Na Ninna Bidalare: ಹಿತಾಳಿಗೆ ದುರ್ಗಾಳೆ ಅಮ್ಮ; ಹಿತಾ ಯಾಕೆ ಮಾತಾಡ್ತಿಲ್ಲ!
ಶರತ್ ಮನೆಯಲ್ಲಿ ಒಂದಷ್ಟು ಕ್ರಿಮಿಕೀಟಗಳಿದಾವೆ. ಹಿತಾಳನ್ನ ಕಂಡರೆ ಕೆಂಡಕಾರುವವರು. ಅದರಲ್ಲಿ ಮಾಯಾ ಮೊದಲಿಗೆ ನಿಲುತ್ತಾಳೆ. ಶರತ್‌ಗೆ ಹಿತಾ ಎಂದರೆ ಪ್ರಾಣ ಎಂದು ಅರಿತಿರುವ ಮಾಯಾ, ಅವನ ಮುಂದಷ್ಟೇ ನಾಟಕ ಮಾಡುತ್ತಾಳೆ.
ಮದುವೆಯಾದರೂ ಮಗಳಂತೆ ನೋಡಿಕೊಳ್ಳುತ್ತೇನೆ ಎಂದು ಮಾಯಾ ಹೇಳಿದ್ದಾಳೆ. ಆದರೆ ಹಿಂದೆ ಮಾತ್ರ ಹಿತಾಳನ್ನು ಹಿಂಸೆ ಮಾಡುತ್ತಾ ಇರುತ್ತಾಳೆ. ಅವಳ ಸಾಲಿಗೆ ಧಮಯಂತಿ ಕೂಡ ಒಬ್ಬಳು. ಹಿತಾಳನ್ನು ಕಂಡರೆ ಆಗುವುದಿಲ್ಲ ಎಂಬಂತೆ ಆಡುತ್ತಾಳೆ.

ಹಿತಾಳಿಗೆ ಯಾವುದಾದರೂ ವಸ್ತುವಿನ ಮೇಲೆ ಮೋಹವಿದ್ದರೆ ಆ ವಸ್ತುವನ್ನು ಹಾಳು ಮಾಡುವುದು, ಹಿತಾಳಿಗೆ ಮಾನಸಿಕವಾಗಿ ಹಿಂಸೆ ಮಾಡುವುದನ್ನೇ ಮಾಡುತ್ತಾ ಇರುತ್ತಾಳೆ. ಈ ಎಲ್ಲರಿಂದ ಹಿತಾಳನ್ನು ಕಾಪಾಡಿಕೊಳ್ಳಲು ಅಂಬಿಕಾ ಕೂಡ ಸಾಕಷ್ಟು ಪ್ರಯತ್ನ ಪಟ್ಟಿದ್ದಾಳೆ. ಆದರೆ ಅದು ಸಾಧ್ಯವಾಗಿಲ್ಲ. ಈಗ ದುರ್ಗಾಳನ್ನ ಕರೆದುಕೊಂಡು ಬಂದಿರುವುದು, ಅದಕ್ಕೆ ಸಹಾಯವಾಗಿದೆ.
ದಮಯಂತಿಗೆ ತಕ್ಕ ಪಾಠ
ಮಾಯಾ ಯಾವಾಗಲೂ ಹಿತಾಳಿಗೆ ಹಿಂಸೆ ಕೊಡುತ್ತಿದ್ದ ಕಾರಣಕ್ಕೆ ದಮಯಂತಿಯೂ ಅದನ್ನೇ ಅಭ್ಯಾಸ ಮಾಡಿಕೊಂಡಿದ್ದಾಳೆ. ಶಾಲೆಯಿಂದ ನೇರವಾಗಿ ಫ್ಯಾಕ್ಟರಿಗೆ ಬಂದ ಹಿತಾ, ಬಾಕ್ಸ್‌ನಲ್ಲಿದ್ದ ಸ್ಯಾಂಡ್‌ವಿಚ್ ತಿನ್ನುವುದಕ್ಕೆಂದು ನೋಡಿದಳು. ಒಂದೊಂದೆ ಸ್ಯಾಂಡ್‌ವಿಚ್ ತೆಗೆದು ಬಾಯಿಗೆ ಇಡುವಾಗ ದಮಯಂತಿ ಅದನ್ನ ಕಿತ್ತು ತಿನ್ನುತ್ತಿದ್ದಳು. ಹಿತಾ ಏನನ್ನು ಮಾತನಾಡುತ್ತಿರಲಿಲ್ಲ. ಸುಮ್ಮನೆ ಮತ್ತೊಂದನ್ನ ತೆಗೆದು ತಿನ್ನುವ ಪ್ರಯತ್ನ ಮಾಡುತ್ತಿದ್ದಳು. ನಾಲ್ಕನೆ ಸ್ಯಾಂಡ್‌ವಿಚ್ ಅನ್ನು ಇನ್ನೇನು ತಿನ್ನಬೇಕು ಎನ್ನುವಷ್ಟರಲ್ಲಿ ದುರ್ಗಾ ಬಂದು ಅದನ್ನ ತಡೆದಳು. ಧಮಯಂತಿಯ ನಾಟಕಕ್ಕೆ, ಕೆಟ್ಟತನಕ್ಕೆ ಬ್ರೇಕ್ ಹಾಕಿದಳು. ದುರ್ಗಾಳ ಮಾತಿಗೆ ಹೊಸ ನಾಟಕವನ್ನೇ ಶುರು ಮಾಡಿದಳು ದಮಯಂತಿ.
