Na Ninna Bidalare; ಪ್ರೇತ ಸಂಸ್ಕಾರ ಮಾಡಲು ಹೊರಟ ಮಾಳವಿಕಾಗೆ ದೇವಿ ದಾರಿ ಬಿಡ್ತಾಳಾ?

By ಎಸ್ ಸುಮಂತ್

'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ವಿಚಾರಗಳು ವೀಕ್ಷಕರ ಪಾಲಿಗೆ ಸಿಕ್ಕಿವೆ. ಕುತೂಹಲವೂ ಅಷ್ಟೇ ಹೆಚ್ಚಾಗಿದೆ. ಯಾಕಂದ್ರೆ ಒಂದು ಕಡೆ ಮಗಳ ನಗುವನ್ನೇ ಕಾಣದ ಶರತ್‌ಗೆ ಈಗ ಅಪ್ಪನ ಆಟ ನೋಡಿ ಮಗಳು ನಗುತ್ತಿದ್ದಾಳೆ. ಇದನ್ನ ಕಾಪಾಡಿಕೊಳ್ಳುವುದಕ್ಕೆ ಶರತ್ ಪ್ರಯತ್ನ ಪಡದೆ ಇರೋನಲ್ಲ. ಇದು ಮಾಯಾಳ ಪಾಲಿಗೆ ಮುಳ್ಳಾಗಲೂ ಬಹುದು.

ಸದ್ಯ ಶರತ್ ಅಂಡ್ ಫ್ಯಾಮಿಲಿ ದುರ್ಗಾಪುರಕ್ಕೆ ಹೋಗಿದ್ದಾರೆ. ದೇವರ ಹರಕೆಯ ನೆಪದಲ್ಲಿ ಮಾಳವಿಕ ಇಡೀ ಸಂಸಾರವನ್ನ ಕರೆದುಕೊಂಡು ಹೋಗಿರೋದು ತನ್ನ ಸ್ವಾರ್ಥಕ್ಕೆ. ಮಾಳವಿಕಾಳ ಕೆಟ್ಟತನಕ್ಕೆ ದೇವಿ ಬಂದಾಕ್ಷಣವೇ ಎಚ್ಚರಿಕೆಯನ್ನ ಕೊಟ್ಟಿದ್ದಾಳೆ. ದೇವಸ್ಥಾನದ ಒಳಗಡೆ ಬಿಟ್ಟುಕೊಳ್ಳದೆ ಇಡೀ ಮೈಗೆ ಬೆಂಕಿಯ ಅನುಭವ ಆಗಿತ್ತು. ಆದರೂ ಬುದ್ದಿ ಕಲಿಯದ ಅಂಬಿಕಾ ತನ್ನ ಚಾಳಿ ಮುಂದುವರೆಸಿದ್ದಾಳೆ.

Zee kannada Na Ninna Bidalare serial Written Update on March 3rd episode

ನಗುವನ್ನೇ ಮರೆತೋಗಿದ್ದ ಹಿತಾ

ಹಿತಾಳಿಗೆ ಹತ್ತಿರವಾಗಲೇಬೇಕು ಎಂಬ ಆಸೆ ಶರತ್ ದು. ಆದರೆ ತಾಯಿಯನ್ನು ಕೊಂದ ಅಪ್ಪ ಎಂದೇ ಹಿತಾ ನಿರ್ಧರಿಸಿ ಬಿಟ್ಟಿದ್ದಾಳೆ‌. ತಂದೆ ಕಂಡರೆ ಮಾತೇ ಆಡದ ಹಿತಾ ಈಗ ದುರ್ಗಾ ಹಾಗೂ ಶರತ್ ಜಗಳ ನೋಡಿ ಎಂಜಾಯ್ ಮಾಡ್ತಾ ಇದ್ದಾಳೆ‌. ರಂಗೋಲಿ ಜಗಳದಲ್ಲೂ ನಕ್ಕಿದಳು. ಈಗ ಶರತ್‌ಗೆ ಕೋಸಂಬರಿ ಬಡಿಸಿ, ತಿನ್ನಿ ನಿಮ್ಮ ಕೊಬ್ಬು ಇಳಿಯಲಿ ಎಂದ ದುರ್ಗಾಳ ಮಾತಿಗೂ ಹಿತಾ ನಕ್ಕಿದ್ದಾಳೆ. ಇದು ಶರತ್ ಮನಸ್ಸಲ್ಲಿ ಖುಷಿ ಕೊಟ್ಟಿದೆ. ದುರ್ಗಾಳ ವಿಚಾರಕ್ಕೆ ಹಿತಾ ನಗ್ತಾ ಇದಾಳೆ ಎಂಬುದು ಅರ್ಥವಾಗಿದೆ.

ಹಿತಾಗೋಸ್ಕರ ನಿರ್ಧಾರ ಬದಲಿಸುತ್ತಾನಾ?

