Na Ninna Bidalare; ಕನ್ನಡದ ಶಿಲ್ಪಾ ಶೆಟ್ಟಿ ತನ್ನ ಹೆಸರು ಬದಲಿಸಿಕೊಂಡಿದ್ದೇಕೆ?
ಜೀ ಕನ್ನಡದಲ್ಲಿ ಹೊಸದಾಗಿ ಧಾರಾವಾಹಿಯೊಂದು ಶುರುವಾಗಿದೆ. ಅದುವೇ 'ನಾ ನಿನ್ನ ಬಿಡಲಾರೆ'. ಹಾಗಂತ ಈ ಧಾರಾವಾಹಿಯಲ್ಲಿ ದೆವ್ವ ಹೆದರಿಸಲ್ಲ. ಆತ್ಮ ತುಂಬಾ ಒಳ್ಳೆಯದು. ಆದರೆ ಈ ಧಾರಾವಾಹಿಯಲ್ಲಿ ಹೆದರಿಸುವುದೇ ನಿಜವಾದ ಮನುಷ್ಯರು.
ಕಥೆ, ಕಲಾವಿದರು ಎಲ್ಲವೂ ಅದ್ಭುತವಾಗಿದೆ. ಹೀಗಾಗಿ ಧಾರಾವಾಹಿ ಆರಂಭವಾದ ಕೆಲವೇ ದಿನಗಳಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಜೀ ಕನ್ನಡದ ಹಳೆಯ ಧಾರಾವಾಹಿಗಳನ್ನು ಹಿಂದಿಕ್ಕಿ ಎರಡನೇ ಸ್ಥಾನವನ್ನ ಗಿಟ್ಟಿಸಿಕೊಂಡಿದೆ.

'ನಾ ನಿನ್ನ ಬಿಡಲಾರೆ' ಧಾರಾವಾಹಿ ಒಂದು ಸುಂದರ ಕುಟುಂಬದ ಕಥೆಯನ್ನ ಹೊಂದಿದೆ. ಗಂಡ, ಮಗಳು, ಸಂಸಾರ ಎಂಬಂತಿದ್ದ ಅಂಬಿಕಾಳ ಕೊಲೆಯಾಗಿದೆ. ತಾಯಿಯ ಆತ್ಮ ಮಗಳಿಗಾಗಿ ಹಂಬಲಿಸುತ್ತಿದೆ. ಆದರೆ ಕೆಟ್ಟವರ ಕೈ ಮೇಲಾಗುತ್ತಿದೆ. ದುರ್ಗಾಪುರದಲ್ಲಿರುವ ದುರ್ಗೆ ಕೆಟ್ಟವರನ್ನ ಮಟ್ಟ ಹಾಕಿ, ಅಂಬಿಕಾಗೆ ಸಾಥ್ ನೀಡುತ್ತಾಳಾ ನೋಡಬೇಕಿದೆ. ಅದಕ್ಕೂ ಮುನ್ನ ನಾವೀಗ ಹೇಳೋದಕ್ಕೆ ಹೊರಟಿರೋದು ಕನ್ನಡದ ಶಿಲ್ಪಾ ಶೆಟ್ಟಿ ಬಗ್ಗೆ.
ಮಾಯಾ ಆಗಿ ಶಿಲ್ಪಾ ಶೆಟ್ಟಿ
ಕನ್ನಡದ ಕಿರುತೆರೆಯ ಶಿಲ್ಪಾ ಶೆಟ್ಟಿ 'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಮಾಯಾ ಆಗಿ ಕಾಣಿಸಿಕೊಂಡಿದ್ದಾರೆ. ಮಾಯಾ ಪಾತ್ರಧಾರಿ ಪಕ್ಕಾ ವಿಲನ್ ರೋಲ್. ಈ ಧಾರಾವಾಹಿಯಲ್ಲಿ ಹಲವು ನಿಗೂಢತೆಗಳು ಅಡಗಿವೆ. ಹೀಗಾಗಿ ಧಾರಾವಾಹಿ ಆರಂಭ ಅದ ಕೆಲವೇ ದಿನಗಳಲ್ಲಿ ವೀಕ್ಷಕರ ಮನಸ್ಸನ್ನು ಗೆದ್ದಿದೆ.
