'ನಾಗಿಣಿ 2' ಧಾರಾವಾಹಿಯಲ್ಲಿ ಬಹು ದೊಡ್ಡ ಬದಲಾವಣೆ
'ನಾಗಿಣಿ 2 'ಧಾರಾವಾಹಿ ಮುಕ್ತಾಯಗೊಳ್ಳುತ್ತಿದೆ ಎಂಬ ಸುದ್ದಿ ಅಭಿಮಾನಿಗಳನ್ನು ಬೆಸರಗೊಳಿಸಿದೆ. ಹೀಗಿರುವಾಗ ಧಾರಾವಾಹಿಯಿಂದ ಹೊರ ಬಂದ ಮತ್ತೊಂದು ವಿಚಾರ ಅಭಿಮಾನಿಗಳನ್ನು ಮತ್ತಷ್ಟು ಘಾಸಿಗೊಳಿಸಿದೆ.
ನಾಗಮಣಿಗಾಗಿ ತನ್ನ ಪ್ರಿಯಕರನನ್ನು ಕೊಂದವನ ಮೇಲಿನ ಸೇಡು ತೀರಿಸಿಕೊಳ್ಳುವುದಕ್ಕಾಗಿ ಶಿವಾನಿ ಮನುಷ್ಯ ರೂಪದಲ್ಲಿ ಬಂದಿದ್ದಾಳೆ. ನಾಗಮಣಿಯನ್ನು ನಾಗಲೋಕಕ್ಕೆ ತೆಗೆದುಕೋಂಡು ಹೋಗಬೇಕು ಎಂದು ಪ್ರಯತ್ನಿಸುತ್ತಲೇ ಇದ್ದಾಳೆ.
ಈ ನಡುವೆ ಆದಿಶೇಷ ಮರುಜನ್ಮ ಪಡೆದು ತ್ರಿಶೂಲ್ ರೂಪದಲ್ಲಿ ಜನ್ಮ ತಾಳಿದ್ದಾನೆ. ಈ ವಿಚಾರ ತಿಳಿದು ಪ್ರೀತಿಸಿ ತ್ರಿಶೂಲ್ ನನ್ನು ಮದುವೆಯಾಗಿದ್ದಾಳೆ ಶಿವಾನಿ. ಇನ್ನೇನು ನಾಗಲೋಕಕ್ಕೆ ಹೋಗುವ ಮುನ್ನ ಒಂದಾದ ಮೇಲೆ ಒಂದರಂತೆ ಎಡವಟ್ಟುಗಳು, ಸಮಸ್ಯೆಗಳು ಎದುರಾಗುತ್ತಿವೆ.

2020ರಲ್ಲಿ ಆರಂಭವಾದ 'ನಾಗಿಣಿ 2'
ಜೀ ಕನ್ನಡ ವಾಹಿನಿಯಲ್ಲಿ ನಾಗಿಣಿ ಧಾರಾವಾಹಿ ಆರಂಭವಾಗಿದ್ದು, 2016ರಲ್ಲಿ. ಆಗ ಈ ಧಾರಾವಾಹಿ ಸಂಚಲನವನ್ನು ಮೂಡಿಸಿತ್ತು. ಸತತ 4 ವರ್ಷಗಳ ಕಾಲ ನಾಗಿಣಿ ಸೀರಿಯಲ್ ಅದ್ಭುತವಾಗಿ ಮೂಡಿ ಬಂದಿತ್ತು. ನಾಗಿಣಿ ಧಾರಾಹಿಯ ಟಿಆರ್‌ಪಿ ರೇಟಿಂಗ್ ಕೂಡ ಟಾಪ್ ಸ್ಥಾನವನು ಅಲಂಕರಿಸಿತ್ತು. ನಂತರ 2020ರಲ್ಲಿ ನಾಗಿಣಿ 2 ಧಾರಾವಾಹಿಯನ್ನು ಪ್ರಾರಂಭಿಸಲಾಯ್ತು. ಆಗ ಸಿನಿಮಾ ನಟ, ನಿರ್ದೇಶಕರಾದ ಮೋಹನ್ ಅವರು ದಿಗ್ವಿಜಯ ಪಾತ್ರದಲ್ಲಿ, ಜೆಕೆ ಆದಿಶೇಷನ ಪಾತ್ರದಲ್ಲಿ ನಟಿಸಿದರು.

