'ನಾಗಿಣಿ 2' ಸೀರಿಯಲ್ ಇನ್ನು 30 ಸಂಚಿಕೆ ಮಾತ್ರ!

By ಪ್ರಿಯಾ ದೊರೆ

ನಾಗಿಣಿ 2 ಧಾರಾವಾಹಿ ಮುಕ್ತಾಯಗೊಳ್ಳುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇನ್ನು ಈ ನಡುವೆ ನಾಯಕ ಪಾತ್ರದಲ್ಲಿರುವ ನಿನಾದ್ ಹರಿತ್ಸಾ ಕೂಡ ಧಾರಾವಾಹಿಯಿಂದ ಹೊರ ನಡೆದಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ನಿನಾದ್ ಅವರು, ತಾವು ಧಾರಾವಾಹಿಯಿಂದ ಹೊರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗಷ್ಟೇ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಿನಾದ್ ಹರಿತ್ಸಾ ಅವರು ನಾಗಿಣಿ ಧಾರಾವಾಹಿಯಿಂದ ಹೊರ ನಡೆದಿದ್ದಾರೆ ಎಂಬ ಸುದ್ದಿ ಸುಳ್ಳಾಗಿದೆ. ಧಾರಾವಾಹಿಯಲ್ಲಿ ಕಾಣಿಸಿಕೊಳ್ಳದ ಕಾರಣ ಅವರು, ಪರ್ಸನಲ್ ಲೈಫ್ ಗೆ ಸಮಯ ಕೊಟ್ಟಿದ್ದಾರೆ ಎನ್ನಲಾಗಿತ್ತು.

ಬಟ್, ನಿನಾದ್ ಹರಿತ್ಸಾ ಹಾಗೂ ಅವರ ಪತ್ನಿ ರಮ್ಯಾ ಇಬ್ಬರೂ ಜೋಡಿ ನಂ.1 ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಾಗಿಣಿ ಧಾರಾವಾಹಿಯಲ್ಲಿ ನಿನಾದ್ ಅವರು ಯಾಕೆ ಕಾಣಿಸಿಕೊಂಡಿಲ್ಲ ಎಂಬುದಕ್ಕೆ ಅವರೇ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಎರಡು ಸೀಸನ್‌ನಲ್ಲಿ ನಾಗಿಣಿ!

ಎರಡು ಸೀಸನ್‌ನಲ್ಲಿ ನಾಗಿಣಿ!

ಜೀ ಕನ್ನಡ ವಾಹಿನಿಯಲ್ಲಿ ನಾಗಿಣಿ ಧಾರಾವಾಹಿ ಆರಂಭವಾಗಿದ್ದು, 2016ರಲ್ಲಿ. ಆಗ ಈ ಧಾರಾವಾಹಿ ಸಂಚಲನವನ್ನು ಮೂಡಿಸಿತ್ತು. ಸತತ 4 ವರ್ಷಗಳ ಕಾಲ ನಾಗಿಣಿ ಸೀರಿಯಲ್ ಅದ್ಭುತವಾಗಿ ಮೂಡಿ ಬಂದಿತ್ತು. ನಾಗಿಣಿ ಧಾರಾಹಿಯ ಟಿಆರ್ ಪಿ ರೇಟಿಂಗ್ ನಲ್ಲಿ ಕೂಡ ಟಾಪ್ ಸ್ಥಾನ ಅಲಂಕರಿಸಿತ್ತು. ನಂತರ 2020ರಲ್ಲಿ ನಾಗಿಣಿ 2 ಧಾರಾವಾಹಿಯನ್ನು ಪ್ರಾರಂಭಿಸಲಾಯ್ತು. ಆಗ ಸಿನಿಮಾ ನಟ, ನಿರ್ದೇಶಕರಾದ ಮೋಹನ್ ಅವರು ದಿಗ್ವಿಜಯ ಪಾತ್ರದಲ್ಲಿ, ಜೆಕೆ ಆದಿಶೇಷನ ಪಾತ್ರದಲ್ಲಿ ನಟಿಸಿದರು.

ನಾಗಿಣಿ 2 ಧಾರಾವಾಹಿ ಕೊನೆ ಹಂತದಲ್ಲಿದೆ!

ನಾಗಿಣಿ 2 ಧಾರಾವಾಹಿ ಕೊನೆ ಹಂತದಲ್ಲಿದೆ!

