Na Ninna Bidalare; ದುರ್ಗಾಳಿಂದ ಉಳಿದ ಹಿತಾ; ಶರತ್‌ಗೆ ಸಿಕ್ತಾ ಮಾಯಾಳನ್ನು ರಿಜೆಕ್ಟ್ ಮಾಡೋ ಆಪ್ಶನ್
ಮಾಯಾಳದ್ದು ಸ್ವಾರ್ಥ ತುಂಬಿದ ಪ್ರೀತಿ. ಮೇಲ್ನೋಟಕ್ಕಷ್ಟೇ ಹಿತಾಳ ಮೇಲೆ ಪ್ರೀತಿ ಇದೆ ಎಂದು ನಾಟಕವಾಡುತ್ತಿದ್ದಾಳೆ. ಆದರೆ ತನ್ನ ಬದುಕಿನಿಂದ ಹೇಗಾದರೂ ಮಾಡಿ ಹಿತಾಳನ್ನ ದೂರ ಮಾಡಬೇಕು ಎಂದೇ ಸ್ಕೆಚ್ ಹಾಕುತ್ತಿದ್ದಾಳೆ. ಆದರೆ ಶರತ್ ಗೆ ಅವಳ ನಾಟಕ ಗೊತ್ತಾಗುತ್ತಿಲ್ಲ. ಶರತ್ ಬೇಡವೆಂದರೂ ಹಿತಾಳ ಮೇಲೆ ಪ್ರೀತಿ ತೋರಿಸುವಂತೆ, ಕಾಳಜಿ ಮಾಡುವಂತೆ ನಾಟಕವಾಡುತ್ತಿದ್ದಾಳೆ. ಇದು ಹಿತಾಳ ಪ್ರಾಣಕ್ಕೆ ಕುತ್ತು ತಂದಿದೆ.
ಅಂಬಿಕಾಳ ಆತ್ಮವನ್ನು ಭೂಮಿಯಿಂದ ದೂರ ಮಾಡುವುದಕ್ಕೆ ಮಾಳವಿಕ ಎಲ್ಲಾ ಪ್ಲ್ಯಾನ್ ಮಾಡಿಕೊಂಡು ದುರ್ಗಾಪುರಕ್ಕೆ ಬಂದಿದ್ದಾಳೆ. ಆ ತಾಯಿ ಅಷ್ಟಿಲ್ಲದೆ ಎಲ್ಲರನ್ನು ದುರ್ಗಾಪುರಕ್ಕೆ ಕರೆಸೋದಿಲ್ಲ. ಇತ್ತ ದುರ್ಗಾಳಿಗೆ ತನ್ನ ಅಕ್ಕ ಕಾಣಿಸುತ್ತಿದ್ದಾಳೆ. ಅತ್ತ ಹಿತಾಳನ್ನ ಹತ್ತಿರ ಮಾಡುತ್ತಿದ್ದಾಳೆ. ಇದೆಲ್ಲವೂ ಶರತ್ - ದುರ್ಗಾ ಕಲ್ಯಾಣದ ಸೂಚನೆಯೇ ಆಗಿದೆ.

ಮಾಯಾಳಿಂದ ಅಪಾಯಕ್ಕೆ ಹಿತಾ
ಮಾಯಾಳಿಗೆ ದೇವಸ್ಥಾನದಲ್ಲಿ ಶರತ್ ಜೊತೆಗೆ ಸಮಯ ಕಳೆಯಬೇಕೆಂಬ ಸ್ವಾರ್ಥ ಭಾವನೆ ಹುಟ್ಟಿತ್ತು. ಅದಕ್ಕೆ ಹಿತಾನೆ ಅಡ್ಡಿ ಎಂದು ಭಾವಿಸಿದವಳು, ಕಾರಿನಲ್ಲಿ ಹಿತಾಳನ್ನ ಕೂಡಿ ಹಾಕಿ ಬಂದಳು. ಅಲ್ಲಿ ಗಾಳಿ ಇಲ್ಲದೆ, ನೀರಿಲ್ಲದೆ ಹಿತಾ ಒದ್ದಾಟ ಶುರು ಮಾಡಿದಳು. ಅದು ಶರತ್ ಮನಸ್ಸಿನ ಮೂಲೆಯಲ್ಲಿ ಫೀಲ್ ಆಗಿತ್ತು. ಆದರೆ ಅಲ್ಲಿಂದ ಹಿತಾಳನ್ನ ನೋಡಲು ಹೊರಟ ಶರತ್ ಮುಂದೆ ಮಾಯಾ ನಾಟಕ ಶುರು ಮಾಡಿ ಹೋಗದಂತೆ ತಡೆದಳು.