ಮುಕ್ತಾಯಗೊಳ್ಳುತ್ತಿದೆ 'ನಾಗಿಣಿ 2'
ಈಗ ಧಾರಾವಾಹಿ ಮುಗಿಯುವ ಹಂತ ತಲುಪಿದೆ. ಕಳೆದ ತಿಂಗಳೇ ನಾಗಿಣಿ 2 ಧಾರಾವಾಹಿಯನ್ನು ಮುಕ್ತಾಗೊಳಿಸಲು ಸೀರಿಯಲ್ ತಂಡ ಮುಂದಾಗಿತ್ತು. ಆದರೆ, ಪ್ರೇಕ್ಷಕರ ಒತ್ತಾಯದ ಮೇರೆಗೆ ಕಥೆ ಹೆಣೆದು ಮುನ್ನಡೆಸುತ್ತಿದೆ. ಅದಕ್ಕಾಗಿಯೇ ಧಾರಾವಾಹಿಯಲ್ಲಿ ಮತ್ತೆ ಮಾಯಾಂಗನೆ ಪಾತ್ರವನ್ನು ರಿ-ಎಂಟ್ರಿ ಕೊಡಿಸಲಾಗಿದೆ. ಇನ್ನು ಎರಡು ತಿಂಗಳಿನಲ್ಲಿ ಧಾರಾವಾಹಿಯನ್ನು ಅಂತ್ಯಗೊಳಿಸಲಾಗುವುದು ಎಂದು ಸೀರಿಯಲ್ ತಂಡ ಹೇಳಿದೆ. ಆದರೆ, ಈ ಮಾತನ್ನು ಕೇಳಿದ ಪ್ರೇಕ್ಷಕರು ಬೇಸರಗೊಂಡಿದ್ದಾರೆ. ಕಥೆಯನ್ನು ಮುಂದುವರಿಸಿ ಎಂದು ಒತ್ತಾಯ ಮಾಡಿದ್ದಾರೆ. ಆದರೆ, ಕಥೆ ಹೆಣೆಯಲು ಸಾಧ್ಯವಿಲ್ಲ ಎಂದು ಸೀರಿಯಲ್ ತಂಡ ಹೇಳಿದೆ.

ಪಾತ್ರಗಳಿಗೆ ಜೀವ ತುಂಬಿದ ಕಲಾವಿದರು
ಇನ್ನು ನಾಗಿಣಿ 2 ಧಾರಾವಾಹಿ, ನಾಗಿಣಿ ಮೊದಲ ಅಧ್ಯಾಯಕ್ಕಿಂತಲೂ ಹೆಚ್ಚು ಜನಪ್ರಿಯಗೊಂಡಿದೆ. ಇದರಲ್ಲಿನ ನಮ್ರತಾ ಗೌಡ ಅವರ ಅಭಿನಯವನ್ನು ಪ್ರೇಕ್ಷಕರು ಕೂಡ ಮೆಚ್ಚಿಕೊಂಡಿದ್ದಾರೆ. ಇನ್ನು ನಾಯಕನ ಪಾತ್ರದಲ್ಲಿರುವ ನಿನಾದ್ ಹರಿತ್ಸಾ ಅವರು ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಾಯಾಂಗನೆ, ದಿಗ್ವಿಜಯ ಸೇರಿದಂತೆ ಈ ಧಾರಾವಾಹಿಯಲ್ಲು ಮೂಡಿ ಬರುತ್ತಿರುವ ಎಲ್ಲಾ ಪಾತ್ರಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಇದುವರೆಗೂ 569 ಎಪಿಸೋಡ್ ಗಳು ಪ್ರಸಾರವಾಗಿದೆ. ಇನ್ನು ಹೆಚ್ಚೆಚ್ಚು ಎಂದರೆ 50 ಎಪಿಸೋಡ್ ಗಳು ಪ್ರಸಾರವಾಗಬಹುದಷ್ಟೇ.

ಬದಲಾದ 'ನಾಗಿಣಿ 2' ನಾಯಕ ಪಾತ್ರಧಾರಿ
ಇನ್ನು ನಾಗಿಣಿ 2 ಧಾರಾವಾಹಿಯು ಮುಕ್ತಾಯಗೊಳ್ಳುತ್ತಿದೆ ಎಂಬ ಸುದ್ದಿಯನ್ನೇ ಪ್ರಕ್ಷಕರು ಅರಗಿಸಿಕೊಳ್ಳಲಾಗದೇ ಒದ್ದಾಡುತ್ತಿದ್ದಾರೆ. ಅದಾಗಲೇ ಮತ್ತೊಂದು ಕಹಿ ಸುದ್ದಿ ಧಾರಾವಾಹಿ ತಂಡದಿಂದ ಹೊರ ಬಿದ್ದಿದೆ. ಅದೇನೆಂದರೆ, ಧಾರಾವಾಹಿಯಲ್ಲಿ ನಾಯಕನ ಪಾತ್ರ ನಿರ್ವಹಿಸುತ್ತಿದ್ದ ನಿನಾದ್ ಹರಿತ್ಸಾ ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಹೌದು ಈಗ ನಿನಾದ್ ಬದಲು ತ್ರಿಶೂಲ್ ಪಾತ್ರವನ್ನು ದೀಪಕ್ ಮಹದೇವ್ ನಿರ್ವಹಿಸಲಿದ್ದಾರೆ. ಇತ್ತೀಚೆಗಷ್ಟೇ ಮದುವೆಯಾದ ನಿನಾದ್ ಅವರು, ಇದೀಗ ಧಾರಾವಾಹಿಯಿಂದ ಹೊರ ನಡೆದಿರುವುದು ಪ್ರೇಕ್ಷಕ ಅಭಿಮಾನಿಗಳಲ್ಲಿ ಮತ್ತಷ್ಟು ನೋವನ್ನುಂಟು ಮಾಡಿದೆ. ನಿನಾದ್ ಫ್ಯಾನ್ ಪೇಜ್ ಗಳಲ್ಲಿ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications











