Na Ninna Bidalare; ದುರ್ಗಾಳನ್ನು ಸಿಟಿಗೆ ಕರೆದುಕೊಂಡು ಹೋಗುವ ಅವಕಾಶ ಈಗ ಸಿಗುತ್ತಾ ಅಂಬಿಕಾಗೆ?
ಅಂಬಿಕಾಳಿಗೆ ಈ ಮೊದಲಿದ್ದ ಶಕ್ತಿ ಇಲ್ಲ. ತಾಯಿ ದುರ್ಗೆಯೆ ಅಂಬಿಕಾಳಿಗೆ ಸ್ಪೆಷಲ್ ಶಕ್ತಿಯನ್ನ ನೀಡಿದ್ದಳು. ಶರತ್ ಮನೆಯಲ್ಲಿ ಹಿತಾಳನ್ನ ಸಂತೈಸುವ ಶಕ್ತಿ ಹೊಂದಿದ್ದಳು. ಹಿತಾಗೆ, ಶರತ್ ಗೆ ತೊಂದರೆ ಕೊಡುವವರನ್ನು ಹಿಂಸಿಸಬಹುದಾದ ಶಕ್ತಿ ಇತ್ತು. ಆದರೆ ಮಾಳವಿಕಾ ಮಾಡಿಸಿದ ಪೂಜೆಯಿಂದ ಅಂಬಿಕಾ ಹೊರಗೆ ಬಿದ್ದಳು. ಹಿತಾಳಿಗೆ ಏನೇ ಸಮಸ್ಯೆಯಾಗುತ್ತಿದ್ದರು, ಅದನ್ನ ತಡೆಯುವುದಕ್ಕೆ ಸಾಧ್ಯವೇ ಆಗುತ್ತಿಲ್ಲ.
ತಾನು ಹುಟ್ಟಿ ಬೆಳೆದ ದುರ್ಗಾಪುರಕ್ಕೆ ಬಂದ ಅಂಬಿಕಾ ದುರ್ಗಾದೇವಿ ದೇವಸ್ಥಾನದಲ್ಲಿಯೇ ಉಳಿದುಕೊಂಡಿದ್ದಾಳೆ. ದುರ್ಗಾಳ ಒಂದೇ ಒಂದು ಸ್ಪರ್ಶದಿಂದ ಎಲ್ಲವೂ ಸಾಧ್ಯವಾಗುತ್ತಿದೆ. ಇಷ್ಟು ದಿನ ತಂಗಿಯಿಂದ ಅಕ್ಕನಿಗೆ ಸಹಾಯವಾಗ್ತಾ ಇತ್ತು. ಈಗ ಅಕ್ಕನಿಂದ ತಂಗಿಗೆ ಸಹಾಯವಾಗುತ್ತಿದೆ.

ದುರ್ಗಾಳಿಗೆ ಜೊತೆಯಾದ ಅಂಬಿಕಾ
ಊರಿನಲ್ಲಿ ಗುರು ಅಂತ ಹೇಳಿಕೊಂಡು ಜನರ ನಂಬಿಕೆಗಳಿಗೆ ಮೋಸ ಮಾಡುತ್ತಾ, ತನಗಿಷ್ಟ ಬಂದಂಗೆ ಸ್ವಾರ್ಥದ ಬದುಕನ್ನ ಕಳೆಯುತ್ತಿದ್ದಾನೆ ಸೋ ಕಾಲ್ಡ್ ದೇವರು. ಊರಲ್ಲಿ ಉತ್ಸವ ನಡೆಯಬಾರದೆಂದು ಇದೇ ಗುರುಗಳು ಪ್ರಯತ್ನ ಪಟ್ಟರು. ಆದರೆ ಅಡ್ಡ ಬಂದ ಗುರುಗಳ ಕಾರಿನ ಮೇಲೆಯೇ ಕಾಲಿಟ್ಟು ಮುಂದೆ ಸಾಗಿದಳು ದುರ್ಗಾ. ಅಂದಿನಿಂದ ಮತ್ತಷ್ಟು ದ್ವೇಷ ಹೆಚ್ಚಾಯ್ತು. ಈಗ ಅವಳನ್ನ ಎಲ್ಲಾ ರೀತಿಯಿಂದಾನೂ ಬಳಸಿಕೊಳ್ಳುವ ಹುನ್ನಾರ ಹಾಕಿದ್ದಾರೆ ಗುರುಗಳು. ಅದಕ್ಕೆ ಚರಣ ಸೇವೆ ಎಂಬ ಹೆಸರನ್ನು ಕೊಟ್ಟಿದ್ದಾರೆ. ಅದನ್ನ ನಂಬಿ ದುರ್ಗಾ ಚರಣ ಸೇವೆಗೆ ಬಂದಿದ್ದಾಳೆ.