ಚಾರ್ಲಿಯಿಂದ ಸಿಕ್ತು ಹಿತಾ ಸುಳಿವು
ಹಿತಾ ನೀರು ಕುಡಿಯಲು ಹೋಗಿ ಕಾರಿನ ರಿವರ್ಸ್ ಗೇರ್ ಹಾಕಿಬಿಟ್ಟಳು. ಕಿಟಕಿಯೂ ಓಪನ್ ಆಗಿಲ್ಲ, ಬಾಗಿಲು ತೆರೆಯಲು ಆಗ್ತಿಲ್ಲ. ಹಿತಾ ಗಾಬರಿಯಾದಳು. ಇದನ್ನು ಕಂಡ ಚಾರ್ಲಿ ಮೊದಲು ಅಂಬಿಕಾಳನ್ನ ಕರೆದುಕೊಂಡು ಬಂತು. ಆದರೆ ಪ್ರಯೋಜನವೇನು ಆಗಲಿಲ್ಲ. ಬಳಿಕ ಶರ್ ಬಳಿ ಓಡಿ ಹೋಗಿ, ಅವನನ್ನು ಕರೆತರುವ ಪ್ರಯ್ನ ಮಾಡಿತು. ಅಷ್ಟರಲ್ಲಿ ದುರ್ಗಾ ಹಾಗೂ ಅಂಬಿಕಾಳ ತಂದೆ ಶಿವನನ್ನು ಪೂಜಿಸಿ, ದುರ್ಗೆಗೆ ಶಕ್ತಿ ಕೊಡುವಂತೆ ಬೇಡಿಕೊಂಡ.
ದುರ್ಗಾಳಿಂದ ಹಿತಾಳ ರಕ್ಷಣೆ
ಮಗಳನ್ನ ಕಾಪಾಡುವುದಕ್ಕೆ ಅಂಬಿಕಾ ತುಂಬಾನೇ ಕಷ್ಟ ಪಡ್ತಾ ಇದ್ದಳು. ಅದು ದುರ್ಗಾ ಕಣ್ಣಿಗೆ ಬಿತ್ತು. ತಕ್ಷಣ ದುರ್ಗಾ ಓಡಿ ಬಂದಳು. ಕಾರನ್ನ ನಿಲ್ಲಿಸೋದಾದ್ರೂ ಹೇಗೆ. ಸೈಕಲ್ ನಲ್ಲಿ ತಡೆಯುವುದಕ್ಕೆ ನೋಡಿದ್ದಾಳೆ. ಆದರೂ ದೇವಿ ಅವಳ ಮೇಲಿಟ್ಟಿರೋ ಪ್ರೀತಿ, ಅವರ ತಂದೆ ಶಿವನ ಮೇಲಿಟ್ಟಿರೋ ಪ್ರೀತಿಯಿಂದಾಹಿ ದುರ್ಗಾನೇ, ಹಿತಾಳನ್ನ ಕಾಪಾಡುತ್ತಾಳೆ. ಅದು ವಿಧಿ ಲಿಖಿತ. ದುರ್ಗಾಳೆ ಹಿತಾಳ ತಾಯಿಯೂ ಆಗುತ್ತಾಳೆ.
ಶರತ್‌ಗೆ ಕಣ್ಣ ಮುಂದಿದೆ ಆಯ್ಕೆ
ಶರತ್ ಗೆ ಮಾಯಾ ಮೇಲೆ ಸ್ವಲ್ಪವೂ ನಂಬಿಕೆ ಇಲ್ಲ. ಸಾಕಷ್ಟು ಬಾರಿ ಮಾಯಾಗೂ ಅಂಬಿಕಾಗೂ ಎಷ್ಟೊಂದು ವ್ಯತ್ಯಾಸವಿದೆ ಅಲ್ವಾ ಎಂದೇ ಯೋಚಿಸಿದ್ದಾನೆ. ಈಗ ಮತ್ತಷ್ಟು ಯೋಚಿಸುವ ಕಾಲ ಬಂದಿದೆ. ಪದೇ ಪದೇ ಯಾವುದೇ ಕಷ್ಟಕ್ಕೆ ಸಿಲುಕಿದರು ಓಡಿ ಬರುವ ದುರ್ಗಾಳನ್ನು ನೋಡಿ, ಮಾಯಾಳನ್ನು ಬಿಡುವ ನಿರ್ಧಾತಕ್ಕೆ ಬರುತ್ತಾನೆ. ಅಥವಾ ಯಾವುದೋ ಒಂದು ಅನಿವಾರ್ಯ ಕಾರಣ ಎದುರಾಗಿ, ಶರತ್ ಹಾಗೂ ದುರ್ಗಾಳನ್ನು ಒಂದು ಮಾಡುತ್ತದೆ. ದುರ್ಗಾಪುರದಿಂದ ವಾಪಾಸ್ ಹೋಗುವುದರೊಳಗೆ ಈ ಸನ್ನಿವೇಶ ನಡೆಯುತ್ತದೆ. ದುರ್ಗಾಳನ್ನ ಹೆಂಡತಿಯನ್ನಾಗಿಸಿಕೊಂಡೇ ಶರತ್ ಇಲ್ಲಿಂದ ಹೊರಡೋದು ಎಂಬುದು ವಿಧಿ ಲಿಖಿತ.


Click it and Unblock the Notifications











