Na Ninna Bidalare: ಅತ್ತೆಯ ಮಾಟಮಂತ್ರ ಅಂಬಿಕಾ ಮುಂದೆ ಬಯಲಾಗುವ ಸಮಯ ಬಂದೇ ಬಿಡ್ತಾ?

By ಎಸ್ ಸುಮಂತ್

ಮಾಳವಿಕಾ ಎಷ್ಟು ಸೈಲೆಂಟ್ ಅಂದ್ರೆ ಅಷ್ಟೇ ಡೇಂಜರ್. ಶರತ್ ಮೇಲೆ ಸಿಕ್ಕಾಪಟ್ಟೆ ಪ್ರೀತಿ ಎಂಬಂತೆ ನಾಟಕ ಮಾಡ್ತಾಳೆ. ಮನೆಯಲ್ಲಿ ಯಾರೂ ಮುಖ್ಯ ಅಲ್ಲ ಶರತ್‌ಗೆ ಮೊದಲ ಸ್ಥಾನ ಎಂಬುದನ್ನ ಮನೆಯಲ್ಲಿ ಒತ್ತಿ ಒತ್ತಿ ಹೇಳುತ್ತಾ ಇರುತ್ತಾಳೆ. ಶರತ್ ಇದನ್ನೇ ನಂಬಿದ್ದಾನೆ.

ಅಂಬಿಕಾ ಕೂಡ ತನ್ನ ಅತ್ತೆಗೆ ದೇವರ ಸ್ಥಾನ ಕೊಟ್ಟಿದ್ದಳು. ಮಾಯಾಳನ್ನ ಅತ್ತೆ ನಂಬಿ ಬಿಟ್ಟಿದ್ದಾರೆ, ಅಂತ ಅಂಬಿಕಾ ತಪ್ಪಾಗಿ ಭಾವಿಸಿದ್ದಾಳೆ. ಈಗ ದೇವಿಯೇ ಮಾಳವಿಕಾಳ ನಿಜರೂಪವನ್ನ ಅರ್ಥ ಮಾಡಿಸುತ್ತಾಳೆ ಎನಿಸುತ್ತದೆ.

Zee kannada Na Ninna Bidalare serial Written Update on March 28th episode

ದುರ್ಗಾಳನ್ನು ಸಿಟಿಗೆ ಕರೆದುಕೊಂಡು ಬಂದಿರೋ ಅಂಬಿಕಾ, ಅವಳ ಜೊತೆಗೆ ಸದಾ ಕಾಲ ನಿಂತಿದ್ದಾಳೆ‌. ದುರ್ಗಾ ಇರುವ ರೂಮಿನಲ್ಲಿಯೇ ಅಂಬಿಕಾ ಹೆಚ್ಚು ಸಮಯ ಕಳೆಯುತ್ತಾಳೆ. ಅದರಲ್ಲೂ ದುರ್ಗಾಳಿಂದಾಗಿ ತನ್ನ ಮಗಳಿಗೆ ಇಷ್ಟವಾದ ತಿನಿಸನ್ನು ಮಾಡಿಕೊಡುವ ಅವಕಾಶ ಅವಳದ್ದಾಗಿದೆ. ಈಗ ಇದೇ ದುರ್ಗಾ ಸಂಕಷ್ಟಕ್ಕೆ ಸಿಲುಕಿದ್ದಾಳೆ.

Take a Poll

ಮಾಯಾಳ ಕುತಂತ್ರ

ಮಾಯಾ ಏನೋ ಮಾಡಲು ಹೋಗಿ ಬಟ್ಟೆಗಳಿಗೆಲ್ಲಾ ಬಣ್ಣ ಚೆಲ್ಲಿ ಬಿಟ್ಟಳು. ಆದರೆ ಶರತ್ ಕೋಪ ಹೆದರಿಸುವುದು ಹೇಗೆ ಎಂಬುದೇ ಅರ್ಥವಾಗದೇ ಈ ಕೆಲಸವನ್ನ ದುರ್ಗಾಳ ಮೇಲೆ ಹಾಕುವ ಪ್ರಯತ್ನ ಮಾಡಿದಳು. ದಮಯಂತಿಯ ಪ್ಲ್ಯಾನ್‌ನಿಂದ ಅದು ಕೂಡ ಸಕ್ಸಸ್ ಆಯ್ತು. ಈಗ ದುರ್ಗಾಳ ಕೆಲಸ ಉಳಿಯುವುದು ಅಥವಾ ಬಿಡುವುದು ಶರತ್ ಕೈನಲ್ಲಿದೆ. ಶರತ್‌ಗೆ ಹಿತಾ ಎಂದರೆ ಪ್ರಾಣ. ಅಂಬಿಕಾಳಿಂದ ತಡೆಯಲಾಗದ ಕುತಂತ್ರವನ್ನ ಹಿತಾ ತಡೆಯುವ ಸಾಧ್ಯತೆ ಜಾಸ್ತಿ ಇದೆ. ಈ ಬಾರಿ ಹಿತಾಳೆ ದುರ್ಗಾಳ ಕೆಲಸವನ್ನು ಉಳಿಸಬಹುದು.

