Na Ninna Bidalare: ದುರ್ಗಾಳನ್ನ ಟಾರ್ಗೆಟ್ ಮಾಡಿದ ಮಾಯಾಗೆ ಕೆಲಸದಲ್ಲಿಯೇ ಭಯ ಹುಟ್ಟಿಸ್ತಾಳಾ ಅಂಬಿಕಾ?

By ಎಸ್ ಸುಮಂತ್

ದುರ್ಗಾ ಊರು ಬಿಟ್ಟು ಬಂದಿದ್ದಾಳೆ. ಅಂಬಿಕಾ ಜವಾಬ್ದಾರಿ ತೆಗೆದುಕೊಂಡಿದ್ದಾಳೆ. ಅಂದುಕೊಂಡಂತೆ ಶರತ್ ಫ್ಯಾಕ್ಟರಿಯಲ್ಲಿಯೇ ಕೆಲಸವೂ ಸಿಕ್ಕಿದೆ. ಆದರೆ ಶರತ್ ಕಣ್ಣಿಗೆ ಇನ್ನು ದುರ್ಗಾ ಬಿದ್ದಿಲ್ಲ. ಬದಲಿಗೆ ಯಾರ ಕಣ್ಣಿಗೆ ಬೀಳಬಾರದಿತ್ತೊ ಅವಳ ಕಣ್ಣಿಗೆ ಬಿದ್ದಿದ್ದಾಳೆ. ಮಾಯಾ ಕೆಲಸ ಕೊಡಿಸುವ ನೆಪದಲ್ಲಿ ಹಿಂಸೆ ಕೊಡೋಕೆ ಶುರು ಮಾಡಿದ್ದಾಳೆ. ಮಾಯಾಳ ಕೆಟ್ಟತನದಿಂದ ಈಗ ದುರ್ಗಾಳನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಈಗ ಅಂಬಿಕಾಗಿದೆ.

ಅಂಬಿಕಾ ತನ್ನ ಬೆಸ್ಟ್ ಫ್ರೆಂಡ್ ಎಂದೇ ನಂಬಿದ್ದ ಮಾಯಾ ಮೋಸ ಮಾಡಿದ್ದಾಳೆ. ಈಗ ಮಗಳಿಗೂ ಹಿಂಸೆ ನೀಡುತ್ತಿದ್ದಾಳೆ. ಮಾಯಾಳಿಂದ ಮಗಳನ್ನು ಹಾಗೂ ಶರತ್ ನನ್ನು ಕಾಪಾಡಿಕೊಳ್ಳಲು ಈಗ ಅಂಬಿಕಾ ದುರ್ಗಾಳ ಮೊರೆ ಹೋಗಿದ್ದಾಳೆ.