ಈಗ ಧಾರಾವಾಹಿ ಮುಗಿಯುವ ಹಂತ ತಲುಪಿದೆ. ಕಳೆದ ತಿಂಗಳೇ ನಾಗಿಣಿ 2 ಧಾರಾವಾಹಿಯನ್ನು ಮುಕ್ತಾಗೊಳಿಸಲು ಸೀರಿಯಲ್ ತಂಡ ಮುಂದಾಗಿತ್ತು. ಆದರೆ, ಪ್ರೇಕ್ಷಕರ ಒತ್ತಾಯದ ಮೇರೆಗೆ ಕಥೆ ಹೆಣೆದು ಮುನ್ನಡೆಸುತ್ತಿದೆ. ಅದಕ್ಕಾಗಿಯೇ ಧಾರಾವಾಹಿಯಲ್ಲಿ ಮತ್ತೆ ಮಾಯಾಂಗನೆ ಪಾತ್ರವನ್ನು ರಿ-ಎಂಟ್ರಿ ಕೊಡಿಸಲಾಗಿದೆ. ಇನ್ನು ಎರಡು ತಿಂಗಳಿನಲ್ಲಿ ಧಾರಾವಾಹಿಯನ್ನು ಅಂತ್ಯಗೊಳಿಸಲಾಗುವುದು ಎಂದು ಸೀರಿಯಲ್ ತಂಡ ಹೇಳಿದೆ. ಆದರೆ, ಈ ಮಾತನ್ನು ಕೇಳಿದ ಪ್ರೇಕ್ಷಕರು ಬೇಸರಗೊಂಡಿದ್ದಾರೆ. ಕಥೆಯನ್ನು ಮುಂದುವರಿಸಿ ಎಂದು ಒತ್ತಾಯ ಮಾಡಿದ್ದಾರೆ.

'ನಾಗಿಣಿ 2' 30 ಸಂಚಿಕೆ ಮಾತ್ರ!

'ನಾಗಿಣಿ 2' 30 ಸಂಚಿಕೆ ಮಾತ್ರ!

ನಾಗಿಣಿ 2 ಧಾರಾವಾಹಿ, ನಾಗಿಣಿ ಮೊದಲ ಅಧ್ಯಾಯಕ್ಕಿಂತಲೂ ಹೆಚ್ಚು ಜನಪ್ರಿಯಗೊಂಡಿದೆ. ಇದರಲ್ಲಿ ನಮ್ರತಾ ಗೌಡ ಅಭಿನಯವನ್ನು ಪ್ರೇಕ್ಷಕರು ಕೂಡ ಮೆಚ್ಚಿಕೊಂಡಿದ್ದಾರೆ. ಇನ್ನು ನಾಯಕನ ಪಾತ್ರದಲ್ಲಿರುವ ನಿನಾದ್ ಹರಿತ್ಸಾ ಅವರು ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಾಯಾಂಗನೆ, ದಿಗ್ವಿಜಯ ಸೇರಿದಂತೆ ಈ ಧಾರಾವಾಹಿಯಲ್ಲೂ ಮೂಡಿ ಬರುತ್ತಿರುವ ಎಲ್ಲಾ ಪಾತ್ರಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಇದುವರೆಗೂ 603 ಎಪಿಸೋಡ್‌ಗಳು ಪ್ರಸಾರವಾಗಿದೆ. ಇನ್ನು ಹೆಚ್ಚೆಚ್ಚು ಎಂದರೆ 30 ಎಪಿಸೋಡ್‌ಗಳು ಪ್ರಸಾರವಾಗಬಹುದಷ್ಟೇ.

ನಿನಾದ್ ಧಾರಾವಾಹಿ ಬಿಟ್ಟಿದ್ದು ಯಾಕೆ?

ನಿನಾದ್ ಧಾರಾವಾಹಿ ಬಿಟ್ಟಿದ್ದು ಯಾಕೆ?

ನಾಗಿಣಿ 2 ಧಾರಾವಾಹಿಯಲ್ಲಿ ನಾಯಕನ ಪಾತ್ರದ ನಿನಾದ್ ಹರಿತ್ಸಾ ಸೀರಿಯಲ್ ನಿಂದ ಹೊರ ನಡೆದಿದ್ದಾರೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿನಾದ್ ಅವರು, ನಾನು ಧಾರಾವಾಹಿಯಿಂದ ಹೊರ ನಡೆದಿಲ್ಲ. ಬದಲಿಗೆ ಬ್ರೇಕ್ ಪಡೆದಿದ್ದೆನೆ. ಇನ್ನು ಧಾರಾವಾಹಿಯ ಕಥೆಯನ್ನು ಬದಲಾಯಿಸಲಾಗಿದೆ ಅಷ್ಟೇ ಎಂದು ಹೇಳಿದ್ದಾರೆ. ಅಲ್ಲದೇ, ಮದುವೆಗಾಗಿರುವ ಕಾರಣ, ಸಂಸಾರಕ್ಕೆ ಸ್ವಲ್ಪ ಸಮಯ ಕೊಡಬೇಕು. ಜೊತೆಗೆ ಜೋಡಿ ನಂ.1 ಕಾರ್ಯಕ್ರಮದಲ್ಲಿ ಬ್ಯುಸಿಯಾಗಿರುವುದಾಗಿ ನಿನಾದ್ ಅವರು ಹೇಳಿದ್ದಾರೆ.

More from Filmibeat

English summary
Zee kannada Nagini 2 Serial Almost At The End Only 30 Episode Left, know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X