ಮಾಯಾಳಿಂದ ನಲುಗಿದ ಹಿತ
ಈ ಧಾರಾವಾಹಿಯಲ್ಲಿ ಹಿತಾಳನ್ನು ಕಾಪಾಡಿಕೊಳ್ಳುವುದೇ ಸತ್ತು ಹೋಗಿರೋ ಅಮ್ಮನ ಆತ್ಮಕ್ಕೆ ಇರುವ ಸವಾಲು. ದೇವರ ದಯೆಯಿಂದ ಹೇಗೋ ಮನೆಯೊಳಗೆ ನುಗ್ಗಿ, ಮಾಯಾಳ ಬಲೆಯಿಂದ ಹಿತಾಳನ್ನ ಕಾಪಾಡಿದ್ದಳು. ಆದರೆ ಮತ್ತೆ ಮಹಾ ದಿಗ್ಬಂಧನ ಹಾಕಿರೋ ಮಾಯಾ ಹಾಗೂ ಅಂಬಿಕಾಳ ಅತ್ತೆಯಿಂದ ಮನೆಯಿಂದ ಹೊರಗೆ ಹೋಗಬೇಕಾಯ್ತು. ಸದಾ ಕಾಲ ದೇವಿ ಅಂದರೆ ಮುಖವನ್ನು ನೋಡುವುದಕ್ಕೆ ಇಷ್ಟ ಪಡದ ದುರ್ಗಾಳ ಅಕ್ಕನೇ ಈ ಅಂಬಿಕಾ. ಯಾವ ಅಕ್ಕ ಬೇಕು ಅಂತ ದೇವಿಯ ಬಳಿ ಮುನಿಸಿಕೊಂಡಿದ್ದಾಳೋ ಅದೇ ದುರ್ಗಾಳ ಕಣ್ಣಿಗೆ ಮಾತ್ರ ಕಾಣಿಸ್ತಾ ಇದ್ದಾಳೆ ಅಂಬಿಕಾ. ಈಗ ತನ್ನ ಮಗಳನ್ನ ಕಾಪಾಡುವುದಕ್ಕೆ ದುರ್ಗಾಳಿಂದಾನೆರ ಸಹಾಯದ ನಿರೀಕ್ಷೆಮಾಡುತ್ತಿದ್ದಾಳೆ.
ಶಿಲ್ಪಾ ಶೆಟ್ಟಿ ಈಗ ರುಹಾನಿ ಶೆಟ್ಟಿ
ಮಾಯಾ ಪಾತ್ರ ಮಾಡಿರೋ ಶಿಲ್ಪಾ ಶೆಟ್ಟಿ ಈಗ ಹೆಸರನ್ನ ಬದಲಾಯಿಸಿಕೊಂಡಿದ್ದಾರೆ. ರುಹಾನಿ ಶೆಟ್ಟಿಯಾಗಿ ಹೆಸರು ಚೇಂಜ್ ಮಾಡಿಕೊಂಡಿದ್ದಾರೆ. ಈ ಮೊದಲು ಸ್ಟಾರ್ ಸುವರ್ಣದಲ್ಲಿ ಬರ್ತಿದ್ದ 'ಮರಳಿ ಮನಸಾಗಿದೆ' ಧಾರಾವಾಹಿಯಲ್ಲೂ ಶಿಲ್ಪಾ ಶೆಟ್ಟಿ ಎಂದೇ ಇತ್ತು. ಆದರೆ ಗೂಗಲ್‌ನಲ್ಲಿ ಸರ್ಚ್ ಮಾಡಿದರೆ ಮುಂಬೈ ಬೆಡಗಿ ಶಿಲ್ಪಾ ಶೆಟ್ಟಿಯೇ ಕಾಣಿಸಿಕೊಳ್ಳುತ್ತಾರೆ. ಈ ಕಾರಣಕ್ಕೆ ತನ್ನ ಹೆಸರನ್ನು ಬದಲಿಸಿಕೊಂಡಿರುವ ಸಾಧ್ಯತೆ ಇರುತ್ತದೆ. ಕನ್ನಡದ ಕಿರುತೆರೆಯ ಶಿಲ್ಪಾ ಶೆಟ್ಟಿ ಈಗ ರುಹಾನಾ ಶೆಟ್ಟಿಯಾಗಿದ್ದಾರೆ.
ತುಳು ಸಿನಿಮಾದಲ್ಲೂ ನಟನೆ
ರುಹಾನಾ ಶೆಟ್ಟಿ ಮೂಲತಃ ತುಳುನಾಡಿನವರು. ಹೀಗಾಗಿ ಅಲ್ಲಿಂದಾನೇ ತಮ್ಮ ನಟನೆಯನ್ನು ಶುರು ಮಾಡಿದ್ದಾರೆ. ಈಗಾಗಲೇ ಹಲವು ತುಳು ಸಿನಿಮಾಗಳಲ್ಲೂ ನಟಿಸಿದ್ದಾರೆ. ಸೀರಿಯಲ್ ಮಾತ್ರವಲ್ಲ ಡಾರ್ಲಿಂಗ್ ಕೃಷ್ಣ ಅವರ ನಟನೆಯ ಶುಗರ್ ಫ್ಯಾಕ್ಟರಿ ಸಿನಿಮಾದಲ್ಲೂ ನಟಿಸಿದ್ದರು. ಮರಳಿ ಮನಸಾಗಿದೆ ಸೀರಿಯಲ್ ಆದ್ಮೇಲೆ ನಾ ನಿನ್ನ ಬಿಡಲಾರೆ ಧಾರಾವಾಹಿಯ ಮೂಲಕ ಕಿರುತೆರೆಗೆ ಕಮ್ ಬ್ಯಾಕ್ ಆಗಿದ್ದಾರೆ. ಸದ್ಯಕ್ಕೆ ಮಾಯಾ ಪಾತ್ರದಲ್ಲಿ ವಿಲನ್ ಆದ್ರೂ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