ದುರ್ಗಾಳಿಗಾಗಿ ಪ್ರಾರ್ಥನೆ

ದುರ್ಗಾಳನ್ನ ಕೇಡಿಗಳೆಲ್ಲ ಸೇರಿ ಸಿಕ್ಕಾಕಿಸಿದ್ದಾರೆ. ಆದರೆ ಅಂಬಿಕಾಳಿಂದ ಏನು ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದುರ್ಗಾಳನ್ನ ಕರೆದುಕೊಂಡು ನೇರವಾಗಿ ತಾಯಿಯ ಗುಡಿಗೆ ಹೋಗಿದ್ದಾಳೆ‌. ತನ್ನ ಅಕ್ಕ ಕಣ್ಣ ಮುಂದೆ ಇದ್ದರು, ದೇವಿ ಕೊಟ್ಟ ಮಾತನ್ನ ಉಳಿಸಿಕೊಂಡರು ದುರ್ಗಾಳ ಅರಿವಿಗೆ ಅದು ಬಂದಿಲ್ಲ. ಹೀಗಾಗಿ ಈಗಲೂ ದೇವಿಯ ಮುಖವನ್ನ ನೋಡಲ್ಲ ಎಂದೇ ಹಠ ಮಾಡಿದ್ದಾಳೆ. ಇನ್ನೇನು ಮಾಡುವುದು ದುರ್ಗಾಳ ಪರವಾಗಿ ಅಂಬಿಕಾಳೆ ಆ ದೇವಿಯ ಮುಂದೆ ಪ್ರಾರ್ಥನೆ ಮಾಡಿ, ದುರ್ಗಾಳ ಕೆಲಸಕ್ಕೆ ಯಾವುದೇ ಕುತ್ತು ಬರದಂತೆ ಕಾಪಾಡು ಎಂದು ಬೇಡಿಕೊಂಡಿದ್ದಾಳೆ.

ದುಷ್ಟಶಕ್ತಿಯ ಆರ್ಭಟ

ಅಂಬಿಕಾಳ ಆತ್ಮ ಇನ್ನು ಮುಕ್ತಿ ಪಡೆದಿಲ್ಲ ಎಂಬುದು ಮಾಳವಿಕಾಳ ಅರಿವಿಗೆ ಬಂದಿದೆ. ಅಂಬಿಕಾ ಆತ್ಮ ಇದ್ದರೆ ಅವಳು ಅಂದುಕೊಂಡಂತ ಸಕ್ಸಸ್ ಸಿಗುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಆ ಆತ್ಮ ಎಲ್ಲಿದೆ ಎಂದು ಕಪ್ಪು ಹಾಕಿ ನೋಡಿದ್ದಾಳೆ. ಆದರೆ ದೇವಿಯಿಂದಾನೇ ಆಶೀರ್ವಾದ ಪಡೆದಿರುವ ಅಂಬಿಕಾ, ಅಷ್ಟು ಸುಲಭಕ್ಕೆ ಮಾಳವಿಕಾಳ ಕಣ್ಣಿಗೆ ಕಂಡಿಲ್ಲ. ಸರಿ ತನ್ನ ಶಕ್ತಿ ಬಳಸಿ ಮತ್ತೆ ಆ ಆತ್ಮವನ್ನ ಹುಡುಕಿಕೊಂಡು ಹೊರಟಿದ್ದಾಳೆ.

ತಂದೆಯಿಂದ ಸತ್ಯ ತಿಳಿಯುತ್ತಾ..?

ದುರ್ಗಾ ಹಾಗೂ ಅಂಬಿಕಾಳ ತಂದೆಗೆ ಈ ದುಷ್ಟ ಶಕ್ತಿ ತನ್ನ ಮಕ್ಕಳ ನೆಮ್ಮದಿ ಹಾಳು ಮಾಡಲು ಹೊರಟಿದೆ ಎಂದು ಗೊತ್ತಾದ ಕೂಡಲೇ ಆಕ್ರೋಶ ಭರಿತನಾಗಿದ್ದಾನೆ. ತಕ್ಷಣ ತನ್ನ ದೈವ ಭಕ್ತಿಯನ್ನು ಬಳಸಿ, ತನ್ನ ಶಕ್ತಿಯಿಂದ ಮಾಳವಿಕಾಳ ಶಕ್ತಿಯನ್ನು ಕುಂದುವಂತೆ ಮಾಡಿದ್ದಾನೆ. ಅಂಬಿಕಾಳನ್ನು ಹುಡುಕಲು ಬಿಟ್ಟಿದ್ದ ಮಾಳವಿಕಾ ಶಕ್ತಿಗೆ ಅಡ್ಡಿಯಾಗಿದ್ದಾನೆ. ಆ ದುಷ್ಟ ಶಕ್ತಿಯೇ ಮಾಳವಿಕಾಳ ಕೈ ಮೇಲೆ ಬಿದ್ದು, ಕೈ ಸುಟ್ಟು ಹೋಗಿದೆ. ಆ ನೋವಿನಿಂದ ಕಿರುಚಿದ್ದು ಅಂಬಿಕಾಗೆ ಕೇಳಿಸಿದೆ. ಒಂದು ವೇಳೆ ಮಾಳವಿಕಾಳನ್ನು ಕಂಡರೆ, ಅವಳ ಮಾತುಗಳನ್ನು ಕೇಳಿಸಿಕೊಂಡರೆ ಅಂಬಿಕಾಳಿಗೆ ತನ್ನ ದೇವರಂತ ಅತ್ತೆಯ ನಿಜರೂಪ ತಿಳಿಯುತ್ತದೆ.

More from Filmibeat

English summary
Na Ninna Bidalare serial today episode. Here is the details about Will Ambika find out the truth about her mother-in-law?,
Read more about: serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X