Na Ninna Bidalare; ಆತ್ಮ ಸಂಸ್ಕಾರ ಮಾಡಲು ಹೊರಟ ಮಾಳವಿಕಾಗೆ ಅಡ್ಡ ನಿಂತ ದೇವಿ!

By ಎಸ್ ಸುಮಂತ್

ಮಾಳವಿಕಾಗೆ ಇನ್ನು ಹೆಚ್ಚಿನ ಶಕ್ತಿ ಬೇಕೆಂಬ ಹೆಬ್ಬಯಕೆ. ಹೀಗಾಗಿಯೇ ಈಗಿರುವ ತನ್ನ ಶಕ್ತಿ ಬಳಸಿ ಏನು ಬೇಕೋ ಅದೆಲ್ಲವನ್ನು ಪಡೆಯುತ್ತಿದ್ದಾಳೆ. ಸೈಲೆಂಟ್ ಆಗಿದ್ದುಕೊಂಡೆ ಎಲ್ಲವನ್ನು ಕಂಟ್ರೋಲ್ ಗೆ ತೆಗೆದುಕೊಂಡಿದ್ದಾಳೆ. ತನ್ನ ಸ್ಚಾರ್ಥಕ್ಕಾಗಿಯೇ ಅಂದು ಅಂಬಿಕಾಳನ್ನ ಜೀವಂತವಾಗಿ ಸುಟ್ಟು ಬಿಟ್ಟಳು. ಆದರೆ ಮಾಳವಿಕಾನೇ ತನ್ನ ಸಾವಿಗೆ ಕಾರಣ ಅನ್ನೋದು ಸ್ವತಃ ಅಂಬಿಕಾಗೂ ಗೊತ್ತಿಲ್ಲ.

ಅಂದು ಸಾವನ್ನಪ್ಪಿದ ಅಂಬಿಕಾ ಇಂದಿಗೂ ಆತ್ಮವಾಗಿ ಅಲೆಯುತ್ತಿದ್ದಾಳೆ. ಮಗಳಿಗಾಗಿ ಪರಿತಪಿಸುತ್ತಿದ್ದಾಳೆ. ಆತ್ಮವೇ ಆದರೂ ಅವಳೊಳಗಿನ ಒಳ್ಳೆಯತನಕ್ಕೆ ದೇವರು ದಾರಿ ಮಾಡಿಕೊಟ್ಟಿದ್ದಾಳೆ. ದುರ್ಗಾಪುರದಲ್ಲಿ ತಾಯಿಯ ರಕ್ಷಣೆ, ದುರ್ಗಾಳ ಸಹಾಯದಿಂದ ತಾನು ಅಂದುಕೊಂಡಿದ್ದೆಲ್ಲವೂ ಆಗ್ತಾ ಇದೆ. ಈಗ ತನ್ನ ಅತ್ತೆಯ ಕೆಟ್ಟತನಕ್ಕೂ ದೇವಿಯೇ ಅಡ್ಡಗಾಲಾಕಿ ನಿಂತು, ಅಂಬಿಕಾಳನ್ನ ಹಾಗೇ ಇರುವಂತೆ ಮಾಡಿದ್ದಾಳೆ.