ಅಂಬಿಕಾಳ ಶಕ್ತಿ ಕಳೆದು, ಆತ್ಮವನ್ನು ಹೋಗಲಾಡಿಸುವುದಕ್ಕೇನೆ ಮಾಳವಿಕಾ ದುರ್ಗಾಪುರಕ್ಕೆ ಬಂದಿದ್ದಾಳೆ‌. ಈಗ ಶರತ್ ಗೆ ಪ್ರೇತ ಸಂಸ್ಕಾರಕ್ಕೆ ಮಾಯಾ ಜೊತೆಗೆ ಕೂರುವಂತೆ ಬಲವಂತ ಮಾಡುತ್ತಿದ್ದಾಳೆ. ಮಾಯಾ ಜೊತೆಗೆ ಶರತ್ ಕೂತಾಗ ಅಂಬಿಕಾಳ ಶಕ್ತಿ ಕಡಿಮೆಯಾಗಲಿದೆ ಎಂಬುದನ್ನು ಅವಳ ತಾಯಿ ಹೇಳಿ ಕಳುಹಿಸಿದ್ದಾಳೆ. ಆದರೆ ಈಗ ಶರತ್ ಏನು ಮಾಡ್ತಾನೆ ಎಂಬುದೇ ಎಲ್ಲರ ಕುತೂಹಲವಾಗಿದೆ.

ಅಂಬಿಕಾಗೆ ಭರವಸೆ ನೀಡಿರೋ ತಾಯಿ

ಅಂಬಿಕಾಗೆ ದೇವಿ ಮೇಲೆ ತುಂಬಾ ನಂಬಿಕೆ. ದುರ್ಗಾಳಿಂದ ದೇವಿ ಒಳ್ಳೆಯದ್ದನ್ನೇ ಮಾಡುತ್ತಿದ್ದಾಳೆ. ಈಗ ಅಂಬಿಕಾಗೆ ಭರವಸೆಯನ್ನು ನೀಡಿದ್ದಾಳೆ. ದುರ್ಗಾಳೆ ತನ್ನ ಗಂಡ ಹಾಗೂ ಮಗಳನ್ನು ಕಾಪಾಡುತ್ತಾಳ ಎಂಬ ಯೋಚನೆಗೆ ದೇವಿ ಉತ್ತರ ನೀಡಿದ್ದಾಳೆ. ಕಲ್ಯಾಣಿಯಲ್ಲಿ ಇರುವ ಆಮೆಯನ್ನು ಹೊರಗೆ ತಂದು ಸತ್ಯ ನುಡಿದಿದ್ದಾಳೆ. ತನ್ನ ಗಂಡ ಹಾಗೂ ಮಗುವನ್ನ ದುರ್ಗಾ ನೋಡಿಕೊಳ್ಳುತ್ತಾಳೆ ಎಂಬುದಂತು ಅರ್ಥವಾಗಿದೆ. ಯಾರಿಗೂ ಕಾಣದ ಅಂಬಿಕಾ, ದುರ್ಗಾಗೆ ಕಾಣುವಂತೆ ಮಾಡಿರೋದೆ ದೇವಿ. ಇನ್ನು ಪ್ರೇತ ಸಂಸ್ಕಾರ ಅಂತ ಮಾಡುವುದಕ್ಕೆ ಅವಕಾಶ ಕೊಡ್ತಾಳಾ. ಅವಳ ಸನ್ನಿಧಿಯಲ್ಲಿಯೇ ಬೇರೆಯದ್ದಕ್ಕೆ ಶಕ್ತಿ ಹೋಗುವುದಕ್ಕೆ ಬಿಡ್ತಾಳಾ ಎಂಬ ಕುತೂಹಲವಂತೂ ಇದೆ.

ಈ ಊರು ಬಿಡುವಷ್ಟರಲ್ಲಿಯೇ ಶರತ್ ದುರ್ಗಾಳನ್ನ ಕೈಹಿಡಿಯಬೇಕಾಗಿದೆ. ಹಿತಾಳನ್ನು ಕಾಪಾಡಬೇಕಾಗಿದೆ. ಮಾಳವಿಕಾ ಬಂದಿರುವ ಉದ್ದೇಶ ಈಡೇರುವಷ್ಟರಲ್ಲಿ ದೇವಿಯ ಮಹಿಮೆಯಿಂದ ಅದು ಫೇಲ್ಯೂರ್ ಆಗಲುಬಹುದು. ತನ್ನ ಶಕ್ತಿಯಿಂದ ಎಲ್ಲರನ್ನು ತನಗೆ ಇಷ್ಟ ಬಂದಂತೆ ಆಡಿಸುತ್ತಿರುವ ಮಾಳವಿಕ ಆಟ ದುರ್ಗಾಪುರದಲ್ಲಿ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಪೂಜೆಗೆ ಬರುವ ಅಡ್ಡಿಗಳು ಮುಂದಿನ ಎಪಿಸೋಡ್‌ನಲ್ಲಿ ಕಾಣಬಹುದು.

More from Filmibeat

English summary
Zee kannada Na Ninna Bidalare serial next episode. episode. Here is the details about Sharath wants to be friends with Durga to see his daughter's smile.
Read more about: tv kannada serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X