ದುರ್ಗಾಳ ಕೈತುತ್ತು
ಹಿತಾ, ಅಂಬಿಕಾ ಸತ್ತ ಮೇಲಂತು ತಾಯಿ ಪ್ರೀತಿಯನ್ನೇ ಕಾಣದೆ ಮಂಕಾಗಿದ್ದಾಳೆ. ಅವಳ ಪಾಡಿಗೆ ಅವಳು ಕುಳಿತುಕೊಳ್ಳುತ್ತಾಳೆ, ಕೊಟ್ಟಿದ್ದನ್ನ ಸುಮ್ಮನೆ ತಿನ್ನುತ್ತಾಳೆ, ಅಮ್ಮನ ಹಾಡು ಕೇಳುತಾ, ಅಮ್ಮ ಕೊಟ್ಟ ಗೊಂಬೆಯೊಂದಿಗೆ ಆಟವಾಡುತ್ತಾ ಸುಮ್ಮನೆ ಇರುತ್ತಾಳೆ. ಆದರೆ ದುರ್ಗಾ ಎಂದರೆ ಅದೇನೋ ಪ್ರೀತಿ, ಆತ್ಮೀಯತೆ. ದುರ್ಗಾ ಊಟಕ್ಕೆ ಕೂತಾಗ ಕದ್ದು ನೋಡಿದ್ದಾಳೆ. ದುರ್ಗಾಳ ಕಣ್ಣಿಗೆ ಹಿತಾ ಬಿದ್ದಿದ್ದಾಳೆ. ತಕ್ಷಣ ಅವಳನ್ನ ಕರೆದುಕೊಂಡು ಬಂದು ತಾನು ತಂದಿದ್ದ ಊಟದಲ್ಲಿಯೇ ಹೊಟ್ಟೆ ತುಂಬ ತಿನ್ನಿಸಿದ್ದಾಳೆ.
ತಾಯಿ ಮನಸ್ಸಿಗೆ ಸಮಾಧಾನ
ಅಂಬಿಕಾಗೆ ಸಮಾಧಾನವೇ ಇಲ್ಲ. ಮಗಳು ಹೊಟ್ಟೆ ತುಂಬ ತಿನ್ನುವುದಕ್ಕೂ ಹಲವರು ಬಿಡುತ್ತಿಲ್ಲ. ಮಗಳು ಕೂಡ ಸರಿಯಾಗಿ ತಿನ್ನುತ್ತಿಲ್ಲ ಎಂಬ ಚಿಂತೆ. ಈಗ ದುರ್ಗಾಳ ಜೊತೆಗೆ ಕೂತು, ತಾನೇ ತಯಾರಿಸಿದ ಊಟವನ್ನ ಮಗಳು ತಿಂದಿದ್ದಾಳೆ. ಇದನ್ನು ನೋಡಿ ಅಂಬಿಕಾ ಖುಷಿ ಪಟ್ಟಿದ್ದಾಳೆ. ಹಿತಾಳಿಗೆ ದುರ್ಗಾ ತಾಯಿಯಾಗಬೇಕು ಎಂಬ ಆಸೆ ಅಂಬಿಕಾಳದ್ದು. ಇಂದಿನ ಬೆಳವಣಿಗೆ ಅಂಬಿಕಾಳ ಖುಷಿಗೆ ಕಾರಣವಾಗಿದೆ.
ಮಾತಾಡದಿರಲು ಕಾರಣ..?
ಹಿತಾ ಮೊದಲೆಲ್ಲಾ ಮಾತಾಡ್ತಾ ಇರ್ಲಿಲ್ಲ ಅಂತ ಏನಿಲ್ಲ. ಅಪ್ಪ, ಅಮ್ಮನ ಜೊತೆಗೆ ಖುಷಿ ಖುಷಿಯಾಗಿ, ನಗುತ್ತಾ, ಪಟ ಪಟ ಅಂತ ಮಾತಾಡ್ತಾ ಇದ್ದಳು. ಈಗ ತನಗೆ ಎಷ್ಟೇ ನೋವಾದರೂ ಒಂದೇ ಒಂದು ಮಾತು ಕೂಡ ಆಡ್ತಿಲ್ಲ. ವೀಕ್ಷಕರಿಗೆ ಅದೇ ಚಿಂತೆಯಾಗಿದೆ. ಹಿತಾ ಮಾತನಾಡೋದು ಯಾವಾಗ..? ಹಿತಾಗೆ ಈಗ್ಯಾಕೆ ಮಾತು ಬರ್ತಿಲ್ಲ ಎಂಬ ಪ್ರಶ್ನೆ. ಅಮ್ಮನ ಸಾವನ್ನ ಕಣ್ಣೆದುರೆ ಕಂಡ ಹಿತಾಳಿಗೆ ಅಂದು ಮಾತು ಮರೆತೋಗಿದೆ. ಮನಸ್ಸೊಳಗಿನ ದುಃಖ ಹೊರ ಬರಬೇಕಿದೆ. ಆಗ ಮಾತ್ರ ಹಿತಾ ಮೊದಲಿನಂತೆ ಆಗೋದಕ್ಜೆ ಸಾಧ್ಯ. ಅದು ದುರ್ಗಾ ಪ್ರೀತಿಯಿಂದ ಮಾತ್ರ ಸಾಧ್ಯ.


Click it and Unblock the Notifications