ತಂಗಿಯ ಕಾವಲಿಗಿರ್ತಾಳೆ ಅಂಬಿಕಾ
ಅಂಬಿಕಾಗೆ ಅವರ ಚಿಕ್ಕಮ್ಮ ಆ ಗುರುಗಳ ಕಡೆಯವರಿಂದ ಹಣ ಪಡೆದು ಡೀಲ್ ಮಾಡಿಕೊಂಡ ವಿಚಾರ ಗೊತ್ತಿತ್ತು. ತನು, ಮನ ಎಲ್ಲವನ್ನು ಗುರಿಗಳಿಗೆ ಅರ್ಪಿಸಲು ಸಿದ್ಧವಿರಬೇಕು ಎಂದೇ ಹೇಳಿ ಹಣ ಕೊಟ್ಟಿದ್ದರು. ಆದರೆ ಇದು ದುರ್ಗಾಗೆ ಹೇಗೆ ಗೊತ್ತಾಗಬೇಕು. ಅಂಬಿಕಾ ಹೇಳಿದ್ರು ಚಿಕ್ಕಮ್ಮನ ಬಗ್ಗೆ ನಂಬುತ್ತಾಳಾ..? ಹೀಗಾಗಿ ತಂಗಿಯನ್ನ ಕಾಪಾಡೋದಕ್ಕೆ ಅಂಬಿಕಾ ಕೂಡ ಜೊತೆಗೆ ಹೋಗಿದ್ದಾಳೆ. ತಂಗಿಯ ಜೊತೆಗೆ ಒಟ್ಟಿಗೆ ನೃತ್ಯ ಕೂಡ ಮಾಡಿದ್ದಾಳೆ.
ಚಿಕ್ಕಮ್ಮನ ಮಾತಿಗೆ ದುರ್ಗೆ ಒಪ್ಪಿಗೆ
ಚಿಕ್ಕಮ್ಮ ಎಂದರೆ ದುರ್ಗೆಗೆ ನಂಬಿಕೆ. ಚಿಕ್ಕ ವಯಸ್ಸಿನಿಂದ ಅವರೇ ಸಾಕಿರೋದು, ಅವರೇಳೋದೆಲ್ಲ ನನ್ನ ಒಳ್ಳೆಯದಕ್ಕೆ ಅಂತ ನಂಬಿರೋಳು. ಆದರೆ ಆ ಚಿಕ್ಕಮ್ಮ ಹಣ ಸಿಗುತ್ತೆ ಎಂದರೆ ದುರ್ಗಾಳನ್ನ ಮಾರಿ ಬಿಡೋದಕ್ಕೆ ಚಿಂತೆ ಮಾಡುವುದಿಲ್ಲ. ಈಗ ಚರಣ ಸೇವೆಗೆ ಕಳುಹಿಸೋದಕ್ಕೂ ಅದನ್ನೇ ಮಾಡಿರೋದು. ಹಣ ಪಡೆದು ಕಳುಹಿಸಿದ್ದಾಳೆ. ಆದ್ರೆ ದುರ್ಗಾ ಅಂದುಕೊಂಡಿರೋದು ಅಲ್ಲಿ ಹೋಗಿ ಕೇವಲ ಡ್ಯಾನ್ಸ್ ಮಾಡೋದಷ್ಟೇ ಅಂತ. ಅಪಾಯದ ಸುಳಿಯಲ್ಲಿ ಸಿಲುಕಿರೋ ಬಗ್ಗೆ ದುರ್ಗಾಳಿಗೆ ಅರಿವಿಲ್ಲ.
ಶರತ್ ಮನೆಗೋಗ್ತಾಳಾ ದುರ್ಗಾ..?
ಅಂಬಿಕಾಗೆ ಅಪಾರ ಶಕ್ತಿ ಇದೆ. ಆದರೆ ಆ ಶಕ್ತಿ ಉಪಯೋಗಕ್ಕೆ ಬರಬೇಕೆಂದರೆ ದುರ್ಗಾ ಜೊತೆಗಿರಬೇಕು. ಈಗ ತಂಗಿ ಅಪಾಯದಲ್ಲಿ ಸಿಲುಕಿದ್ದಾಳೆ. ಹಾಗೇ ಬಿಡ್ತಾಳಾ. ಚರಣ ಸೇವೆಗೆ ಹೋಗಿರೋ ಅಂಬಿಕಾ ಕೂಡ ಡ್ಯಾನ್ಸ್ ಮಾಡಿದ್ದಾಳೆ. ಆ ಗುರುಗಳ ಕೋಣೆಗೆ ಹೋದಾಗ ಅಂಬಿಕಾನೇ ಕಾಪಾಡುವ ಸಾಧ್ಯತೆ ಇದೆ. ದುರ್ಗಾಪುರದಲ್ಲಿ ಇರುವ ತನಕ ಹಿತಾಳನ್ನ ದುರ್ಗಾ ಕಾಪಾಡುತ್ತಾಳಾ. ಸಿಟಿಗೆ ಹೋದ ಮೇಲೆ ಹೇಗೆ ಎಂಬ ಚಿಂತೆ ಅಂಬಿಕಾಳದ್ದಾಗಿತ್ತು. ಹೇಗಾದರೂ ಮಾಡಿ ದುರ್ಗಾಳನ್ನ ಸಿಟಿಗೆ ಕರೆದುಕೊಂಡು ಹೋಗಬೇಕೆಂದು ಪ್ಲ್ಯಾನ್ ಕೂಡ ಮಾಡಿದಳು. ಈಗ ಅದಕ್ಕೆ ಮಾರ್ಗ ಸಿಕ್ಕಂತಾಗಿದೆ. ಚಿಕ್ಕಮ್ಮನ ಕೆಟ್ಟತನ ರಿಳಿದು ದುರ್ಗಾಳೆ ಊರನ್ನ ತ್ಯಜಿಸಬಹುದು. ಅಂಬಿಕಾ ಸಿಟಿಯಲ್ಲಿ ಅವಳಿಗೆ ದಾರಿಯಾಗಬಹುದು. ಹಿತಾಗೆ ದುರ್ಗಾ ಕಂಡರೆ ಇಷ್ಟ. ಹೀಗಾಗಿ ಶರತ್ ಮನೆ ಸೇರೋದು ತುಂಬಾನೇ ಸುಲಭ.


Click it and Unblock the Notifications