Zee kannada Na Ninna Bidalare serial Written Update on March 5th episode

ಆತ್ಮಸಂಸ್ಕಾರಕ್ಕೆ ಸಕಲ ಸಿದ್ಧತೆ

ಅಂಬಿಕಾಳ ಆತ್ಮ ಇನ್ನು ಶಾಂತಿ ಕಂಡಿಲ್ಲ. ಹೀಗಾಗಿ ಶರತ್ ಹಾಗೂ ಹಿತಾಗೆ ಯಾರೆಲ್ಲಾ ಕೆಡುಕು ಮಾಡ್ತಾರೋ ಅವರಿಗೆಲ್ಲಾ ಕಾಟ ಕೊಡ್ತಿದ್ದಾಳೆ. ಇದು ಮಾಳವಿಕಾಗೂ ಹಿನ್ನಡೆಯೇ ಸರಿ. ಹೀಗಾಗಿ ಮಾಳವಿಕಾ ತಾಯಿ ನೀಡಿದ ಸೂಚನೆಯಂತೆ ಈಗ ಅಂಬಿಕಾಳ ಆತ್ಮವನ್ನ ಸಂಪೂರ್ಣವಾಗಿ ನಾಶ ಮಾಡಲು ಹೊರಟಿದ್ದಾಳೆ. ಆತ್ಮ ಸಂಸ್ಕಾರ ಮಾಡುವುದಕ್ಕೆ ದುರ್ಗಾಪುರದ ದುರ್ಗೆಯ ದೇವಸ್ಥಾನದಲ್ಲಿಯೇ ಸಕಲ ಸಿದ್ಧತೆಗಳು ನಡೆದಿವೆ.

ಕನಸು ನುಚ್ಚು ನೂರಾಗುವ ಸಮಯ

ಅಂಬಿಕಾಳ ಆತ್ಮಕ್ಕೆ ಮುಕ್ತಿ ಕೊಡಿಸಿದರೆ ಆಮೇಲೆ ಕಂಡಿದ್ದು, ಕೇಳಿದ್ದೆಲ್ಲವೂ ಮಾಳವಿಕಾಳದ್ದೆ. ಆ ಕನಸು ನನಸಾಗುವ ಸಂಭ್ರಮದಲ್ಲಿ ಮಾಳವಿಕಾ ಇದ್ದಾಳೆ. ಈ ಆತ್ಮಸಂಸ್ಕಾರದ ಪೂಜೆ ಯಾವುದೇ ಕಾರಣಕ್ಕೂ ನಿಲ್ಲಬಾರದೆಂದು ಪ್ರಯತ್ನ ಪಡುತ್ತಾ ಇದ್ದಾಳೆ. ಅಂಬಿಕಾಳಿಗೆ ಇನ್ನಷ್ಟು ನೋವಾಗಲಿ ಅಂತ, ಮಾಯಾಳನ್ನು ಶರತ್ ಪಕ್ಕದಲ್ಲಿ ಕೂರಿಸಿದ್ದಾಳೆ. ಈ ದೃಶ್ಯ ನೋಡಿಯೇ ಅಂಬಿಕಾಳ ಅರ್ಧ ಶಕ್ತಿ ಕುಂದುತ್ತೆ ಎಂಬ ಭ್ರಮೆ ಮಾಳವಿಕಾ ಹಾಗೂ ತಾಯಿಯದ್ದು. ಹೀಗಾಗಿ ಪೂಜೆಯನ್ನ ಅಚ್ಚುಕಟ್ಟಾಗಿ ನೆರವೇರಿಸಲು ಪುರೋಹಿತರಿಗೆ ಹೇಳಿದ್ದಾಳೆ.