Zee kannada Na Ninna Bidalare serial Written Update on March 20th episode

ಮಾಯಾಳ ಹೊಸ ಟಾಸ್ಕ್

ಮಾಯಾ ಅಷ್ಟು ಒಳ್ಳೆಯವಳಲ್ಲ ಅನ್ನೋದು ಅಂಬಿಕಾಗೂ ಗೊತ್ತಿರುವ ವಿಚಾರ. ದುರ್ಗಾ ಕೂಡ ಬಹಳ ಹತ್ತಿರದಿಂದ ನೋಡಿದ್ದಾಳೆ. ಈಗ ನೋಡಿದರೆ ಅವಳ ಜೊತೆಗೆ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಬೆಂಗಳೂರಿನಲ್ಲಿ ಬದುಕಬೇಕಾದರೆ ಕೆಲಸ ಮಾಡಲೇಬೇಕು. ಹೀಗಾಗಿ ಮಾಯಾಳ ಬಲೆಗೆ ಬಿದ್ದಿದ್ದಾಳೆ. ದುರ್ಗಾಪುರದಲ್ಲಿ ದುರ್ಗಾಳ ಮೇಲೆ ಹೆಗರಿ ಹೆಗರಿ ಬೀಳುತ್ತಿದ್ದಳು. ಈಗ ಶರತ್‌ಗೂ ಮಾಹಿತಿ ನೀಡದೆ ಕೆಲಸಕ್ಕೆ ಸೇರಿಸಿಕೊಂಡಿದ್ದಾಳೆ. ಹಿತಾಳನ್ನು ಕೊಲ್ಲಲು ಹೋದಾಗೆಲ್ಲಾ ದುರ್ಗಾಳೆ ಕಾಪಾಡಿದ್ದಳು. ಹೀಗಾಗಿ ಮಾಯಾಗೆ ಹಿತಾ ಮೇಲಷ್ಟೇ ಅಲ್ಲ ದುರ್ಗಾಳ ಮೇಲೂ ವಿಪರೀತ ಕೋಪವಿದೆ. ಆ ಕೋಪವನ್ನ ಈಗ ತೀರಿಸಿಕೊಳ್ಳುವ ಸಮಯ ಬಂದಿದೆ. ಮಾಯಾ ಆ ಕೆಲಸದಲ್ಲಿ ಮುಳುಗಿದ್ದಾಳೆ.

ಹಣ ಕೇಳಿದ ಮಾಯಾ

ದುರ್ಗಾಳ ಮನೆಯಿಂದ ಎಮರ್ಜೆನ್ಸಿ ಕಾಲ್ ಬಂದಿತ್ತು. ಅದು ಹಣದ ವಿಚಾರಕ್ಕೆ. ದುರ್ಗಾಳ ತಮ್ಮ ಕಣ್ಣೀರಿಡುತ್ತಾ, ಗೋಳಾಡುತ್ತಾ ಕಾಲ್ ಮಾಡಿದ್ದ. ದುರ್ಗಾಳನ್ನ ಚರಣ ಸೇವೆ ಮಾಡಲು ಅಮೃತೇಶ್ವರ ಗುರುಗಳ ಕಡೆಯವರು ಲಕ್ಷಾಂತರ ರೂಪಾಯಿ ಹಣವನ್ನ ನೀಡಿದ್ದರು. ಈಗ ಅದನ್ನ ವಾಪಾಸ್ ಕೇಳುತ್ತಿದ್ದಾರೆ. ಆದರೆ ಚಿಕ್ಕಮ್ಮನ ಬಳಿ ಹಣ ಇಲ್ಲ ಎನ್ನುತ್ತಿದ್ದಾರೆ. ಹೀಗಾಗಿ ದುರ್ಗಾ ಆ ಹಣವನ್ನ ಕೊಡುತ್ತೇನೆ ಎಂದು ಒಪ್ಪಿಕೊಂಡಿದ್ದಾಳೆ. ಈಗ ಆ ಹಣವನ್ನ ಅಡ್ವಾನ್ಸ್ ಎಂದು ಮಾಯಾಳ ಬಳಿಯೇ ತೆಗೆದುಕೊಂಡಿದ್ದಾಳೆ. ಹೀಗಾಗಿ ಒಂದು ರೀತಿಯಲ್ಲಿ ಲಾಕ್ ಆಗಿದ್ದಾಳೆ.

