ನಂಬಿಕೆಯೇ ಹೋಯ್ತು. ಇಲ್ಲಿ ಇನ್ನು ನನಗೆ ಕೆಲಸ ಸಿಕ್ಕಂತೆ ಬಿಡು ಅಂತ ವಾಪಾಸ್ ಹೋಗುವುದಕ್ಕೆ ಹೊರಟಳು. ಇದ್ದ ಒಂದು ಭರವಸೆಯನ್ನು ಅಲ್ಲಿ ಕಳೆದುಕೊಂಡಿದ್ದಳು. ಮಾಯಾ ಎದುರಾದ ಕೂಡಲೇ ಅಂಬಿಕಾ ಕೂಡ ಬೇಸರ ಮಾಡಿಕೊಂಡಳು.
ಮಾಯಾಳಿಂದ ಭರವಸೆ
ದುರ್ಗಾ ಇನ್ನೇನು ಮಾಡೋದು ಇಲ್ಲಿ ಕೆಲಸ ಆಗಲ್ಲ ಅಂತ ವಾಪಾಸ್ ಹೋಗುವುದಕ್ಕೆ ಹೊರಟಾಗ, ನಿನಗೆ 100% ಕೆಲಸ ಆಗುತ್ತೆ ಎಂದವಳು ಮಾಯಾ. ಅವಳನ್ನ ಒಳಗೆ ಕೈಹಿಡಿದು ಬೇರೆ ಕರೆದುಕೊಂಡು ಹೋದಳು. ಇದನ್ನು ನೋಡಿದ ಅಂಬಿಕಾಗೆ ಶಾಕ್ ಆಗಿದ್ದಲ್ಲದೆ ಆತಂಕ ಕೂಡ ಆಯ್ತು. ಮಾಯಾ ಏನು ಮಾಡೋದಕ್ಕೆ ಹೊರಟಿದ್ದಾಳೆ ಅಂತ. ಯಾಕಂದ್ರೆ ದುರ್ಗಾಪುರಕ್ಕೆ ಹೋದಾಗಲೂ ಮಾಯಾಳಿಗೆ ದುರ್ಗಾ ಕಂಡರೆ ಆಗುತ್ತಿರಲಿಲ್ಲ. ಅಲ್ಲಿ ಮಾಯಾ ಮಾಡೊದ ಅವಾಂತರಗಳಿಂದ ಹಿತಾಳನ್ನ ದುರ್ಗಾ ಕಾಪಾಡಿದ್ದಳು. ಹೀಗಾಗಿ ದುರ್ಗಾಳ ಮೇಲೆ ದ್ವೇಷ ಹೆಚ್ಚಾಗಿತ್ತು. ಅದನ್ನ ತೀರಿಸಿಕೊಳ್ಳುವುದಕ್ಕೆ ಕಾಯುತ್ತಿದ್ದ ಮಾಯಾಗೆ ಈಗ ಸಮಯ ಸಿಕ್ಕಿದೆ.
ಮನೆ ಸೇರಿಸ್ತಾಳಾ ಅಂಬಿಕಾ
ಅಂದಹಾಗೆ ಅಂಬಿಕಾ ಆಸೆಯೇ ಬೇರೆ. ಸ್ವಾರ್ಥವೇ ತುಂಬಿದ ಮಾಯಾಳಿಂದ ಶರತ್ ಹಾಗೂ ಹಿತಾಳನ್ನ ಕಾಪಾಡಿಕೊಳ್ಳಬೇಕಾಗಿದೆ. ಅದೇ ಕಾರಣಕ್ಕೆ ದುರ್ಗಾಳನ್ನ ಸಿಟಿಗೆ ಕರೆದು ತಂದಿದ್ದಾಳೆ. ಆದರೆ ಆರಂಭದಲ್ಲಿಯೇ ಮಾಯಾ ಎದುರಾಗಿದ್ದಾಳೆ. ದುರ್ಗಾಳನ್ನ ತನ್ನ ಮನೆಗೆ ಸೇರಿಸಿ, ಹಿತಾಳನ್ನ ಕಾಪಾಡಬೇಕಾಗಿದೆ. ಶರತ್‌ಗೆ ದುರ್ಗಾಳನ್ನೆ ಮದುವೆ ಮಾಡಿಸಬೇಕಿದೆ. ಹೀಗಾಗಿ ಹಳ್ಳಿಯಿಂದ ಸಿಟಿಗೆ ದುರ್ಗಾಳನ್ನ ಕರೆತಂದಿದ್ದಾಳೆ. ಮಾಯಾ ಏನೇ ಅಡ್ಡಿಯಾದರು ದುರ್ಗಾಳ ಪಾಲಿಗೆ ದೇವರು ಕೂಡ ಇದಾಳೆ. ಹೀಗಾಗಿ ಅಂಬಿಕಾಳ ಮನದ ಆಸೆಯಂತೆಯೇ ದುರ್ಗಾ, ಶರತ್ ಮನೆ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಅದಕ್ಕೂ ಮುನ್ನ ಮಾಯಾ ಏನು ಮಾಡ್ತಾಳೋ ಎಂಬ ಆತಂಕವಷ್ಟೆ.


Click it and Unblock the Notifications