Zee kannada Na Ninna Bidalare serial Written Update on March 5th episode

ಹಿತಾಗೋಸ್ಕರ ತೊಟ್ಟಿಲು ಕಟ್ಟಿದ ಅಮ್ಮ

ಹಿತಾ ಹಾಗೂ ಶರತ್ ಬಗ್ಗೆ ಅತಿಯಾದ ಕಾಳಜಿ ಇದೆ ಅಂಬಿಕಾಗೆ. ದುರ್ಗಾದೇವಿ ದೇವಸ್ಥಾನದಲ್ಲಿ ತೊಟ್ಟಿಲು ಕಟ್ಟಿದರೆ ಮಗಳು ಸುರಕ್ಷಿತವಾಗಿರ್ತಾಳೆ ಎಂಬ ನಂಬಿಕೆ ಇದೆ. ಅದರಂತೆ ತೊಟ್ಟಿಲು ಕಟ್ಟೋದಕ್ಕೆ ಹೋದರು ಅದು ಸಾಧ್ಯವಾಗೋದಿಲ್ಲ. ಆದರೆ ದುರ್ಗಾಳ ಕೈ ಹಿಡಿದುಕೊಂಡ ಅಂಬಿಕಾಗೆ ತೊಟ್ಟಿಲು ಕಟ್ಟೋದು ಸುಲಭ ಆಗೋಯ್ತು. ದೇವಿಯೂ ಅಂಬಿಕಾಳ ಪ್ರಾರ್ಥನೆಗೆ ಅಸ್ತು ಎಂದಳು. ಆತ್ಮ ಸಂಸ್ಕಾರಕ್ಕೆಂದು ಮಾಡುತ್ತಿದ್ದ ಪೂಜೆ ನಿಂತು ಹೋಯ್ತು. ಜೋರು ಮಳೆಯಿಂದ ಹೋಮಕುಂಡದಲ್ಲಿದ್ದ ಬೆಂಕಿ ನಂದಿತು. ಒಮ್ಮೆ ಪೂಜೆ ನಿಂತರೆ ಮುಗೀತು. ಮತ್ತೆ ಮಾಳವಿಕ ಆ ಶಕ್ತಿ ಪಡೆಯೋದು ಕಷ್ಟ.

ಅಂಬಿಕಾಗೆ ತಂಗಿಯೇ ಶಕ್ತಿ

ಅಂಬಿಕಾ ಆತ್ಮವೇ ಆಗಿರಬಹುದು. ದುರ್ಗಾ ಬಾಯಲಗಲಿ ದೇವಿಯನ್ನ ನಂಬಲ್ಲ ಅಂತಾನೇ ಹೇಳಬಹುದು. ಆದ್ರೆ ಸದಾ ದೇವಸ್ಥಾನದಲ್ಲಿಯೇ ಇರ್ತಾಳೆ, ದೇವರ ಪ್ರಸಾದವನ್ನೇ ತಿಂತಾಳೆ. ಊರಿಗೆ ಒಳ್ಳೆಯದಾಗಲಿ ಅಂತ ರಥೋತ್ಸವ ಕೆಲಸಗಳನ್ನು ಮಾಡಿಕೊಟ್ಟಿದ್ದಾಳೆ. ದೇವಿಯ ಕೃಪಾಕಟಾಕ್ಷವಿರುವ ದುರ್ಗಾಳನ್ನ ಮುಟ್ಟಿದರೆ ಸಾಕು ಅಂಬಿಕಾಗೆ ವಿಶೇಷ ಶಕ್ತಿ ಬರುತ್ತೆ, ಎಲ್ಲವನ್ನು ಮಾಡಬಹುದಾಗಿದೆ. ಹಿತಾಳ ಕಾರು ಇನ್ನೇನು ಪ್ರಪಾತಕ್ಕೆ ಬೀಳುತ್ತಿತ್ತು. ಆದರೆ ಕಾರಿನಲ್ಲಿಯೇ ಕೂತ ದುರ್ಗಾಳ ಕೈಯನ್ನ ಅಂಬಿಕಾ ಹಿಡಿದಿದ್ದೇ ತಡ, ಕಾರು ಅಲ್ಲಿಯೇ ನಿಂತು ಬಿಡ್ತು. ಹಿತಾಳನ್ನ ಕಾಪಾಡಿದಳು. ತನ್ನ ತಾಯಿಯೇ ಮಗಳನ್ನ ಕಾಪಾಡಿಕೊಂಡಳು. ಆದರೆ ಅದು ದುರ್ಗಾಳ ಸಹಾಯದಿಂದ ಮಾತ್ರ ಸಾಧ್ಯವಾಯ್ತು.

More from Filmibeat

English summary
Na Ninna Bidalare serial today episode. Here is the details about Durgadevi puts a brake on Malavika's dream;
Read more about: serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X