ನಿದ್ರೆ ಹೋದ ದುರ್ಗಾ

ಮಾಯಾಗೆ ಹೇಗಾದರೂ ಮಾಡಿ ದುರ್ಗಾಳಿಗೆ ಟಾರ್ಚರ್ ಕೊಡಬೇಕು ಎಂಬುದೇ ಮನಸ್ಸಿನಲ್ಲಿ ಇದೆ. ಅದಕ್ಕೆ ಈಗ ದಾರಿ ಕೂಡಿ ಬಂದಿದೆ. ದುರ್ಗಾಳಿಗೆ ರಾತ್ರಿಯೆಲ್ಲಾ ಮಾಡುವ ಕೆಲಸವನ್ನ ನೀಡಿದ್ದಾಳೆ. ಹಾಗೇ ಅವಳು ನೀಡಿದ ಹಣಕ್ಕೆ ಒಂದು ಷರತ್ತನ್ನು ಹಾಕಿದ್ದಾಳೆ. ಒಂದು ವೇಳೆ ನಾನು ಹೇಳಿದ ಕೆಲಸವನ್ನು ಮಾಡದೆ ಹೋದಲ್ಲಿ ನಾನು ಕೊಟ್ಟ ಹಣವನ್ನು ಡಬಲ್ ಆಗಿ ವಾಪಾಸ್ ನೀಡಬೇಕು ಎಂಬುದು. ಈಗ ಇಡೀ ಬಟ್ಟೆಯನ್ನೆಲ್ಲ ಒಬ್ಬಳಿಗೆ ಮಡಚಿಡುವಂತೆ ಆರ್ಡರ್ ಮಾಡಿದ್ದಾಳೆ. ದುರ್ಗಾಗು ಇಷ್ಟೊಂದು ಕೆಲಸ ಒಬ್ಬಳೆ ಮಾಡಬೇಕಾ ಎಂಬ ಆತಂಬ ಬಂದಿದೆ. ಆದರೂ ಹಣ ವಿಚಾರಕ್ಕೆ ಭಯ ಪಟ್ಟು ರಾತ್ರಿಯೆಲ್ಲಾ ಕೂತು ಕೆಲಸ ಮಾಡಲು ಮುಂದಾಗಿದ್ದಾಳೆ.

ಸಹಾಯಕ್ಕೆ ಬರ್ತಾಳಾ ಅಂಬಿಕಾ

ಗೊತ್ತಿಲ್ಲದ ಬೆಂಗಳೂರಲ್ಲಿ ಕೆಲಸ ಸಿಕ್ಕಿರುವುದೇ ಹೆಚ್ಚು. ಉಳಿದುಕೊಳ್ಳಲು ಜಾಗವೂ ಇದೆ ಎಂದು ಮಾಯಾ ಹೇಳಿದ ಕೆಲಸ ಮಾಡಲು ಕೂತ ದುರ್ಗಾಗೆ ನಿದ್ರಾ ದೇವತೆ ಆವರಿಸಿದ್ದಾಳೆ. ಕೆಲಸವೇ ಮುಗಿಯದೆ ಮಲಗಿಯೇ ಬಿಟ್ಟಿದ್ದಾಳೆ. ಆದರೆ ಮಾಯಾ ಏನಾದ್ರೂ ಕೆಲಸ ಆಗದೆ ಇರುವುದನ್ನು ಕಂಡರೆ ದುರ್ಗಾಳಿಗೆ ಖಂಡಿತ ಶಿಕ್ಷೆ ನೀಡುತ್ತಾಳೆ. ಅಂಬಿಕಾ ಸದಾ ಕಾಲ ದುರ್ಗಾಳಿಗೆ ಕಾವಾಲಾಗಿ ಇರುತ್ತಾಳೆ‌. ಹೀಗಾಗಿ ಅಂಬಿಕಾಳೆ ಪಟ್ ಅಂತ ಎಲ್ಲಾ ಕೆಲಸ ಮುಗಿಸಿ ದುರ್ಗಾಳನ್ನು ಕಾಪಾಡುವ ಸಾಧ್ಯತೆ ಇದೆ. ಅಂಬಿಕಾಳ ಆಸೆಯೇ ಶರತ್ ಹಾಗೂ ದುರ್ಗಾಳನ್ನ ಒಂದು ಮಾಡಬೇಕೆಂಬುದು. ಹೀಗಾಗಿ ಅದೇ ಫ್ಯಾಕ್ಟರಿಯಲ್ಲಿ ಕೆಲಸದಲ್ಲಿ ಉಳಿಯಬೇಕಾಗಿದೆ.

More from Filmibeat

English summary
Na Ninna Bidalare serial today episode. Here is the details about Ambika protects Durga.
Read more about: serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X