Na Ninna Bidalare: ದುರ್ಗಾಳನ್ನ ಕಾಪಾಡಿದ 'ಬ್ರಹ್ಮಗಂಟು' ಚಿರು; ಹೇಗೆ ಗೊತ್ತಾ?
ದುರ್ಗಾಳನ್ನ ಫ್ಯಾಕ್ಟರಿಯಿಂದ ಓಡಿಸಬೇಕು ಅನ್ನೋ ಪ್ಲ್ಯಾನ್ ಮಾಡಿದ್ದಳು ಮಾಯಾ. ಅವಳಿಗೆ ದಮಯಂತಿ ಹಾಗೂ ಅವಳ ಗಂಡ ಕೂಡ ಸಾಥ್ ನೀಡಿದರು. ದುರ್ಗಾಳೆಂದರೆ ದಮಯಂತಿಗೂ ಅಷ್ಟಕ್ಕೆ ಅಷ್ಟೆ. ಹೀಗಾಗಿ ಬಟ್ಟೆಗೆಲ್ಲಾ ಬಣ್ಣ ಆಗುವಂತೆ ದುರ್ಗಾಳಿಂದಾನೇ ತಪ್ಪು ಮಾಡಿಸಿದ್ದರು. ದುರ್ಗಾ ಕೂಡ ತನ್ನ ಕೆಲಸ ಹೋಯ್ತು ಅಂತಾನೇ ಭಾವಿಸಿದ್ದಳು.
ಶರತ್ ಬಂದ ಮೇಲೆ ತೀರ್ಮಾನ ಮಾಡಲಾಗುತ್ತದೆ ಎಂದೇ ಎಲ್ಲರೂ ಭಯ ಹುಟ್ಟಿಸಿದ್ದರು. ಇದು ಎಮರ್ಜೆನ್ಸಿ ಆರ್ಡರ್. ಮತ್ತೆ ಸ್ಟಾಕ್ ಬರಲ್ಲ ಅಂತೆಲ್ಲಾ ಗಾಬರಿ ಪಡಿಸಿದ್ದಳು. ಶರತ್ ಕೂಡ ಇಂದು ಬಂದಿರಲಿಲ್ಲ. ಬದಲಿಗೆ ಚಿರು, ದುರ್ಗಾಳನ್ನ ಕಾಪಾಡಿದ್ದಾನೆ. ಮಾಯಾಳ ಕುತಂತ್ರದಿಂದ ತಪ್ಪಿಸಿಕೊಳ್ಳುವುದಕ್ಕೆ ದೇವಿಯೇ ಮಾರ್ಗ ನೀಡಿದ್ದಾಳೆ . ತಾಯಿ ತಾನು ಕೊಟ್ಟ ಮಾತನ್ನೆಲ್ಲಾ ಈಡೇರಿಸಿದ್ದಾಳೆ. ಆದರೆ ಅದು ದುರ್ಗಾಳ ಕಣ್ಣಿಗಾಗಲಿ ಕಾಣ್ತಿಲ್ಲ, ಮನಸ್ಸಿಗೆ ತಿಳಿಯುತ್ತಿಲ್ಲ. ತಾಯಿ ತಾನೇ ಏನು ಮಾಡ್ತಾಳೆ.

ದೇವಿಯ ಮುಖ ನೋಡಲಿಲ್ಲ
ದುರ್ಗಾಳಿಗೆ ಆದ ಅನ್ಯಾಯ ಅಂಬಿಕಾಳ ಕಣ್ಣ ಮುಂದೆ ಇದೆ. ಆದರೂ ಏನು ಮಾಡುವುದಕ್ಕೆ ಆಗ್ತಿಲ್ಲ. ಆ ಶಕ್ತಿ ಅವಳಲ್ಲಿ ಇಲ್ಲ. ಹೀಗಾಗಿ ದೇವಿಯೇ ಕಾಪಾಡಬೇಕೆಂದು ದೇವಸ್ಥಾನಕ್ಕೆ ಕರೆ ತಂದಿದ್ದಾಳೆ. ಆದರೆ ದುರ್ಗಾ ಗೊತ್ತಲ್ಲ. ತಾನೂ ಕೇಳಿರೋ ಅಕ್ಕನನ್ನ ಹುಡುಕಿಕೊಡುವ ತನಕ ಮುಖ ನೋಡಲ್ಲ ಎನ್ನುತ್ತಾಳೆ. ಆದರೆ ದುರ್ಗಾಳಿಗೋಸ್ಕರ ಅಂಬಿಕಾಳೆ ಪ್ರಾರ್ಥನೆ ಮಾಡಿಕೊಂಡಿದ್ದಾಳೆ. ಆದರೆ ಅರ್ಚಕರು ತೆಗೆದುಕಿಂಡು ಹೋಗುತ್ತಿದ್ದ ಸೀರೆಗಳನ್ನೆಲ್ಲ ದುರ್ಗಾ ಕೇಳಿ ಪಡೆದಿದ್ದಾಳೆ. ನಾಳೆಯ ಪರೀಕ್ಷೆಗೆ ಆ ಸೀರೆಗಳೇ ಉತ್ತರ. ಇದನ್ನೇ ಅಂಬಿಕಾ ಮತ್ತೆ ಹೇಳಿರುವುದು. ದೇವಿಯೇ ನಿನಗೆ ದಾರಿ ತೋರಿದಳು ಅಂತ. ಆದರೂ ದುರ್ಗಾ ಅದನ್ನ ಸ್ವೀಕರಿಸುವುದಕ್ಕೆ ತಯಾರಿಲ್ಲ.
ದುರ್ಗಾಳ ಹುಡುಕಾಟ
ಅಂಬಿಕಾ ತನಗೆ ಅಡ್ಡಿ ಎಂದುಕೊಂಡಿದ್ದ ಮಾಳವಿಕ ಅವಳನ್ನ ಕೊಂದಿದ್ದು ಆಯ್ತು. ಈಗ ದುರ್ಗಾ ಅವಳಿಗೆ ಅಡ್ಡಿಯಾಗಿದ್ದಾಳೆ. ದೊಡ್ಡ ಶಕ್ತಿಯೊಂದು ಅವರ ದುಷ್ಟತನಕ್ಕೆ ಎದುರಾಗಿದೆ ಅನ್ನೋ ಸೂಚನೆ ಆಕೆಯ ತಾಯಿಯಿಂದ ಸಿಕ್ಕಿದೆ. ಆ ಶಕ್ತಿಯನ್ನ ಹುಡುಕಿಕೊಂಡು ಹೊರಟಾಗ ದುರ್ಗಾ ಹಾಗೂ ಅಂಬಿಕಾ ಇರುವ ದೇವಸ್ಥಾನದ ಬಳಿಯೇ ಬಂದು ನಿಂತಿದೆ. ಆದರೆ ಮಾಳವಿಕಾಗೆ ಗೆಲುವು ಆಗುವುದಕ್ಕೂ ಮುನ್ನವೇ ಸೋಲಾಗಿದೆ. ಕೈಯೆಲ್ಲಾ ಗಾಯ ಮಾಡಿಕೊಂಡು ಹೊರಟಿದ್ದಾಳೆ. ಅಂಬಿಕಾಗೆ ಮನೆಯ ಕಾರು ಮಾತ್ರ ಕಾಣಿಸಿತ್ತು. ಸತ್ಯ ತಿಳಿಯಬೇಕೆಂದುಕೊಳ್ಳುವಷ್ಟರಲ್ಲಿ ದುರ್ಗಾ ಕರೆದುಕೊಂಡು ಹೋಗಿದ್ದಾಳೆ.
ತಾಯಿಯ ಸೀರೆಯಲ್ಲಿ ಡ್ರೆಸ್
ನಾಳೆಯೇ ಡಿಸೈನ್ ನೋಡುವುದಕ್ಕೆ ಹೊಸ ಕ್ಲೈಂಟ್ ಬರ್ತಾರೆ ಎನ್ನುವುದು ಗೊತ್ತಿತ್ತು. ಅಲ್ಲಿ ಬಟ್ಟೆ ನೋಡಿದ್ರೆ ಹಾಳಾಗಿತ್ತು. ಈಗ ಏನು ಮಾಡೋದು, ತಂದಿರೋ ತಾಯಿಯ ಸೀರೆಯಲ್ಲಿ ಭಾವನಾತ್ಮಕ ಬಟ್ಟೆಯನ್ನ ಹೊಲಿದಿದ್ದಾಳೆ. ಅದಕ್ಕೆ ಅಂಬಿಕಾ ಕೂಡ ಸಾಥ್ ನೀಡಿದ್ದಾಳೆ. ಅದು ಸಕ್ಸಸ್ ಆಗುತ್ತಾ, ಆಗಲ್ವಾ ಎನ್ನುವುದಕ್ಕಿಂತ ಒಂದು ಪ್ರಯತ್ನ ಮಾಡೋಣ ಎಂದೆ ಹೊಸ ಡಿಸೈನ್ ಬಟ್ಟೆಯನ್ನ ರೆಡಿ ಮಾಡಿದ್ದಾರೆ.
ದುರ್ಗಾಳ ಹೊಸ ಸ್ಟೈಲ್
ಆ ಬಹಳ ಮುಖ್ಯವಾದ ಕ್ಲೈಂಟ್ ಬೇರೆ ಯಾರು ಅಲ್ಲ 'ಬ್ರಹ್ಮಗಂಟು' ಸೀರಿಯಲ್‌ನ ಚಿರು. ಫ್ಯಾಕ್ಟರಿಗೆ ಬಂದ ಚಿರುಗೆ ಅಂಬಿಕಾ ಅತ್ತಿಗೆಯ ನೆನಪು ಕಾಡಿದೆ. ಆದರೂ ಹೆಚ್ಚು ಸಮಯ ವ್ಯರ್ಥ ಮಾಡದೆ ಓಕೆ ಡಿಸೈನ್ ನೋಡೋಣ ಎಂದಾಗ, ದುರ್ಗಾಳ ಕೆಲಸ ಹೋಗುತ್ತದೆ ಎಂದು ಮಾಯಾ, ದಮಯಂತಿ ಖುಷಿ ಪಟ್ಟಿದ್ದಾರೆ. ಆದರೆ ದುರ್ಗಾ, ದೇವಿಯ ಸೀರೆಗಳಲ್ಲಿಯೇ ಒಂದು ಡಿಸೈನ್ ಹೊಲೆದುಕೊಂಡು ಬಂದಿದ್ದಾಳೆ. ಆ ಬಟ್ಟೆಯ ಹಿಂದಿನ ಭಾವನೆಯನ್ನು ಚಿರು ಎದುರು ಹೇಳಿದ್ದು, ಚಿರು ಇಂಪ್ರೆಸ್ ಆಗಿದ್ದಾನೆ. ಅಲ್ಲಿಗೆ ದುರ್ಗಾಳ ಕೆಲಸ ಇನ್ನಷ್ಟು ಗಟ್ಟಿಯಾಗಿದೆ.


Click it and Unblock the Notifications











